ಕಿಸ್‌ ಬೆಡಗಿ ನಟಿ ಶ್ರೀಲೀಲಾ ಉತ್ತುಂಗದಲ್ಲಿರುವಾಗಲೇ ಬಣ್ಣದ ಜಗತ್ತಿನಿಂದ ದೂರವಾಗ್ತಾರಾ? ಈ ನಿರ್ಧಾರ ಬೇಡವೆಂದ ಫ್ಯಾನ್ಸ್!

First Published | Nov 26, 2023, 5:52 PM IST

ಕನ್ನಡದಿಂದ ದಕ್ಷಿಣ ಭಾರತದ ಶ್ರೀಮಂತ ಸಿನಿಮಾ ಉದ್ಯಮವಾದ ತೆಲುಗು ಸಿನಿಮಾ ಕ್ಷೇತ್ರಕ್ಕೆ ಹಾರಿದ ನಟಿ ಶ್ರೀಲೀಲಾ ಈಗ ಬಣ್ಣ ಬಣ್ಣದ ಜಗತ್ತನ್ನು ತೊರೆಯುವ ಸುಳಿವನ್ನು ನೀಡಿದ್ದಾರೆಯೇ ಎಂಬ ಪ್ರಶ್ನೆಯನ್ನು ಅಭಿಮಾನಿಗಳು ಕೇಳಿದ್ದಾರೆ. ಇದ್ಯಾಕೆ ಬಣ್ಣವನ್ನು ಬಿಟ್ಟಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ.

ನೀವು ಬಣ್ಣದಲ್ಲಿದ್ದರೇನೇ ಚೆಂದ. ನೀವು ನಮ್ಮವರು. ನೀವು ಹಳೆಯ ಕಾಲದ ಬಾಲಿವುಡ್ ಸಿನಿಮಾದ ನಟಿಯರಂತೆ ಕಾಣುತ್ತಿದ್ದೀರಿ ಎಂದು ಅಭಿಮಾನಿಗಳು ಹೇಳಿದ್ದಾರೆ. ಜೊತೆಗೆ, ನೀವು ಬಣ್ಣ ಬಣ್ಣದ ಫೋಟೋಗಳನ್ನು ತೆಗೆಸಿಕೊಂಡು ಅಪ್ಲೋಡ್ ಮಾಡಿ ಎಂದು ಅಭಿಮಾನಿಗಳು ತಿಳಿಸಿದ್ದಾರೆ.

ಬಣ್ಣ ಬಣ್ಣದ ಸೀರೆ, ಗೌನ್, ಲೆಹೆಂಗಾ ಹಾಗೂ ವಿವಿಧ ತುಂಡುಡುಗೆ ತೊಟ್ಟು ಪೋಸ್‌ ಕೊಡ್ತಿದ್ದ ಶ್ರೀಲೀಲಾ ಈಗ ಬ್ಲಾಕ್ ಅಂಡ್‌ ವೈಟ್‌ ಫೋಟೋ ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್‌ ಮಾಡಿದ್ದಾರೆ.
 

Tap to resize

ಕನ್ನಡ ಸಿನಿರಂಗದಲ್ಲಿ ಒಂದೆರಡು ಸಿನಿಮಾ ಮಾಡಿ ತೆಲುಗು ಸಿನಿಮಾ ಕ್ಷೇತ್ರಕ್ಕೆ ಹಾರಿದ ನಟಿ ಶ್ರೀಲೀಲಾ ಈಗ ಬಣ್ಣ ಬಣ್ಣದ ಜಗತ್ತನ್ನು ತೊರೆಯುವ ಸುಳಿವನ್ನು ನೀಡಿದ್ದಾರೆಯೇ ಎಂಬ ಪ್ರಶ್ನೆಯನ್ನು ಅಭಿಮಾನಿಗಳು ಕೇಳಿದ್ದಾರೆ. ಇದ್ಯಾಕೆ ಬಣ್ಣವನ್ನು ಬಿಟ್ಟಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ.

ಟಾಲಿವುಡ್ ಚಿತ್ರರಂಗದ ಯುವರಾಣಿ ಶ್ರೀಲೀಲಾ ಈಗ ಟಾಕ್ ಆಫ್ ದಿ ಟೌನ್. ಶ್ರೀಲೀಲಾ(Srileela) ಟಾಪ್ ಸ್ಟಾರ್ ಸಿನಿಮಾಗಳಿಗೆ ಫಸ್ಟ್ ಆಪ್ಷನ್ ಆಗಿದ್ದಾರೆ. ಆದರೆ, ಈಗ ಅವರ ಬ್ಲ್ಯಾಕ್‌ ಅಂಡ್ ವೈಟ್ ಫೋಟೋಗಳನ್ನು ನೋಡಿದ ಅಭಿಮಾನಿಗಳು ಬೆಚ್ಚಿ ಬಿದ್ದಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಕಿಸ್ ಚಿತ್ರದ ಮೂಲಕ ಪಡ್ಡೆಗಳ ನಿದ್ದೆಗೆಡಿಸಿದ ಸುಂದರಿ ಶ್ರೀಲೀಲಾ ತೆಲುಗು, ತಮಿಳು ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟರು. ಆರಂಭದಲ್ಲಿ ಸೋಲು ಕಂಡರೂ ಈಗ ಎಲ್ಲ ಸಿನಿಮಾಗಳು ಕ್ಲಿಕ್‌ ಆಗುತ್ತಿದ್ದು ಟಾಪ್ ನಾಯಕಿ ಆಗಿದ್ದಾಳೆ.

ತೆಲುಗು ಚಿತ್ರರಂಗದಲ್ಲಿ ಫುಲ್ ಬ್ಯುಸಿ ಆಗಿರೋ ಶ್ರೀಲೀಲಾ ಮಾಸ್ ಎಂಟರ್‌ಟೈನರ್ ನಂದಮೂರಿ ಬಾಲಕೃಷ್ಣ ನಟಿಸಿರುವ ಭಗವಂತ ಕೇಸರಿ ಸಿನಿಮಾದಲ್ಲಿ ಅವಕಾಶ ಸಿಕ್ಕ ಬಳಿಕ ನಟಿ ಶ್ರೀಲೀಲಾ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ.

ಪ್ರಸ್ತುತ ತೆಲುಗು ಚಿತ್ರರಂಗದ ಬಹು ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿರುವ ಶ್ರೀಲೀಲಾ, ಚಿತ್ರದಲ್ಲಿ ನಂದಮೂರಿ ಬಾಲಕೃಷ್ಣ ಅವರ ಸೊಸೆಯ ಪಾತ್ರವನ್ನು ನಿರ್ವಹಿಸಿದ್ದಾರೆ. ತಮ್ಮ ಅಭಿನಯದಿಂದ ಪ್ರೇಕ್ಷಕರ ಹೃದಯವನ್ನು ಗೆದ್ದಿದ್ದಾರೆ. 

ಭಗವಂತ ಕೇಸರಿ ಚಿತ್ರದ ಯಶಸ್ಸಿನ ನಂತರ ಶ್ರೀಲೀಲಾ ಸಂಭಾವನೆಯನ್ನು ಹೆಚ್ಚಿಸಿದ್ದಾರೆ. ಒಂದು ಸಿನಿಮಾಗೆ 3.5 ಕೋಟಿ ಅಥವಾ 3 ಕೋಟಿ ರೂಪಾಯಿ ಸಂಭಾವನೆ ತೆಗೆದುಕೊಳ್ಳುತ್ತಿದ್ದ ನಟಿ ಈಗ 4 ಕೋಟಿ ರೂಪಾಯಿಗೆ ಏರಿಕೆ ಮಾಡಿದ್ದಾರೆ.

ಚಿತ್ರರಂಗ ಪ್ರವೇಶಿಸಿದ ಐದು ವರ್ಷಗಳಲ್ಲಿ ಎರಡು ಪ್ರಮುಖ ಚಿತ್ರರಂಗಗಳಲ್ಲಿ ಸ್ಟಾರ್‌ ನಟಿಯಾಗಿರುವುದು ಶ್ರೀಲೀಲಾ ಅವರ ಸಾಧನೆ ಎಂದು ಹೇಳಬಹುದು. ಇದೀಗ ತೆರೆಯ ಮೇಲೆ ಯಾವುದೇ ಕಾರಣಕ್ಕೂ ತಾವು ಲಿಪ್ ಲಾಕ್ ಮಾಡಿಕೊಳ್ಳುವುದಿಲ್ಲವೆಂದಿದ್ದಾರೆ.

Latest Videos

click me!