ಐಸ್‌ಕ್ರೀಮ್‌ ಪ್ರಿಯರೇ ನೀವು? ಹಾಗಾದ್ರೆ ಐಸ್‌ಕ್ರೀಮ್‌ ಹುಟ್ಟಿದ್ದೆಲ್ಲಿ ಗೊತ್ತಾ?

By Suvarna News  |  First Published May 7, 2021, 12:46 PM IST

ಐಸ್‌ಕ್ರೀಮ್‌ ಎಲ್ಲರ ಅಚ್ಚುಮೆಚ್ಚಿನ ಡೆಸರ್ಟ್.ನಮ್ಮದೇ ನೆಲದ ತಿನಿಸು ಅನ್ನೋವಷ್ಟರ ಮಟ್ಟಿಗೆ ನಾವದನ್ನುಇಷ್ಟಪಡುತ್ತೇವೆ.ಆದ್ರೆ ಈ ಐಸ್‌ಕ್ರೀಮ್‌ ಹುಟ್ಟಿದ್ದು ಎಲ್ಲಿ ಎಂಬುದು ಗೊತ್ತಾ ನಿಮ್ಗೆ?


ಸದ್ಯ ಚೀನಾದ ಹೆಸರು ಕೇಳಿದ್ರೆ ಉರಿದು ಬೀಳುವಂತಹ ಸ್ಥಿತಿಯಿದೆ.ಕೊರೋನಾ ಎಂಬ ಹೆಮ್ಮಾರಿಯನ್ನು ಜಗತ್ತಿಗೆ ಕೊಡುಗೆಯಾಗಿ ನೀಡಿರೋ ಈ ರಾಷ್ಟ್ರದ ಬಗ್ಗೆ ಎಲ್ಲರ ಮನಸ್ಸಿನಲ್ಲಿ ಒಂದಿಷ್ಟು ಸಿಟ್ಟು,ಅಸಹನೆ ಇದ್ದೇಇದೆ.ಪುಟ್ಟ ಆಟಿಕೆಯಿಂದ ಹಿಡಿದು ದೊಡ್ಡ ದೊಡ್ಡ ಎಲೆಕ್ಟ್ರಾನಿಕ್ ಉಪಕರಣಗಳ ತನಕ ಪ್ರತಿಯೊಂದು ವಸ್ತುವನ್ನು ಉತ್ಪಾದಿಸಿ ಜಗತ್ತಿನಾದ್ಯಂತ ಮಾರುಕಟ್ಟೆ ಸೃಷ್ಟಿಸಿಕೊಂಡಿರೋ ರಾಷ್ಟ್ರ ಚೀನಾ ಎಂಬುದು ಗೊತ್ತಿರೋ ವಿಷಯ. ಆದ್ರೆ ನಾವು ನಮ್ಮ ನೆಲದ್ದೇ  ಎಂಬಷ್ಟು ನೆಚ್ಚಿಕೊಂಡಿರೋ ಕೆಲವು ಮೆಚ್ಚಿನ ತಿನಿಸುಗಳ ಮೂಲಸ್ಥಾನ ಚೀನಾ ಎಂಬುದು ತಿಳಿದ್ರೆ ನೀವು ನಿಜಕ್ಕೂ ಅಚ್ಚರಿಪಡುತ್ತೀರಿ. ಹಾಗಂತ ಚೈನೀಸ್‌ ರೆಸ್ಟೋರೆಂಟ್‌ಗಳಲ್ಲಿ ಸಿಗೋ ತಿನಿಸುಗಳ ಬಗ್ಗೆ ಇಲ್ಲಿ ಮಾತಾಡುತ್ತಿಲ್ಲ,ಬದಲಿಗೆ ನಿಮ್ಮಲ್ಲಿ ಬಹುತೇಕರು ಇಷ್ಟಪಡೋ ನಮ್ಮ ದೇಶದ ಆಹಾರ ಪದ್ಧತಿಯಲ್ಲಿ ಬೆರೆತು ಹೋಗಿರೋ ತಿನಿಸುಗಳ ಬಗ್ಗೆ ಹೇಳುತ್ತಿದ್ದೇವೆ. ಹಾಗಾದ್ರೆ ಚೀನಾದಲ್ಲಿ ಹುಟ್ಟಿ ವಿಶ್ವಾದ್ಯಂತ ನೆಲೆ ಕಂಡುಕೊಂಡಿರೋ ಆಹಾರಗಳು ಯಾವುವು?

ಏಲಕ್ಕಿ ಲೈಂಗಿಕ ಆಸಕ್ತಿ ಹೆಚ್ಚಲೂ ಸಹಕಾರಿ, ಆರೋಗ್ಯಕಾರಿ

Tap to resize

Latest Videos

ಐಸ್‌ಕ್ರೀಮ್
ಇದು ಎಲ್ಲರ ಆಲ್‌ ಟೈಮ್ ಫೆವರೇಟ್‌ ಡೆಸರ್ಟ್. ಬಿಸಿಲಿರಲಿ, ಚಳಿಯಿರಲಿ ಐಸ್‌ಕ್ರೀಮ್‌ ತಿನ್ನಬೇಕೆಂಬ ಬಯಕೆ ಮಾತ್ರ ತಗ್ಗೋದಿಲ್ಲ. ಐಸ್‌ಕ್ರೀಮ್ ನಮ್ಮ ದೇಶದಲ್ಲೇ ಜನ್ಮ ತಾಳಿದ್ದು ಎಂಬಷ್ಟರ ಮಟ್ಟಿಗೆ ನಾವದನ್ನು ನೆಚ್ಚಿಕೊಂಡಿದ್ದೇವೆ. ಆದ್ರೆ ಐಸ್‌ಕ್ರೀಮ್‌ ಎಂಬ ರುಚಿಯಾದ ಜಗತ್ಪ್ರಸಿದ್ಧ ತಿನಿಸು ಹುಟ್ಟಿದ್ದು ಚೀನಾದಲ್ಲಿ ಎಂಬ ಸತ್ಯ ಬಹುತೇಕರಿಗೆ ತಿಳಿದಿಲ್ಲ. ಪರ್ಸಿಯನರು ಹಾಗೂ ರೋಮನ್‌ ಜನರು ಫ್ಲೇವರ್ಡ್‌ ಐಸ್‌ ಮೊದಲಿಗೆ ತಯಾರಿಸಿದ್ರೂ ಇದಕ್ಕೆ ಹಾಲಿನ ಉತ್ಪನ್ನ ಸೇರಿಸಿ ಆಧುನಿಕ ಐಸ್‌ಕ್ರೀಮ್‌ ಸ್ವರೂಪ ನೀಡಿದ ಕೀರ್ತಿ ಚೀನೀಯರಿಗೆ ಸಲ್ಲುತ್ತೆ!

ಪಾಸ್ತಾ
ಇಟಲಿಯನ್‌ ಫುಡ್‌ ಎಂದ ತಕ್ಷಣ ನೆನಪಿಗೆ ಬರೋ ಹೆಸರು ಪಾಸ್ತಾ. ಆದ್ರೆ ಪಾಸ್ತಾ ಇಟಲಿಯಲ್ಲಿ ಅಲ್ಲ ಚೀನಾದಲ್ಲಿ ಜನ್ಮ ತಾಳಿದ್ದು ಎಂಬ ಬಗ್ಗೆ ಪ್ರಬಲ ಐತಿಹಾಸಿಕ ಪುರಾವೆಗಳಿವೆ. ಇತಿಹಾಸ ಸಂಶೋಧಕರಿಗೆ ಚೀನಾದಲ್ಲಿ ಸಿಕ್ಕ ನಾಲ್ಕು ಸಾವಿರ ವರ್ಷ ಹಳೆಯ ಪಾತ್ರೆಯಲ್ಲಿ ನೂಡಲ್ಸ್‌ ಅಂಟಿಕೊಂಡಿರೋದು ಪತ್ತೆಯಾದ ಬಳಿಕ ಪಾಸ್ತಾ ಚೀನಾದ ಖಾದ್ಯ ಎಂಬ ವಾದಕ್ಕೆ ಇನ್ನಷ್ಟು ಪುಷ್ಟಿ ದೊರಕಿದೆ.

ತರಕಾರಿ, ಆಹಾರ ಪದಾರ್ಥ ಕೆಡದಂತೆ ಇಡುವುದು ಹೇಗೆ?

ಮಿಸೊ
ಆಹಾರ ಇತಿಹಾಸಗಾರರ ಪ್ರಕಾರ ಮಿಸೊ, ಸೋಯಾ ಸಾಸ್‌ ಹಾಗೂ ಟೊಫೊ ಜಪಾನ್‌ ಮೂಲದ ಆಹಾರ ಪದಾರ್ಥಗಳಲ್ಲ. 6 ಮತ್ತು 7ನೇ ಶತಮಾನದಲ್ಲಿ ಇವು ಜಪಾನ್‌ ಜನರಿಗೆ ಪರಿಚಯಿಸಲ್ಪಟ್ಟವಷ್ಟೆ. ಆದ್ರೆ ಅದಕ್ಕೂ ಮೊದಲೇ ಚೀನಾದಲ್ಲಿ ಫರ್ಮೆನ್ಟೆಡ್‌ ಸೋಯಾಬಿನ್‌ ಪೇಸ್ಟ್‌ ರೂಪದಲ್ಲಿ ಇವು ಜನ್ಮ ತಾಳಿದ್ದು, ಜಿಯಾಂಗ್‌ ಎಂಬ ಹೆಸರಿನಿಂದ ಇಂದಿಗೂ ಜನಪ್ರಿಯತೆ ಗಳಿಸಿವೆ.

ಸುಶಿ
ಸುಶಿ ನಿಮ್ಮ ಫೇವರೇಟ್‌ ಡಿಸ್‌ ಆಗಿದ್ದು,ಈ ಕಾರಣಕ್ಕೆ ನೀವು ಜಪಾನೀಸ್‌ ಫುಡ್‌ ಲವರ್‌ ಎಂದು ನಿಮ್ಮನ್ನು ನೀವು ಕರೆದುಕೊಳ್ಳುತ್ತಿದ್ರೆ, ದಯವಿಟ್ಟು ನಿಲ್ಲಿಸಿಬಿಡಿ. ಏಕೆಂದ್ರೆ ಸುಶಿ ಮೊಟ್ಟ ಮೊದಲ ಬಾರಿಗೆ ಜನ್ಮ ಪಡೆದದ್ದು ಚೀನಾದಲ್ಲಿ! ಜಪಾನ್‌ ಆಹಾರ ಪದ್ಧತಿಯಲ್ಲಿ ಸುಶಿ ಪ್ರವೇಶ ಪಡೆಯೋ ಮೊದಲೇ ಸದರ್ನ್‌ ಚೀನಾ ಹಾಗೂ ಆಗ್ನೇಯ ಏಷ್ಯಾದ ಜನರು ಮೀನನ್ನು ಬೇಯಿಸಿದ ಅನ್ನದಲ್ಲಿ ಸಂರಕ್ಷಿಸೋದು ಹಾಗೂ ಉಪ್ಪಿನ ಕಾಯಿ ಮಾದರಿಯಲ್ಲಿ ದೀರ್ಘ ಕಾಲ ಬಾಳಿಕೆಗೆ ಯೋಗ್ಯವಾಗುವಂತೆ ಮಾಡೋ ವಿಧಾನ ತಿಳಿದಿದ್ದರು.

ಕಿವಿ ಹಣ್ಣು
ಕಿವಿ ಹಣ್ಣಿನ ಮೂಲ ನ್ಯೂಜಿಲೆಂಡ್‌ ಎಂದೇ ನಾವೆಲ್ಲ ಭಾವಿಸಿದ್ದೇವೆ. ಆದ್ರೆ ವಾಸ್ತವದಲ್ಲಿ ಕಿವಿ ಹಣ್ಣಿನ ತವರು ಚೀನಾ. 1904ರಲ್ಲಷ್ಟೇ ಈ ಹಣ್ಣು ನ್ಯೂಜಿಲೆಂಡ್‌ಗೆ ಪರಿಚಯವಾಯ್ತು. ಆ ಬಳಿಕ ಇದು ಅಲ್ಲಿನ ಪ್ರಮುಖ ಹಣ್ಣಾಗಿ ಗುರುತಿಸಲ್ಪಟ್ಟಿತು. ಕಿವಿ ಹಣ್ಣನ್ನು ಶೀತಲ ಸಮರ ಪ್ರಾರಂಭವಾಗೋ ತನಕ ಚೈನೀಸ್‌ ಗೂಸ್‌ಬೆರೀಸ್‌ ಎಂದೇ ಕರೆಯಲಾಗುತ್ತಿತ್ತು. 

ಬ್ರೆಡ್ ತಿಂದು, ಸೈಡ್ ಎಸೆಯೋ ಬದಲು ಈ ರುಚಿಯಾದ ತಿಂಡಿ ಮಾಡಿ

ಕೆಚ್‌ಅಪ್
ಚೀನಾ, ಬ್ರಿಟನ್‌ ಹಾಗೂ ಅಮೆರಿಕದ ಜಂಟಿ ಪ್ರಯತ್ನದ ಫಲವಾಗಿ ಕೆಚ್‌ಅಪ್ ಜನ್ಮ ತಾಳಿತು ಎಂಬುದು ಬಹುತೇಕರ ವಾದ. ಆದ್ರೆ ಕಿಚ್‌ಅಪ್‌ ಮೊದಲ ಬಾರಿಗೆ ಸಿದ್ಧಪಡಿಸಿದ್ದು ಯಾರೆಂದು ಇತಿಹಾಸದ ಪುಟ ತೆಗೆದು ನೋಡಿದ್ರೆ ಸಿಗೋ ಹೆಸರು ಚೀನಾ. ಹೌದು ಚೀನಾದಲ್ಲಿ ಮೊದಲಿಗೆ ಮೀನಿನ ಸಾಸ್‌ ಸಿದ್ಧಪಡಿಸಲಾಗಿತ್ತು. ಆ ನಂತರ ಇದೇ ಮಾದರಿಯಲ್ಲಿ ಬ್ರಿಟನ್‌ನಲ್ಲಿ ಟೊಮ್ಯಾಟೋ ಬಳಸಿ ಕಿಚ್‌ಅಪ್‌ ಸಿದ್ಧಪಡಿಸಿದ್ರು. ಈ ಟೊಮ್ಯಾಟೋ ಕೆಚ್‌ಅಪ್‌ಗೆ ಅಮೇರಿಕನ್ಸ್‌ ವಿನೆಗರ್‌ ಹಾಗೂ ಸಕ್ಕರೆ ಸೇರಿಸಿದರು.

ಬೂಝೆ
ಇದು ಅತ್ಯಂತ ಪುರಾತನ ಮದ್ಯ. ಚೀನಾದ 9 ಸಾವಿರ ವರ್ಷ ಹಳೆಯದಾದ ಹುಳಿ ಬರಿಸಿದ ಮದ್ಯದ ಮಾದರಿಯಲ್ಲಿ ಇದು ಸಿದ್ಧಗೊಂಡಿದೆ. ಈ ವೈನ್‌ ಅಥವಾ ಬಿಯರ್‌ನ್ನು ಅಕ್ಕಿ, ಜೇನು ಹಾಗೂ ಹಣ್ಣಿನಿಂದ ಸಿದ್ಧಪಡಿಸಲಾಗಿದೆ. 

click me!