ಪ್ರಿಯಾಂಕಾ ಚೋಪ್ರಾ ಜೊತೆ ರೊಮ್ಯಾನ್ಸ್ ಮಾಡುವ ಅವಕಾಶವನ್ನು ಕಳೆದುಕೊಂಡ ವಿಷಯವನ್ನು ಒಮ್ಮೆ ಸಿದ್ಧಾರ್ಥ್ ಮಲ್ಯ ಬಹಿರಂಗಪಡಿಸಿದರು .
ಪ್ರಸ್ತುತ ರಣವೀರ್ ಸಿಂಗ್ ಜೊತೆ ಮದುವೆಯಾಗಿ ಸಂತೋಷದ ಜೀವನ ನೆಡೆಸುತ್ತಿದ್ದಾರೆ ದೀಪಿಕಾ ಪಡುಕೋಣೆ. ಇವರು ಬಾಲಿವುಡ್ ಮೋಸ್ಟ್ ಲವ್ಲಿಂಗ್ ಈ ಕಪಲ್‌ಗಳಲ್ಲಿ ಒಬ್ಬರು.
ಆದರೆ ರಣವೀರ್ ಅವರನ್ನು ಮದುವೆಯಾಗುವ ಮೊದಲು ದೀಪಿಕಾ ವಿಜಯ್ ಮಲ್ಯರ ಪುತ್ರ ಸಿದ್ಧಾರ್ಥ್ ಮಲ್ಯ ಜೊತೆಗೆ ಸಂಬಂಧ ಹೊಂದಿದ್ದರು.
ಇಬ್ಬರೂ ಅನೇಕ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡರು ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಚುಂಬಿಸಿ ಸಖತ್ ಸುದ್ದಿಯಾಗಿದ್ದರು.
ನಟಿ ಮಲ್ಯ ಒಡೆತನದ ಇಂಡಿಯನ್ ಪ್ರೀಮಿಯರ್ ಲೀಗ್ ತಂಡದ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಬ್ರಾಂಡ್ ಅಂಬಾಸಿಡರ್ ಆಗಿದ್ದಾಗ ಅವರ ಸಂಬಂಧ ಪ್ರಾರಂಭವಾಯಿತು.
ಸಿದ್ಧಾರ್ಥ್ ಪ್ರಿಯಾಂಕಾ ಚೋಪ್ರಾರ ಜೊತೆ ರೋಮ್ಯಾನ್ಸ್ ಮಾಡಲು ಬಯಸಿದ್ದರು ಎಂದು ನಿಮಗೆ ತಿಳಿದಿದೆಯೇ? ಆದರೆ ನಿಜ ಜೀವನದಲ್ಲಿ ಅಲ್ಲ.
ಅಮೇರಿಕನ್ ಟಿವಿ ಸಿರೀಸ್ ಕ್ವಾಂಟಿಕೋದಲ್ಲಿ ಪ್ರಿಯಾಂಕಾ ಪಾತ್ರ ಅಲೆಕ್ಸ್ ಪ್ಯಾರಿಶ್ ಅವರ ಲವ್ ಇಂಟರೆಸ್ಟ್ ರೋಲ್ ನಿರ್ವಹಿಸಲು ಬಯಸಿದ್ದರು.
ಡಿಎನ್‌ಎ ಪ್ರಕಾರ, ಆಗ ರಾಯಲ್ ಸೆಂಟ್ರಲ್ ಸ್ಕೂಲ್ ಆಫ್ ಸ್ಪೀಚ್ ಅಂಡ್ ಡ್ರಾಮಾಲಂಡನ್‌ನಲ್ಲಿ ನಟನೆಯನ್ನು ಕಲಿಯುತ್ತಿದ್ದ ಸಿದ್ಧಾರ್ಥ್ ಈ ಪಾತ್ರಕ್ಕೆ ಹರಾಜು ಕೂಗಿದ್ದರು. ಆದರೆ ಅದು ಫೈನಲ್ ಆಗಲಿಲ್ಲ.
'ಪ್ರಿಯಾಂಕಾಳ ಪಾತ್ರ ದ ಹೆಸರು ಅಲೆಕ್ಸ್ ಮತ್ತು ನಾನು ಅವಳ ಪ್ರೇಮಿಯ ಪಾತ್ರವನ್ನು ಓದಿದ್ದೇನೆ. ಇಬ್ಬರು ಭಾರತೀಯರು ಪರಸ್ಪರ ಎದುರು ನಟಿಸುವುದು ಅವರು ಬಯಸದ ಕಾರಣ ನಾನು ಆ ಪಾತ್ರವನ್ನು ಪಡೆಯಲಿಲ್ಲ ಎಂದು ನಾನು ಊಹಿಸುತ್ತೇನೆ. ನಾನು ಓದಿದ ಅತ್ಯುತ್ತಮ ಪೈಲಟ್ ಸ್ಕ್ರಿಪ್ಟ್ ಅದು' ಎಂದು ಸಿದ್ಧಾರ್ಥ್ ಡಿಎನ್ಎಗೆ ಹೇಳಿದ್ದರು.
ಅವರು ಮ್ಯಾಥ್ಯೂ ಮೆಕನೌಘೆಯವರ ಟ್ರೂ ಡಿಟೆಕ್ಟಿಮ್‌ನಲ್ಲಿ ಒಂದು ಪಾತ್ರಕ್ಕೆ ಸಹ ಆಡಿಷನ್ ಮಾಡಿದ್ದರು.ಆದರೆ ಅದಕ್ಕೂ ಆಯ್ಕೆಯಾಗಲಿಲ್ಲ.
'ಅವರು ನನ್ನ ಆಡಿಷನ್ ಅನ್ನು ಇಷ್ಟಪಟ್ಟರು, ಆದರೆ ನಾನು ಯಾವುದೇ ಆಂಗಲ್‌ನಿಂದಲೂ ದರೋಡೆಕೋರನಂತೆ ಕಾಣಲಿಲ್ಲ. ನಾನು ಮೆಕ್ಸಿಕನ್,ಮೆಡಿಟರೇನಿಯನ್ ರೋಲ್ ಮಾಡಬಹುದು ಎಂದು ಬಹಳಷ್ಟು ಜನರು ಹೇಳಿದ್ದಾರೆ.ಬಹುಶಃ ನಾನು ಭಾರತೀಯನ ಪಾತ್ರ ಮಾಡಬಹುದು' ಎಂದು ಹೇಳಿದ ಸಿದ್ಧಾರ್ಥ್ ಮಲ್ಯ.