ತೆಳ್ಳಗಾಗಿರುವ 'ಬಿಂದಾಸ್' ಬೆಡಗಿಯ ಬಿಕಿನಿ ಪೋಸ್; ಹನ್ಸಿಕಾ ಹಾಟ್ ಫೋಟೋ ವೈರಲ್

First Published | May 11, 2022, 6:56 PM IST

ದಕ್ಷಿಣ ಭಾರತದ ಖ್ಯಾತ ನಟಿ ಹನ್ಸಿಕಾ ಮೋಟ್ವಾನಿ ಮತ್ತೆ ಸದ್ದು ಮಾಡುತ್ತಿದ್ದಾರೆ. ಸೈಲೆಂಟ್ ಆಗಿದ್ದ ಹನ್ಸಿಕಾ ಇತ್ತೀಚಿಗಷ್ಟೆ ಸಾಮಾಜಿಕ ಜಾಲತಾಣದಲ್ಲಿ ಹಾಟ್ ಫೋಟೋ ಶೇರ್ ಮಾಡುವ ಮಾಡುವ ಮೂಲಕ ಪಡ್ಡೆಗಳ ನಿದ್ದೆ ಗೆಡಿಸಿದ್ದಾರೆ.

ದಕ್ಷಿಣ ಭಾರತದ ಖ್ಯಾತ ನಟಿ ಹನ್ಸಿಕಾ ಮೋಟ್ವಾನಿ ಮತ್ತೆ ಸದ್ದು ಮಾಡುತ್ತಿದ್ದಾರೆ. ಸೈಲೆಂಟ್ ಆಗಿದ್ದ ಹನ್ಸಿಕಾ ಇತ್ತೀಚಿಗಷ್ಟೆ ಸಾಮಾಜಿಕ ಜಾಲತಾಣದಲ್ಲಿ ಹಾಟ್ ಫೋಟೋ ಶೇರ್ ಮಾಡುವ ಮಾಡುವ ಮೂಲಕ ಪಡ್ಡೆಗಳ ನಿದ್ದೆ ಗೆಡಿಸಿದ್ದಾರೆ.

ಕನ್ನಡದಲ್ಲಿ ಪುನೀತ್ ರಾಜ್ ಕುಮಾರ್ ಜೊತೆ ಬಿಂದಾಸ್ ಸಿನಿಮಾದಲ್ಲಿ ನಟಿಸಿದ್ದ ನಟಿ ಹನ್ಸಿಕಾ ಬಳಿಕ ಕನ್ನಡದ ಕಡೆ ಮುಖ ಮಾಡಿಲ್ಲ. ಈ ಒಂದು ಸಿನಿಮಾ ಮೂಲಕವೇ ಕನ್ನಡಿಗರ ಹೃದಯ ಗೆದ್ದಿದ್ದ ನಟಿ ಹನ್ಸಿಕಾ ತೆಲುಗು ಮತ್ತು ತಮಿಳು ಸಿನಿಮಾರಂಗದಲ್ಲಿ ಮಿಂಚಿದ್ದಾರೆ.

Tap to resize

ಉತ್ತರ ಭಾರತದ ಮೂಲದ ನಟಿ ಹನ್ಸಿಕಾ ಮೋಟ್ವಾನಿ ಖ್ಯಾತಿಗಳಿಸಿದ್ದು ದಕ್ಷಿಣ ಭಾರತೀಯ ಸಿನಿಮಾರಂಗದಲ್ಲಿ. ಬಾಲನಟಿಯಾಗಿ ಹಿಂದಿ ಸಿನಿಮಾರಂಗದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ಹನ್ಸಿಕಾ ತೆಲುಗು ಸಿನಿಮಾರಂಗದ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟರು.

ನಟಿ ಹನ್ಸಿಕಾ ತೆಲುಗು ಮತ್ತು ತಮಿಳಿನಲ್ಲಿ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಸ್ಟಾರ್ ಕಲಾವಿದರ ಜೊತೆತೆರೆ ಹಂಚಿಕೊಂಡಿರುವ ಹನ್ಸಿಕಾ ಕೊನೆಯದಾಗಿ ತೆನಾಲಿ ರಾಮಕೃಷ್ಣ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು.

ಹನ್ಸಿಕಾ ಹಳಿ ಸದ್ಯ ಸಾಲು ಸಾಲು ಸಿನಿಮಾಗಳಿವೆ. ದಪ್ಪ ಆಗಿದ್ದ ಹನ್ಸಿಕಾ ಇತ್ತೀಚಿಗೆ ತೂಕ ಇಳಿಸಿಕೊಂಡು ಬಳ್ಳಿಯ ಹಾಗೆ ಬಳಕುತ್ತಿದ್ದಾರೆ. ಹನ್ಸಿಕ ತೆಳ್ಳಗಾಗಿ ಅಭಿಮಾಗಳ ಮುಂದೆ ಬರುವ ಮೂಲಕ ಅಚ್ಚರಿ ಮೂಡಿಸಿದರು.

ಸದ್ಯ ಹನ್ಸಿಕಾ ಮಹಾ, ಪಾರ್ಟರ್ನರ್, ಮೈ ನೇಮ್ ಈಸ್ ಶ್ರುತಿ, ರೌಡಿ ಬೇಬಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾಗಳ ಜೊತೆಗೆ ವೆಬ್ ಸೀರಿಸ್ ನಲ್ಲೂ ಹನ್ಸಿಕಾ ನಟಿಸಿದ್ದಾರೆ.

ನಟಿ ಹನ್ಸಿಕಾ ನಾಸಾ ಮತ್ತು ಮೈ3 ವೆಬ್ ಸೀರಿಸ್ ನಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಒಂದು ಸೀರಿಸ್ ಮುಗಿಸಿರುವ ಹನ್ಸಿಕಾ ಸದ್ಯ ನಾಶಾ ಸೀರಿಸ್ ನಲ್ಲಿ ಬ್ಯುಸಿಯಾಗಿದ್ದಾರೆ. ತಮಿಳು ಮತ್ತು ತೆಲುಗಿನಲ್ಲಿ ಈ ಸೀರಿಸ್ ಮೂಡಿಬರುತ್ತಿವೆ.

Latest Videos

click me!