ಬ್ಲಾಕ್ ಗೌನ್‌ ತೊಟ್ಟು ಪೋಸ್ ಕೊಟ್ಟ ನಟಿ ಕಾವ್ಯಾ ಕಲ್ಯಾಣ್‌ರಾಮ್..! ಪಡ್ಡೆ ಹುಡುಗರ ನಿದ್ದೆಗೆಡಿಸಿದ ಹಾಟ್ ನಟಿ

First Published | May 25, 2024, 1:12 PM IST

ಬೆಂಗಳೂರು: ತೆಲಗು ನಟಿ ಕಾವ್ಯಾ ಕಲ್ಯಾಣ್‌ರಾಮ್ ಬಲಗಂ ಸಿನಿಮಾ ಮೂಲಕ ಹೆಚ್ಚು ಜನಪ್ರಿಯತೆ ಗಳಿಸಿದ್ದಾರೆ. ಇದೀಗ ಕಾವ್ಯಾ ಕಲ್ಯಾಣ್‌ರಾಮ್, 3D ಪ್ಲೋರಲ್ ಪ್ಯಾಟರ್ನ್ಸ್‌ ಬ್ಲಾಕ್ ಗೌನ್ ತೊಟ್ಟು ಪೋಸ್‌ ಕೊಟ್ಟಿರುವುದು ಪಡ್ಡೆ ಹುಡುಗರ ನಿದ್ದೆಗೆಡಿಸಿದೆ.

ಪ್ರಖ್ಯಾತ ತೆಲುಗು ನಟಿ ಕಾವ್ಯಾ ಕಲ್ಯಾಣ್‌ರಾಮ್ ಬಲಗಂ ಸಿನಿಮಾದಲ್ಲಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಜನಪ್ರಿಯವಾಗಿದ್ದರು. ತುಂಬಾ ಆರಂಭದಲ್ಲಿಯೇ ಕಾವ್ಯಾಗೆ ಸಿನಿಮಾ ಕ್ಷೇತ್ರದ ಪರಿಚಯ ಅಕೆಗಿದೆ.

ಕಾವ್ಯಾ ಕಲ್ಯಾಣ್‌ರಾಮ್ ಈಗಾಗಲೇ ಹಲವು ತಮಿಳು ಸಿನಿಮಾಗಳಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ. ಈಗಾಗಲೇ ಕಾವ್ಯ ಸ್ನೇಹಮಂತೆ ಇದೆರಾ, ಗಂಗೋತ್ರಿ ಟ್ಯಾಗೋರ್, ವಿಜಯೇಂದ್ರ ವರ್ಮಾ, ಬುನ್ನೆ, ಪಾಂಡುರಂಗುಡು ಹೀಗೆ ಹಲವು ಸಿನಿಮಾಗಳಲ್ಲಿ ನಟಿಸಿ ಮಿಂಚಿದ್ದಾರೆ.

Tap to resize

2022ರಲ್ಲಿ ಮೊದಲ ಬಾರಿಗೆ ಮಸೋದಾ ಸಿನಿಮಾದಲ್ಲಿ ಕಾವ್ಯಾ ಕಲ್ಯಾಣ್‌ರಾಮ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಬಲಗಂ ಸಿನಿಮಾ ಕಾವ್ಯಾ ಕಲ್ಯಾಣ್‌ರಾಮ್‌ಗೆ ಅಪಾಯ ಜನಪ್ರಿಯತೆ ತಂದುಕೊಟ್ಟಿತು.

23 ಕೋಟಿ ರುಪಾಯಿ ಬಜೆಟ್‌ನಲ್ಲಿ ನಿರ್ಮಾಣವಾದ ಈ ಸಿನಿಮಾದಲ್ಲಿ ಕಾವ್ಯಾ ಕಲ್ಯಾಣ್‌ರಾಮ್ ಅವರ ನಟನೆ ಅಭಿಮಾನಿಗಳ ಮನಸೋರೆಗೊಂಡಿತ್ತು. ಇನ್ನು ಇತ್ತೀಚೆಗಷ್ಟೇ ಕಾವ್ಯಾ ಕಲ್ಯಾಣ್‌ರಾಮ್ ಹಾಕಿದ ಒಂದು ಇನ್‌ಸ್ಟಾಗ್ರಾಂ ಪೋಸ್ಟ್ ಇದೀಗ ಪಡ್ಡೆಹುಡುಗರ ನಿದ್ದೆಗೆಡಿಸಿದೆ.

ಕಾವ್ಯಾ ಕಲ್ಯಾಣ್‌ರಾಮ್, ಇದೀಗ ಮತ್ತೇರಿಸುವ ಬ್ಲಾಕ್ ಗೌನ್ ತೊಟ್ಟು ಪೋಸ್ ಕೊಟ್ಟಿದ್ದಾರೆ. ಇದು ಒಂದು ರೀತಿಯ ಟ್ರಾನ್ಸ್‌ಪರೆಂಟ್ ಗೌನ್ ಆಗಿದ್ದು, 3D ಪ್ಲೋರನ್ ಪ್ಯಾಟರ್ನ್ಸ್ ಹೊಂದಿದೆ.

ಇನ್ನು ಕಾವ್ಯಾ ಕಲ್ಯಾಣ್‌ರಾಮ್ ಅವರ ಈ ಪೋಸ್ಟ್‌ನಲ್ಲಿ ಕಡು ಕಂದು ಬಣ್ಣದ ಲಿಪ್‌ಸ್ಟಿಕ್ ಹಾಗೂ ಡ್ರಾಪ್ ಇಯರ್‌ರಿಂಗ್ ತೊಟ್ಟಿರುವುದು ಮತ್ತಷ್ಟು ಮಾದಕತೆ ತಂದುಕೊಟ್ಟಿದೆ. ಸರಳ ಡ್ರೆಸ್‌ನಲ್ಲೂ ಕಾವ್ಯಾ ಕಲ್ಯಾಣ್‌ರಾಮ್ ಮೋಹಕವಾಗಿ ಕಾಣಿಸಿಕೊಂಡಿದ್ದಾರೆ.

ಕಾವ್ಯಾ ಕಲ್ಯಾಣ್‌ರಾಮ್ ಅವರ ಫೋಟೋ ಕಂಡ ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಆಕೆಯನ್ನು ಧರೆಗಿಳಿದ ಅಪ್ಸರೆ ಎಂದು ಬಣ್ಣಿಸಿದ್ದಾರೆ. ಕಾವ್ಯ ಅವರ ಈ ಫೋಟೋ ಹಂಚಿಕೊಂಡ ಕೆಲವೇ ನಿಮಿಷದಲ್ಲಿ ಸಾವಿರಾರು ಲೈಕ್ಸ್‌ಗಳು ಬಂದಿವೆ.

Latest Videos

click me!