ತಿನ್ನೋದ್ರಲ್ಲಿ ಗಡಿಬಿಡಿ ಮಾಡಿದ್ರೆ ದೇಹ ಸ್ಟ್ರೆಕ್‌ ಮಾಡ್ಬಹುದು, ಜೋಪಾನ!

By Suvarna News  |  First Published Oct 7, 2020, 5:14 PM IST

ನಾವು ಏನು ತಿನ್ನುತ್ತೇವೆ ಎಂಬುದನ್ನಷ್ಟೇ ನಿರ್ಧರಿಸಿದ್ರೆ ಸಾಲದು,ಬದಲಿಗೆ ಅದನ್ನು ಹೇಗೆ ತಿನ್ನುತ್ತೇವೆ ಎನ್ನೋದು ಕೂಡ ಮುಖ್ಯವಾಗುತ್ತದೆ. ಟೈಮ್‌ ಇಲ್ಲ ಎಂಬ ನೆಪವೊಡ್ಡಿ ತಟ್ಟೆಯಲ್ಲಿ ಏನಿದೆ ಎಂಬುದನ್ನೇ ನೋಡದೆ ಕ್ಷಣಾರ್ಧದಲ್ಲಿ ಖಾಲಿಗೊಳಿಸಿದ್ರೆ ನಿಮ್ಮ ದೇಹ ಕೂಡ ಪಚನ ಕ್ರಿಯೆಗೆ ಸಮಯವಿಲ್ಲ ಎಂದು ಸ್ಟ್ರೆಕ್‌ ಮಾಡ್ಬಹುದು ಎಚ್ಚರ!


ನಾವು ತಿನ್ನೋ ಆಹಾರ ಬಾಯಿಗೆ ಮಾತ್ರ ರುಚಿಸಿದ್ರೆ ಸಾಲದು, ದೇಹಕ್ಕೂ ಹಿತ ನೀಡುವಂತಿರಬೇಕು.ಬಾಯಿ ಚಪಲಕ್ಕೆ ಬಿದ್ದುಹಿಂದೆಮುಂದೆ ಆಲೋಚಿಸದೆ ಜಂಕ್‌ಫುಡ್‌ಗಳನ್ನು ಹೊಟ್ಟೆಗಿಳಿಸುತ್ತಿದ್ರೆ ಭವಿಷ್ಯದಲ್ಲಿಆರೋಗ್ಯ ಕೈಕೊಟ್ಟು ಪಶ್ಚತ್ತಾಪ ಪಡೋದು ಗ್ಯಾರಂಟಿ. ಈಗಂತು ಏನು ತಿನ್ನಬೇಕು,ತಿನ್ನಬಾರ್ದು? ಯಾವ ಆಹಾರ ಆರೋಗ್ಯಕರ ಎಂಬ ಮಾಹಿತಿಯಂತೂ ಬೆರಳ ತುದಿಯಲ್ಲೇ ಇದೆ.

ಇಂಟರ್ನೆಟ್‌ನಲ್ಲಿ ಈ ಕುರಿತು ಜಾಲಾಡಿದ್ರೆ ಸಾಕೆನ್ನುವಷ್ಟು ಮಾಹಿತಿ ಸಿಗುತ್ತೆ.ಆಧುನಿಕ ಜೀವನಶೈಲಿ ಪರಿಣಾಮ ದೇಹದ ತೂಕ ಹೆಚ್ಚೋದು ಮಾಮೂಲು. ತೂಕ ಹೆಚ್ಚಿ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಕಾಡಲು ಪ್ರಾರಂಭಿಸಿದಾಗ ಗಂಭೀರವಾಗಿ ಡಯಟ್‌ ಪ್ಲ್ಯಾನ್‌ ಮಾಡುತ್ತೇವೆ.ಹೊಸ ವರ್ಷದ ಮೊದಲ ದಿನ ಈ ವರ್ಷವಿಡೀ ಆರೋಗ್ಯಕರ ಡಯಟ್‌ ಪಾಲಿಸುತ್ತೇನೆ ಎಂಬ ರೆಸಲ್ಯೂಶನ್‌ ಕೈಗೊಳ್ಳುತ್ತೇವೆ. ಆದ್ರೆ ಕೆಲವೇ ದಿನಗಳಲ್ಲೇ ಏನು ರೆಸಲ್ಯೂಶನ್‌ ಕೈಗೊಂಡಿದ್ದೆಎಂಬುದೇ ಕೆಲವರಿಗೆ ನೆನಪಿರೊಲ್ಲ.ಇದು ಒಬ್ಬಿಬ್ಬರ ಮನಸ್ಥಿತಿಯಲ್ಲ,ಭಾರತದಲ್ಲಿ ಶೇ.60೦ಕ್ಕಿಂತಲೂ ಹೆಚ್ಚು ಜನರು ತಮ್ಮ ಡಯಟ್‌ನಲ್ಲಿ ಪೌಷ್ಟಿಕಾಂಶಯುಕ್ತ ಆಹಾರ ಸೇಪರ್ಡೆಗೊಳಿಸೋ ಬಗ್ಗೆ ಗಂಭೀರ ಪ್ರಯತ್ನ ಮಾಡೋದೆ ಇಲ್ಲ ಎನ್ನುತ್ತದೆ ನ್ಯೂ ಶಕ್ತಿಯಲ್ಲಿ ಇತ್ತೀಚೆಗೆ ಪ್ರಕಟವಾದ ʼಇಂಡಿಯಾಸ್‌ ಡಯಟ್‌ ಪ್ಯಾರಡಾಕ್ಸ್‌ʼ ಎಂಬ ವರದಿ. ವಿಶ್ವದಲ್ಲಿ ಎರಡನೇ ಅತೀಹೆಚ್ಚು ಮಧುಮೇಹ ರೋಗಿಗಳನ್ನು ಹೊಂದಿರೋ ದೇಶ ಭಾರತವಾಗಿದ್ದು,77ಮಿಲಿಯನ್‌ ಜನರು ಮಧುಮೇಹ ಹೊಂದಿದ್ದಾರೆ.ಅಲ್ಲದೆ,ಮೂರರಲ್ಲಿ ಒಬ್ಬ ಭಾರತೀಯ ಅಧಿಕ ರಕ್ತದೊತ್ತಡ ಸಮಸ್ಯೆ ಹೊಂದಿದ್ದಾನೆ ಎಂಬ ಮಾಹಿತಿಯನ್ನುʼಇಂಡಿಯನ್‌ ಹಾರ್ಟ್‌ ಜರ್ನಲ್‌ ವಾಲ್ಯೂಮ್‌ 71ʼ ಬಹಿರಂಗಪಡಿಸಿದೆ. ಹಾಗಾಗಿ ಭಾರತೀಯರು ತಾವು ತಿನ್ನೋ ಆಹಾರದ ಬಗ್ಗೆ ಗಮನ ನೀಡಬೇಕಾದ ಅಗತ್ಯ ಇಂದು ಹಿಂದಿಗಿಂತ ಹೆಚ್ಚಿದೆ. ಬರೀ ಪೌಷ್ಟಿಕಾಂಶಯುಕ್ತ ಡಯಟ್‌ ಪಾಲಿಸಿದ್ರೆ ಸಾಲದು,ಅದರ ಜೊತೆಗೆ ತಿನ್ನೋ ಅಭ್ಯಾಸವನ್ನು ಕೂಡ ಸರಿಪಡಿಸಿಕೊಳ್ಳೋದು ಅಗತ್ಯ.

ಊಟದ ಆಟಕ್ಕೆ ಆರು ಬಗೆ ಅಡುಗೆ!

Tap to resize

Latest Videos

ತಟ್ಟೆ ತುಂಬಾ ರಂಗುರಂಗಿನ ಆಹಾರವಿರಲಿ
ಹೀಗಂದ ತಕ್ಷಣ ನಾನಾ ಬಣ್ಣದ ಸ್ವೀಟ್ಸ್‌ಗಳನ್ನು ಬಡಿಸಿಕೊಂಡು ತಿನ್ನೋದು ಎಂದು ಭಾವಿಸಬೇಡಿ.ಇದರರ್ಥ ತರಕಾರಿಗಳು,ಹಣ್ಣುಗಳನ್ನುಹೆಚ್ಚು ಸೇವಿಸಿ ಎಂದರ್ಥ.ನೀವು ಅಗತ್ಯ ಪೋಷಕಾಂಶಗಳನ್ನು ಒದಗಿಸೋ ಸಮತೋಲಿತ ಆಹಾರವನ್ನು ಬಯಸುತ್ತಿದ್ರೆ ಹಣ್ಣು ಮತ್ತು ತರಕಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಿ.ಹಸಿರು ಸೊಪ್ಪುಗಳು ಹಾಗೂ ತರಕಾರಿಗಳು ಜೀವಸತ್ತ್ವಗಳ ಆಗರವಾಗಿದ್ದು,ಅಸ್ಕೋರ್ಬಿಕ್‌ ಆಸಿಡ್‌, ಪಾಲಿಕ್‌ ಆಸಿಡ್‌ ಇತ್ಯಾದಿ ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಕಬ್ಬಿಣಾಂಶ, ಕ್ಯಾಲ್ಸಿಯಂ ಹಾಗೂ ಫಾಸ್ಪರಸ್‌ ಮುಂತಾದ ಮಿನರಲ್ಸ್‌ನಿಂದ ಸಮೃದ್ಧವಾಗಿವೆ. ಕೆಂಪು ಬಣ್ಣದ ಹಣ್ಣುಗಳು ಹಾಗೂ ತರಕಾರಿಗಳಲ್ಲಿ ಆಂಟಿ ಆಕ್ಸಿಡೆಂಟ್‌ ಹೇರಳವಾಗಿದ್ದು,ಅಧಿಕರಕ್ತದೊತ್ತಡ, ಕ್ಯಾನ್ಸರ್‌, ಹೃದ್ರೋಗಕ್ಕೊಳಗಾಗೋ ಸಾಧ್ಯತೆಯನ್ನು ತಗ್ಗಿಸುತ್ತವೆ.


ನೀವೇ ಕುಕ್‌ ಆಗಿ
ನಾವೇ ಖುದ್ದಾಗಿ ಅಡುಗೆಮನೆಗೆ ಹೋಗಿ ನಮ್ಮಿಷ್ಟದ ಖಾದ್ಯವನ್ನುಸಿದ್ಧಪಡಿಸಿ ಸವಿಯೋ ಖುಷಿನೇ ಬೇರೆ. ಲಾಕ್‌ಡೌನ್‌ ಅವಧಿಯಲ್ಲಿ ಅಡುಗೆ ಗಂಧಗಾಳಿ ಗೊತ್ತಿಲ್ಲದವರು ಕೂಡ ಬಾಣಸಿಗರಾಗಿದ್ದಾರೆ ಅನ್ನೋದು ಆರೋಗ್ಯಕರ ಬೆಳವಣಿಗೆ.ನೀವು ಕೂಡ ಕುಕ್ಕಿಂಗ್‌ ಕಲಿತಿದ್ರೆ ಅದನ್ನು ಮುಂದುವರಿಸಿ.ನೀವು ಸೇವಿಸೋ ಆಹಾರ ಹೇಗಿರಬೇಕು ಎಂದು ಯೋಚಿಸಿ, ಅದನ್ನು ಕಾರ್ಯಗತಗೊಳಿಸಲು ನಿಮಗಿಂತ ಉತ್ತಮ ವ್ಯಕ್ತಿ ಬೇರೆಯಿಲ್ಲ.ಉಪ್ಪು, ಖಾರ, ಹುಳಿ, ಸಿಹಿ ಎಷ್ಟಿರಬೇಕು,ಎಷ್ಟಿದ್ರೆ ಆರೋಗ್ಯಕ್ಕೆ ಉತ್ತಮ ಎಂಬುದನ್ನು ನೀವೇ ನಿರ್ಧರಿಸಬಹುದು.

ನಿಧಾನವಾಗಿ ತಿನ್ನಿ
ಕೆಲವರಿಗೆ ತಿನ್ನೋವಾಗಲೂ ಅರ್ಜೆಂಟ್‌. ತಟ್ಟೆಯಲ್ಲಿರೋದನ್ನೆಲ್ಲ ಕ್ಷಣಾರ್ಧದಲ್ಲಿ ಗಬಗಬ ತಿಂದು ಮುಗಿಸಿ ಬಿಡುತ್ತಾರೆ. ಆದ್ರೆ ಇದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದ್ದಲ್ಲ. ಇದು ಆರೋಗ್ಯಕರ ಅಭ್ಯಾಸವಲ್ಲ. ಏಕೆಂದ್ರೆ ಬೇಗ ಬೇಗ ತಿನ್ನೋದ್ರಿಂದ ಆಹಾರವನ್ನು ಕಡಿಮೆ ಅಗೆಯುತ್ತೇವೆ, ಇದು ಜೀರ್ಣಕ್ರಿಯೆ ಮೇಲೆ ಪ್ರಭಾವ ಬೀರುತ್ತದೆ. ಇದ್ರಿಂದ ಬೊಜ್ಜು, ಮಧುಮೇಹ, ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳೋ ಸಾಧ್ಯತೆಯಿರುತ್ತದೆ. ಆದಕಾರಣ ನಿಧಾನವಾಗಿ ಪ್ರತಿ ತುತ್ತನ್ನು ಚೆನ್ನಾಗಿ ಅಗೆದು ತಿನ್ನಿ. 

ಫ್ರಿಜ್‌ ಒಳಗಾ? ಹೊರಗಾ?: ಹಾಳಾಗದಂತೆ ಬ್ರೆಡ್ ಇಡುವುದು ಹೇಗೆ‌?

ಗಮನವೆಲ್ಲ ತಿನ್ನೋದ್ರ ಮೇಲೆಯೇ ಇರಲಿ
ತಟ್ಟೆಯಲ್ಲಿ ಏನಿದೆ, ಅದನ್ನು ನೀವು ಹೇಗೆ ತಿನ್ನುತ್ತಿದ್ದೀರಿ ಎಂಬುದು ತಿಳಿದಿರಲಿ. ಇತ್ತೀಚಿನ ದಿನಗಳಲ್ಲಿ ಬಹುತೇಕರು ಟಿವಿ ನೋಡುತ್ತ ಇಲ್ಲವೆ ಮೊಬೈಲ್‌ನಲ್ಲಿ ಚಾಟ್‌ ಮಾಡುತ್ತ ಊಟ ಮಾಡುತ್ತಿರುತ್ತಾರೆ. ತಟ್ಟೆಯಲ್ಲಿ ಏನಿದೆ, ಏನು ತಿನ್ನುತ್ತಿದ್ದೇನೆ, ಎಷ್ಟು ತಿನ್ನುತ್ತಿದ್ದೇನೆ ಎಂಬ ಪರಿವೇ ಇರೋದಿಲ್ಲ. ಆದ್ರೆ ಇಂಥ ಅಭ್ಯಾಸ ಜೀರ್ಣಕ್ರಿಯೆ ಮೇಲೆ ಪ್ರಭಾವ ಬೀರುತ್ತದೆ. ಹೇಗೆ ಅಂತೀರಾ? ಈ ರೀತಿ ಗಮನವಿಲ್ಲದೆ ತಿನ್ನೋದ್ರಿಂದ ಬಾಯಿಯಲ್ಲಿ ಅಗತ್ಯ ಪ್ರಮಾಣದಲ್ಲಿ ಲಾಲಾರಸ ಉತ್ಪತ್ತಿಯಾಗೋದಿಲ್ಲ. ಇದ್ರಿಂದ ಹೊಟ್ಟೆ ತುಂಬಿದ್ದೇ ಗೊತ್ತಾಗೋದಿಲ್ಲ. 

ಒತ್ತಡ ನಿಭಾಯಿಸಿ
ಒತ್ತಡ ಹೆಚ್ಚಿದಾಗ ಕೂಡ ಸಿಕ್ಕಿದ್ದನ್ನೆಲ್ಲ ತಿನ್ನಬೇಕು ಎಂದೆನಿಸುತ್ತದೆ. ಇದಕ್ಕೆ ಸ್ಟ್ರೆಸ್‌ ಈಟಿಂಗ್‌ ಎನ್ನುತ್ತಾರೆ. ಒತ್ತಡದ ಕಾರಣಕ್ಕೆ ಅತಿಯಾಗಿ ತಿನ್ನೋದ್ರಿಂದ ಅನೇಕ ಆರೋಗ್ಯ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಆದಕಾರಣ ಒತ್ತಡವನ್ನು ಸಮರ್ಪಕವಾಗಿ ನಿಭಾಯಿಸಲು ಕಲಿಯಿರಿ. ಉತ್ತಮ ಪುಸ್ತಕಗಳನ್ನು ಓದೋದು,ಅಡುಗೆ ಮಾಡೋದು, ಓಡೋದು, ಧ್ಯಾನ ಹಾಗೂ ಯೋಗದಿಂದ ಒತ್ತಡವನ್ನು ತಗ್ಗಿಸಿಕೊಳ್ಳಲು ಸಾಧ್ಯವಿದೆ. 

ಮೆಮೊರಿ ಪವರ್ ಹೆಚ್ಚಿಸುತ್ತೆ ಬ್ಲೂ ಪೀ ಟೀ

ತಿನ್ನೋದಕ್ಕೂ ಪ್ಲ್ಯಾನ್‌ ಮಾಡಿ
ಯಾವುದೇ ಒಂದು ಗುರಿ ಅಥವಾ ಉದ್ದೇಶ ಈಡೇರಬೇಕೆಂದ್ರೆ ಅದಕ್ಕೆ ಸೂಕ್ತವಾದ ಯೋಜನೆ ಅಗತ್ಯ. ಹಾಗಾಗಿ ಪ್ರತಿದಿನ ಏನು ತಿನ್ನಬೇಕು ಎಂಬ ಬಗ್ಗೆ ಯೋಜನೆ ರೂಪಿಸಿ, ಅದನ್ನು ಸಿದ್ಧಪಡಿಸಿ. ನಿಮಗೆ ಎಷ್ಟು ಅಗತ್ಯವೋ ಅಷ್ಟೇ ಆಹಾರ ಸಿದ್ಧಪಿಡಿಸಿ. ಇದ್ರಿಂದ ಆಹಾರ ವೇಸ್ಟ್‌ ಆಗೋದಿಲ್ಲ. ಹಸಿವಾದ ತಕ್ಷಣ ಜಂಕ್‌ಫುಡ್‌ ತಿನ್ನೋ ಬದಲು ಹಣ್ಣುಗಳು, ಮೊಸರು, ಒಣಹಣ್ಣುಗಳನ್ನು ಸೇವಿಸಿ. ಮನೆಯಲ್ಲಿ ಇಂಥ ಆರೋಗ್ಯಕರ ಆಹಾರಗಳ ಸ್ಟಾಕ್‌ ಇರಲಿ. ಇವೆಲ್ಲದರ ಜೊತೆ ಆಗಾಗ ಯಥೇಚ್ಛವಾಗಿ ನೀರು ಕುಡಿಯೋದು ಕೂಡ ಅಗತ್ಯ. 
 

click me!