ಸೂಪರ್‌ಫುಡ್ ಆಗಿ ಜಗತ್ತಿನ ಮನಸ್ಸು ಗೆಲ್ಲುತ್ತಿರುವ ಹಲಸು

By Suvarna News  |  First Published May 19, 2020, 4:39 PM IST

ದಕ್ಷಿಣ ಭಾರತದ  ಹಿತ್ತಲ ಹಣ್ಣಾದ ಹಲಸೀಗ ಮಾಂಸಕ್ಕೆ ಪರ್ಯಾಯವಾಗಿ ಪಾಶ್ಚಿಮಾತ್ಯ ದೇಶಗಳಲ್ಲಿ ಹೆಸರು ಮಾಡುತ್ತಿದೆ. ವೇಗನ್‌ಗಳ ಹಾಟ್ ಫೇವರೇಟ್‍‌ ಆಗಿದೆ. 


ಹಲಸಿನ ಹಣ್ಣಿನ ಸೀಸನ್ ಎಂದರೆ ದಕ್ಷಿಣ ಭಾರತದ ಜನರಿಗೆ ದಿನದಿನವೂ ಹಬ್ಬ. ಹೊರಗೆ ಹಸಿರಾಗಿ, ಮುಳ್ಳುಗಳಿಂದ ಕೂಡಿರುವ ಚೆಂದದ ಪರಿಮಳದ ಹಲಸಿನ ಹಣ್ಣು ಒಳಗಿನಿಂದ ಬಹಳ ಮೃದು, ಅಷ್ಟೇ ಸಿಹಿ. ಮನಸ್ಸಿಗೆ ತೃಪ್ತಿ ಕೊಡುವಷ್ಟು ಹಣ್ಣು ತಿನ್ನುತ್ತಾ, ಹಲಸಿನ ದೋಸೆ, ಹಸಲಿನ ಮೂಳಕ, ಕಡುಬು, ಹಪ್ಪಳ, ಹಲಸಿನಕಾಯಿ ಚಿಪ್ಸ್, ಪಲ್ಯ, ಸಾಂಬಾರ್, ಹಲಸಿನ ಬೀಜ ಸುಟ್ಟು ತಿನ್ನುವುದು, ಹಲಸಿನ ಐಸ್‌ಕ್ರೀಂ- ಅಬ್ಬಬ್ಬಾ... ಮುಗಿಯದ ರೆಸಿಪಿ ಹಲಸಿನ ಹಣ್ಣಿನದು. ರುಚಿಯಲ್ಲಿ ಒಂದಕ್ಕೊಂದು ಸ್ಪರ್ಧೆಗೆ ಬೀಳುವ ಖಾದ್ಯಗಳು. 

ಊರಿನಲ್ಲಿ ರಾಶಿ ರಾಶಿ ಬಿದ್ದು, ಊರವರೆಲ್ಲ ತಿಂದು ಮಿಕ್ಕಿ ಮಂಗ, ದನಕರುಗಳೂ ಹೊಟ್ಟೆ ತುಂಬಿಸಿಕೊಂಡ ಬಳಿಕವೂ ಬಿದ್ದು ಕೊಳೆವ ಹಣ್ಣುಗಳು. ಇಂಥ ಹಣ್ಣನ್ನು ಹತ್ತೋ ಇಪ್ಪತ್ತೋ ರುಪಾಯಿ ಕೊಟ್ಟು ನಗರಕ್ಕೆ ತಂದು 400 ರುಪಾಯಿವರೆಗೂ ಮಾರಾಟ ಮಾಡಡುವಾಗ, ಹಳ್ಳಿ ಕಡೆಯಿಂದ ಬಂದು ನಗರದಲ್ಲಿ ನೆಲೆಸಿರುವವರು ಹಲಸಿನ ಹಣ್ಣಿಗೂ ದುಡ್ಡು ಕೊಡೋರಿದ್ದಾರಾ ಎಂದು ಆಶ್ಚರ್ಯ ಪಡುತ್ತಾರೆ. ಅಂಥದರಲ್ಲಿ, ಇದೀಗ ಹಲಸಿನ ಹಣ್ಣು ಕೇವಲ ನಮ್ಮ ನಗರಗಳಲ್ಲ, ಅಮೆರಿಕದಿಂದ ಹಿಡಿದು ಲಂಡನ್‌ವರೆಗೆ ತನ್ನ ವಿಶಿಷ್ಠ ಪರಿಮಳ ಬೀರುತ್ತಾ ವಿದೇಶದತ್ತ ಮುಖ ಮಾಡುತ್ತಿದೆ ಎಂದರೆ ಅಚ್ಚರಿಯಾಗದೆ ಇದ್ದೀತೇ?

ವ್ಹಿಸ್ಕಿ ಜೀವದ ಗೆಳೆಯ, ಅದಕ್ಕಿಂದೇ ಪ್ರೀತಿಯ ಸಮಯ!

Tap to resize

Latest Videos

ಸೂಪರ್‌ಫುಡ್
ಹಿತ್ತಿಲಲ್ಲಿ ಬಿದ್ದು ಕೊಳೆಯುತ್ತಿದ್ದ ಹಣ್ಣು ಇದ್ದಕ್ಕಿದ್ದಂತೆ ಸೂಪರ್‌ಫುಡ್ ಎನಿಸಿಕೊಂಡಿದೆ. ಇದಕ್ಕೊಂದು ಕಾರಣವೂ ಇದೆ. ಮಾಗದ ಹಲಸಿನ ಹಣ್ಣಿನ ಒಳವಿನ್ಯಾಸ ಪೋರ್ಕ್‌ನಂತೇ ಇರುವುದರಿಂದ ಇದನ್ನು ಮಾಂಸಕ್ಕೆ ಪರ್ಯಾಯವಾಗಿ ಭಾವಿಸಲಾರಂಭಿಸಿದ್ದಾರೆ ಪಾಶ್ಚಾತ್ಯರು. ಅದೇ ಕಾರಣಕ್ಕೆ ವೇಗನ್ ಅಭ್ಯಾಸ ರೂಢಿಸಿಕೊಂಡ ವಿದೇಶಿಯರು ಮಾಂಸದ ಬದಲಿಗೆ ಹಲಸನ್ನು ಡಯಟ್‌ನಲ್ಲಿ ಸೇರಿಸಿಕೊಳ್ಳಲಾರಂಭಿಸಿದ್ದಾರೆ. ಅಷ್ಟೇ ಅಲ್ಲ, ಪಿಜ್ಜಾ ಟಾಪಿಂಗ್ ಆಗಿಯೂ ಬಳಸುತ್ತಿದ್ದಾರೆ. ಪಾಶ್ಚಾತ್ಯರ ಈ ಹಲಸಿನ ಕ್ರೇಜ್ ಭಾರತಕ್ಕೆ ಭರ್ಜರಿ ಬಿಸ್ನೆಸ್ ಆಗಲಿದೆ. ಏಕೆಂದರೆ ಜಗತ್ತಿನಲ್ಲಿ ಅತಿ ಹೆಚ್ಚು ಹಲಸಿನ ಉತ್ಪಾದನೆಯಾಗುವುದೇ ಭಾರತದಲ್ಲಿ. 

ಇವರೇನಂತಾರೆ?
'ಸರಾಸರಿ 5 ಕೆಜಿ ತೂಗುವ ಹಲಸಿನ ಹಣ್ಣಿನ ಕುರಿತು ಈಗೀಗ ವಿದೇಶಗಳಿಂದಲೂ ಹಲವಾರು ಮಂದಿ ಸಂದೇಶ ಕಳುಹಿಸಿ ವಿಚಾರಿಸುತ್ತಾರೆ.  ವಿದೇಶಗಳಲ್ಲಿ ಹಲಸಿನ ಹಣ್ಣಿನ ಬೇಡಿಕೆ ಬಹಳಷ್ಟು ಹೆಚ್ಚಿದೆ' ಎನ್ನುತ್ತಾರೆ ಕೇರಳದ ಹಲಸು ಬೆಳೆಗಾರ ವರ್ಗೀಸ್ ತರಕ್ಕನ್. 

undefined

ಅಮೆರಿಕ ಹಾಗೂ ಭಾರತದದಲ್ಲಿ ರೆಸ್ಟೋರೆಂಟ್ ಚೈನ್‌ಗಳನ್ನು ಹೊಂದಿರುವ ಅನು ಭಾಂಬ್ರಿ ಹೇಳುವಂತೆ, 'ಜನರಿಗೆ ಹಲಸು ಬಹಳ ಇಷ್ಟವಾಗುತ್ತಿದೆ.  ಹಲಸಿನ ಹಣ್ಣಿನ ಟ್ಯಾಕೋಸ್ ಹಾಗೂ ಹಲಸಿನ ಕಟ್ಲೆಟ್ ಮೆನುವಿನಲ್ಲಿದ್ದರೆ ಪ್ರತಿ ಟೇಬಲ್ ಕೂಡಾ ಅದನ್ನು ಆರ್ಡರ್ ಮಾಡುತ್ತಾರೆ'. 

ಇನ್ನು ಹಲಸಿನ ಹಣ್ಣಿನ ಕುರಿತು ಪಾಶ್ಚಾತ್ಯರಲ್ಲಿ ಬೆಳೆಯುತ್ತಿರುವ ಆಸಕ್ತಿಯನ್ನು ಗಮನಿಸಿದ ಬಳಿಕ ಮೈಕ್ರೋಸಾಫ್ಟ್‌ನ ಡೈರೆಕ್ಟರ್ ಸ್ಥಾನಕ್ಕೆ ಬೈಬೈ ಹೇಳಿದ್ದಾರೆ ಜೇಮ್ಸ್ ಜೋಸೆಫ್ ಎಂದರೆ ಈ ಹಣ್ಣಿಗಿರುವ ಬೇಡಿಕೆಯನ್ನು ಅರ್ಥ ಮಾಡಿಕೊಳ್ಳಬಹುದಾಗಿದೆ. 
ಈ ಬಗ್ಗೆ ಮಾತನಾಡುವ ಅವರು, 'ಕೋವಿಡ್ 19  ಕ್ರೈಸಿಸ್ ಗ್ರಾಹಕರ ಆಸಕ್ತಿಯನ್ನು ಬದಲಿಸಿದೆ. ಮೊದಲನೆಯದಾಗಿ ಜನ ಚಿಕನ್ ತಿನ್ನಲು ಭಯ ಬಿದ್ದಿದ್ದಾರೆ. ಎರಡನೆಯದಾಗಿ, ಚಿಕನ್‌ಗೆ ಪರ್ಯಾಯವಾಗಿ ಹಲಸಿನ ಹಣ್ಣಿನ ಮೊರೆ ಹೋಗುತ್ತಿದ್ದಾರೆ. ಕೇರಳದಲ್ಲಂತೂ ಗಡಿ ದಾಟಲು ನಿರ್ಬಂಧ ಹೇರಿದ ಬಳಿಕ ತರಕಾರಿಗಳ ಕೊರತೆ ಕಾಡಿದ್ದು, ಹಲಸಿನ ಕಾಯಿ, ಹಣ್ಣು ಹಾಗೂ ಬೀಜಗಳಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ' ಎನ್ನುತ್ತಾರೆ. 

ಬದಲಾಗುತ್ತಿರುವ ಜಾಗತಿಕ ಆಸಕ್ತಿ
ವೇಗನಿಸಂ ಎಂಬುದು ಈಚಿನ ದಶಕದಲ್ಲಿ ಜಾಗತಿಕವಾಗಿ ಹೆಸರು ಮಾಡುತ್ತಿರುವುದು ಗೊತ್ತೇ ಇದೆ. ಮೀಟ್ ಫ್ರೀ ಮಂಡೇ, ವೆಗನರಿ  ಮುಂತಾದ ಚಳುವಳಿಗಳ ಕಾರಣ ಮಾಂಸಕ್ಕೆ ಪರ್ಯಾಯವನ್ನೂ ಜನರು ಎದುರು ನೋಡುತ್ತಿದ್ದರು. ಇನ್ನು 2019ರ ವಿಶ್ವಸಂಸ್ಥೆಯ ವರದಿಯಂತೆ ಬದಲಾಗುತ್ತಿರುವ ತಾಪಮಾನವನ್ನು ಎದುರಿಸಲು ಸಸ್ಯಮೂಲದ ಡಯಟ್ ಬಳಸುವುದು ಉತ್ತಮ.  ಇವೆಲ್ಲದರ ಕಾರಣದಿಂದಾಗಿ ಜನತೆ ಸಸ್ಯ ಮೂಲದ ಉತ್ಪನ್ನಗಳು ಯಾವೆಲ್ಲ ಚಿಕನ್, ಪೋರ್ಕ್ ಹಾಗೂ ಬೀಫ್‌ಗೆ ಬದಲಿಯಾಗಬಲ್ಲವು ಎಂಬ ಹುಡುಕಾಟಕ್ಕೆ ಬಿದ್ದಿದ್ದಾರೆ. 

ಲಾಕ್‌ಡೌನಲ್ಲಿ ಆನ್‌ಲೈನಲ್ಲಿ ಹೆಚ್ಚು ಹುಡುಕಾಡಿದ ರೆಸಿಪಿಗಳಿವು

ಈ ಹುಡುಕಾಟದಲ್ಲಿ ಅವರ ಸಮಾಧಾನಕ್ಕೆ ಕಾರಣವಾದದ್ದು ಸೋಯಾ, ಸೈಯ್ಟಾನ್ ಹಾಗೂ ಹಲಸಿನಹಣ್ಣು. ಹಲಸನ್ನು ಮೀಟ್‌ನಂತೆ ದೊಡ್ಡ ಬೈಟ್ ತೆಗೆದುಕೊಳ್ಳುವುದು ಸಾಧ್ಯ, ಜೊತೆಗೆ ಇದು ಕೂಡಾ ಮಸಾಲೆಗಳನ್ನು ಬಹಳ ಚೆನ್ನಾಗಿ ಹೀರಿಕೊಳ್ಳುತ್ತದೆ. ಹಾಗಾಗಿ ಮಾಂಸಾಹಾರಿಗಳಲ್ಲಿ ಜನಪ್ರಿಯತೆ ಪಡೆದುಕೊಳ್ಳುತ್ತಿದೆ ಎನ್ನುತ್ತಾರೆ ಜೋಸೆಫ್. ಅವರ ಕಂಪನಿಯು ಸಧ್ಯ ಹಲಸಿನ ಹಿಟ್ಟನ್ನು ತಯಾರಿಸಿ ಮಾರುತ್ತಿದ್ದು, ಇದನ್ನು ಅಕ್ಕಿಹಿಟ್ಟು ಇಲ್ಲವೇ ಗೋಧಿಹಿಟ್ಟಿಗೆ ಪರ್ಯಾಯವಾಗಿ ಬಳಸಬಹುದು. ಬರ್ಗರ್‌ನಿಂದ ಹಿಡಿದು ಇಡ್ಲಿಯವರೆಗೆ ಬಹಳಷ್ಟು ತಿಂಡಿ ತಯಾರಿಸಬಹುದು. 

ಹೆಚ್ಚುತ್ತಿರುವ ತಾಪಮಾನವು ಕೃಷಿಯ ಮೇಲೆ ದುಷ್ಪರಿಣಾಮ ಬೀರುತ್ತಿರುವಾಗ ಹಲಸು ಜನರಿಗೆ ಬೇಕಾದ ನ್ಯೂಟ್ರಿಶಿಯಸ್ ಬೆಳೆಯಾಗಬಲ್ಲದು. ಇದು ಬರಗಾಲ ತಾಳಿಕೊಳ್ಳುವ ಜೊತೆಗೆ ಅತಿ ಕಡಿಮೆ ನಿರ್ವಹಣೆ ಬೇಡುತ್ತದೆ. ಈಗಾಗಲೇ ತಮಿಳುನಾಡು ಹಾಗೂ ಕೇರಳದಲ್ಲಿ ಪ್ರತಿದಿನ 100 ಮೆಟ್ರಿಕ್ ಟನ್ ಹಲಸಿನ ಹಣ್ಣಿಗೆ ಬೇಡಿಕೆ ಇದೆ. ಒಂದು ಮರವು ಸೀಸನ್‌ನಲ್ಲಿ 150-250 ಹಣ್ಣುಗಳನ್ನು ಕೊಡಬಲ್ಲದು. ಕೊರೋನಾ ವೈರಸ್ ಕಾರಣದಿಂದ ಹಣ್ಣನ್ನು ವಿದೇಶಕ್ಕೆ ರಫ್ತು ಮಾಡುವುದು ಅಸಾಧ್ಯವಾದಾಗಲೂ ಇದಕ್ಕೆ ಬೇಡಿಕೆ ಮಾತ್ರ ಕಡಿಮೆಯಾಗಿರಲಿಲ್ಲ ಎಂಬುದು ವಿಶೇಷ. 

click me!