ತಿರುಪತಿ ತಿರುಮಲ ಕ್ಷೇತ್ರಕ್ಕೆ ನೀವು ಹೋದರೆ, ಅಲ್ಲಿ ಬರಿಗಾಲಿನಲ್ಲಿ ಬೆಟ್ಟ ಹತ್ತುವವರನ್ನು ನೋಡಬಹುದು. ಶಬರಿಮಲೆಯಲ್ಲೂ ಕಾಡುದಾರಿಯಲ್ಲಿ ಬರಿಗಾಲಿನಲ್ಲಿ ಹೋಗುತ್ತಾರೆ. ಇದರ ಮರ್ಮ ಏನು?
ದೇವರ ದರ್ಶನಕ್ಕೆ ಹೋಗುವಾಗ ಬರಿಗಾಲಿನಲ್ಲಿ ಹೋಗಬೇಕು. ದೇವಾಲಯದ ಒಳಗೆ ಇದು ಸರಿ, ಆದರೆ ದೇವಾಲಯ ಇರುವ ಬೆಟ್ಟಕ್ಕೆ ಏರುವಾಗಲೂ ತುಂಬಾ ಮಂದಿ ಹೀಗೆ ಮಾಡುತ್ತಾರೆ. ಅದಕ್ಕೆ ಕಾರಣವೂ ಇದೆ. ಮೊದಲಿಗೆ ನಾವು ತಿರುಮಲ ತಿರುಪತಿ ಕ್ಷೇತ್ರಕ್ಕೆ ಹೋದರೆ - ಅಲಿಪಿರಿ ಕಾಲ್ನಡಿಗೆಯಲ್ಲಿ ಮೊದಲ ಬೆಟ್ಟದ ತಪ್ಪಲಿನಲ್ಲಿ - ಶ್ರೀ ವೆಂಕಟೇಶ್ವರ ಸ್ವಾಮಿ ದೇವರ ಪಾದಗಳನ್ನು ಅಲ್ಲಿ ಸ್ಥಾಪನೆ ಮಾಡಿದ್ದಾರೆ. ಇಲ್ಲಿ ನಮಗೆ ಶ್ರೀನಿವಾಸ ದೇವರ ಹಿತ್ತಾಳೆಯ ಚಪ್ಪಲಿಗಳನ್ನು ಕೊಡುತ್ತಾರೆ. ಇವುಗಳನ್ನು ನಮ್ಮ ತಲೆಗಳ ಮೇಲೆ ಇಟ್ಟುಕೊಂಡು, ನಾವು ಮೂರು ಬಾರಿ ಪ್ರದಕ್ಷಿಣೆ ಮಾಡಿ, ನಂತರ ಹಿಂತಿರುಗಿಸಿ, ದೇವರ ಪಾದಗಳ ಕಲ್ಲಿನ ವಿಗ್ರಹಕ್ಕೆ ಅರ್ಚಕರು ಮಂಗಳಾರತಿಯನ್ನು ಮಾಡಿ ಕೊಡುತ್ತಾರೆ. ಇದರ ನಂತರ ಶ್ರೀ ವೆಂಕಟೇಶ್ವರ ಸ್ವಾಮಿ ದೇವರ ಪಾದಗಳ ಬಳಿಯಲ್ಲಿ ಇಟ್ಟಿರುವ ದೊಡ್ಡ ಚಪ್ಪಲಿಗಳನ್ನು ತೆಗೆದುಕೊಂಡು, ಪೂಜಾರಿ ಅವರು ನಮ್ಮ ತಲೆಗಳ ಮೇಲೆ ಒಂದೆರಡು ಬಾರಿ ಹೊಡೆಯುತ್ತಾರೆ. ಇದು ಒಂದು ರೀತಿಯ "ಶರಣಾಗತಿ, ಅಥವಾ ಪ್ರಪತ್ತಿ" ಎಂದು ಹೇಳಬಹುದು.
ತಿರುಮಲ ಬೆಟ್ಟಗಳನ್ನು ಕಾಲ್ನಡಿಗೆಯಲ್ಲಿ ಹತ್ತುವಾಗ ಕೂಡ ಪಾದರಕ್ಷೆಗಳನ್ನು ಧರಿಸಬಾರದು, ಏಕೆಂದರೆ ಇಲ್ಲಿ ಒಂದೊಂದು ಬೆಟ್ಟಕ್ಕೆ ಅದರದ್ದೇ ಆದ ಪ್ರತ್ಯೇಕ ಮಹಿಮೆ ಉಂಟು. ಇವುಗಳಲ್ಲಿ - ಶೇಷಾಚಲ, ಸಿಂಹಾಚಲ, ಗರುಡಾಚಲ, ವೃಷಭಾಚಲ, ಅಂಜನಾಚಲ, ವೇಂಕಟಾಚಲ, ನಾರಾಯಣಚಲ, ಎನ್ನುವ ಬೆಟ್ಟಗಳನ್ನು ಹಾದಿ ಹೋಗಬೇಕು. ನಂತರ ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿ ದೇವರ ದೇವಸ್ಥಾನದ ಆವರಣದಲ್ಲಿ ಇರುವ ನಾಲ್ಕು ಬೀದಿಗಳಲ್ಲಿ ಕೂಡ ಬರೀ ಕಾಲುಗಳಲ್ಲಿ ಚಪ್ಪಲಿ ಹಾಕಿಕೊಳ್ಳದೇ ನಡೆಯಬೇಕು ಎನ್ನುವ ನಿಯಮ ಉಂಟು. ಏಕೆಂದರೆ ಈ ರಥ ಬೀದಿಗಳಲ್ಲಿ ದೇವರ ಉತ್ಸವ ಮೂರ್ತಿಯನ್ನು /ಗಳನ್ನು ರಥಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ.
ಇನ್ನು ಶಬರಿಮಲೆಗೆ ಹೋಗುವ ಕನ್ನಿಸ್ವಾಮಿಗಳು ತಿಂಗಳುಗಟ್ಟಲೆ ಮೊದಲಿನಿಂದಲೇ ಅಯ್ಯಪ್ಪ ಮಾಲೆ ಧರಿಸಿ, ವ್ರತದಲ್ಲಿರುತ್ತಾರೆ. ಅವರು ಚಪ್ಪಲಿ ಮೆಟ್ಟುವುದೇ ಇಲ್ಲ. ಹೀಗಾಗಿ ಅವರು ಮಲೆ ಹತ್ತುವಾಗ ಚಪ್ಪಲಿ ಧರಿಸಿರಲು ಸಾಧ್ಯವಿಲ್ಲ.
ಮನೆಯಾಗಲಿ ಗುಡಿಯಾಗಲಿ ಸಾಮಾನ್ಯವಾಗಿ ಚಪ್ಪಲಿಯನ್ನು ಧರಿಸಿ ನಾವು ಒಳಗೆ ಹೋಗುವುದಿಲ್ಲ. ಏಕೆಂದರೆ ಚಪ್ಪಲಿಯನ್ನು ಧರಿಸಿ ಹೊರಗೆ ಎಲ್ಲೆಡೆ ಓಡಾಡುವುದರಿಂದ ಧೂಳು ಕಸ ಮಣ್ಣು ಅಂಟಿರುತ್ತದೆ. ಯಾವ ಸ್ಥಳದಲ್ಲಿ ಯಾವ ರೀತಿಯ ಶಕ್ತಿ ಇರುತ್ತದೆ ಎಂದು ಹೇಳಲಾಗುವುದಿಲ್ಲ. ಆ ನಕಾರಾತ್ಮಕತೆ ಒಳಗೆ ಬರಬಾರದು ಎಂಬ ಕಾರಣಕ್ಕೆ ಚಪ್ಪಲಿಯನ್ನು ಹೊರಗೆ ಬಿಡುತ್ತೇವೆ. ಹಾಗೇ ಆ ಚಪ್ಪಲಿ ಒಂದು ರೀತಿಯ ಋಣಾತ್ಮಕ ಶಕ್ತಿಯನ್ನು ಹೊತ್ತಿರುತ್ತದೆ. ದೇವರಿಗೆ ನಮಸ್ಕಾರ ಮಾಡುವಾಗ ಅವುಗಳನ್ನು ಆಚೆಗಿಡುವುದು ವಿಹಿತ.
ಒಂದು ತಿಂಗಳ ಕಾಲ ಮಹಾಕುಂಭ ಮೇಳದಲ್ಲಿ ಭಾಗಿಯಾಗಲಿರುವ ದಿ. ಸ್ಟೀವ್ ಜಾಬ್ ಪತ್ನಿ
ಆದರೆ ದೇವರು ಎಲ್ಲವನ್ನು ಮೀರಿದ ಕ್ರಿಯಾತ್ಮಕ ಶಕ್ತಿ. ದೇವರಿಗೆ ಯಾವುದೇ ರೀತಿಯ ನೀತಿ ನಿಯಮಗಳು ರೀತಿ ರಿವಾಜುಗಳು ಇಲ್ಲ. ದೇವರಿಗೆ ನಮ್ಮ ಭಕ್ತಿಯೊಂದು ಬಿಟ್ಟು ಇನ್ನೇನು ಬೇಕಾಗಿಲ್ಲ. ಏನೇ ನಿಯಮಗಳು ಇದ್ದರೂ ನಮ್ಮ ಸಮಾಧಾನಕ್ಕೆ ನಾವು ಮನುಷ್ಯರು ಮಾಡಿರುವುದು ಅಷ್ಟೇ. ಅವರವರ ಭಾವಕ್ಕೆ ಅವರವರ ಭಕುತಿಗೆ ತೆರನಾಗಿ ಇರುತಿಹನು ಶಿವಯೋಗಿ ಎಂದು ಮುಪ್ಪಿನ ಷಡಕ್ಷರಿ ಅವರು ಹೇಳಿರುವಂತೆ ದೇವರು ನಾವು ಹೇಗೆ ನೋಡುತ್ತೇವೆ ಹಾಗೆ ನಮಗೆ ತೋರುತ್ತಾರೆ ಎನ್ನಬಹುದು.
ಸತ್ತ ದೇಹವನ್ನೂ ಬಿಡದ ಅಘೋರಿಗಳು ತಿನ್ನದ ಒಂದೇ ಒಂದು ಆಹಾರ ಮತ್ತು ಸಾಕುವ ಪ್ರಾಣಿ ಯಾವುದು?