ಎಂಡಿಎಚ್, ಎವರೆಸ್ಟ್ ಮಸಾಲೆ ಸೇರಿ 527 ಆಹಾರ ಪದಾರ್ಥಗಳಲ್ಲಿ ಕ್ಯಾನ್ಸರ್ ಕಾರಕ ಕೆಮಿಕಲ್‌ಗಳು ಪತ್ತೆ!

By Suvarna News  |  First Published Apr 27, 2024, 10:18 AM IST

ಭಾರತದ ಪ್ರಸಿದ್ಧ ಮಸಾಲೆ ಕಂಪನಿಗಳಾದ ಎಂಡಿಎಚ್, ಎವರೆಸ್ಟ್‌ನ ಮಸಾಲೆ ಪದಾರ್ಥಗಳಲ್ಲಿ ಕ್ಯಾನ್ಸರ್ ಕಾರಕ ಎಥಿಲೀನ್ ಆಕ್ಸೈಡ್ ಇದೆ ಎಂಬುದನ್ನು ಅಂತರಾಷ್ಟ್ರೀಯ ಸಂಸ್ಥೆ ಕಂಡುಕೊಂಡಿದೆ. 


ಜನಪ್ರಿಯ ಬ್ರ್ಯಾಂಡ್‌ಗಳೆಂದ ಕೂಡಲೇ ನಂಬಿಕೆಯಿಂದ ಅವುಗಳ ಉತ್ಪನ್ನ ಖರೀದಿಸುತ್ತಾರೆ ಗ್ರಾಹಕರು. ಆದರೆ, ಜನಪ್ರಿಯವಾಗಿರುವ ಕಾರಣ ಇಂಥ ಕಂಪನಿಗಳು ಜನರ ಆರೋಗ್ಯವನ್ನು ಅಸಡ್ಡೆ ಮಾಡಬಹುದೇ?
ಎಂಡಿಎಚ್, ಎವರೆಸ್ಟ್ ಮಸಾಲೆ ಸೇರಿದಂತೆ ಜನಪ್ರಿಯ ಕಂಪನಿಗಳ ಆಹಾರ ಪದಾರ್ಥಗಳಲ್ಲಿ ಕ್ಯಾನ್ಸರ್‌ಕಾರಕ ಎಥಿಲೀನ್ ಆಕ್ಸೈಡ್ ಹೆಚ್ಚಿನ ಮಟ್ಟದಲ್ಲಿರುವುದನ್ನು ಯುರೋಪಿಯನ್ ಯೂನಿಯನ್ ಆಹಾರ ಸುರಕ್ಷತಾ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಇದೇ ಕಾರಣದಿಂದ ಮೇಲೆ ತಿಳಿಸಲಾದ ಎರಡು ಕಂಪನಿಗಳ ಉತ್ಪನ್ನಗಳನ್ನು ಹಾಂಗ್ ಕಾಂಗ್ ಮತ್ತು ಸಿಂಗಾಪುರದಲ್ಲಿ ನಿಷೇಧಿಸಲಾಗಿದೆ. 

ಸೆಪ್ಟೆಂಬರ್ 2020 ಮತ್ತು ಏಪ್ರಿಲ್ 2024 ರ ನಡುವೆ ಭಾರತಕ್ಕೆ ಲಿಂಕ್ ಮಾಡಿದ 527 ಉತ್ಪನ್ನಗಳಲ್ಲಿ ಅಂತಾರಾಷ್ಟ್ರೀಯ ಆಹಾರ ಸುರಕ್ಷತಾ ಅಧಿಕಾರಿಗಳು ಎಥಿಲೀನ್ ಆಕ್ಸೈಡ್ ಇರುವುದನ್ನು ಕಂಡುಕೊಂಡಿದ್ದಾರೆ. ಈ ಕಾರಣದಿಂದ 527 ಉತ್ಪನ್ನಗಳಲ್ಲಿ, 87 ಪದಾರ್ಥಗಳ ರಫ್ತನ್ನು ಗಡಿಯಲ್ಲಿ ತಿರಸ್ಕರಿಸಲಾಗಿದೆ. 

Latest Videos

undefined

ಈ ಬ್ಯೂಟಿ ವಯಸ್ಸು 60 ಅಂದ್ರೆ ನಂಬೋಕಾಗುತ್ತಾ? ಇಳಿವಯಸ್ಸಲ್ಲಿ ಸೌಂದರ್ಯ ಸ್ಪರ್ಧೆ ಗೆದ್ದ ಅರ್ಜೆಂಟೀನಾ ಚೆಲುವೆ
 

ಈ ಮಾಲಿನ್ಯವು ಪ್ರಾಥಮಿಕವಾಗಿ ಎಳ್ಳು ಬೀಜಗಳು, ಗಿಡಮೂಲಿಕೆಗಳು, ಮಸಾಲೆಗಳು ಮತ್ತು ಇತರ ಆಹಾರ ಪದಾರ್ಥಗಳ ಜೊತೆಗೆ ಸೇರಿವೆ. ಈ 527 ಪದಾರ್ಥಗಳಲ್ಲಿ ಭಾರತವು 332 ರ ಮೂಲ ದೇಶವೆಂದು ಗುರುತಿಸಲ್ಪಟ್ಟರೆ, ರಾಸಾಯನಿಕವು ಕಂಡುಬಂದ ಉಳಿದ ಪ್ರಕರಣಗಳಲ್ಲಿ ಇತರ ದೇಶಗಳೂ ಭಾಗಿಯಾಗಿದ್ದವು.

ಎಥಿಲೀನ್ ಆಕ್ಸೈಡ್
ಎಥಿಲೀನ್ ಆಕ್ಸೈಡ್ ಅನ್ನು ಮೂಲತಃ ವೈದ್ಯಕೀಯ ಸಾಧನಗಳನ್ನು ಕ್ರಿಮಿನಾಶಕಗೊಳಿಸಲು ಉದ್ದೇಶಿಸಲಾಗಿದೆ, ಈಗ ಇದನ್ನು ಕೀಟನಾಶಕ ಮತ್ತು ಕ್ರಿಮಿನಾಶಕ ಏಜೆಂಟ್ ಆಗಿ ಬಳಸಲಾಗುತ್ತದೆ. ಈ ರಾಸಾಯನಿಕಕ್ಕೆ ಒಡ್ಡಿಕೊಳ್ಳುವುದರಿಂದ ಲಿಂಫೋಮಾ ಮತ್ತು ಲ್ಯುಕೇಮಿಯಾ ಸೇರಿದಂತೆ ವಿವಿಧ ಕ್ಯಾನ್ಸರ್‌ಗಳು ಬರಬಹುದು.

ರಾಮಯ್ಯ ಅಡ್ವಾನ್ಸ್ಡ್ ಟೆಸ್ಟಿಂಗ್ ಲ್ಯಾಬ್ಸ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಜುಬಿನ್ ಜಾರ್ಜ್ ಜೋಸೆಫ್, ಎಥಿಲೀನ್ ಆಕ್ಸೈಡ್‌ನ ಉಪಉತ್ಪನ್ನವಾದ ಎಥಿಲೀನ್ ಗ್ಲೈಕೋಲ್‌ನಿಂದ ಉಂಟಾಗುವ ಅಪಾಯಗಳನ್ನು ಎತ್ತಿ ತೋರಿಸಿದರು. ಇದು ಈ ಹಿಂದೆ ಕೆಮ್ಮಿನ ಸಿರಪ್‌ಗಳಲ್ಲಿ ಅದರ ಉಪಸ್ಥಿತಿಯಿಂದಾಗಿ ಆಫ್ರಿಕಾದಲ್ಲಿ ಸಾವಿಗೆ ಕಾರಣವಾಯಿತು.

ಸ್ವಿಮ್ಮಿಂಗ್ ಪೂಲ್‌ಗೆ ಜಿಗಿದು 'ಅಂಕಲ್‌.. ಅಂಕಲ್‌..' ಕೂಗಿದ್ದ ನಟಿ ಮಂಜುಳಾ; ಡಾ ರಾಜ್‌ಕುಮಾರ್ ಮಾಡಿದ್ದೇನು?
 

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ನಂತಹ ಸರ್ಕಾರಿ ಸಂಸ್ಥೆಗಳು ಆಹಾರ ಪದಾರ್ಥಗಳ ಸುರಕ್ಷತೆ ಬಗ್ಗೆ ಹೆಚ್ಚು ಅಧ್ಯಯನಗಳಲ್ಲಿ ತೊಡಗಬೇಕಿದೆ ಎಂಬುದನ್ನು ಇದು ಒತ್ತಿ ಹೇಳುತ್ತದೆ. 

ಹಾಂಗ್‌ಕಾಂಗ್ ಮತ್ತು ಸಿಂಗಾಪುರದ ವರದಿಗಳ ನಂತರ, ಭಾರತೀಯ ಆಹಾರ ಅಧಿಕಾರಿಗಳು ದೇಶದಲ್ಲಿ ಎಂಡಿಹೆಚ್ ಮತ್ತು ಎವರೆಸ್ಟ್ ಮಸಾಲೆಗಳ ಗುಣಮಟ್ಟದ ತಪಾಸಣೆಗೆ ಆದೇಶಿಸಿದ್ದಾರೆ.

click me!