ವಕೀಲಿಕೆ ಎಂಬುವುದು ಕಪಿಲ್ ಸಿಬಲ್‌ರಿಗೆ ವಂಶ ಪಾರಂಪರಿಕವಾಗಿ ಬಂದಿದೆ ಎಂದರೆ ತಪ್ಪಾಗುವುದಿಲ್ಲ. ಇವರ ತಂದೆ ಓರ್ವ ಅದ್ಭುತ ವಕೀಲರಾಗಿದ್ದರು ಹೀಗಾಗೇ ಅವರನ್ನು ಅಂತಾರಾಷ್ಟ್ರೀಯ ಬಾರ್ ಎಸೋಸಿಯೇಷನ್ ಲಿವಿಂಗ್ ಲೆಜೆಂಡ್ ಆಫ್ ಲಾ ಎಂಬ ಪದವಿ ನೀಡಿತ್ತು.
ತಮ್ಮ ತಂದೆಯ ಹಾದಿಯಲ್ಲೇ ನಡೆದ ಸಿಬಲ್ ಕೂಡಾ ದೆಹಲಿಯ ಫ್ಯಾಕಲ್ಟಿ ಆಫ್ ಲಾ ಕಾಲೇಜಿನಿಂದ LLB ಶಿಕ್ಷಣ ಪಡೆದರು. ಇದಾದ ಬಳಿಕ ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ LLB ಓದಿದರು.
1973ರಲ್ಇ ಕಪಿಲ್ ಸಿಬಲ್ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲೂ ತೇರ್ಗಡೆ ಹೊಂದಿದ್ದರು. ಆದರೆ ಅವರ ಆಸಕ್ತಿ ಕಾನೂನು ಕ್ಷೇತ್ರದಲ್ಲಿತ್ತು, ಹೀಗಾಗಿ ಅವರು ಲೀಗಲ್ ಪ್ರ್ಯಾಕ್ಟೀಸ್ ಆರಂಭಿಸಿದರು. ಸದ್ಯ ಅವರು ದೇಶದ ಟಾಪ್ ವಕೀಲರಲ್ಲಿ ಗುರುತಿಸಿಕೊಂಡಿದ್ದಾರೆ.
1996ರಲ್ಲಿ ಪಿ. ವಿ. ನರಸಿಂಹರಾವ್ ಕಪಿಲ್ ಸಿಬಲ್‌ರಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದರು. ಆದರೆ ಅವರು ಬಿಜೆಪಿ ಅಭ್ಯರ್ಥಿಯಾಗಿದ್ದ ಸುಷ್ಮಾ ಸ್ವರಾಜ್ ವಿರುದ್ಧ ಸೋಲುಂಡರು. ಇದಾದ ಬಳಿಕ ಅವರು 2004ರಲ್ಲಿ ಚಾಂದಿನಿ ಚೌಕ್‌ನಿಂದ ಕಣಕ್ಕಿಳಿದರು ಹಾಗೂ ಬಿಜೆಪಿಯ ಸ್ಮೃತಿ ಇರಾನಿಯನ್ನು ಸೋಲಿಸಿ ಸಂಸತ್ತು ಪ್ರವೇಶಿಸಿದರು.
ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಸಚಿವರಾಗಿದ್ದ ಸಂದರ್ಭದಲ್ಲಿ ಅವರು ಯಾವುದೇ ಕೇಸ್ ಪಡೆದಿರಲಿಲ್ಲ.ಆದರೆ ಕೇಂದ್ರದಿಂದ ಕಾಮಗ್ರೆಸ್ ಸರ್ಕಾರ ಅಧಿಕಾರ ಕಳೆದುಕೊಂಡಾಗ ಅವರು ಮತ್ತೆ ಬಾರ್ ಆಂಡ್ ಕೌನ್ಸಿಲ್‌ನಿಂದ ತಮ್ಮ ಲೈಸೆನ್ಸ್ ನವೀಕರಿಸಿದರು. ಈ ಮೂಲಕ ಮತ್ತೆ ತಮ್ಮ ವಕೀಲಿಕೆ ವೃತ್ತಿಗೆ ಮರಳಿದರು.
ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಪರವಾಗಿ ತ್ರಿವಳಿ ತಲಾಖ್ ಹಾಗೂ ಹಲಾಲಾದಿಂದ ದೊಡ್ಡ ದೊಡ್ಡ ಪ್ರಕರಣಗಳ ಕೇಸ್‌ನಲ್ಲಿ ಹೋರಾಡಿದ್ದ ಸಿಬಲ್ ಒಂದು ದಿನದ ವಿಚಾರಣೆಗೆ 8 ರಿಂದ 15 ಲಕ್ಷ ರೂಪಾಯಿ ಫೀಸ್ ಪಡೆಯುತ್ತಾರೆ.
ಇನ್ನು ಸುಪ್ರಿಂ ಕೋರ್ಟ್‌ನಲ್ಲಿ ಸೋಮವಾರ ಹಾಗೂ ಶುಕ್ರವಾರ ವಕೀಲರ ಫೀಸ್ ಅತ್ಯಂತ ಕಡಿಮೆ ಇರುತ್ತದೆ. ಮಂಗಳವಾರ, ಬುಧವಾರ ಹಾಗೂ ಗುರುವಾರ ಸುಪ್ರೀಂ ಕೋರ್ಟ್‌ನಲ್ಲಿ ಅತಿ ಹೆಚ್ಚು ವಿಚಾರಣೆಗಳು ನಡೆಯುತ್ತವೆ. ಹೀಗಿರುವಾಗ ಕಪಿಲ್ ಸಿಬಲ್, ಮನು ಸಿಂಘ್ವಿ ಹಾಗೂ ಹರೀಶ್ ಸಾಳ್ವೆಯಂತಹ ವಕೀಲರ ಫೀಸ್ 11 ರಿಂದ 15 ಲಕ್ಷ ಇರುತ್ತದೆ.