ಬಿರಿಯಾನಿ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಅದ್ರಲ್ಲೂ ಭಾರತೀಯರಂತೂ ಸಂಡೇ ಬಂದ್ರೆ ಬಿರಿಯಾನಿ, ಮನೆಗೆ ಗೆಸ್ಟ್ ಬಂದ್ರೆ ಬಿರಿಯಾನಿ, ಏನಾದ್ರೂ ಸ್ಪೆಷಲ್ ಪ್ರೋಗ್ರಾಂ ಇದ್ರೆ ಬಿರಿಯಾನಿ. ಒಟ್ನಲ್ಲಿ ಬಿರಿಯಾನಿ ಇಲ್ಲದ ದಿನಗಳೇ ಇಲ್ಲ. ಆದ್ರೆ ಎಲ್ರೂ ಇಷ್ಟಪಡೋ ಈ ಬಿರಿಯಾನಿ, ಭಾರತದ ನಂಬರ್ ಒನ್ ಆಹಾರ ಅಲ್ಲ ಅನ್ನೋದು ನಿಮ್ಗೆ ಗೊತ್ತಿದ್ಯಾ?
ಭಾರತವು ವೈವಿಧ್ಯಮಯ ಆಹಾರಪದ್ಧತಿಯನ್ನು ಹೊಂದಿದೆ. ಒಂದೊಂದು ರಾಜ್ಯಗಳಲ್ಲೂ ಭಿನ್ನ-ವಿಭಿನ್ನವಾದ ರುಚಿಕರ ಆಹಾರ ಪದಾರ್ಥಗಳಿವೆ. ಟೇಸ್ಟಿಯಾಟ್ಲಾಸ್ 100 ಭಾರತೀಯ ಭಕ್ಷ್ಯಗಳ ಶ್ರೇಯಾಂಕವನ್ನು ಬಿಡುಗಡೆ ಮಾಡಿದೆ ಮತ್ತು 10 ಅತ್ಯಂತ ಜನಪ್ರಿಯ ಭಕ್ಷ್ಯಗಳ ಪಟ್ಟಿ ಇಲ್ಲಿದೆ. ಆದರೆ ಎಲ್ಲರ ಅಚ್ಚುಮೆಚ್ಚಿನ ಬಿರಿಯಾನಿ ಭಾರತದ ಟಾಪ್ ಒನ್ ಫುಡ್ ಅಲ್ವೇ ಅಲ್ಲ. ಮತ್ಯಾವುದು?
10. ದೋಸೆ
ದಕ್ಷಿಣ ಭಾರತದಲ್ಲಿ ಹೆಚ್ಚು ಫೇಮಸ್ ಆಗಿರುವುದು ದೋಸೆ. ಇದು ಮಿಶ್ರಿತ ನೆನೆಸಿದ ಅಕ್ಕಿ (Rice) ಮತ್ತು ಉದ್ದಿನಬೇಳೆ ಅಥವಾ ಕೆಲವೊಮ್ಮೆಇತರ ಧಾನ್ಯಗಳನ್ನು ಒಳಗೊಂಡಿದೆ. ಇದನ್ನು ರುಬ್ಬಿ, ರಾತ್ರಿಯಿಡೀ ಹಿಟ್ಟನ್ನು ಹುದುಗಿಸಿ ಬೆಳಗ್ಗೆ ರುಚಿಕರವಾದ ದೋಸೆಯನ್ನು ತಯಾರಿಸುತ್ತಾರೆ. ಗೋಲ್ಡನ್ ಬ್ರೌನ್ ಬಣ್ಣ ಮತ್ತು ಗರಿಗರಿಯಾಗುವವರೆಗೆ ಇದನ್ನು ಬೇಯಿಸಿ, ನಂತರ ಆಲೂಗಡ್ಡೆ (Potato) ಸಾಗು, ಚಟ್ನಿ, ಸಾಂಬಾರ್ ಮೊದಲಾದವುಗಳ ಜೊತೆಗೆ ಬಡಿಸಲಾಗುತ್ತದೆ.
ದಿನಕ್ಕೊಂದು ಈ ಕೆಂಪು ಹಣ್ಣು ತಿಂದ್ರೆ ಸಾಕು ಡಯಾಬಿಟಿಸ್ ಬೇಗ ಕಡಿಮೆಯಾಗುತ್ತೆ
9. ವಿಂದಾಲೂ
ಈ ಸುವಾಸನೆಯ ಮೇಲೋಗರವನ್ನು ಮಟನ್, ಚಿಕನ್, ಗೋಮಾಂಸ, ಹಂದಿಮಾಂಸ ಅಥವಾ ಸೀಗಡಿಯಂತಹ ಮಾಂಸದೊಂದಿಗೆ ತಯಾರಿಸಲಾಗುತ್ತದೆ. ವಿಂದಾಲೂ, ಗೋವಾ, ಕೊಂಕಣ ಮತ್ತು ಬ್ರಿಟನ್‌ನಲ್ಲಿ ಜನಪ್ರಿಯತೆಯನ್ನು ಹೊಂದಿದೆ. ಈ ಖಾದ್ಯವು ಮ್ಯಾರಿನೇಡ್ ಹಂದಿಮಾಂಸ, ಚಿಕನ್, ಗೋಮಾಂಸ, ಮಟನ್ ಅಥವಾ ಪನೀರ್ ಅನ್ನು ಒಳಗೊಂಡಿರುತ್ತದೆ, ಹುಣಸೆಹಣ್ಣು, ದಾಲ್ಚಿನ್ನಿ, ಏಲಕ್ಕಿ ಮತ್ತು ಮೆಣಸಿನಕಾಯಿಗಳಂತಹ ಭಾರತೀಯ ಮಸಾಲೆಗಳೊಂದಿಗೆ ಸಂಯೋಜಿಸಲಾಗುತ್ತದೆ.
8. ಸಮೋಸಾ
ಸಮೋಸಾ ಕೇವಲ ತಿಂಡಿ ಮಾತ್ರವಲ್ಲ, ಭಾರತೀಯರ ಪಾಲಿಗೆ ಎಮೋಶನ್ ಆಗಿದೆ. ಇದು ಮಸಾಲೆಯುಕ್ತ ಆಲೂಗಡ್ಡೆ (Potato), ಈರುಳ್ಳಿ, ಬಟಾಣಿ ಸ್ಟಫಿಂಗ್‌ನ್ನು ಒಳಗೊಂಡಿರುತ್ತದೆ. ಚಿಕನ್ ಮಾಂಸವನ್ನು ಸೇರಿಸಿ ಚಿಕನ್ ಸಮೋಸಾವನ್ನು ಸಹ ತಯಾರಿಸುತ್ತಾರೆ. ಮಧ್ಯ ಏಷ್ಯಾದಿಂದ ಹುಟ್ಟಿಕೊಂಡ ಸಮೋಸಾಗಳು ಪ್ರಾಚೀನ ವ್ಯಾಪಾರ ಮಾರ್ಗಗಳಲ್ಲಿ ಭಾರತಕ್ಕೆ ಬಂದವು. ಚಟ್ನಿಯೊಂದಿಗೆ ಬಿಸಿ ಬಿಸಿ ಸಮೋಸಾವನ್ನು ಸವಿಯಲು ಸಖತ್ತಾಗಿರುತ್ತದೆ.
7. ಕೂರ್ಮ
ಕೂರ್ಮ, ಭಾರತೀಯ ಆಹಾರಗಳಲ್ಲಿ ಹೆಚ್ಚು ಫೇಮಸ್ ಆಗಿದೆ. ಚಪಾತಿ, ರೋಟಿ, ಅನ್ನದ ಜೊತೆ ಇದನ್ನು ಸವಿಯುತ್ತಾರೆ. ಮೊಸರು (Curd), ಮಸಾಲೆಗಳು ಮತ್ತು ಕೊತ್ತಂಬರಿ, ಶುಂಠಿ, ಜೀರಿಗೆ ಬೀಜಗಳು, ಮೆಣಸಿನಕಾಯಿಗಳು ಮತ್ತು ಅರಿಶಿನದಂತಹ ಮಸಾಲೆಗಳೊಂದಿಗೆ ಇದನ್ನು ತಯಾರಿಸಲಾಗುತ್ತದೆ. ಇದು 1500 ರ ದಶಕದ ಮಧ್ಯಭಾಗದಲ್ಲಿ ಪರ್ಷಿಯನ್ ಮತ್ತು ಭಾರತೀಯ ಪಾಕಪದ್ಧತಿಯ ಸಮ್ಮಿಳನವಾಗಿ ಅಕ್ಬರ್‌ನ ರಾಜಮನೆತನದ ಅಡುಗೆಮನೆಯಲ್ಲಿ ಹುಟ್ಟಿಕೊಂಡಿತು ಎಂದು ನಂಬಲಾಗಿದೆ.
ತೂಕ ಹೆಚ್ಚಳಕ್ಕೆ ಕಾರಣ ಆಗೋದು ಇದೇ ಆಹಾರ, ನೀವೂ ತಿನ್ತಿದ್ದೀರಾ ಚೆಕ್ ಮಾಡ್ಕೊಳ್ಳಿ
6. ಥಾಲಿ
ಥಾಲಿ ಎಂಬ ಪದವು ಭಾರತೀಯ ಊಟ ಮತ್ತು ವಿವಿಧ ಭಕ್ಷ್ಯಗಳನ್ನು ಬಡಿಸಲು ಬಳಸಲಾಗುವ ಸುತ್ತಿನ ಲೋಹದ ತಟ್ಟೆಯನ್ನು ಸೂಚಿಸುತ್ತದೆ. ಇವುಗಳಲ್ಲಿ ಅಕ್ಕಿ, ಉದ್ದಿನಬೇಳೆ, ತರಕಾರಿಗಳು, ಚಟ್ನಿ, ಉಪ್ಪಿನಕಾಯಿ, ಪಾಪಡಮ್, ಸಿಹಿತಿಂಡಿಗಳು ಮತ್ತು ನೀವು ಇರುವ ಪ್ರದೇಶದ ವಿಶೇಷ ಆಹಾರ (Food) ಒಳಗೊಂಡಿರುತ್ತದೆ. ಥಾಲಿಯನ್ನು ಪ್ರದೇಶಗಳಿಗೆ ಅನುಗುಣವಾಗಿ ತಯಾರಿಸಲಾಗುತ್ತದೆ, ಇದು ರುಚಿಕರವಾದ ಸಸ್ಯಾಹಾರಿ ಮತ್ತು ಮಾಂಸಾಹಾರಿ ಎರಡೂ ಆಯ್ಕೆಯನ್ನು ನೀಡುತ್ತದೆ.
5.ಟಿಕ್ಕಾ
ಚಿಕನ್, ಮಟನ್, ಪನೀರ್ ಮೊದಲಾದ ಟಿಕ್ಕಾವು ಭಾರತದಲ್ಲಿ ಹೆಚ್ಚು ಫೇಮಸ್ ಆಗಿದೆ. ಮೊಸರು ಮತ್ತು ಸಾಂಪ್ರದಾಯಿಕ ಮಸಾಲೆಗಳ ಮಿಶ್ರಣದಲ್ಲಿ ಚಿಕನ್ ಅಥವಾ ಮಟನ್‌ನಂತಹ ಮೂಳೆಗಳಿಲ್ಲದ ಮಾಂಸ (Meat)ವನ್ನು ಮ್ಯಾರಿನೇಟ್ ಮಾಡಿ ಇದನ್ನು ತಯಾರಿಸುತ್ತಾರೆ. ಪ್ಲೇಟ್‌ಗಳಲ್ಲಿ ಸಿಜ್ಲಿಂಗ್‌ನಲ್ಲಿ ಬಡಿಸುವ ಈ ಭಕ್ಷ್ಯವು ತಂದೂರಿ ಚಿಕನ್‌ಗಿಂತ ಭಿನ್ನವಾಗಿದೆ.
4. ತಂದೂರಿ
ತಂದೂರಿ ಎಂಬುದು ಅಡುಗೆಯ ಒಂದು ಶೈಲಿಯಾಗಿದ್ದು, ಇದು ಮರದ ಅಥವಾ ಇದ್ದಿಲಿನಿಂದ ಇಂಧನ ತುಂಬಿದ ಸಿಲಿಂಡರಾಕಾರದ ಮಣ್ಣಿನ ಓವನ್‌ಗಳ ಬಳಕೆಯನ್ನು ಒಳಗೊಂಡಿರುತ್ತದೆ. ಮಧ್ಯಪ್ರಾಚ್ಯ ಬ್ರೆಡ್-ಬೇಕಿಂಗ್ ವಿಧಾನಗಳಿಂದ ಇದು ವಿಕಸನಗೊಂಡು, ತಂದೂರ್ ಅಡುಗೆಯು ಭಾರತಕ್ಕೆ ಹರಡಿತು, ಅಲ್ಲಿ ಮಾಂಸವನ್ನು ಮ್ಯಾರಿನೇಟ್ ಮಾಡಿ ಮಸಾಲೆಗಳನ್ನು ಸೇರಿಸಿ ಇದನ್ನು ತಯಾರಿಸಲಾಗುತ್ತಿದೆ.
3.ಬಟರ್ ಚಿಕನ್
ಮುರ್ಗ್ ಮಖಾನಿ ಎಂದೂ ಕರೆಯಲ್ಪಡುವ ಬಟರ್ ಚಿಕನ್ 1950 ರ ದಶಕದಲ್ಲಿ ದೆಹಲಿಯ ಮೋತಿ ಮಹಲ್ ರೆಸ್ಟೋರೆಂಟ್‌ನಲ್ಲಿ ಆವಿಷ್ಕರಿಸಲ್ಪಟ್ಟಿತು. ಅಡುಗೆಯವರು ಟೊಮ್ಯಾಟೊ ಮತ್ತು ಬೆಣ್ಣೆಯೊಂದಿಗೆ ಚಿಕನ್‌ನ್ನು ಮ್ಯಾರಿನೇಟ್ ಮಾಡಿ ಇದನ್ನು ತಯಾರಿಸುತ್ತಾರೆ. ದೇಶ-ವಿದೇಶಗಳಲ್ಲಿಯೂ ಭಾರತದ ಬಟರ್ ಚಿಕನ್ ಫೇಮಸ್ ಆಗಿದೆ.
2.ನಾನ್ ಬ್ರೆಡ್
ನಾನ್, ಚಪಾತಿಯಂತಿರುವ ಒಂದು ಬ್ರೆಡ್ ಆಗಿದೆ. ಇದನ್ನು ಮೊದಲು ಇಂಡೋ-ಪರ್ಷಿಯನ್ ಕವಿ ಅಮೀರ್ ಕುಶ್ರೌ ಅವರ 1300 ADಯಲ್ಲಿ ತಯಾರಿಸಿದರು. ಇದು ಮೈದಾ ಹಿಟ್ಟು, ಯೀಸ್ಟ್, ಮೊಟ್ಟೆ, ಹಾಲು, ಉಪ್ಪು ಮತ್ತು ಸಕ್ಕರೆಯಿಂದ ತಯಾರಿಸುವ ಆಹಾರವಾಗಿದೆ. ಇದನ್ನು ತಂದೂರ್ ಒಲೆಯಲ್ಲಿ ಬೇಯಿಸಲಾಗುತ್ತದೆ.
1. ಬಟರ್ ಗಾರ್ಲಿಕ್ ನಾನ್
ಬಟರ್ ಗಾರ್ಲಿಕ್ ನಾನ್, ಬೆಣ್ಣೆ ಅಥವಾ ತುಪ್ಪವನ್ನು ಸೇರಿಸಿ ತಯಾರಿಸುವ ನಾನ್ ಆಗಿದೆ.. ಬಟರ್ ಚಿಕನ್ ಮತ್ತು ಇತರ ಭಾರತೀಯ ಡಿಲೈಟ್‌ಗಳಂತಹ ಮೇಲೋಗರಗಳ ಜೊತೆಗೆ ಬಡಿಸಲಾಗುತ್ತದೆ. ಹೀಗಾಗಿಯೇ ಸುವಾಸನೆ ಭರಿತ ಬೆಣ್ಣೆ ಗಾರ್ಲಿಕ್ ನಾನ್ ಹಲವರ ಪ್ರಮುಖ ಆಯ್ಕೆಯಾಗಿದೆ.