ಬಿಗ್ಬಾಸ್ ಖ್ಯಾತಿಯ ನಟಿ ಸೋನು ಗೌಡ ಕಳೆದ ಕೆಲವು ವಾರಗಳಿಂದ ಸಖತ್ ಸುದ್ದಿಯಲ್ಲಿದ್ದಾರೆ. ಮಾಲ್ದೀವ್ಸ್ ಹನಿಮೂನ್ ಪ್ಯಾಕೇಜ್ ಆಯ್ಕೆ ಮಾಡಿಕೊಂಡು ಹೋಗಿರೋ ಸ್ನೇಹಿತೆ ಜೊತೆ ಇಡೀ ಮಾಲ್ಡೀವ್ಸ್ ಸುತ್ತಾಡಿಕೊಂಡು ಯುಟ್ಯೂಬ್ ವ್ಲಾಗ್ ಮಾಡುತ್ತಿದ್ದಾರೆ. ಡಿಫರೆಂಟ್ ಡ್ರೆಸ್ ಆಗಿ ಬೋಲ್ಡ್ ಆಗಿ ಫೋಟೋಗಳಿಗೆ ಫೋಸ್ ನೀಡುತ್ತಿದ್ದಾರೆ.
ಮಾಲ್ದೀವ್ಸ್ ಎಂಜಾಯ್‌ಮೆಂಟ್‌ನಲ್ಲಿ ಮುಳುಗಿ ಸೋನು ಬಿಕಿನಿ ಧರಿಸಿರುವ ವಿಡಿಯೋಗಳನ್ನು ಕೆಲ ದಿನದ ಹಿಂದೆ ಅಪ್ಲೋಡ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದ್ದು ಹಿಗ್ಗಾಮುಗ್ಗಾ ಟ್ರೋಲ್ ಸಹ ಆಗಿದೆ. ಇದರ ಬೆನ್ನಲ್ಲೇ ಸೋನುಗೌಡ ರೆಡ್ ಶಾರ್ಟ್ಸ್ ಮತ್ತು ವೈಟ್ ಟಾಪ್ ಹಾಕಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ..
ಬೀಚ್‌ನಲ್ಲಿ ಸಮಯ ಕಳೆಯುತ್ತಿರುವ ಸೋನುಗೌಡ ಅಲ್ಲಿನ ತಂಗಾಳಿಗೆ ಮೈ ಮರೆತು ಕಳೆದುಹೋಗಿರುವ ಫೋಟೋ ಹಂಚಿಕೊಂಡಿದ್ದಾರೆ. ರೆಡ್-ವೈಟ್ ಕಾಂಬಿನೇಶನ್‌ನಲ್ಲಿಸ ಖತ್ ಹಾಟ್ ಆಗಿ ಕಾಣಿಸುತ್ತಿದ್ದಾರೆ.
Sonu gowd
ಇನ್‌ಸ್ಟಾಗ್ರಾಂನಲ್ಲಿ ಸೋನು ಗೌಡ ಹಂಚಿಕೊಂಡಿರುವ ಫೋಟೋ ಸಖತ್ ವೈರಲ್ ಆಗಿದೆ. ಜನರು ಹಾಟ್, ಕ್ವೀನ್ ಆಫ್ ಮಾಲ್ದೀವ್ಸ್, ಬ್ಯೂಟಿಫುಲ್, ಸೆಕ್ಸೀ ಎಂದೆಲ್ಲಾ ಕಮೆಂಟಿಸಿದ್ದಾರೆ.
ಕೆಲ ದಿನದ ಹಿಂದೆ ಸೋನು ತುಂಡುಡುಗೆ ತೊಟ್ಟ ಫೋಟೋವನ್ನು ಪೋಸ್ಟ್ ಮಾಡಿದ್ದರು. ನೀಲಿ ಸ್ಕರ್ಟ್ ತೊಟ್ಟು ಕೈಯಿಂದ ಮೈ ಮುಚ್ಚಿಕೊಂಡ ಫೋಟೋಸ್ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಎರಡ್ಮೂರು ದಿನಗಳಿಂದ ಬಿಕಿನಿ ತೊಟ್ಟು ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ಸೋನು ಶ್ರೀನಿವಾಸ್ ಗೌಡ ಮತ್ತೆ ಬೆಡ್‌ರೂಮ್ ಫೋಟೋಸ್ ಪೋಸ್ಟ್ ಮಾಡಿದ್ದರು. ಬಿಕಿನಿ ಫೋಟೋ ಹಾಗೂ ಬೆಡ್‌ರೂಮ್ ಫೋಟೋಸ್ ಹಂಚಿಕೊಳ್ಳುವ ಸಿಕ್ಕಾಪಟ್ಟೆ ವೈರಲ್ ಹಾಗೂ ಟ್ರೋಲ್ ಆಗಿದ್ದರು.
ಬಿಗ್ ಬಾಸ್ ಬೆಡಗಿ ಸೋನು ಗೌಡ ಈಗ ಕೆಂಪು ಬಣ್ಣದ ಬಿಕಿನಿಯಲ್ಲಿ ಹಾಗೂ ಬೆಡ್‌ರೂಮ್‌ನಲ್ಲಿ ಹಳದಿ ಬಣ್ಣದ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದು, ಕ್ಯಾಮೆರಾ ಕಣ್ಣಿಗೆ ಸಖತ್ ಹಾಟ್ ಆಗಿ ಪೋಸ್ ನೀಡಿದ್ದರು. ಟ್ರೋಲ್‌ಗಳ ಮಧ್ಯೆಯೂ ಸೋನುಗೌಡ ಮಾಡಿರೋ ವಿಡಿಯೋ ಭರ್ತಿ 1.9 ಕೋಟಿ ವೀವ್ಸ್ ಗಳಿಸಿದೆ. ವೀಡಿಯೋಗೆ 78 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ
'ಮಾಲ್ಡೀವ್ಸ್‌ಗೆ ಬಂದ ಮೇಲೆ ನಾನು ವೈರಲ್ ಆಗುತ್ತೀನಿ ಎಂದು ಗೊತ್ತಿರಲಿಲ್ಲ. ನಮ್ಮ ಖುಷಿಗೆ ನಾನು ಎಂಜಾಯ್ ಮಾಡಲ್ಲ ಬಿಕಿನಿ ಹಾಕಬೇಕು ಅಲ್ವಾ? ನನಗೆ ಒಂದು ಮಿಲಿಯನ್ ಫಾಲೋವರ್ಸ್ ಆಗಿರುವುದಕ್ಕೆ ನಾನು ಬೇರೆ ಅವರ ತರ ಜಾತ್ರೆ ಆಚರಣೆ ಮಾಡಿಕೊಳ್ಳುವುದಿಲ್ಲ. ನನ್ನ ಬಳಿ ಇನ್ನು ಹೆಚ್ಚಿಗೆ ಬಿಕಿನಿ ವಿಡಿಯೋಗಳು ಇಲ್ಲ ಅಷ್ಟೇ ಇರುವುದು' ಎಂದು ಸೋನುಗೌಡ ಹೇಳಿಕೊಂಡಿದ್ದರು