ಹೊಸ ವರ್ಷದಲ್ಲಿ ಪತಿಯೊಟ್ಟಿಗೆ KGF ನಟಿ, ಮೌನಿ ಹಾಟೋ ಫೋಟೋಸ್‌ಗೆ ಸಿಕ್ಕಿದೆ ಸೂಪರ್ ರೆಸ್ಪಾನ್ಸ್!

First Published | Jan 3, 2023, 4:59 PM IST

ಮೌನಿ ರಾಯ್ (Mouni Roy) ಮತ್ತು ಅವರ ಪತಿ ಸೂರಜ್ ನಂಬಿಯಾರ್ (Suraj Nambiar) ಅಬುಧಾಬಿಯಲ್ಲಿ ಹೊಸ ವರ್ಷವನ್ನು ಆಚರಿಸಿದರು. ಹೊಸ ವರ್ಷದ ಆಚರಣೆಯ ಜೊತೆಗೆ, ದಂಪತಿ ರಜಾದಿನಗಳನ್ನು  ಸಹ ಸಖತ್‌ ಎಂಜಾಯ್‌ ಮಾಡುತ್ತಿದ್ದಾರೆ. ಮೌನಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಅನೇಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಫೋಟೋಗಳಲ್ಲಿ, ಮೌನಿ ರಾಯ್ ಸಖತ್‌ ಹಾಟ್ ಮತ್ತು ಬೋಲ್ಡ್ ಆವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ. 
 

ಮೌನಿ ರಾಯ್ ಇಂದು ಬಾಲಿವುಡ್‌ನ ಅತ್ಯಂತ ಸಿಜ್ಲಿಂಗ್ ನಟಿಯರಲ್ಲಿ ಒಬ್ಬರು. ಸಾಮಾಜಿಕ ಮಾಧ್ಯಮದಲ್ಲಿ (Social Media) ತುಂಬಾ ಸಕ್ರಿಯರಾಗಿರುವ ನಟಿ ಫೋಟೋಗಳು ಮತ್ತು ವೀಡಿಯೊಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಲೇ ಇರುತ್ತಾರೆ.
 

ಮೌನಿ ತನ್ನ ಪತಿ ಸೂರಜ್ ನಂಬಿಯಾರ್ ಮತ್ತು ಕೆಲವು ಸ್ನೇಹಿತರೊಂದಿಗೆ ಹೊಸ ವರ್ಷವನ್ನು ಆಚರಿಸಲು ಅಬುಧಾಬಿಯನ್ನು ಆಯ್ಕೆ ಮಾಡಿಕೊಂಡಿದ್ದರು ಮತ್ತು ಅಲ್ಲಿಂದ ಅವರು ಕೆಲವು ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ.

Tap to resize

ಫೋಟೋಗಳಲ್ಲಿ, ಕೆಜಿಎಫ್‌ ನಟಿ ಮೌನಿ ರಾಯ್ ಅವರ ಸಿಜ್ಲಿಂಗ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅದೇ ಸಮಯದಲ್ಲಿ, ಅವಳು ತನ್ನ ಪತಿಯೊಂದಿಗೆ ರೊಮ್ಯಾಂಟಿಕ್ ಪೋಸ್ ಸಹ ನೀಡುತ್ತಿದ್ದಾರೆ.

ಮೌನಿ ರಾಯ್ ತನ್ನ ಸ್ನೇಹಿತರೊಂದಿಗೆ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಈಜು ಕೊಳದ ಬಳಿ ಫ್ರೆಂಡ್ಸ್‌ ಜೊತೆ ಎಂಜಾಯ್‌ ಮಾಡುತ್ತಿದ್ದಾರೆ. 
 

ಮೌನಿ ರಾಯ್ ಟಿವಿ ಧಾರಾವಾಹಿಗಳಲ್ಲಿ ಮತ್ತು ಬಾಲಿವುಡ್ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅಷ್ಟೇ ಅಲ್ಲ ಕನ್ನಡದ ಸೂಪರ್‌ ಹಿಟ್‌ ಕೆಜಿಎಫ್‌ನಲ್ಲಿ ತಮ್ಮ ಡ್ಯಾನ್ಸ್‌ ಮೂಲಕ ದಕ್ಷಿಣದಲ್ಲೂ ತಮ್ಮ ಹವಾ ಸೃಷ್ಟಿಸಿದ್ದಾರೆ .  
 

ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ ಎಂಬ ಟಿವಿ ಶೋ ಮೂಲಕ ನಟನಾ ವೃತ್ತಿ ಪ್ರಾರಂಭಿಸಿದ ಮೌನಿ ರಾಯ್ 2022 ರಲ್ಲಿ, ಬ್ರಹ್ಮಾಸ್ತ್ರ ಚಿತ್ರದಲ್ಲಿ ಕಾಣಿಸಿಕೊಂಡರು. ರಣಬೀರ್ ಕಪೂರ್-ಆಲಿಯಾ ಭಟ್ ಚಿತ್ರದಲ್ಲಿ ಮೌನಿ ಅವರದ್ದು ನೆಗೆಟಿವ್ ಪಾತ್ರ.

ಮೌನಿ ರಾಯ್ ಕಳೆದ ವರ್ಷ 2022 ರಲ್ಲಿ ಗೋವಾದಲ್ಲಿ ಗೆಳೆಯ ಸೂರಜ್ ನಂಬಿಯಾರ್ ಅವರನ್ನು ವಿವಾಹವಾದರು. ಅವರ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
 

Latest Videos

click me!