ಲೋಕಸಭಾ ಚುನಾವಣೆಗೆ ಬಾಲಿವುಡ್ ಹಾಟ್ ಬೆಡಗಿ ನೇಹಾ ಶರ್ಮಾ, ಸ್ಪರ್ಧೆ ಸೂಚನೆ ನೀಡಿದ ತಂದೆ!

First Published | Mar 23, 2024, 2:10 PM IST

ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಘೋಷಣೆಗೆ ಭಾರಿ ಚರ್ಚೆ ನಡೆಯುತ್ತಿದೆ. ಇದೀಗ ಮತ್ತೊಬ್ಬ ಸಿನಿ ತಾರೆ ಲೋಕಸಭಾ ಚುನಾವಣಾ ಅಖಾಡಕ್ಕೆ ಧುಮುಕುತ್ತಿದ್ದಾರೆ. ಬಾಲಿವುಡ್ ನಟಿ, ಸೆಕ್ಸಿ ಕ್ವೀನ್ ಎಂದೇ ಗುರುತಿಸಿಕೊಂಡಿರುವ ನೇಹಾ ಶರ್ಮಾ ಬಿಹಾರದಿಂದ ಸ್ಪರ್ಧಿಸಲು ತಯಾರಿ ನಡೆದಿದೆ. ಈ ಕುರಿತು ನೇಹಾ ಶರ್ಮಾ ತಂದೆ ಮಾಹಿತಿ ನೀಡಿದ್ದಾರೆ. 
 

18ನೇ ಲೋಕಸಭಾ ಚುನಾವಣೆಯಲ್ಲಿ ಬಾಲಿವುಡ್ ತಾರೆಯರು, ಕ್ರೀಡಾಪಟಗಳು, ಸೆಲೆಬ್ರೆಟಿಗಳ ಪಟ್ಟಿ ಹೆಚ್ಚಿದೆ. ಸಿನಿ ತಾರೆಯರನ್ನೂ ಲೋಕಸಭಾ ಚುನಾವಣಾ ಅಖಾಡಕ್ಕೆ ಇಳಿಸುತ್ತಿದೆ. ಇದೀಗ ಬಾಲಿವುಡ್ ನಟಿ, ಮಾಡೆಲ್ ನೇಹಾ ಶರ್ಮಾ ಸರದಿ.
 

ಬಾಲಿವುಡ್‌ನಲ್ಲಿ ಮಿಂಚುತ್ತಿರುವ ನೇಹಾ ಶರ್ಮಾ ಈ ಬಾರಿಯ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಈ ಕುರಿತು ನೇಹಾ ಶರ್ಮಾ ತಂದೆ ಅಜಯ್ ಶರ್ಮಾ ಮಹತ್ವದ ಮಾಹಿಚಿ ಹಂಚಿಕೊಂಡಿದ್ದಾರೆ.
 

Tap to resize

ಬಿಹಾರದ ಭಾಗಲಪುರ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿರುವ ನೇಹಾ ಶರ್ಮಾ ತಂದೆ ಇದೀಗ ಲೋಕಸಭೆ ಚುನಾವಣೆಯಲ್ಲಿ ಪುತ್ರಿಯನ್ನು ಕಣಕ್ಕಿಳಿಸುವುದಾಗಿ ಹೇಳಿದ್ದಾರೆ.

ಇಂಡಿಯಾ ಮೈತ್ರಿ ಒಕ್ಕೂಟದ ಜೊತೆ ಸೀಟು ಹಂಚಿಕೆ ಮಾತುಕತೆ ನಡೆಯುತ್ತಿದೆ. ಮೈತ್ರಿ ಪಕ್ಷಗಳ ಜೊತೆಗಿನ ಮಾತುಕತೆಯಲ್ಲಿ ಭಾಗಲಪುರ ಕ್ಷೇತ್ರ ಕಾಂಗ್ರೆಸ್‌ಗೆ ಸಿಗಲಿದೆ. ಇದು ಕಾಂಗ್ರೆಸ್ ಭದ್ರಕೋಟೆಯಾಗಿದೆ. ಹೀಗಾಗಿ ಇದೇ ಕ್ಷೇತ್ರದಿಂದ ನೇಹಾ ಶರ್ಮಾ ಕಣಕ್ಕಿಳಿಸಲಾಗುತ್ತದೆ ಎಂದಿದ್ದಾರೆ.
 

ನವಾಜುದ್ದೀನ್ ಸಿದ್ದಿಕ್ಕಿ ಜೊತೆಗಿನ ಜೋಗಿರಾ ಸಾರಾ ರಾರಾ ಚಿತ್ರದ ಮೂಲಕ ಭಾರಿ ಜನಪ್ರಿಯತೆ ಗಳಿಸಿರುವ ನೇಹಾ ಶರ್ಮಾ ಬಾಲಿವುಡ್‌ನಲ್ಲಿ ಸಕ್ರಿಯವಾಗಿದ್ದಾರೆ.

ಕೆಲ ವಿವಾದಕ್ಕೂ ಗುರಿಯಾಗಿರುವ ನೇಹಾ ಶರ್ಮಾ ಇದೀಗ ರಾಜಕೀಯದಲ್ಲಿ ಅದೃಷ್ಠ ಪರೀಕ್ಷೆ ನಡೆಸಲು ತಯಾರಿ ನಡೆಸಿದ್ದಾರೆ. ತಂದೆಯ ವಿಧಾನಸಭಾ ಕ್ಷೇತ್ರ ಒಳಗೊಂಡಿರುವ ಕ್ಷೇತ್ರದಲ್ಲಿ ಸ್ಪರ್ಧಿಸಿ ಲೋಕಸಭೆಗೆ ಪ್ರವೇಶಲು ಸಜ್ಜಾಗಿದ್ದಾರೆ.
 

ಸಾಮಾಜಿಕ ಮಾಧ್ಯಮದಲ್ಲೂ ಸಕ್ರಿಯವಾಗಿರುವ ನೇಹಾ ಶರ್ಮಾ ಅಪಾರ ಅಬಿಮಾನಿ ಬಳಗವನ್ನು ಹೊಂದಿದ್ದಾರೆ. ಬಿಹಾರದಲ್ಲಿ ನೇಹಾ ಶರ್ಮಾ ಕ್ರೇಜ್ ತುಸು ಹೆಚ್ಚೇ ಇದೆ.
 

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹಲವು ನಟ ನಟಿಯರು ಸ್ಪರ್ದಿಸುವ ಸಾಧ್ಯತೆ ಇದೆ. ಊರ್ವಶಿ ರೌಟೇಲಾ ಕೂಡ ರಾಜಕೀಯ ಪ್ರವೇಶದ ಸೂಚನೆ ನೀಡಿದ್ದಾರೆ. ಮುಂಬೈನಿಂದ ನಟ ಗೋವಿಂದಾ ಸ್ಪರ್ಧಿಸುವ ಸಾಧ್ಯತೆ ಇದೆ.

Latest Videos

click me!