ಯಬ್ಬಾ, ಸ್ಪೈಡರ್ ಚೀಸ್ ಅಂತೆ, ಅದ್ಹೇಗೆ ಮಾಡ್ತಾರೋ, ಯಾರು ತಿಂತಾರೋ ಗೊತ್ತಿಲ್ಲ!

By Suvarna News  |  First Published Apr 5, 2024, 3:31 PM IST

ಆಹಾರ ಪ್ರೇಮಿಗಳು ಹೊಸ ಹೊಸ ರುಚಿ ಟೇಸ್ಟ್ ಮಾಡಲು ಇಚ್ಛಿಸುತ್ತಾರೆ. ಭಿನ್ನ ಬಗೆಯ ಆಹಾರ ಸಿಕ್ಕಾಗ ಅದನ್ನು ಆಸಕ್ತಿಯಿಂದ ಸೇವನೆ ಮಾಡ್ತಾರೆ. ನಾವಿಂದು ಹುಳದ ಚೀಸ್ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ. 
 


ಜನರು ರುಚಿಯಾದ ಯಾವುದೇ ಆಹಾರವನ್ನು ಬೇಕಾದ್ರೂ ತಿನ್ನುತ್ತಾರೆ. ಆಹಾರದ ಮೇಲೆ ಹೊಸ ಹೊಸ ಪ್ರಯೋಗಗಳು ನಡೆಯುತ್ತಿರುತ್ತವೆ. ಪುರಾತನ ಕಾಲದಿಂದಲೂ ಜನರು ಕೆಲವೊಂದು ಆಹಾರವನ್ನು ಸೇವನೆ ಮಾಡ್ತಿದ್ದು, ಅದು ಈಗಿನ ದಿನಗಳಲ್ಲಿ ಹೆಚ್ಚು ಚರ್ಚೆಯಲ್ಲಿವೆ. ಅದ್ರಲ್ಲಿ ಚೀನ್ ಕೂಡ ಒಂದು. ನಿಮಗೆ ಗೊತ್ತಿರುವಂತೆ ಚೀಸ್ ನಲ್ಲಿ ನಾನಾ ವಿಧಗಳಿವೆ. ಹಾಲಿನ ಚೀಸ್ ಹೆಚ್ಚು ಪ್ರಸಿದ್ಧಿ ಪಡೆದಿದೆ. ಈ ಚೀಸನ್ನು ವಿವಿಧ ಭಕ್ಷ್ಯಗಳಲ್ಲಿ ಭಿನ್ನವಾಗಿ ಬಳಕೆ ಮಾಡಲಾಗುತ್ತದೆ. ಕೆಲವು ಕಡೆ ಕಾಟೇಜ್ ಚೀಸ್ ಬಳಕೆ ಮಾಡಿದ್ರೆ ಮತ್ತೆ ಕೆಲವು ಕಡೆ ಮೊಝ್ಝಾರೆಲ್ಲಾ ಚೀಸ್ ಬಳಸ್ತಾರೆ. ನಿಮಗೆ ಈಗ ನಾವು ಹೇಳ್ತಿರೋ ವಿಷ್ಯ ಅಚ್ಚರಿ ಆಗ್ಬಹುದು. ಯಾಕೆಂದ್ರೆ ಈಗ ನಾವು ನಿಮಗೆ ಪರಿಚಯಿಸ್ತಿರೋದು ಹುಳುವಿನ ಚೀಸ್. ಹೌದು, ಇದು ಇಂದು ನಿನ್ನೆಯದಲ್ಲ. ಶತಮಾನಗಳ ಹಿಂದಿನಿಂದಲೂ ಈ ಚೀಸ್ ಸೇವನೆ ಮಾಡಲಾಗ್ತಿದೆ. ಜೀವಂತ ಹುಳಗಳು ಮತ್ತು ಕೀಟಗಳಿಂದ ಈ ಚೀಸ್ ಸಿದ್ಧವಾಗುತ್ತದೆ.

ಸ್ಪೈಡರ್ (Spider) ಚೀಸ್ (Cheese) : ಜರ್ಮನಿ (Germany) ಯಲ್ಲಿ  ತುಂಬಾ ಪ್ರಸಿದ್ಧವಾದ ಹಾಗೂ  ತುಂಬಾ ದುಬಾರಿಯಾದ ಚೀಸ್ ಇದು. ಇದರ ಹೆಸರು Milbenkäse ಚೀಸ್. ಇದನ್ನು ಸ್ಪೈಡರ್ ಚೀಸ್ ಎಂದು ಕರೆಯಲಾಗುತ್ತದೆ. ಸ್ಪೈಡರ್ ಜಾತಿಗೆ ಸೇರಿದ ಆದ್ರೆ ತುಂಬಾ ಚಿಕ್ಕ ಹುಳುಗಳು ಇದನ್ನು ಸಿದ್ಧಪಡಿಸುತ್ತವೆ. ಕನ್ನಡದಲ್ಲಿ ಅದನ್ನು ನುಸಿ ಹುಳ ಎಂದು ಕರೆಯಲಾಗುತ್ತದೆ. ಈ ಹುಳುಗಳು ತಯಾರಿಸುವ ಚೀಸನ್ನು ಜನರು ತಿನ್ನುತ್ತಾರೆ. ಈ ಹುಳು ತುಂಬಾ ಚಿಕ್ಕದಿದ್ದು, ಬರಿಗಣ್ಣಿನಿಂದ ನೋಡುವುದು ಸ್ವಲ್ಪ ಕಷ್ಟ. ಇದೇ ಕಾರಣಕ್ಕೆ ಈ ಹುಳು ಚೀಸ್ ನಲ್ಲಿದ್ರೂ ಜನರು ಅದನ್ನು ತಿನ್ನುತ್ತಾರೆ.

Latest Videos

undefined

ಕಲ್ಲಂಗಡಿ ಹಣ್ಣು ಫ್ರಿಡ್ಜ್‌ನಲ್ಲಿಟ್ಟು ತಿನ್ನೋ ಅಭ್ಯಾಸವಿದ್ಯಾ? ಆರೋಗ್ಯಕ್ಕೆಷ್ಟು ಕೆಟ್ಟದ್ದು ಗೊತ್ತಿರ್ಲಿ

ಜರ್ಮನಿಯ ಸ್ಯಾಕ್ಸೋನಿ-ಅನ್ಹಾಲ್ಟ್ ಮತ್ತು ತುರಿಂಗಿಯಾ ಪ್ರದೇಶಗಳಲ್ಲಿ ಈ ಚೀಸ್ ತಯಾರಿಸಲಾಗುತ್ತಿತ್ತು. 1970 ರ ಸುಮಾರಿಗೆ ಸ್ಪೈಡರ್ ಚೀಸ್ ಬಳಸಿ ಖಾದ್ಯ ತಯಾರಿಸೋದನ್ನು ಜನರು ಮರೆತಿದ್ದರು. ಆದ್ರೆ ಅಲ್ಲಿನ ಒಬ್ಬ ಮಹಿಳೆ ಮಾತ್ರ ಈ ಪಾಕವಿಧಾನವನ್ನು ಮರೆತಿರಲಿಲ್ಲ. ವುರ್ಚ್ವಿಟ್ಜ್ ಗ್ರಾಮದ ಮಹಿಳೆ ಮತ್ತೆ ಸ್ಥಳೀಯ ಶಿಕ್ಷಕರಿಗೆ ಸ್ಪೈಡರ್ ಚೀಸ್ ಬಗ್ಗೆ ಮಾಹಿತಿ ನೀಡಿದ್ದಳು. ಅದರ ನಂತ್ರ ಮತ್ತೆ ಪ್ರಯೋಗ ಶುರುವಾಯ್ತು. ಈಗ ಜರ್ಮನ್ ನಲ್ಲಿ ಸ್ಪೈಡರ್ ಚೀಸ್ ಮತ್ತೆ ಬಳಕೆಗೆ ಬಂದಿದೆ. 

ಇದನ್ನು ಫ್ಲೇವರ್ಡ್ ಬಾಲ್ ನಲ್ಲಿ ತಯಾರಿಸಲಾಗುತ್ತದೆ. ಸ್ಪೈಡರ್ ಚೀಸ್ ತಯಾರಿಸುವ ಏಕೈಕ ಹಳ್ಳಿ ವುರ್ಚ್ವಿಟ್ಜ್. ಎಲ್ಡರ್‌ಫ್ಲವರ್ ಕಾರ್ಡಿಯಲ್ ಹಾಕಿ ಇದನ್ನು ತಯಾರಿಸಲಾಗುತ್ತದೆ. ಎಲ್ಡರ್‌ಫ್ಲವರ್ ಕಾರ್ಡಿಯಲ್ ಎನ್ನುವುದು ತಂಪು ಪಾನೀಯ ಹಾಗೂ ಸಂಸ್ಕೃರಿಸಿದ ಸಕ್ಕರೆ ಹಾಗೂ ನೀರನ್ನು ಬೆರೆಸಿ ಮಾಡಲಾಗುತ್ತದೆ. ಸ್ಪೈಡರ್ ಚೀಸ್ ತಯಾರಿಸಲು ಎಲ್ಡರ್‌ಫ್ಲವರ್ ಕಾರ್ಡಿಯಲ್, ಉಪ್ಪು ಮತ್ತು ಮಸಾಲೆ ವಸ್ತುವನ್ನು ಬಳಸಲಾಗುತ್ತದೆ. ಇವೆಲ್ಲವನ್ನು ಮರದ ಪೆಟ್ಟಿಗೆಯಲ್ಲಿ ಹಾಕಿಡಲಾಗುತ್ತದೆ. ಅದ್ರಲ್ಲಿ ಲಕ್ಷಾಂತರ ಸ್ಪೈಡರ್ ಹುಳುಗಳಿರುತ್ತವೆ. ಮೂರು ತಿಂಗಳ ಕಾಲ ಅದನ್ನು ಹಾಗೆಯೇ ಇಡಬೇಕು.

ಹೆಚ್ಚು ನೀರಿರುವ ಎಳನೀರು ಆಯ್ಕೆ ಮಾಡುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್​

ಹುಳಗಳು ಅದನ್ನು ಜೀರ್ಣಕಾರಿ ಕಿಣ್ವಗಳ ಸಹಾಯದಿಂದ ಬೇಯಿಸುತ್ತವೆ. ಒಂದು ತಿಂಗಳ ನಂತರ ಚೀಸ್ ಸಿಪ್ಪೆಯು ಹಳದಿ ಬಣ್ಣಕ್ಕೆ ತಿರುಗುತ್ತದೆ. ಮೂರು ತಿಂಗಳ ನಂತರ  ಕೆಂಪು ಕಂದು ಬಣ್ಣಕ್ಕೆ ಬರುವುದನ್ನು ನೀವು ನೋಡ್ಬಹುದು.  ಚೀಸ್ ಒಂದು ವರ್ಷಕ್ಕೆ ಬಂದ್ಮೇಲೆ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಅನೇಕರು ಅದನ್ನು ಒಂದು ವರ್ಷದ ನಂತ್ರ ಬಳಸ್ತಾರೆ. ಸ್ಪೈಡರ್ ಚೀಸ್ ನಲ್ಲಿ ನಾನಾ ರೀತಿಯ ಖಾದ್ಯಗಳನ್ನು ತಯಾರಿಸುತ್ತಾರೆ. ಚೀಸ್ ವಿಚಿತ್ರ ವಾಸನೆ ಹೊಂದಿರುತ್ತವೆ. ಅದು ಅಮೋನಿಯಾ ವಾಸನೆ ಹೊಂದಿರುತ್ತದೆ. ಜನರು ಜೀವಂತ ಹುಳುಗಳನ್ನು ಕೂಡ ಚೀಸ್ ಜೊತೆ ಸೇವನೆ ಮಾಡ್ತಾರೆ.

click me!