ಯಾಕ್ರೀ ಕಾರ್ತಿಕ್, ಪ್ಯಾಂಟ್ ಬಟನ್ ಹಾಕಳ್ಳೋಕೆ ಒಂದು ವಾರ ಬೇಕಾಯ್ತಾ ಎಂದ ಫ್ಯಾನ್ಸ್

First Published | Jul 6, 2024, 5:38 PM IST

ಚಂದು ಚಾಂಪಿಯನ್ ಸಕ್ಸಸ್ ಖುಷಿಯಲ್ಲಿರೋ ನಟ ಕಾರ್ತಿಕ್ ಆರ್ಯನ್ ಸೋಶಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟಿವ್ ಆಗಿದ್ದಾರೆ.

ಕಾಮಿಡಿ ಸಿನಿಮಾಗಳ ಮೂಲಕವೇ ಜನರನ್ನು ರಂಜಿಸುತ್ತಾ ಬಂದಿದ್ದ ಕಾರ್ತಿಕ್ ಆರ್ಯನ್ ಹೊಸ ಪಾತ್ರದಲ್ಲಿ ನಟಿಸುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಚಂದು ಚಾಂಪಿಯನ್ ನಟನೆಗೆ ಕಾರ್ತಿಕ್‌ಗೆ ಉತ್ತಮ ವಿಮರ್ಶೆ ಸಿಕ್ಕಿದೆ.

Kartik Aryan

ಶುಕ್ರವಾರ ಕಾರ್ತಿಕ್ ಆರ್ಯನ್ ಇನ್‌ಸ್ಟಾಗ್ರಾಂನಲ್ಲಿ ಮಾರ್ನಿಂಗ್ ಮತ್ತು ಇವನಿಂಗ್ ಎಂದು ಎರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕಾರ್ತಿಕ್ ಆರ್ಯನ್ ಸಿಕ್ಸ್ ಪ್ಯಾಕ್ ಫೋಟೋಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

Tap to resize

ಸದ್ಯ ಎರಡೂ ಫೋಟೋಗಳು ವೈರಲ್ ಆಗುತ್ತಿದ್ದು, ಲಕ್ಷ ಲಕ್ಷ ಲೈಕ್ಸ್, ಸಾವಿರಾರು ಕಮೆಂಟ್‌ಗಳು ಬಂದಿವೆ. ಮಹಿಳಾ ಅಭಿಮಾನಿಗಳು ಕಮೆಂಟ್ ಮೂಲಕ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ನಿಮ್ಮ ಈ ಫೋಟೋಗಳನ್ನು ನೋಡಿ ನಾನು ಕರಗಿ ಹೋದೆ. ಮೊದಲಿನಿಂದಲೂ ನಾನು ನಿಮ್ಮ ಅಭಿಮಾನಿ. ಚಂದು ಚಾಂಪಿಯನ್ ನಿಮ್ಮ ಸಿನಿ ಕೆರಿಯರ್‌ನ ಉತ್ತಮ ಚಿತ್ರಗಳಲ್ಲಿ ಒಂದಾಗಿರುತ್ತದೆ. ಒಳ್ಳೆಯ ನಟನೆ ಎಂದು ತರೇಹವಾರಿ ಕಮೆಂಟ್‌ಗಳು ಬಂದಿವೆ.

ಕಳೆದ ವಾರ ನಟ ಕಾರ್ತಿಕ್ ಆರ್ಯನ್, ಬಾಲ್ಕನಿಯಲ್ಲಿ ನಿಂತಿರುವ ಶರ್ಟ್‌ಲೆಸ್ ಫೋಟೋ ಹಂಚಿಕೊಂಡಿದ್ದರು. ಈ ಫೋಟೋದಲ್ಲಿ ಕಾರ್ತಿಕ್ ಧರಿಸಿದ್ದ ಪ್ಯಾಂಟ್ ಬಟನ್ ಓಫನ್ ಆಗಿತ್ತು. ಇದನ್ನು ಗಮನಿಸಿದ್ದ ನೆಟ್ಟಿಗರು ಬಟನ್ ಹಾಕೋದನ್ನು ಮರೆತಿದ್ದೀರಾ ಎಂದು ಪ್ರಶ್ನೆ ಮಾಡಿದ್ದರು.

ಇದೀಗ ಶುಕ್ರವಾರ ಶೇರ್ ಮಾಡಿಕೊಂಡಿರುವ ಫೋಟೋದಲ್ಲಿ ಪ್ಯಾಂಟ್ ಬಟನ್ ಸರಿ ಮಾಡಿಕೊಳ್ಳುತ್ತಿರುವ ಶೈಲಿಯಲ್ಲಿ ಫೋಟೋಗೆ ಪೋಸ್ ನೀಡಿದ್ದಾರೆ. ಈ ಫೋಟೋ ನೋಡಿ, ಪ್ಯಾಂಟ್ ಬಟನ್ ಹಾಕೊಳ್ಳೋಕ್ಕೆ ಒಂದು ವಾರ ಬೇಕಾಯ್ತಾ ಎಂದು ನಗೆ ಚಟಾಕಿ ಹಾರಿಸಿದ್ದಾರೆ.

ಕಳೆದ ವಾರ ಮತ್ತು ಶುಕ್ರವಾರ ಹಂಚಿಕೊಂಡಿದ್ದ ಫೋಟೋಗಳು ಒಂದೇ ಸ್ಥಳದಲ್ಲಿ ಕ್ಲಿಕ್ ಮಾಡಿಕೊಂಡಿದ್ದಾರೆ. ಆದರೆ ಒಂದೊಂದಾಗಿ ಫೋಟೋಗಳನ್ನು ಕಾರ್ತಿಕ್ ಆರ್ಯನ್ ಪೋಸ್ಟ್ ಮಾಡಿಕೊಳ್ಳುತ್ತಿದ್ದಾರೆ.

Latest Videos

click me!