ಸೀರೆಯಲ್ಲೂ ಹಾಟ್ ಪೋಸ್ ಕೊಟ್ಟ ಶ್ರಿಯಾ ಶರಣ್: ಕಬ್ಜ ಬೆಡಗಿ ಲುಕ್‌ಗೆ ಪಡ್ಡೆಹೈಕ್ಳು ಫಿದಾ!

First Published | Sep 30, 2023, 12:30 AM IST

ಕಾಲಿವುಡ್ ಬ್ಯೂಟಿ ಶ್ರಿಯಾ ಶರಣ್ ತನ್ನ ಬ್ಯೂಟಿಯಿಂದಲೇ ಅಭಿಮಾನಿಗಳ ಮನಗೆದ್ದಿದ್ದಾರೆ. ಇದೀಗ ನಟಿ ಶ್ರಿಯಾ ಶರಣ್ ಸೀರೆಯಲ್ಲಿ ಮಿಂಚಿದ್ದು, ಸಾಮಾಜಿಕ ಜಾಲತಾಣದದಲ್ಲಿ ಫೋಟೋಸ್​ ವೈರಲ್​ ಆಗಿದೆ.

ನಟಿ ಶ್ರಿಯಾ ಶರಣ್ ಬಾಲಿವುಡ್, ಕಾಲಿವುಡ್, ಹಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದು, ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕಬ್ಜ ಸಿನಿಮಾದಲ್ಲಿ ನಟಿಸುವ ಮೂಲಕ ಶ್ರಿಯಾ ಕನ್ನಡಿಗರ ಮನಗೆದ್ದಿದ್ದಾರೆ.

ಸದಾ ಶಾರ್ಟ್ ಡ್ರೆಸ್‌ನಲ್ಲಿ ಹಾಟ್ ಸ್ಟಿಲ್ ಕೊಡುವ ಶ್ರಿಯಾ ಈ ಬಾರಿ ಫುಲ್ ಸೀರೆಯಲ್ಲಿ ಕ್ಯಾಮೆರಾ ಮುಂದೆ ಪೋಸ್ ಕೊಟ್ಟಿದ್ದಾರೆ. ಶ್ರಿಯಾ ಸೀರೆಯಲ್ಲೂ ಸಖತ್​ ಸ್ಟೈಲಿಶ್​ ಆಗಿ ಕಾಣ್ತಿದ್ದಾರೆ. ನಟಿ ನೋಡಿದ ನೆಟ್ಟಿಗರು ಮಂತ್ರಮುಗ್ಧರಾಗಿದ್ದಾರೆ. 

Tap to resize

ಶ್ರಿಯಾ ಚಿತ್ರರಂಗಕ್ಕೆ ಕಾಲಿಟ್ಟು 2 ದಶಕಗಳೇ ಕಳೆದಿವೆ. 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಶ್ರಿಯಾ ತನ್ನ ಬ್ಯೂಟಿ ಹಾಗೂ ನಟನೆಯಿಂದ ಅಭಿಮಾನಿಗಳ ಮನ ಕದ್ದಿದ್ದಾರೆ.

ಮದುವೆ ಬಳಿಕವೂ ಅನೇಕ ಸಿನಿಮಾಗಳಲ್ಲಿ ನಟಿ ಶ್ರೀಯಾ ನಟಿಸಿದ್ದಾರೆ. ಶ್ರೀಯಾಗೆ ಮುದ್ದಾದ ಮಗಳಿದ್ದು, ಮಗಳ ಜೊತೆಗಿನ ಫೋಟೋಗಳನ್ನು ಸಹ ಆಗಾಗ ಹಂಚಿಕೊಳ್ತಾರೆ. 

ಇಷ್ಟಂ ಸಿನಿಮಾದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟ ಶ್ರಿಯಾ ಕಡಿಮೆ ಅವಧಿಯಲ್ಲಿ ಸ್ಟಾರ್ ನಟಿ ಆಗಿದ್ದಾರೆ. ತೆಲುಗಿನಲ್ಲಿ ಟಾಪ್ ಹೀರೋಗಳ ಜೊತೆ ನಟಿಸಿದ್ದಾರೆ. ಹಲವು ಹಿಟ್ ಸಿನಿಮಾ ನೀಡಿದ್ದಾರೆ.

ಬಾಲಿವುಡ್ ಚಿತ್ರಗಳಲ್ಲಿಯೂ ಶ್ರಿಯಾ ಅಭಿನಯಿಸಿ ಲಕ್ಷಾಂತರ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಹಿಂದಿಯಲ್ಲಿ ದೃಶ್ಯಂ ಸಿನಿಮಾ ಮೂಲಕ ನಟಿ ಶ್ರಿಯಾ ಶರಣ್ ಸದ್ದು ಮಾಡಿದ್ದರು. ಇವರ ನಟನೆಯನ್ನು ಎಲ್ಲರು ಮೆಚ್ಚಿಕೊಂಡಿದ್ದರು.

Latest Videos

click me!