ಫೆಬ್ರವರಿ ಮನರಂಜನೆ ಹಬ್ಬ, ಮಾಧುರಿ, ದೀಪಿಕಾ, ತಾಪ್ಸಿ.. ವೆಬ್ ಸೀರಿಸ್‌ಗಳದ್ದೇ ಹವಾ!
First Published | Feb 2, 2022, 7:53 PM ISTಫೆಬ್ರವರಿ ತಿಂಗಳು ಮನರಂಜನೆಯ ಮಹಾಪೂರ ನಿಮ್ಮದಾಗೋದು ಖಚಿತ. OTT ಯ ವಿವಿಧ ವೇದಿಕೆಗಳಲ್ಲಿ ಫೆಬ್ರವರಿಯಲ್ಲಿ ಅನೇಕ ಚಲನಚಿತ್ರಗಳು ಮತ್ತು ವೆಬ್ ಸರಣಿಗಳು ಬಿಡುಗಡೆಯಾಗುತ್ತವೆ. ಇದು ಮಾಧುರಿ ದೀಕ್ಷಿತ್ (Madhuri Dixit), ದೀಪಿಕಾ ಪಡುಕೋಣೆ (Deepika Padukone), ಅನನ್ಯ ಪಾಂಡೆ (Ananya Panday), ತಾಪ್ಸಿ ಪನ್ನು (Tapsee Pannu), ರಣವೀರ್ ಸಿಂಗ್ (Ranveer Singh) ಅವರಂತಹ ಅನೇಕ ಪ್ರಸಿದ್ಧ ತಾರೆಯರ ಚಲನಚಿತ್ರಗಳು ಮತ್ತು ವೆಬ್ ಸರಣಿಗಳನ್ನು ಒಳಗೊಂಡಿದೆ. ಈ ತಿಂಗಳು ಮಾಧುರಿ ದೀಕ್ಷಿತ್ ಮತ್ತು ಆವಂತಿಕಾ ದಾಸಾನಿ (Avantika Dasani) ಡಿಜಿಟಲ್ ಡೆಬ್ಯೂ ಎಂಟ್ರಿ ಮಾಡಲಿದ್ದಾರೆ.