ಮೀನುಗಾರಿಕೆಗೆ ತೆರಳಿದ್ದ ಅಮೆರಿಕದ ಮೀನುಗಾರರೊಬ್ಬರಿಗೆ ಅತೀ ಅಪರೂಪದ ನೀಲಿ ಸಿಗಡಿ ಸೆರೆ ಸಿಕ್ಕಿದೆ. ಈ ನೀಲಿ ಸಿಗಡಿ ಅಪರೂಪದಲ್ಲಿ ಅಪರೂಪದ ಸಮುದ್ರ ಜೀವಿಯಾಗಿದ್ದು, ಎರಡು ಮಿಲಿಯನ್ ಸಿಗಡಿಗಳಲ್ಲಿ ಒಂದು ನೀಲಿ ಸಿಗಡಿ ಇರುತ್ತದೆ. ಪೋರ್ಟ್‌ಲ್ಯಾಂಡ್‌ನ (Portland) ಕರಾವಳಿಯಲ್ಲಿ ಇತ್ತೀಚೆಗೆ ಈ ಅಪರೂಪದ ನೀಲಿ ಸಿಗಡಿ ಪತ್ತೆಯಾಗಿದೆ.
ಲಾರ್ಸ್-ಜೋಹಾನ್ ಲಾರ್ಸನ್ ಎಂಬುವವರು ಟ್ವಿಟ್ಟರ್‌ನಲ್ಲಿ ಈ ಅಪರೂಪದ ಸಮುದ್ರ ಜೀವಿಯ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ ಮತ್ತು ಈ ನೀಲಿ ಸಿಗಡಿ ನಿನ್ನೆ ಪೋರ್ಟ್‌ಲ್ಯಾಂಡ್‌ನ ಕರಾವಳಿಯಲ್ಲಿ ಮೀನುಗಾರರಿಗೆ ಸಿಕ್ಕಿತ್ತು. ಮತ್ತು ಇದನ್ನು ದೊಡ್ಡದಾಗಿ ಬೆಳೆಯುವ ಸಲುವಾಗಿ ಮತ್ತೆ ನೀರಿಗೆ ಬಿಡಲಾಗಿದೆ. ನೀಲಿ ನಳ್ಳಿಗಳು ಎರಡು ಮಿಲಿಯನ್‌ಗೆ ಒಂದಷ್ಟೇ ಇರುವುದಾಗಿದೆ.
ಇದನ್ನು ಓದಿ: GST On Food Items:ಮೊಸರು, ಮೀನು, ಮಾಂಸ, ಪನ್ನೀರು ಇನ್ಮುಂದೆ ದುಬಾರಿ; ಪ್ರೀಪ್ಯಾಕ್ ಆಹಾರ ಪದಾರ್ಥಗಳಿಗೂ ಶೇ.5ರಷ್ಟು ಜಿಎಸ್ ಟಿ
ಹೋ ದೇವರೆ ಇಂತಹ ಸಿಗಡಿಯನ್ನು ನಾನೆಂದೂ ನೋಡಿರಲಿಲ್ಲ. ಕೆಂಪು ಬಣ್ಣದ ಬದಲು ನೀಲಿ ಸಿಗಡಿ ಸಿಕ್ಕಿರುವುದು ಅಚ್ಚರಿ ಅಲ್ಲವೇ ಎಂದು ಈ ಮೀನು ನೋಡಿದ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸಾಮಾನ್ಯವಾಗಿ ಸಿಗಡಿಗಳು ಕೆಸರು ಮಿಶ್ರಿತ ಕಂದು ಅಥವಾ ಕೆಂಪು ಬಣ್ಣವನ್ನು ಹೊಂದಿರುತ್ತವೆ. ಮೈನೆ ವಿಶ್ವವಿದ್ಯಾನಿಲಯದ ಲಾಬ್‌ಸ್ಟರ್ ಇನ್‌ಸ್ಟಿಟ್ಯೂಟ್ ( Lobster Institute at the University of Maine) ಪ್ರಕಾರ ನೀಲಿ ಸಿಗಡಿ ಬಹಳ ಅಪರೂಪ ಮತ್ತು ಎರಡು ಮಿಲಿಯನ್‌ಗಳಲ್ಲಿ ಒಂದು ಮಾತ್ರ ಲಭ್ಯವಿರುತ್ತದೆ.
ಅವುಗಳ ಬಣ್ಣವು ಕಲ್ಲಿನ ಸಮುದ್ರದ ತಳದಲ್ಲಿ ಅವುಗಳನ್ನು ಬೇರೆ ಪ್ರಾಣಿಗಳಿಂದ ಮರೆ ಮಾಚಲು ಸಹಾಯ ಮಾಡುತ್ತದೆ. ಅನುವಂಶಿಕ ಅಸಹಜತೆಯಿಂದಾಗಿ (genetic abnormality) ನೀಲಿ ಸಿಗಡಿಗಳು ತಮ್ಮ ಈ ಅಪರೂಪದ ಬಣ್ಣವನ್ನು ಪಡೆಯುತ್ತವೆ, ಅವುಗಳು ಇತರ ಸಿಗಡಿಗಳಿಗಿಂತ ಹೆಚ್ಚು ನಿರ್ದಿಷ್ಟ ಪ್ರೋಟೀನ್ ಅನ್ನು ಉತ್ಪಾದಿಸಲು ಕಾರಣವಾಗುತ್ತದೆ. ಆದರೆ ಅವುಗಳನ್ನು ಬೇಯಿಸಿದಾಗ ನೀಲಿ ಸಿಗಡಿಗಳು (Blue lobsters) ಕೂಡ ಕೆಂಪು ಬಣ್ಣಕ್ಕೆ ತಿರುಗುತ್ತವೆ.
ಇದನ್ನು ಓದಿ: ಒಂದು ಮೀನಿಗೆ ಬರೋಬ್ಬರಿ 13 ಲಕ್ಷ ರೂಪಾಯಿ ! ಯಾಕಿಷ್ಟು ದುಬಾರಿ ?
ಕೆಲ ದಿನಗಳ ಹಿಂದೆ ಕಾಂಬೋಡಿಯಾದಲ್ಲಿ ವಿಶ್ವದ ಅತಿದೊಡ್ಡ ಸಿಹಿನೀರಿನ ಮೀನು, ದೈತ್ಯ ಸ್ಟಿಂಗ್ರೇ ಸೆರೆ ಸಿಕ್ಕಿತ್ತು. ಕಾಂಬೋಡಿಯಾದ ಮೆಕಾಂಗ್ ನದಿಯಲ್ಲಿ ಈ ಮೀನು ಮೀನುಗಾರರ ಬಲೆಗೆ ಬಿದ್ದಿತ್ತು. ಆಗ್ನೇಯ ಏಷ್ಯಾ ರಾಷ್ಟ್ರ ಮತ್ತು ಯುನೈಟೆಡ್ ಸ್ಟೇಟ್ಸ್‌ನ ವಿಜ್ಞಾನಿಗಳ ಪ್ರಕಾರ ಇದು ವಿಶ್ವದ ಅತಿದೊಡ್ಡ ದಾಖಲಿತ ಸಿಹಿನೀರಿನ ಮೀನು ಎಂದು ತಿಳಿದು ಬಂದಿದೆ.
ಜೂನ್ 13 ರಂದು ಸೆರೆ ಸಿಕ್ಕಿದ ಈ ಸ್ಟಿಂಗ್ರೇ ಮೀನು ಮೂತಿಯಿಂದ ಬಾಲದವರೆಗೆ ಸುಮಾರು 4 ಮೀಟರ್ (13 ಅಡಿ) ಉದ್ದ ಅಳತೆಯನ್ನು ಹೊಂದಿತ್ತು ಮತ್ತು 300 ಕಿಲೋಗ್ರಾಂ ಗಳಷ್ಟು (660 ಪೌಂಡ್‌ಗಳು) ತೂಗುತ್ತಿತ್ತು ಎಂದು ಕಾಂಬೋಡಿಯನ್-ಅಮೆರಿಕ. ಜಂಟಿ ಸಂಶೋಧನಾ ಯೋಜನೆಯಾದ ವಂಡರ್ಸ್ ಆಫ್ ದಿ ಮೆಕಾಂಗ್ ಹೇಳಿದೆ.
2005 ರಲ್ಲಿ ಥೈಲ್ಯಾಂಡ್‌ನಲ್ಲಿ ಈ ಹಿಂದೆ ಸಿಕ್ಕ ಅತೀ ದೊಡ್ಡ ಸಿಹಿ ನೀರಿನ ಮೀನಿನ ಗಾತ್ರ 293 ಕಿಲೋಗ್ರಾಂ (646-ಪೌಂಡ್) ಆಗಿತ್ತು. ಮೆಕಾಂಗ್ ದೈತ್ಯ ಕ್ಯಾಟ್ ಫಿಶ್ ಇದಾಗಿತ್ತು. ಪ್ರಸ್ತುತ ಈಗ ಸಿಕ್ಕಿರುವ ಮೀನು ಈಶಾನ್ಯ ಕಾಂಬೋಡಿಯಾದ ಸ್ಟಂಗ್ ಟ್ರೆಂಗ್‌ನ ದಕ್ಷಿಣದಲ್ಲಿ ಸ್ಥಳೀಯ ಮೀನುಗಾರರಿಗೆ ಕಾಣ ಸಿಕ್ಕಿದೆ. ಮೀನುಗಾರರ ಕರೆಯ ನಂತರ ಮಧ್ಯರಾತ್ರಿಯೇ ಬಂದಿಳಿದ ವಿಜ್ಞಾನಿಗಳ ತಂಡ ಈ ಮೀನನ್ನು ನೋಡಿ ಅಚ್ಚರಿಗೊಂಡಿದ್ದರು. ವಿಶೇಷವಾಗಿ ಸಿಹಿನೀರಿನಲ್ಲಿ ಇಷ್ಟು ದೊಡ್ಡ ಮೀನನ್ನು ನೋಡಲು ಅಚ್ಚರಿಯಾಗುತ್ತಿದೆ. ಹಾಗಾಗಿ ನಮ್ಮ ತಂಡವು ದಿಗ್ಭ್ರಮೆಗೊಂಡಿತು ಎಂದು ಸಂಶೋಧನಾ ಸಂಸ್ಥೆ ಮೆಕಾಂಗ್ ನ ಮುಖ್ಯಸ್ಥ ಝೆಬ್ ಹೊಗನ್ (Zeb Hogan) ಅವರು ರೆನೊದಲ್ಲಿನ ನೆವಾಡಾ ವಿಶ್ವವಿದ್ಯಾಲಯದ ಆನ್‌ಲೈನ್ ಸಂದರ್ಶನದಲ್ಲಿ ಹೇಳಿದರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.