ಭಾಷೆ ಭೇದ ಮರೆತು ಓಣಮ್ ಆಚರಿಸಿದ ಶೋಭಾ ಹಿಲ್‌ವ್ಯೂ

First Published | Aug 26, 2019, 6:16 PM IST

ಕೇರಳದಲ್ಲಿ ಶ್ರದ್ಧಾ, ಭಕ್ತಿಯಿಂದ ಆಚರಿಸುವ ಹಬ್ಬ ಓಣಮ್. ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಶೋಭಾ ಹಿಲ್‌ವ್ಯೂ ನಿವಾಸಿಗಳು ಭಾಷಾ ಭೇದ ಮರೆತು ಈ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಿದ್ದು ವಿಶೇಷವಾಗಿತ್ತು. ಸಾಂಪ್ರಾದಾಯಿಕ ಉಡುಗೆಯಲ್ಲಿ, ಹಲವು ಪಾರಂಪರಿಕ ಆಟಗಳನ್ನು ಆಡಿ ಆಚರಿಸಿದ ಈ ಸಂಭ್ರಮದಲ್ಲಿ ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡಿದ್ದರು. 

ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಶೋಭಾ ಹಿಲ್‌ವ್ಯೂನಲ್ಲಿ ಓಣಮ್ ಆಚರಿಸಲಾಯಿತು.
ವಿವಿಧ ಪಾರಂಪರಿಕ ಆಟಗಳಲ್ಲಿ ಅಬಾಲ ವೃದ್ಧರಾದಿಯಾಗಿ ಎಲ್ಲರೂ ಸಂಭ್ರಮದಿಂದ ಪಾಲ್ಗೊಂಡಿದ್ದರು.
Tap to resize

ಸಾಂಪ್ರದಾಯಿಕ ಉಡುಗೆಯಲ್ಲಿ ಮಕ್ಕಳೂ ಮಿಂಚುತ್ತಿದ್ದರು.
ಹುಲಿ ಕುಣಿತವೂ ಜೋರಾಗಿತ್ತು.
ಹುಲಿ ವೇಷಧಾರಿಗಳೊಂದಿಗೆ ಮಕ್ಕಳ ಸಂಭ್ರಮ.
ಹಾಡು, ನೃತ್ಯ, ರಂಗೋಲಿ...ಎಲ್ಲವೂ ಮೇಳೈಸಿದ ಆಚರಣೆಯಾಗಿತ್ತು ಓಣಮ್.
ದೇಶದ ವಿವಿಧ ಭಾಗಗಳಿಂದ ಬಂದವರು ನೆಲೆಸಿರುವ ಈ ಅಪಾರ್ಟ್‌ಮೆಂಟ್‌ ಮಂದಿ ಜಾನಪದ ಕುಣಿತವನ್ನು ಕಣ್ತುಂಬಿಕೊಂಡರು.
ಓಣಮ್ ಎಂದರೆ ಪೂಕಳಮ್ ಇಲ್ಲದಿದ್ದರೆ ಹೇಗೆ?
ಓಣಮ್ ಕೃಷಿ ಆಧಾರಿತ ಹಬ್ಬವಾಗಿದ್ದು, ಬಂದ ಬೆಳೆಗೆ ರೈತರು ಸಂಭ್ರಮಿಸುತ್ತಾರೆ.
ಮಹಾಬಲಿ ಚಕ್ರವರ್ತಿ ಇಲ್ಲದ ಓಣಮ್ ಪೂರ್ಣವಾಗುವುದು ಹೇಗೆ?
ಬಣ್ಣ ಬಣ್ಣದ ಹೂಗಳಿಂದ ಅಲಂಕೃತವಾದ ಪೂಕಳಮ್ ಕಣ್ತುಂಬಿಕೊಳ್ಳಲು ಎರಡು ಕಣ್ಣುಗಳು ಸಾಲದು.
ಕರ್ನಾಟಕ, ತಮಿಳು, ತೆಲುಗು.. ಹೀಗೆ ಎಲ್ಲಾ ಭಾಷಿಗರು ಓಣಮ್‌ನಲ್ಲಿ ಸಂಭ್ರಮದಿಂದ ಪಾಲ್ಗೊಂಡಿದ್ದು, ಹಬ್ಬಕ್ಕೆ ಕಳೆ ಕಟ್ಟಿಕೊಟ್ಟಿತು.

Latest Videos

click me!