ಹಾಟ್​​​ ಲುಕ್‌ನಲ್ಲಿ KGF ಬೆಡಗಿ ಮೌನಿ ರಾಯ್​: ಅಯ್ಯಯ್ಯೋ ನಿಮ್ಮ ಡ್ರೆಸ್ ಜಾರಿ ಬೀಳುತ್ತೆ ಎಂದ ಫ್ಯಾನ್ಸ್!

First Published | Oct 14, 2023, 1:00 AM IST

ಬಾಲಿವುಡ್‌ ಮತ್ತು ಕಿರುತೆರೆ ನಟಿ ಮೌನಿ ರಾಯ್‌ ಸಿನಿಮಾಗಳನ್ನು ನೀವು ನೋಡಿರಬಹುದು. ಪಶ್ಚಿಮ ಬಂಗಾಳ ಮೂಲದ ಈ ಪ್ರತಿಭಾನ್ವಿತ ನಟಿ ಸದಾ ಒಂದಲ್ಲಾ ಒಂದು ಫೋಟೋಶೂಟ್ ಮೂಲಕ ಗಮನ ಸೆಳೆಯುತ್ತಲೇ ಇರುತ್ತಾರೆ. ಇದೀಗ ಮತ್ತೆ ಹಾಟ್ & ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ.

ಗಿಳಿ ಹಸಿರು ಬಣ್ಣದ ಗೌನ್ ಧರಿಸಿ ಮಸ್ತ್ ಆಗಿ ಕ್ಯಾಮೆರಾ ಕಣ್ಣಿಗೆ ಮೌನಿ ರಾಯ್‌ ಪೋಸ್ ಕೊಟ್ಟಿದ್ದಾರೆ. ಆರೆಂಜ್ ಬ್ಯಾಕ್ ಗ್ರೌಂಡ್‌ನಲ್ಲಿ ನಟಿ ಹೈಲೆಟ್ ಆಗಿದ್ದು, ಪಿಂಕ್ ಲಿಪ್​ಸ್ಟಿಕ್ ಹಚ್ಚಿಕೊಂಡಿದ್ದಾರೆ.

ಗಲಿ ಗಲಿ ಎಂದು ಯಶ್ ಜೊತೆ ಸೊಂಟ ಬಳುಕಿಸಿದ್ದ ನಟಿ ಮೌನಿ ರಾಯ್ ಫೋಟೋಶೂಟ್ ನೋಡಿ, ನೆಟ್ಟಿಗರು ಅಯ್ಯಯ್ಯೋ ನಿಮ್ಮ ಡ್ರೆಸ್ ಜಾರಿ ಬೀಳುತ್ತೆ ಎಂದು ಕಾಮೆಂಟ್ ಮಾಡಿದ್ದಾರೆ. 

Tap to resize

‘ನಾಗಿನ್’ ಸೀರಿಯಲ್ ಸೇರಿದಂತೆ ಹಿಂದಿ ಕಿರುತೆರೆಯಲ್ಲಿ ಸಾಕಷ್ಟು ಸೀರಿಯಲ್ ಮೂಲಕ ನಟಿ ಮನೆ ಮಾತಾದರು. ಅಕ್ಷಯ್ ಕುಮಾರ್ ನಟನೆಯ ಗೋಲ್ಡ್ ಸಿನಿಮಾದಲ್ಲಿ ಹೀರೋಯಿನ್ ಆಗಿ ನಟಿಸಿದ್ದರು. 

2007 ರಲ್ಲಿ ಜನಪ್ರಿಯ ಕಾರ್ಯಕ್ರಮ ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ ಮೂಲಕ ತಮ್ಮ ಮೌನಿ ರಾಯ್​​ ವೃತ್ತಿಜೀವ ಆರಂಭಿಸಿದರು. 2011ರಲ್ಲಿ ಬಂದ ದೇವೋ ಕೆ ದೇವ್-ಮಹಾದೇವ್ ಸೀರಿಯಲ್​ನಲ್ಲಿ ಸತಿ ಪಾತ್ರ ನಿರ್ವಹಿಸಿದ್ದರು.

ನಟನೆಗಿಂತ ಸೌಂದರ್ಯದ ಸಲುವಾಗಿಯೇ ಸಖತ್​ ಸದ್ದು ಮಾಡುವ ಚೆಲುವೆ ಮೌನಿ ರಾಯ್. ಆದ್ರೆ ಸೌಂದರ್ಯ ದುಪ್ಪಟ್ಟು ಮಾಡಿಕೊಳ್ಳಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ಹೇಳಲಾಗಿದೆ. 

ರಣ್‌ಬೀರ್, ಆಲಿಯಾ ಭಟ್ ನಟನೆಯ ‘ಬ್ರಹ್ಮಾಸ್ತ್ರ’ ಚಿತ್ರದಲ್ಲಿ ವಿಲನ್ ಆಗಿ ಮೌನಿ ನಟಿಸಿದ್ದರು. ಬೆಂಗಳೂರು ಮೂಲದ ಉದ್ಯಮಿ ಸೂರಜ್ ನಂಬಿಯಾರ್ ಜೊತೆ ಮೌನಿ ರಾಯ್ 2022ರಲ್ಲಿ ಮದುವೆಯಾದರು. 

Latest Videos

click me!