Latest Videos

ಬಿಕಿನಿಯಲ್ಲಿ ಬಿಸಿಯೇರಿಸಿದ ಆ್ಯಂಕರ್ ಅನಸೂಯ: ಆಂಟಿ ಬಂದ್ಲು ಆಂಟಿ... ಆಂಟಿ ತುಂಬ ತುಂಟಿ ಎಂದ ಪಡ್ಡೆಹೈಕ್ಳು!

First Published May 25, 2024, 8:55 PM IST

ಅನಸೂಯಾ ಬೆಳ್ಳಿತೆರೆಯಲ್ಲಿ ಗ್ಲಾಮರಸ್ ಪಾತ್ರ ಮಾಡದಿದ್ದರೂ ತಮ್ಮ ನಟನೆಯಿಂದ ಎಲ್ಲರನ್ನೂ ಆಕರ್ಷಿಸುತ್ತಿದ್ದಾರೆ. ಜಬರ್ದಸ್ತ್‌ನಂತಹ ಕಾರ್ಯಕ್ರಮಗಳನ್ನು ನಿರೂಪಣೆ ಮಾಡುವ ಮೂಲಕ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದು, ಇದೀಗ ಅವರ ಹಾಟ್ ಫೋಟೋಸ್ ವೈರಲ್ ಆಗಿದೆ.

ಸಾಲು ಸಾಲು ಸಿನಿಮಾ ಆಫರ್‌ಗಳು ಬರುತ್ತಿರುವ ಹಿನ್ನೆಲೆಯಲ್ಲಿ ಅನಸೂಯಾ ಕಿರುತೆರೆಯಿಂದ ದೂರ ಉಳಿದಿದ್ದಾರೆ. ಸದ್ಯ ಪುಷ್ಪ 2 ಚಿತ್ರದಲ್ಲಿ ದಾಕ್ಷಾಯಣಿ ಪಾತ್ರದಲ್ಲಿ ನಟಿಸುತ್ತಿದ್ದು, ಈ ಚಿತ್ರದ ಮೂಲಕ ಖ್ಯಾತಿಯನ್ನು ಪಡೆದರು. 

ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಸೆಲೆಬ್ರಿಟಿಗಳಲ್ಲಿ ಅನಸೂಯಾ ಕೂಡ ಒಬ್ಬರಾಗಿದ್ದಾರೆ. ಈ ನಟಿ ಯಾವಾಗಲೂ ಅಭಿಮಾನಿಗಳೊಂದಿಗೆ ಟಚ್ ನಲ್ಲಿ ಇರುತ್ತಾರೆ. ಸಂಪರ್ಕದಲ್ಲಿರುತ್ತಾರೆ. ಅದೇ ರೀತಿ ಅನಸೂಯಾ ಕೂಡ ತನಗೆ ಸಂಬಂಧಿಸಿದ ಎಲ್ಲ ವಿಚಾರವನ್ನು ತನ್ನ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ.

ಅನಸೂಯಾ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿರುತ್ತಾರೆ. ಸುಂದರವಾದ ಸೀರೆ ಮತ್ತು ಟ್ರೆಂಡಿ ಉಡುಗೆಯಲ್ಲಿ ಫೋಟೋಶೂಟ್‌ ಮಾಡಿಸುತ್ತಿರುತ್ತಾರೆ. ಅದನ್ನು ಅಭಿಮಾನಿಗಳೊಂದಿಗೆ ಶೇರ್ ಸಹ ಮಾಡಿಕೊಳ್ಳುತ್ತಾರೆ.

ಸದ್ಯ ಅನಸೂಯಾ ಶೇರ್ ಮಾಡಿರುವ ಇತ್ತೀಚಿನ ಫೋಟೋಗಳು ಪಡ್ಡೆ ಹುಡುಗರ ನಿದ್ದೆ ಕದ್ದಿದೆ. ಬಿಕಿನಿ ಹಾಕಿಕೊಂಡು ಕುಣಿದು ಕುಪ್ಪಳಿಸಿದ ಅನುಸೂಯ ಫೋಟೋಸ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. 

ಪತಿ ಹಾಗೂ ಇಬ್ಬರು ಮಕ್ಕಳೊಂದಿಗೆ ವೆಕೇಷನ್‌ಗೆ ತೆರಳಿದ ಅನಸೂಯಾ ಬಿಕಿನಿಯಲ್ಲಿ ನೀರಿಗೆ ಇಳಿದಿದ್ದಾರೆ. ಜೊತೆಗೆ ಸಖತ್ ಎಂಜಾಯ್ ಮಾಡುತ್ತಿರುವ ಅನಸೂಯಾ ತಮ್ಮ ಫೋಟೋಗಳ ಮೂಲಕ ಸೋಶಿಯಲ್ ಮೀಡಿಯಾ ಶೇಕ್ ಮಾಡ್ತಿದ್ದಾರೆ.

ಆಗಾಗ ಫ್ಯಾಮಿಲಿ ಟ್ರಿಪ್ ಹೋಗುವ ಅನಸೂಯ ಹಾಟ್ ಅವತಾರಗಳಲ್ಲಿ ಕಾಣಿಸಿಕೊಳ್ಳೋದು ಇತ್ತೀಚಿಗೆ ಕಾಮನ್ ಆಗಿದೆ. ಆಕೆ ಒಳ ಉಡುಪಿನಲ್ಲಿರುವ ಫೋಟೋಸ್ ವೈರಲ್ ಆಗಿದ್ದು, ಸಖತ್ ಹಾಟ್ ಬೇಬಿ, ಆಂಟಿ ಬಂದ್ಲು ಆಂಟಿ... ಆಂಟಿ ತುಂಬ ತುಂಟಿ ಅಂತೆಲ್ಲಾ ತರೇಹವಾರಿ ಕಾಮೆಂಟ್ ಮಾಡ್ತಿದ್ದಾರೆ.

ಇತ್ತೀಚೆಗೆ ಅನಸೂಯಾ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ, ಪುಷ್ಪಾ 2 ಚಿತ್ರತಂಡ, ದಾಕ್ಷಾಯಣಿ ಪಾತ್ರದ ಫಸ್ಟ್ ಲುಕ್‌ ಅನ್ನು ಬಿಡುಗಡೆ ಮಾಡಿತು. ಪುಷ್ಪ 2 ಚಿತ್ರದಲ್ಲಿ ಅನಸೂಯಾ ಅವರ ಪಾತ್ರ ಪ್ರಮುಖವಾಗಿರಲಿದೆ ಎಂಬ ವರದಿಗಳಿವೆ.

ಅನಸೂಯಾ ಕೊನೆಯದಾಗಿ ಪೆಡಕಾಪು, ವಿಮಾನ ಮತ್ತು ರಜಾಕಾರ್ ಚಿತ್ರಗಳಲ್ಲಿ ನಟಿಸಿದ್ದರು. ಸಿನಿಮಾಗಳಲ್ಲಿ ಅವಕಾಶಗಳು ಹೆಚ್ಚುತ್ತಿರುವ ಕಾರಣ ಜಬರ್ದಸ್ತ್ ತ್ಯಜಿಸಬೇಕಾಯಿತು ಎಂದು ಅನಸೂಯಾ ಈ ಹಿಂದೆ ಸ್ಪಷ್ಟಪಡಿಸಿದ್ದರು.

ಇನ್ನು ಅನಸೂಯ ವಿವಾಹಿತೆಯಾಗಿದ್ದು ಇಬ್ಬರು ಮಕ್ಕಳು ಕೂಡಾ ಇದ್ದಾರೆ. ಹೀಗಿದ್ದರೂ ಅವರಿಗೆ ಈಗಲೇ ಸಿನಿಮಾದಲ್ಲಿ ಹೆಚ್ಚಿನ ಅವಕಾಶ ಸಿಗುತ್ತಿದೆ. ಅವರ ಡಿಮ್ಯಾಂಡ್ ಕೂಡಾ ಹೆಚ್ಚುತ್ತಿದೆ. ರಾಮ್‌ಚರಣ್ ನಟನೆಯ 'ರಂಗಸ್ಥಳಂ' ಚಿತ್ರದಲ್ಲಿ ರಂಗಮತ್ತೆ ಪಾತ್ರ ಒಳ್ಳೆ ಹೆಸರು ತಂದುಕೊಟ್ಟಿತ್ತು.

click me!