ಅನ್‌ಲಿಮಿಟೆಡ್ ಬಫೆ ಅಂದ್ರೆ ಸಾಮಾನ್ಯವಾಗಿ ಎಷ್ಟು ತಿಂದರೂ ನಿರ್ಧಿಷ್ಟ ಹಣವನ್ನು ಪಾವತಿಸಿದರೆ ಸಾಕು. ಆದ್ರೆ ಇಂಗ್ಲೆಂಡ್‌ನಲ್ಲಿ ಬಫೆ ಊಟದಲ್ಲೂ ಡಬಲ್ ಚಾರ್ಜ್ ಮಾಡಲಾಗಿದೆ. ಮಹಿಳೆ ಅತಿಯಾಗಿ ತಿಂದಿದ್ದಾಳೆ ಅನ್ನೋ ಕಾರಣಕ್ಕೆ ಹೆಚ್ಚು ಚಾರ್ಜ್ ಮಾಡಿರೋದಾಗಿ ರೆಸ್ಟೋರೆಂಟ್ ಹೇಳಿಕೊಂಡಿದೆ.
ದೊಡ್ಡ ದೊಡ್ಡ ರೆಸ್ಟೋರೆಂಟ್‌ಗಳಲ್ಲಿ ಬಫೆ ಅಂದ್ರೆ ನಿರ್ಧಿಷ್ಟ ಹಣವನ್ನು ಪಾವತಿಸಿ ಬಗೆಬಗೆಯ ಎಷ್ಟು ಆಹಾರವನ್ನು ಬೇಕಾದರೂ ತಿನ್ನಲು ಅವಕಾಶವಿರುತ್ತದೆ. ಆದ್ರೆ ಇಂಗ್ಲೆಂಡ್‌ನ ರೆಸ್ಟೋರೆಂಟ್ ಒಂದರಲ್ಲಿ ಆಲ್-ಯು-ಕ್ಯಾನ್-ಈಟ್ ಬಫೆಯಲ್ಲಿ ಎರಡು ಬಾರಿ ಶುಲ್ಕ ವಿಧಿಸಲಾಗಿದೆ ಎಂದು ಮಹಿಳೆಯೊಬ್ಬರು ಹೇಳಿದರು. ಈ ಬಗ್ಗೆ ಕೇಳಿದ್ದಕ್ಕೆ ಆಕೆ ಹೆಚ್ಚು ತಿಂದಿದ್ದಾಳೆಂದು ರೆಸ್ಟೋರೆಂಟ್ ಸಿಬ್ಬಂದಿ ಹೇಳಿದರು. ನಾನು ಒಮ್ಮೆ ಎಲ್ಲರೂ ತಿನ್ನಬಹುದಾದ ಬಫೆಗೆ ಹೋಗಿದ್ದೆ, ಮತ್ತು ಬಿಲ್ ಬಂದಾಗ, ಅವರು ನನಗೆ ಎರಡು ಬಾರಿ ಶುಲ್ಕ ವಿಧಿಸಿರುವುದನ್ನು ನಾನು ಗಮನಿಸಿದೆ. ನಾನು ಅದನ್ನು ಪ್ರಶ್ನಿಸಿದೆ ಮತ್ತು ಏಕೆ ಎಂದು ಕೇಳಿದೆ, ಮತ್ತು ನಾನು ತುಂಬಾ ತಿಂದಿದ್ದೇನೆ ಎಂದು ಅವರು ಹೇಳಿದರು ಎಂದು ಮಹಿಳೆ ವಿವರಿಸಿದ್ದಾರೆ,
ಅಧಿಕ ತೂಕವನ್ನು ಹೊಂದಿರುವ ಮಹಿಳೆ (Woman) ಫುಡ್ಡೀಯಾಗಿದ್ದು ತಿನಿಸಿನ ಬಗ್ಗೆ ಹೆಚ್ಚು ಪ್ರೀತಿಯನ್ನು ಹೊಂದಿದ್ದಾರೆ. ಹೀಗಾಗಿಯೇ ಆಲ್ ಯು ಕ್ಯಾನ್ ಈಟ್ ಬಫೆಯನ್ನು ಬುಕ್ ಮಾಡಿದ್ದರು. ತಮಗೆ ಇಷ್ಟವಾದ ಆಹಾರ (Food)ಗಳನ್ನು ಮನಸಾರೆ ತಿಂದಿದ್ದರು. ಆದ್ರೆ ಕೊನೆಯಲ್ಲಿ ರೆಸ್ಟೋರೆಂಟ್ ಡಬಲ್ ಬಿಲ್ ನೀಡುವ ಮೂಲಕ ಕಕ್ಕಾಬಿಕ್ಕಿಯಾಗುವಂತೆ ಮಾಡಿದೆ. ರೆಸ್ಟೋರೆಂಟ್ ವರ್ತನೆಗೆ ಆಹಾರಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನ್‌ಲಿಮಿಟೆಡ್ ಫುಡ್ ಎಂದ ಬಳಿಕ ಎಕ್ಸಾಟ್ರಾ ಚಾರ್ಜ್ ಮಾಡುವ ಅರ್ಥವೇನು ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರಲ್ಲಿ ಇನ್ಮುಂದೆ 24/7 ಹೋಟೆಲ್ ಓಪನ್, ರಾತ್ರಿ ಪಾಳಿ ಉದ್ಯೋಗಿಗಳಿಗೆ ನೋ ಟೆನ್ಶನ್
ಹೊಟೇಲ್‌ಗಳಲ್ಲಿ ಹೆಚ್ಚುವರಿ ಸೇವಾ ಶುಲ್ಕ ವಸೂಲಿ
ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರವೂ ಮುಖ್ಯ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಅಧಿಕಾರಿಗಳಿಗೆ ಪತ್ರ ಬರೆದಿದ್ದು, ಸೇವಾ ಶುಲ್ಕ ತೆರಿಗೆಗೆ ಸಂಬಂಧಿಸಿದಂತೆ ನಿಯಮಗಳನ್ನು ತಕ್ಷಣಕ್ಕೆ ಕಾರ್ಯ ರೂಪಕ್ಕೆ ತರುವಂತೆ ಹಾಗೂ ಹೊಟೇಲ್‌ಗಳು ರೆಸ್ಟೋರೆಂಟ್‌ಗಳು ಸೇವಾ ತೆರಿಗೆ ಎಂದು ಹೆಚ್ಚುವರಿ ವಸೂಲಿ ಮಾಡುವುದನ್ನು ನಿಷೇಧ ಮಾಡುವಂತೆ ತಿಳಿಸಿದೆ. ರಾಷ್ಟ್ರೀಯ ಗ್ರಾಹಕ ಸಹಾಯವಾಣಿಗೆ ಈ ವಿಚಾರಕ್ಕೆ ಸಂಬಂಧಿಸಿದಂತೆ 85 ದೂರುಗಳು ಬಂದಿದ್ದು, ಇವೆಲ್ಲವೂ ಪ್ರಮುಖ ನಗರಗಳಿಂದ ಬಂದ ದೂರುಗಳಾಗಿವೆ. ಅದರಲ್ಲೂ ಜೂನ್ 24 ರ ಹೊಸ ನಿಯಾಮಾವಳಿ ಜಾರಿಗೆ ಬಂದ ನಂತರ ಬಂದಿರುವಂತಹ ದೂರುಗಳಾಗಿವೆ ಎಂದು ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (central consumer protection authority) ತಿಳಿಸಿದೆ.
ಪ್ರಮುಖ ಐದು ಮಹಾನಗರಗಳಿಂದ ದೂರುಗಳು ಬಂದಿವೆ. ಈ ವಿಚಾರವಾಗಿ ದೆಹಲಿಯಲ್ಲಿ 18 ದೂರು ಬಂದಿದ್ದರೆ, ಬೆಂಗಳೂರು (Banglore) 15, ಮುಂಬೈ (Mumbai) 11, ಪುಣೆ (Pune) 4 ಹಾಗೂ ಗಾಜಿಯಾಬಾದ್‌ನಲ್ಲಿ (Gaziabad) ಒಟ್ಟು ಮೂರು ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರದ ಮುಖ್ಯ ಆಯುಕ್ತೆ ನಿಧಿ ಖರೆ (Nidhi Khare) ಹೇಳಿದ್ದಾರೆ. ನೂತನವಾಗಿ ಜಾರಿಯಾದ ಗೈಡ್‌ಲೈನ್ ಅಥವಾ ನಿಯಮಾವಳಿಗಳು ಕೇವಲ ಮಾಮೂಲಿ ಸಲಹೆಗಳಲ್ಲ, ಅವು ಶಿಸ್ತುಬದ್ಧವಾಗಿ ಜಾರಿಯಾಗಲೇಬೇಕಾದ ಕಾನೂನುಗಳು. ಗ್ರಾಹಕ ರಕ್ಷಣಾ ಕಾಯ್ದೆಯ ಅಡಿ ಈ ನಿಯಮಾವಳಿಗಳನ್ನು ಜಾರಿಗೊಳಿಸಲಾಗಿದೆ. ಈ ಕಾಯಿದೆಯೂ ಗ್ರಾಹಕ ರಕ್ಷಣಾ ಪ್ರಾಧಿಕಾರಕ್ಕೆ ನ್ಯಾಯೋಚಿತವಲ್ಲದ ಅಸಮರ್ಪಕವಾದ ವ್ಯಾಪಾರ ವಹಿವಾಟುಗಳನ್ನು ತಡೆಗಟ್ಟಿ ಗ್ರಾಹಕರ ಹಿತಾಸಕ್ತಿಯನ್ನು ರಕ್ಷಿಸುತ್ತದೆ.
ಶಿವಮೊಗ್ಗದ ಮೀನಾಕ್ಷಿ ಭವನ ಎಂಬ ಕಾಲಾತೀತದ ವಿಸ್ಮಯ
ಆದಾಗ್ಯೂ ರಾಷ್ಟ್ರೀಯ ಗ್ರಾಹಕ ಸಹಾಯವಾಣಿಗೆ (National Consumer Helpline) ಬಂದ ದೂರುಗಳು ಕಡಿಮೆ, ಇವು ಮುಖ್ಯವಾಗಿ ಪ್ರಮುಖ ನಗರಗಳಲ್ಲಿ ಹೊಟೇಲ್‌ಗಳು ಹಾಗೂ ರೆಸ್ಟೋರೆಂಟ್‌ಗಳು ಈಗಲೂ ಹಳೆ ನಿಯಮಗಳನ್ನು ಪಾಲಿಸಿಕೊಂಡು ಬರುತ್ತಿವೆ ಎಂಬುದನ್ನು ಸೂಚಿಸುತ್ತಿವೆ. ಇವುಗಳ ಬಗ್ಗೆ ಗ್ರಾಹಕರು ನೀಡುವ ದೂರುಗಳು ಕೂಡ ಜನರು ತಮ್ಮ ಹಕ್ಕುಗಳ ಬಗ್ಗೆ ಹಾಗೂ ನ್ಯಾಯೋಚಿತವಲ್ಲದ ವಹಿವಾಟುಗಳ ಬಗ್ಗೆ ಎಷ್ಟು ಜಾಗೃತರಾಗಿದ್ದಾರೆ ಎಂಬುದನ್ನು ಸೂಚಿಸುತ್ತದೆ.
ಇಂತಹ ನ್ಯಾಯಸಮ್ಮತವಲ್ಲದ ವಹಿವಾಟುಗಳ ತಡೆಗೆ ಈ ಕಾನೂನು ಜಾರಿಯ ಬಗ್ಗೆ ಜನರಲ್ಲಿ ಹೆಚ್ಚು ಹೆಚ್ಚು ತಿಳುವಳಿಕೆ ಮೂಡಿಸಬೇಕು. ಈ ಹಿನ್ನೆಲೆಯಲ್ಲಿ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರವೂ, ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದು, ಗ್ರಾಹಕರು ನೀಡಿರುವಂತಹ ಈ ದೂರುಗಳ ಬಗ್ಗೆ ತನಿಖೆ ನಡೆಸಿ, 15 ದಿನಗಳ ಒಳಗಾಗಿ ಪ್ರಾಧಿಕಾರಕ್ಕೆ ವರದಿ ನೀಡುವಂತೆ ಸೂಚಿಸಲಾಗಿದೆ.