5 ಲಕ್ಷ ರೂಪಾಯಿ ಒಳಗೆ ಲಭ್ಯವಿರುವ ಭಾರತದ ಟಾಪ್ 10 ಕಾರು ಪಟ್ಟಿ!

First Published | Nov 26, 2019, 7:54 PM IST

ನವದೆಹಲಿ(ನ.26): ಪ್ರಸಕ್ತ ವರ್ಷ ಭಾರತದ ಕಾರು ಮಾರುಟ ಕುಸಿತಗೊಂಡರೂ ಹಲವು ಕಾರುಗಳು ಬಿಡುಗಡೆಯಾಗಿವೆ. ಇದರಲ್ಲಿ ಕಡಿಮೆ ಬೆಲೆಯ ಹಾಗೂ ಅತ್ಯುತ್ತಮ ಕಾರುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟು ಮೋಡಿ ಮಾಡಿವೆ. ಇದರಲ್ಲಿ ನೂತನ ವ್ಯಾಗನ್‌ಆರ್, ಮಾರುತಿ ಎಸ್‌ಪ್ರೆಸ್ಸೋ, ರೆನಾಲ್ಟ್ ಟ್ರೈಬರ್ ಸೇರಿದಂತೆ ಹಲವು ಕಾರುಗಳು 5 ಲಕ್ಷ ರೂಪಾಯಿಗಿಂತ ಕಡಿಮೆ ಬೆಲೆಯ ಕಾರುಗಳಾಗಿವೆ. ಇದೇ ರೀತಿ ಕಡಿಮೆ ಬೆಲೆಗೆ ಲಭ್ಯವಿರುವ ಟಾಪ್ 10 ಕಾರುಗಳ ಪಟ್ಟಿ ಇಲ್ಲಿವೆ. ಕಾರುಗಳ ಎಕ್ಸ್ ಶೋ ರೂಂ ಬೆಲೆ ನೀಡಲಾಗಿದೆ.

ದಾಟ್ಸನ್ ರೆಡಿಗೋ: ಸಣ್ಣ ಕಾರಗಳ ಪೈಕಿ ಕಡಿಮೆ ಬೆಲೆ ಕಾರಾಗಿರುವ ರೆಡಿಗೋ 2.8 ಲಕ್ಷ ರೂಪಾಯಿಂದ ಆರಬಗೊಳ್ಳುತ್ತಿದೆ
ರೆನಾಲ್ಟ್ ಕ್ವಿಡ್: ಸಣ್ಣ ಕಾರು ವಿಭಾಗದಲ್ಲಿ ಹೊಸ ಅಸೆ ಸೃಷ್ಟಿಸಿರುವ ಕ್ವಿಡ್ ಬೆಲೆ 2.93 ಲಕ್ಷ ರೂಪಾಯಿ
Tap to resize

ಮಾರುತಿ ಅಲ್ಟೋ; ದಾಖಲೆ ಮಾರಾಟ ಕಂಡಿರುವ ಅಲ್ಟೋ ಕಾರಿನ ಬೆಲೆ 2.99 ಲಕ್ಷ ರೂಪಾಯಿಂದ ಆರಂಭಗೊಳ್ಳಲಿದೆ
ಮಾರುತಿ ಎಸ್‌ಪ್ರೆಸ್ಸೋ: ಇತ್ತೀಚೆಗೆ ಬಿಡುಗಡೆಯಾದ SUV ಮಾದರಿಯ ಸಣ್ಣ ಕಾರಾದ S ಪ್ರೆಸ್ಸೋ ಬೆಲೆ 3.69 ಲಕ್ಷ ರೂಪಾಯಿಂದ ಆರಂಭ
ಮಾರುತಿ ಅಲ್ಟೋಕೆ10: 998cc ಎಂಜಿನ್ ಹೊಂದಿರು ಕೆ10 ಕಾರಿನ ಬೆಲೆ 3.71 ಲಕ್ಷದಿಂದ ಆರಂಬಗೊಳ್ಳಲಿದೆ
ಮಾರುತಿ ಇಕೋ: 7 ಸೀಟರ್ ಕಾರುಗಳ ಪೈಕಿ ಅತ್ಯಂತ ಕಡಿಮೆ ಬೆಲೆ ಇಕೋ 3.94 ಲಕ್ಷ ರೂಪಾಯಿಯಿಂದ ಆರಂಭ
ಹ್ಯುಂಡೈ ಸ್ಯಾಂಟ್ರೋ; ಹಳೇ ಕಾರಿಗೆ ಹೊಸ ರೂಪ ನೀಡಿ ಬಿಡುಗಡೆ ಮಾಡಿರುವ ಸ್ಯಾಂಟ್ರೋ ಕಾರಿನ ಬೆಲೆ 4.20 ಲಕ್ಷದಿಂದ ಆರಂಭ
ಮಾರುತಿ ಸೆಲೆರಿಯೋ: ಸಣ್ಮ ಕಾರುಗಳ ಪೈಕಿ ಸೆಲೆರಿಯೋ ಜನಪ್ರಿಯವಾಗಿದ್ದು ಬೆಲೆ 4.36 ಲಕ್ಷದಿಂದ ಆರಂಭ
ಮಾರುತಿ ವ್ಯಾಗನ್‌ಆರ್: ಹೊಸ ಅವತಾರದಲ್ಲಿ ಬಿಡುಗಡೆಯಾಗಿರುವ ವ್ಯಾಗನ್ಆರ್ ಕಾರಿನ ಬೆಲೆ 4.39 ಲಕ್ಷದಿಂದ ಆರಂಭ
ಟಾಟಾ ಟಿಯಾಗೋ: ಆಕರ್ಷಕ ವಿನ್ಯಾಸದೊಂದಿಗೆ ಬಿಡುಗಡೆಯಾಗಿರು ಟಿಯಾಗೋ ಕಾರು 4.50 ಲಕ್ಷದಿಂದ ಆರಂಭಗೊಳ್ಳಲಿದೆ
ರೆನಾಲ್ಟ್ ಟ್ರೈಬರ್: MPV ಕಾರುಗಳ ಪೈಕಿ ಹೊಸ ಸಂಚಲನ ಸೃಷ್ಟಿಸಿರುವ ಟ್ರೈಬರ್ ಕಾರಿನ ಬೆಲೆ 4.95 ಲಕ್ಷದಿಂದ ಆರಂಭ

Latest Videos

click me!