Urvashi Rautela Hot Look: ಗೋಲ್ಡನ್ ಡ್ರೆಸ್‌ನಲ್ಲಿ ಮಿಂಚಿದ ಊರ್ವಶಿ ಹಾಟ್ ಲುಕ್

First Published | Dec 22, 2021, 6:12 PM IST

ಮಿಸ್‌ ಯುನಿವರ್ಸ್ ಜಡ್ಜ್ ಆಗಿ ಭಾಗವಹಿಸಿದ ನಂತರ ಊರ್ವಶಿ ರೌಟೇಲಾ(Urvashi Rautela) ಮತ್ತಷ್ಟು ಸುದ್ದಿಯಲ್ಲಿದ್ದಾರೆ. ಕ್ರಿಸ್ಮಸ್ ಸಂಭ್ರಮದ ಮಧ್ಯೆ ನಟಿ ಗೋಲ್ಡನ್ ಬಾಡಿಕಾನ್ ಡ್ರೆಸ್‌ನ ಹಾಟ್‌ &  ಬೋಲ್ಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಮಾಜಿ ಭುವನ ಸುಂದರಿ, ಬಾಲಿವುಡ್ ನಟಿ ಹಾಗೂ ರೂಪದರ್ಶಿ ಊರ್ವಶಿ ರೌಟೇಲಾ ಚೆಲುವಿನ ಬಗ್ಗೆ ವಿಶ್ವಕ್ಕೇ ಗೊತ್ತು. ಇತ್ತೀಚೆಗೆ ಮಿಸ್ ಯುನಿವರ್ಸ್ 2021ರಲ್ಲಿ ಜಡ್ಜ್ ಆಗಿ ಭಾಗಿಯಾದ ಊರ್ವಶಿ ಅವರು ಇತ್ತೀಚೆಗೆ ಕ್ರಿಸ್ಮಸ್ ಸ್ಪೆಷಲ್ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ.

ಕ್ರಿಸ್ಮಸ್ ಸ್ಪೆಷಲ್ ಪೋಸ್ಟ್‌ನಲ್ಲಿ ನಟಿಯ ಹಾಟ್ ಲುಕ್ ವೈರಲ್ ಆಗಿದೆ. ಗೋಲ್ಡನ್ ಬಾಡಿಕಾನ್ ಡ್ರೆಸ್‌ನಲ್ಲಿ ಕಾಣಿಸಿಕೊಂಡ ನಟಿ ಹಾಟೆಸ್ಟ್ ಪೋಸ್‌ಗಳನ್ನು ಕೊಟ್ಟಿದ್ದು ವಿಡಿಯೋ ಹಾಗೂ ಫೋಟೋಗಳು ವೈರಲ್ ಆಗಿವೆ.

Tap to resize

ಕ್ರಿಸ್ಮಸ್ ಮ್ಯಾಜಿಕ್ ಗಾಳಿಯಲ್ಲಿದೆ. ಇದು ಹೊಳೆಯುವ ಸೀಸನ್. ಕ್ರಿಸ್‌ಮಸ್ ಈವ್‌ನಲ್ಲಿ ಆಕಾಶವನ್ನು ಹುಡುಕಲು ನೀವು ಎಂದಿಗೂ ಬೆಳೆಯದಿರಲಿ. ಮನೆಯಂತೆ ಹಿಮದ ಸ್ಥಳವಿದೆ. ನೆನಪಿಡಲು ಡಿಸೆಂಬರ್ ಮಾಡಿ ಎಂದು ನಟಿ ಕ್ಯಾಪ್ಶನ್ ಕೊಟ್ಟಿದ್ದಾರೆ.

Urvashi Rautela

ಡೀಪ್ ನೆಕ್ ಟೈಟ್ ಬಾಡಿಕಾನ್ ಡ್ರೆಸ್‌ನಲ್ಲಿ ಎದೆ ಸೀಳು ತೋರಿಸಿದ ನಟಿ ಮಿರರ್ ಮಿಡಿಯೋವನ್ನು ಮಾಡಿದ್ದಾರೆ. ವಿಡಿಯೋದಲ್ಲಿ ಸ್ಟೈಲಿಷ್ ಮೂವ್ ತೋರಿಸಿದ ನಟಿಯ ಲುಕ್ ಹಾಟ್ ಆಗಿ ಮೂಡಿ ಬಂದಿದೆ

ಇತ್ತೀಚೆಗೆ ನಟಿ ಮಿಸ್‌ ಯುನಿವರ್ಸ್ 2021ರ ವೇದಿಕೆಯಲ್ಲಿ ಮಿಂಚಿದ್ದು 40 ಲಕ್ಷದ ಅದ್ಭುತ ಡ್ರೆಸ್ ಧರಿಸಿದ್ದರು. ಹರ್ನಾಝ್ ಸಂಧು ಕಿರೀಟ ಗೆದ್ದಾಗ ನಟಿ ಭಾವುಕರಾಗಿದ್ದರು

Latest Videos

click me!