Happy Birthday Disha Patani; ಯವಕರ ಹಾಟ್ ಫೇವರಿಟ್ ದಿಶಾ ಹುಟ್ಟುಹಬ್ಬ, ಇಲ್ಲಿವೆ ಫೋಟೋಗಳು

First Published | Jun 13, 2022, 11:58 AM IST

ಬಾಲಿವುಡ್ ಹಾಟ್ ನಟಿ, ಫಿಟ್ನೆಸ್ ಫ್ರೀಕ್ ದಿಶಾ ಪಟಾನಿಗೆ ಇಂದು (ಜೂನ್ 13) ಹುಟ್ಟುಹಬ್ಬದ ಸಂಭ್ರಮ. ದಿಶಾ ಹುಟ್ಟುಹಬ್ಬಕ್ಕೆ ಅಭಿಮಾನಿಗಳು, ಸ್ನೇಹಿತರು ಮತ್ತು ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಮಹಾಪೂರ ಬರುತ್ತಿದೆ. 

ಬಾಲಿವುಡ್ ಹಾಟ್ ನಟಿ, ಫಿಟ್ನೆಸ್ ಫ್ರೀಕ್ ದಿಶಾ ಪಟಾನಿಗೆ ಇಂದು (ಜೂನ್ 13) ಹುಟ್ಟುಹಬ್ಬದ ಸಂಭ್ರಮ. ದಿಶಾ ಹುಟ್ಟುಹಬ್ಬಕ್ಕೆ ಅಭಿಮಾನಿಗಳು, ಸ್ನೇಹಿತರು ಮತ್ತು ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಮಹಾಪೂರ ಬರುತ್ತಿದೆ. 
 

ನಟಿ ದಿಶಾ  ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ನಟಿ. ಆಗಾಗ ಹಾಟ್ ಫೋಟೋಗಳನ್ನು ಶೇರ್ ಮಾಡುವ ಮೂಲಕ ಪಡ್ಡೆಗಳ ನಿದ್ದೆ ಗೆಡಿಸುತ್ತಿರುತ್ತಾರೆ.

Tap to resize

ದಿಶಾ ಯಾವಾಗಲು ಹಾಟ್ ಲುಕ್ ಮೂಲಕವೇ ಸದ್ದು ಮಾಡುತ್ತಿರುತ್ತಾರೆ. ಫಿಟ್ನೆಸ್ ಫ್ರೀಕ್ ದಿಶಾ ಹಾಟ್ ಲುಕ್‌ನಲ್ಲೇ ಸದಾ ಕ್ಯಾಮರಾ ಮುಂದೆ ಕಾಣಿಸಿಕೊಳ್ಳುತ್ತಾರೆ. ಸಿನಿಮಾಗಿಂತ ಹೆಚ್ಚಾಗಿ ದಿಶಾ ಲುಕ್ ವೈರಲ್ ಆಗುತ್ತದೆ.
 

ಆಗಾಗ ಬಿಕಿನಿಯಲ್ಲಿ ಪೋಸ್ ನೀಡುವ ದಿಶಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತವೆ. ಪಡ್ಡೆಗಳ ನಿದ್ದೆ ಗೆಡಿಸೋ ನಟಿ ದಿಶಾ, ಬಾಲಿವುಡ್ ಸ್ಟಾರ್ ಟೈಗರ್ ಶ್ರಾಫ್ ಜೊತೆ ಪ್ರೀತಿಯಲ್ಲಿದ್ದಾರೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ.  ಆದರೆ ಈ ಬಗ್ಗೆ ಇಬ್ಬರೂ ಎಲ್ಲಿಯೂ ಬಹಿರಂಗ ಪಡಿಸಿಲ್ಲ. 
 

ದಿಶಾ ಹುಟ್ಟುಹಬ್ಬಕ್ಕೆ ಟೈಗರ್ ಶ್ರಾಪ್ ಪ್ರೀತಿಯ ಶುಭಾಶಯ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ವಿಶ್ ಮಾಡಿರುವ ಟೈಗರ್, ಈ ವರ್ಷ ಮತ್ತೊಷ್ಟು ಎತ್ತರಕ್ಕೆ ಹಾರುತ್ತೀರಿಯ ಎಂದು ಭಾವಿಸುತ್ತೇನೆ. ಹ್ಯಾಪಿ ಬರ್ತಡೇ ಆಕ್ಷನ್ ಹೀರೋ. ರುಚಿಕರವಾದ ಆಹಾರ ತಿಂದು ಎಂಜಾಯ್ ಮಾಡು' ಎಂದು ಹೇಳಿದ್ದಾರೆ. 

ದಿಶಾ ಇತ್ತೀಚಿಗಷ್ಟೆ ಶೇರ್ ಮಾಡಿದ್ದ ಹಾಟ್ ಫೋಟೋ ವೈರಲ್ ಆಗಿತ್ತು. ಕೆಂಪು ಬಣ್ಣದ ಡೀಪ್ ನೆಕ್ ಇರುವ ಬಾಡಿ ಹಗ್ ಬಟ್ಟೆ ಧರಿಸಿದ್ದರು. ಆ ಉಡುಪಿನಲ್ಲಿ ದಿಶಾ ಮಾದಕ ಪೋಸ್ ನೀಡಿದ್ದು, ಕ್ಯಾಮರಾ ಮುಂದೆ ತರಹೇವಾರಿ ನೋಟ ಬೀರಿದ್ದ ದಿಶಾ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚು ಹೊತ್ತಿಸಿದ್ದವು.

ತೆಲುಗು ಸಿನಿಮಾರಂಗದ ಮೂಲಕ ಬಣ್ಣದ ಲೋಕ್ಕಕೆ ಕಾಲಿಟ್ಟ ದಿಶಾ ಬಳಿಕ ಹಿಂದಿಯಲ್ಲಿ ಎಮ್ ಎಸ್ ದೋನಿ ಸಿನಿಮಾ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆದರು. ಈ ಸಿನಿಮಾ ದಿಶಾ ಅವರಿಗೆ ಸ್ಟಾರ್‌ಗಿರಿ ತಂದು ಕೊಟ್ಟಿತು. 

ಎಂ ಎಸ್ ಧೋನಿ ಸಿನಿಮಾ ಬಳಿಕ ಅನೇಕ ಚಿತ್ರಗಳಲ್ಲಿ ದಿಶಾ ನಟಿಸಿದ್ದಾರೆ. ದಿಶಾ ಕೊನೆಯದಾಗಿ ಸಲ್ಮಾನ್ ಖಾನ್ ನಟನೆಯ ರಾಧೆ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ಅನೇಕ ಸಿನಿಮಾಗಳಲ್ಲಿ ದಿಶಾ ಬ್ಯುಸಿಯಾಗಿದ್ದಾರೆ. 

Latest Videos

click me!