ಟೈಟ್‌ ಡ್ರೆಸ್‌ನಲ್ಲಿ ಪಡ್ಡೆಹೈಕ್ಳ ಟೆಂಪ್ರೆಚರ್ ಹೆಚ್ಚಿಸಿದ ಬಿಗ್‌ಬಾಸ್ ಸುಂದರಿ: ಯಾರಿವಳು ಬಘೀರ ನಟಿ ಯಾಶಿಕಾ ಆನಂದ್‌?

First Published | Jan 27, 2024, 1:30 AM IST

ಕಾಲಿವುಡ್ ಬ್ಯೂಟಿ ಯಾಶಿಕಾ ಆನಂದ್ ತನ್ನ ಹಾಟ್ ಫೋಟೋಶೂಟ್‌ಗಳಿಂದ ಸೋಷಿಯಲ್‌ ಮೀಡಿಯಾದಲ್ಲಿ ಹೈಪ್‌ ಕ್ರಿಯೇಟ್‌ ಮಾಡುತ್ತಿದ್ದಾರೆ. ತಮ್ಮ ಸೌಂದರ್ಯದಿಂದ ಹುಡುಗರನ್ನು ನಿದ್ದೆಗೆಡಿಸುತ್ತಿದ್ದಾರೆ. ಈ ಸುಂದರಿ ಶೇರ್ ಮಾಡಿರುವ ಇತ್ತೀಚಿನ ಚಿತ್ರಗಳು ವೈರಲ್ ಆಗುತ್ತಿವೆ. 

ದಕ್ಷಿಣ ಭಾರತದ ಜನಪ್ರಿಯ ನಟಿ ಯಾಶಿಕಾ ಆನಂದ್‌ ಅವರು ಸೋಷಿಯಲ್‌ ಮೀಡಿಯಾದಲ್ಲಿ ಹೊಸ ಫೋಟೋಗಳನ್ನು ಅಪ್ಲೋಡ್‌ ಮಾಡಿದ್ದಾರೆ. ಬಿಗಿ ಉಡುಗೆ ತೊಟ್ಟ ಈ ಅಂದದ ಫೋಟೋಗಳು ವೈರಲ್‌ ಆಗಿವೆ.

ಯಾಶಿಕಾ ಆನಂದ್‌  ತಮಿಳು ಸಿನಿಮಾಗಳಲ್ಲಿ ಮತ್ತು ಟೆಲಿವಿಷನ್‌ ಶೋಗಳ ಮೂಲಕ ಜನಪ್ರಿಯತೆ ಪಡೆದಿದ್ದಾರೆ. ಹಿಂದೊಮ್ಮೆ ಮೀ ಟು ಅಭಿಯಾನದಲ್ಲೂ ಪಾಲ್ಗೊಂಡಿದ್ದರು. ನಿರ್ದೇಶಕರೊಬ್ಬರಿಂದ ತನಗಾದ ತೊಂದರೆಯ ಕುರಿತು ಹೇಳಿಕೊಂಡಿದ್ದರು.

Tap to resize

ತಮಿಳಿನ ಬಘೀರ ಸಿನಿಮಾದಲ್ಲಿ ಇವರು ನಾಯಕಿಯಾಗಿ ನಟಿಸಿದ್ದರು. ಸದ್ಯ ಕನ್ನಡದಲ್ಲಿ ಇದೇ ಹೆಸರಿನ ಚಿತ್ರವೊಂದರ ಶೂಟಿಂಗ್‌ ನಡೆಯುತ್ತಿದೆ. ಆದರೆ, ಯಾಶಿಕಾ ಆನಂದ್‌ ನಟಿಸಿರುವ ಆ ಬಘೀರಕ್ಕೂ ಶ್ರೀಮುರಳಿ ನಟನೆಯ ಈ ಬಘೀರಕ್ಕೂ ಸಂಬಂಧವಿಲ್ಲ. 

ಕಾವಲೈ ವೇದಮ್‌, ಧುವಂಗಲ್‌ ಪಾಥಿನರಾಉ, ಪಾದಂ, ವರುತ್ತು ಅರುವೈಲ್‌ ಮುರುತು ಕುಥು, ಮನಿಯಾರ್‌ ಕುಡುಂಬಂ, ನೋಟಾ, ಕೋಝುಗು ಟು, ಝುಂಬೈ, ಮುಕೋತ್ತಿ ಅಮ್ಮನ್‌, ಆರ್‌23 ಕ್ರಿಮಿನಲ್ಸ್‌ ಡೈರಿ ಮುಂತಾದ ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ.

ಕಳೆದ ವರ್ಷ ಇವರು ಬಘೀರ ಮಾತ್ರವಲ್ಲದೆ ಚೈತ್ರಾ, ಸಿಲ್ಲಾ ನೊಡಿಗಲಿಲ್‌, ಒಡುವುಮ್‌ ಮುಡಿಯಾಧ್‌ ಒಲಿವುಮ್‌ ಮುಡಿಯಾದ್‌, ಬೆಸ್ಟಿ, ದಿ ಲೆಜೆಂಡ್‌, ಕಾಡಮಲೈ ಸೇ ಮುಂತಾದ ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ.

ಎಸ್‌ಯುವಿ ಅಪಘಾತವೊಂದಕ್ಕೆ ಸಂಬಂಧಪಟ್ಟ ವಿಷಯದಲ್ಲೂ ಇವರು ಸುದ್ದಿಯಲ್ಲಿದ್ದರು. 2021ರ ಜುಲೈನಲ್ಲಿ ಚೆನ್ನೈ ಸಮೀಪದ ಮಹಾಬಲಿಪುರಂನಲ್ಲಿ ಕಾರು ಅಪಘಾತವಾಗಿತ್ತು. ಈಕೆ ತನ್ನ ಸ್ನೇಹಿತರ ಜತೆ ಆ ಕಾರಲ್ಲಿದ್ದರು. ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದಿತ್ತು. 

ಪಂಜಾಬಿ ಹಿಂದೂ ಕುಟುಂಬದಲ್ಲಿ ಇವರು 199ರ ಆಗಸ್ಟ್‌ 4ರಂದು ದೆಹಲಿಯಲ್ಲಿ ಜನಿಸಿದರು. ಇವರು ಜನಿಸಿ ಕೆಲವು ವರ್ಷಗಳಾದ ಬಳಿಕ ಇವರ ಕುಟುಂಬ ಚೆನ್ನೈಗೆ ವಲಸೆ ಬಂದಿತ್ತು. ಚೆನ್ನೈನ ಶೇರ್‌ವುಡ್‌ ಹಾಲ್‌ ಸ್ಕೂಲ್‌ನಲ್ಲಿ ಇವರು ಶಿಕ್ಷಣ ಪಡೆದಿದ್ದಾರೆ.

Latest Videos

click me!