ಬೆಂಗಾಲಿ ಬ್ಯೂಟಿ ನಟಿ ಪಾಯಲ್ ಸರ್ಕಾರ್ ಬಿಜೆಪಿಗೆ ಸೇರಿದ್ದಾರೆ.
ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರ ಉಪಸ್ಥಿತಿಯಲ್ಲಿ ಪಾಯಲ್ ಬಿಜೆಪಿ ಸೇರಿದ್ದಾರೆ.
ಜನರಿಂದ ನನಗೆ ಪ್ರೀತಿ ಸಿಕ್ಕಿದೆ. ನಾನೀನಗ ಬಂಗಾಳದ ಜನರಿಗಾಗಿ ಕೆಲಸ ಮಾಡಬೇಕು ಎಂದಿದ್ದಾರೆ.
ಬಂಗಾಳ ಮೊದಲು ಹೇಗಿತ್ತೋ ಹಾಗೆ ಆಗಬೇಕು. ಅದಕ್ಕಾಗಿ ಬಿಜೆಪಿ ಕಷ್ಟ ಪಡುತ್ತಿದೆ ಎಂದಿದ್ದಾರೆ.
ಬಿಜೆಪಿಯ ಶ್ರಮಗಳನ್ನು ಮನಗಂಡು ನಾನು ಅದರೊಂದಿಗೆ ಸೇರುತ್ತಿದ್ದೇನೆ ಎಂದಿದ್ದಾರೆ ಪಾಯಲ್.
ನಾನು ಜನರಿಗೆ ಮನರಂಜನೆ ಕೊಟ್ಟಿದ್ದೇನೆ, ಇನ್ನು ಅವರ ಸೇವೆ ಮಾಡಬೇಕು ಎಂದಿದ್ದಾರೆ.
ಗ್ರೂಪಿಸಂ ಆಗದು ಎಂದುಕೊಂಡಿದ್ದೇನೆ, ಅದೊಂದು ಖಣಾತ್ಮಕ ಆಲೋಚನೆ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಎಸೆಂಬ್ಲಿ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಟಿಎಂಸಿ ಸಿನಿಮಾ ಸ್ಟಾರ್, ನಟರ ಹಿಂದೆ ಬಿದ್ದಿದೆ.
ನಟ ಯಶ್ ದಾಸ್ ಗುಪ್ತಾ ಕೂಡಾ ಬಿಜೆಪಿ ಸೇರಿದ್ದಾರೆ.
ಪಶ್ಚಿಮ ಬಂಗಳಾ ಬಿಜೆಪಿ ಮುಖ್ಯಸ್ಥ ವಿಜಯ್ವರಗಿಯ ಅವರ ಸಮ್ಮುಖದಲ್ಲಿ ಪಕ್ಷ ಸೇರಿದ್ದಾರೆ ನಟ.
ನಟಿ ಬಿಜೆಪಿ ಸೇರಿದ ದಿನವೇ ಕ್ರಿಕೆಟರ್ ಮನೋಜ್ ತಿವಾರಿ ಮತ್ತು ಮೂವರು ಬೆಂಗಾಲಿ ಸಿನಿಮಾ ಸ್ಟಾರ್ಗಳು ತೃಣಮೂಲ ಕಾಂಗ್ರೆಸ್ಗೆ ಸೇರಿದ್ದಾರೆ.
ನಟ ರಾಜ್ ಚಕ್ರವರ್ತಿ, ಕಾಂಚನ್ ಮುಲಿಕ್, ಸಯೋನಿ ಘೋಶ್ ಕೂಡಾ ದೀದಿ ಪಕ್ಷ ಸೇರಿಕೊಂಡಿದ್ದಾರೆ.ಬಂಗಾಳ ಚುನಾವಣೆಯ ದಿನಾಂಕ ನಿಗದಿಯಾಗಬೇಕಷ್ಟೆ
ಹಲವಾರು ಹಿಟ್ ಸಿನಿಮಾಗಳನ್ನು ಕೊಟ್ಟ ನಟಿ ಪಾಯಲ್ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್
ಬೋಲ್ಡ್ ಆಗಿರೋ ನಟಿ ಚುನಾವಣೆ ಸಮೀಪಿಸುತ್ತಿರುವಾಗಲೇ ಪಕ್ಷ ಸೇರಿದ್ದಾರೆ.