ಬೀಚ್‌ನಲ್ಲಿ ಬಿಕಿನಿ ಸೆಲ್ಫಿ ಕಡ್ಡಾಯ ಎಂದು ಮತ್ತೆ ಹಾಟ್ ಫೋಟೋ ಶೇರ್ ಮಾಡಿದ ಇಲಿಯಾನಾ

First Published | Jul 19, 2022, 12:21 PM IST

ಇಲಿಯಾನಾ ಬೀಚ್ ನಿಂದ ಹಾಟ್ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಬೀಚ್ ಹಾಲಿಡೇ ಅಂದ್ಮೇಲೆ ಬಿಕಿನಿ ಸೆಲ್ಫಿ ಖಡ್ಡಾಯ ಎಂದು ಹೇಳಿದ್ದಾರೆ. ಇಲಿಯಾನಾ ಬಿಕಿನಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 
 

ನಟಿ ಇಲಿಯಾನಾ ಡಿಕ್ರೂಸ್ ಇತ್ತೀಚಿಗೆ ಸಿನಿಮಾಗಳಲ್ಲಿ ಮಿಂಚಿದ್ದು ಕಡಿಮೆ. ಆದರೂ ಆಗಾಗ ಸುದ್ದಿಯಲ್ಲಿರುತ್ತಾರೆ. ಬಾಯ್ ಫ್ರೆಂಡ್ ವಿಚಾರವಾಗಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ನಟಿ ಇಲಿಯಾನಾ ಬಳಿಕ ಬ್ರೇಕಪ್ ಮಾಡಿಕೊಂಡು ಸುದ್ದಿಯಾಗಿದ್ದರು. 

ಬ್ರೇಕಪ್ ಬಳಿಕ ಸಿಂಗಲ್ ಆಗಿದ್ದ ಇಲಿಯಾನಾ ಇದೀಗ ಮತ್ತೆ ಮಿಂಗಲ್ ಆಗಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಇದಕ್ಕೆ ಕಾರಣವಾಗಿದ್ದು ಇತ್ತೀಚಿಗೆ ರಿವೀಲ್ ಆಗಿರುವ ಫೋಟೋಗಳು. ನಟಿ ಇಲಿಯಾನಾ ಇತ್ತೀಚಿಗಷ್ಟೆ ಮಾಲ್ಡೀವ್ಸ್ ನಲ್ಲಿ ಕಾಣಿಸಿಕೊಂಡಿದ್ದರು. ಅದು ಕತ್ರಿನಾ ಕೈಫ್ ದಂಪತಿ ಜೊತೆ. 

Tap to resize

ಬಾಲಿವುಡ್ ಬ್ಯೂಟಿ ಕತ್ರಿನಾ ಇತ್ತೀಚಿಗಷ್ಟೆ 39ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡರು. ಕ್ಯಾಟ್ ಬರ್ತಡೇಯನ್ನು ಪತಿ ವಿಕ್ಕಿ ಕೌಶಲ್ ಮಾಲ್ಡೀವ್ಸ್ ನಲ್ಲಿ ಸೆಲೆಬ್ರೀಟ್ ಮಾಡಿದ್ದರು. ಇವರ ಮಧ್ಯೆ ಹೈಲೆಟ್ ಆಗಿದ್ದು ಇಲಿಯಾನಾ. ಬಾಲಿವುಡ್ ಮೂಲಗಳ ಪ್ರಕಾರ ಇಲಿಯಾನಾ ಸದ್ಯ ಕತ್ರಿನಾ ಕೈಫ್ ಸಹೋದರ ಸೆಬಾಸ್ಟಿನ್ ಜೊತೆ ಪ್ರೀತಿಯಲ್ಲಿದ್ದಾರೆ ಎನ್ನಲಾಗುತ್ತಿದೆ.

ಈ ನಡುವೆ ಇಲಿಯಾನಾ ಬೀಚ್ ನಿಂದ ಹಾಟ್ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಬೀಚ್ ಹಾಲಿಡೇ ಅಂದ್ಮೇಲೆ ಬಿಕಿನಿ ಸೆಲ್ಫಿ ಖಡ್ಡಾಯ ಎಂದು ಹೇಳಿದ್ದಾರೆ. ಇಲಿಯಾನಾ ಬಿಕಿನಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 

ಇಲಿಯಾನಾ ಬಿಕಿನಿ ಫೋಟೋಗಳಿಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಅಂಡ್ ಕಾಮೆಂಟ್ ಹರುದುಬರುತ್ತಿವೆ. ಅಭಿಮಾನಿಗಳು ಸಿಕ್ಕಾಪಟ್ಟೆ ಹಾಟ್, ಬೆಂಕಿ ಎಂದು ಕಾಮೆಂಟ್ ಮಾಡಿ ಹಾರ್ಟ್  ಇಮೋಜಿ ಹಾಕುತ್ತಿದ್ದಾರೆ.  


ಇಲಿಯಾನಾ ಕೊನೆಯದಾಗಿ ಬಿಗ್ ಬುಲ್ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅಲ್ಲದೇ ಇಲಿಯಾನಾ ಅಭಿನಯಕ್ಕೆ ಎಲ್ಲರಿಂದ ಪ್ರಶಂಸೆ ವ್ಯಕ್ತವಾಗಿತ್ತು. 

Latest Videos

click me!