ಕೆಂಪು ಲೆಹಂಗಾದಲ್ಲಿ ರಾಣಿಯಂತೆ ಕಂಗೊಳಿಸಿದ ಶೃತಿ ಪ್ರಕಾಶ್; ರೆಡ್ ಹಾಟ್ ಚಿಲ್ಲಿ ಎಂದ್ರು ಫ್ಯಾನ್ಸ್

First Published | Feb 18, 2024, 2:55 PM IST

ಹಾಡುಗಾರ್ತಿ, ನಟಿ ಬಿಗ್ ಬಾಸ್ ಖ್ಯಾತಿಯ ಶೃತಿ ಪ್ರಕಾಶ್ ಕೆಂಪು ಲೆಹೆಂಗಾದಲ್ಲಿ ಮಿಂಚುತ್ತಿದ್ದಾರೆ. ಅವರ ಫೋಟೋ ನೋಡಿದ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ.

ಅಬ್ಬಬ್ಬಾ ಏನ್ ಲುಕ್ಕು, ಎಂಥಾ ಮಾದಕ ನೋಟ, ಈಸ್ತೆಟಿಕ್ ಬ್ಯೂಟಿ ಅಂದ್ರೆ ಹೀಗೇ ಇರ್ಬೇಕು - ಹೀಗೆಲ್ಲ ನೆಟ್ಟಿಗರು ಹೇಳ್ತಿರೋದು ಬಿಗ್ ಬಾಸ್ ಖ್ಯಾತಿಯ ಶೃತಿ ಪ್ರಕಾಶ್ ಹೊಸ ಫೋಟೋಶೂಟ್ ನೋಡಿ.

ಗಾಯಕಿಯಾಗಿ ಹಾಗೂ ನಟಿಯಾಗಿ ಗುರುತಿಸಿಕೊಂಡಿರುವ ಶೃತಿ ಪ್ರಕಾಶ್ ಕೆಂಪು ಲೆಹಂಗಾದಲ್ಲಿ ಮಾಡಿಸಿರುವ ಹೊಸ ಫೋಟೋಶೂಟ್‌ನಲ್ಲಿ ರಾಣಿಯಂತೆ ಕಂಗೊಳಿಸುತ್ತಿದ್ದಾರೆ.

Tap to resize

ಪೂರ್ತಿ ಸ್ಟೋನ್ ವರ್ಕ್  ಇರುವ ಕೆಂಪು ಲೆಹೆಂಗಾ ಧರಿಸಿರುವ ಶೃತಿ, ದೊಡ್ಡದಾದ ಮೂಗುತಿ ಬೊಟ್ಟು ಹಾಗೂ ಬೈತಲೆ ಬೊಟ್ಟಿನೊಂದಿಗೆ ಹೆಚ್ಚು ಸೌಂದರ್ಯವತಿಯಾಗಿ ಕಾಣಿಸುತ್ತಿದ್ದಾರೆ.

ಶೃತಿಯ ಫೋಟೋ ನೋಡಿದ ಫ್ಯಾನ್ಸ್, ರೆಡ್ ಹಾಟ್ ಚಿಲ್ಲಿ, ಹಾಟ್‌ನೆಸ್ ಓವರ್‌ಲೋಡೆಡ್, ರಾಜಕುಮಾರಿ ಎಂದೆಲ್ಲ ಕಾಮೆಂಟ್ ಮಾಡುತ್ತಿದ್ದಾರೆ.

ಕನ್ನಡದ ಬಿಗ್ ಬಾಸ್ ಅಭ್ಯರ್ಥಿಯಾಗಿ ಕನ್ನಡಿಗರಿಗೆ ಹೆಚ್ಚಿಗೆ ಪರಿಚಯವಾಗಿರುವ ಶೃತಿ ಸಧ್ಯ ಬಾಲಿವುಡ್ ಸಿನಿಮಾ 'ಬಾರಾತ್'ನಲ್ಲಿ ನಟಿಸುತ್ತಿದ್ದಾರೆ. 

ಕನ್ನಡದಲ್ಲಿ 'ಮೇಡ್ ಇನ್ ಬೆಂಗಳೂರು' ಚಿತ್ರದ ನಟ ಮಧುಸೂಧನ್ ಗೋವಿಂದ್‌ಗೆ ನಾಯಕಿಯಾಗಿ 'ಫ್ರೈಡೇ' ಎಂಬ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಬೆಳಗಾವಿಯ ಶೃತಿ ಬಿಗ್ ಬಾಸ್‌ಗೆ ಬರುವ ಮುನ್ನ ಹಿಂದಿಯ `ಕ್ಲೋಸ್-ಅಪ್' ವೆಬ್‌ಸಿಂಗರ್ ಸ್ಪರ್ಧೆಯಲ್ಲಿ ಭಾಗವಹಿಸಿ ಸೆಮಿಫೈನಲ್‌ವರೆಗೂ ಹೋಗಿದ್ದರು.

ವಿ ಚಾನೆಲ್‌ನ `ದಿಲ್ ದೋಸ್ತಿ ಡ್ಯಾನ್ಸ್',`ಇಷ್ಕ್ ಅನಪ್ಲಗಡ್' ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಶೃತಿ, 2017ರಲ್ಲಿ ಸ್ಟಾರ್‌ಪ್ಲಸ್‌ನ `ಸಾಥ್ ನಿಭಾನಾ ಸಾಥಿಯಾ' ಟೆಲಿ ಸೀರಿಯಲ್‌ನಲ್ಲಿ ಅಭಿನಯಿಸಿ ಖ್ಯಾತಿ ಗಳಿಸಿದರು.

Latest Videos

click me!