ರೀನಾ ರಾಯ್ 1972ರಲ್ಲಿ 'ಜರೂರತ್' ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು. ಮೊದಲ ಸಿನಿಮಾದಲ್ಲಿ ಸಾಕಷ್ಟು ಎಕ್ಸ್‌ಪೋಸಿಂಗ್ ಹಾಗೂ ಇಂಟೀಮೆಂಟ್ ಸೀನ್‌ಗಳಲ್ಲಿ ಕಾಣಿಸಿಕೊಂಡಿದ್ದರು ರೀನಾ.
ಬಾಲಿವುಡ್‌ನಲ್ಲಿ ಯಾವುದೇ ಪರಿಚಯವಿಲ್ಲದ ರೀನಾ ಕೆಲಸಕ್ಕಾಗಿ ಅಲೆದಾಡುತ್ತಿದ್ದ ಪರಿಸ್ಥಿತಿಯಲ್ಲಿ, ಬಿ.ಆರ್. ಇಶಾರಾ ಅವರ ಜರೂರತ್ ಸಿನಿಮಾದಲ್ಲಿ ಅವಕಾಶ ನೀಡಲಾಯಿತು. ಆದರೆ ಚಿತ್ರ ಫ್ಲಾಪ್ ಆಯಿತು.
ಇದರ ನಂತರ, 1976ರಲ್ಲಿ ರೀನಾ ಜಿತೇಂದ್ರ ಜೊತೆ 'ನಾಗಿನ್' ಮತ್ತು ಶತ್ರುಘನ್ ಸಿನ್ಹಾ ಅವರೊಂದಿಗೆ 'ಕಾಲಿಚರನ್' ಚಿತ್ರದಲ್ಲಿ ಕೆಲಸ ಮಾಡಿದರು. ಎರಡೂ ಚಿತ್ರಗಳು ಹಿಟ್ ಆಗಿದ್ದವು.
ಅನೇಕ ಸೂಪರ್‌ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ ನಂತರ ರೀನಾ ರಾಯ್ 1983 ರಲ್ಲಿ ಪಾಕಿಸ್ತಾನ ಕ್ರಿಕೆಟಿಗ ಮೊಹ್ಸಿನ್ ಖಾನ್ ಅವರನ್ನು ವಿವಾಹವಾದರು. ಅವರ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ ಮತ್ತು 1990 ರಲ್ಲಿ 7 ವರ್ಷಗಳ ನಂತರ ಅವರು ವಿಚ್ಛೇದನ ಪಡೆದರು.
ರೀನಾಗೆ ಮೊಹ್ಸಿನ್ ಖಾನ್‌ರಿಗೆ ಸನಮ್ ಎಂಬ ಮಗಳಿದ್ದಾಳೆ.ಆರಂಭದಲ್ಲಿ ಸನಮ್ ಕಸ್ಟಡಿಯನ್ನು ತಂದೆ ಮೊಹ್ಸಿನ್‌ಗೆ ನೀಡಲಾಯಿತು, ಆದರೆ ಮೊಹ್ಸಿನ್ ಮರುಮದುವೆಯಾದಾಗ ರೀನಾ ರಾಯ್ ಸನಮ್ ಅವರನ್ನು ವಶಕ್ಕೆ ಪಡೆದರು. ಈಗ ನಟಿ ಮಗಳೊಂದಿಗೆ ಮುಂಬೈನಲ್ಲಿ ವಾಸಿಸುತ್ತಾರೆ.
ರೀನಾ ರೈ ಅವರ ವೃತ್ತಿ ಜೀವನದ ಟಾಪ್‌ನಲ್ಲಿದ್ದಾಗ, ಸಿನಿಮಾಕ್ಕಿಂತ ಶತ್ರುಘನ್ ಸಿನ್ಹಾ ಜೊತೆಯ ರಿಲೆಷನ್‌ಶಿಪ್‌ನಿಂದ ಹೆಚ್ಚು ಪ್ರಚಾರದಲ್ಲಿದ್ದರು.
ಈ ಕಾರಣಕ್ಕಾಗಿ ಜನರು ಶತ್ರುಘನ್ ಸಿನ್ಹಾ ಅವರ ಪುತ್ರಿ ಸೋನಾಕ್ಷಿ ಸಿನ್ಹಾಯನ್ನು ರೀನಾ ರಾಯ್ ಜೊತೆ ಹೋಲಿಸಲು ಪ್ರಾರಂಭಿಸಿದರು. ಸೋನಾಕ್ಷಿ 'ದಬಾಂಗ್' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಸಮಯದಲ್ಲಿ ಜನರು ಅವರ ಮುಖವನ್ನು ರೀನಾ ರಾಯ್‌ಗೆ ಹೋಲುತ್ತದೆ ಎಂದು ಟ್ರೋಲ್ ಮಾಡಿದ್ದರು.
ಸೋನಾಕ್ಷಿಯನ್ನು ಜನರು ರೀನಾಳ ಮಗಳು ಎಂದು ಕರೆಯಲು ಪ್ರಾರಂಭಿಸಿದರು. ಇದಕ್ಕೆ ದೊಡ್ಡ ಕಾರಣವೆಂದರೆ, ಶತ್ರುಘನ್ ಸಿನ್ಹಾ ಮದುವೆಯಾದ ನಂತರವೂ ರೀನಾ ರಾಯ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದರು. ಸೋನಾಕ್ಷಿ ಈ ಇಬ್ಬರ ಮಗಳು ನಂತರ ಅವರನ್ನು ಶತ್ರುಘನ್ ಅವರ ಪತ್ನಿ ಪೂನಂಗೆ ನೀಡಲಾಯಿತು ಎಂದು ವರದಿಗಳು ಸಹ ಬಂದವು.
ಈ ಸುದ್ದಿ ರೀನಾ ಅವರನ್ನು ತಲುಪಿದಾಗ, ಪತ್ರಿಕಾಗೋಷ್ಠಿಯ ಮೂಲಕ ವರದಿಗಳನ್ನು ನಿರಾಕರಿಸಿದರು. ಸಂದರ್ಶನದಲ್ಲಿ, ರೀನಾ ಸೋನಾಕ್ಷಿಯ ಮುಖವು ತಾಯಿ ಪೂನಮ್ ಸಿನ್ಹಾ ಅವರ ಮುಖವನ್ನು ಹೋಲುತ್ತದೆ ಎಂದು ಹೇಳಿದ್ದಾರೆ.
ರೀನಾ 1992 ರಲ್ಲಿ 'ಆದ್ಮಿ ಕಿಲೋನಾ ಹೈ' ಚಿತ್ರದ ಮೂಲಕ ಪುನರಾಗಮನ ಮಾಡಿದರು. ಆದರೆ ಗಮನ ಸೆಳೆಯಲು ಸಾಧ್ಯವಾಗಲಿಲ್ಲ. ನಂತರ ಚಲನಚಿತ್ರಗಳಿಂದ ದೂರವಾಗಿದ್ದರು.
ರೀನಾ ರಾಯ್ 'ನಾಗಿನ್' (1976), 'ಜಾನಿ-ದುಷ್ಮನ್' (1979), 'ಆಶಾ' (1980), 'ನಸೀಬ್' (1980), 'ಬೇಲ್ ಕಿ ಆಗ್' (1982), 'ಪಯಾಸಾ ಸಾವನ್' (1982), 'ಹತ್ಕಡಿ' (1982) ಸೇರಿದಂತೆ ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.
ವರದಿಗಳ ಪ್ರಕಾರ, ಹೆಚ್ಚಿದ ತೂಕವನ್ನು ಕಡಿಮೆ ಮಾಡಲು ನಟಿ ಬೇರಿಯಾಟ್ರಿಕ್ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ನಂತರ 25 ಕೆ.ಜಿ ವರೆಗೆ ತೂಕ ಇಳಿಸಿಕೊಂಡಿದ್ದಾರೆ.
ಬೇರಿಯಾಟ್ರಿಕ್ ಸರ್ಜರಿ ಸ್ಥೂಲಕಾಯದಿಂದ ಬಳಲುತ್ತಿರುವ ರೋಗಿಗಳಿಗೆ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದರಲ್ಲಿ, ಹೊಟ್ಟೆ ಮತ್ತು ಕರುಳಿನ ಅಪರೇಷನ್ ಮಾಡಿ ಹೆಚ್ಚುವರಿ ಕೊಬ್ಬನ್ನು ತೆಗೆದುಹಾಕಲಾಗುತ್ತದೆ. ರೀನಾ ರಾಯ್ ಅವರ ಸಹೋದರಿ ಬರ್ಖಾ ಪ್ರಕಾರ, ಡಾ. ಲಕ್ಡಾವಾಲಾ ಅವರ ಆಜ್ಞೆಯ ಮೇರೆಗೆ ರೀನಾ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ನಿರ್ಧರಿಸಿದರು.