ನಿಯಮಗಳನ್ನು ತಿಳಿಯದೆ ಕೈಯಿಂದ ರಕ್ಷಾ ದಾರ ತೆಗೆಯುವುದು ಅಥವಾ ಕಟ್ಟುವುದು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ರಕ್ಷೆಯನ್ನು ಕಟ್ಟುವಾಗ ಯಾವ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳಿ.
ಹಿಂದೂ ಧರ್ಮದಲ್ಲಿ, ಶುಭ ಕಾರ್ಯಗಳು ಮತ್ತು ಪೂಜೆಯ ಸಮಯದಲ್ಲಿ ರಕ್ಷಾ ದಾರ ಕಟ್ಟುವ ಸಂಪ್ರದಾಯವಿದೆ. ಇದನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ರಕ್ಷೆಯ ಹತ್ತಿ ದಾರದಲ್ಲಿ ದೇವರೇ ನೆಲೆಸಿದ್ದಾನೆ ಎಂಬ ನಂಬಿಕೆ ಇದೆ. ಅದನ್ನು ಕಟ್ಟುವ ಮೂಲಕ, ವ್ಯಕ್ತಿಯು ಎಲ್ಲಾ ವಿಪತ್ತುಗಳಿಂದ ರಕ್ಷಿಸಲ್ಪಡುತ್ತಾನೆ. ಇದಲ್ಲದೆ, ವ್ಯಕ್ತಿಯೊಳಗೆ ಸಕಾರಾತ್ಮಕತೆ ಬರುತ್ತದೆ ಮತ್ತು ಅವನ ಎಲ್ಲಾ ಕೆಲಸಗಳು ಪ್ರಾರಂಭವಾಗುತ್ತವೆ.
ಈ ದಾರವು ಕೆಂಪು ಮತ್ತು ಹಳದಿ ಬಣ್ಣದ್ದಾಗಿರಬಹುದು. ಕೆಲವು ದಿನಗಳ ನಂತರ ಅದರ ಬಣ್ಣವು ಮಸುಕಾಗಲು ಪ್ರಾರಂಭಿಸುತ್ತದೆ. ಅಂಥ ಪರಿಸ್ಥಿತಿಯಲ್ಲಿ, ಜನರು ಯೋಚಿಸದೆ ಈ ರಕ್ಷಾದಾರವನ್ನು ತಮ್ಮ ಕೈಯಿಂದ ತೆಗೆದು ಹಾಕುತ್ತಾರೆ. ಆದರೆ, ಹಿಂದೂ ಧರ್ಮದಲ್ಲಿ ರಕ್ಷಾ ದಾರ ಕಟ್ಟಲು ಮತ್ತು ತೆಗೆಯಲು ಕೆಲವು ನಿಯಮಗಳಿವೆ. ಈ ನಿಯಮಗಳನ್ನು ತಿಳಿಯದೆ ರಕ್ಷಾ ದಾರ ತೆಗೆಯುವುದು ಅಥವಾ ಕಟ್ಟುವುದು ಮಂಗಳಕರವಲ್ಲ. ರಕ್ಷೆ ಕಟ್ಟುವಾಗ ಮತ್ತು ತೆಗೆಯುವಾಗ ಯಾವ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳಿ.
ನಿಮ್ಮ ಕೈಯಲ್ಲಿ ರಕ್ಷಾ ದಾರ ಕಟ್ಟಿಕೊಳ್ಳುವಾಗ ಈ ತಪ್ಪುಗಳನ್ನು(rules) ಮಾಡಬೇಡಿ, ಅದರ ನಿಯಮಗಳನ್ನು ತಿಳಿದುಕೊಳ್ಳಿ.
ರಕ್ಷಾ ದಾರ(Kalava) ಕಟ್ಟುವುದರ ಮಹತ್ವ: ಧಾರ್ಮಿಕ ನಂಬಿಕೆಗಳ ಪ್ರಕಾರ ರಕ್ಷಾದಾರವನ್ನು ಕೈಯಲ್ಲಿ ಕಟ್ಟುವುದರಿಂದ ಜೀವನದಲ್ಲಿ ಎದುರಾಗುವ ತೊಂದರೆಗಳು ದೂರವಾಗುತ್ತವೆ. ಇದನ್ನು ಧರಿಸುವುದರಿಂದ ಧನಾತ್ಮಕ ಶಕ್ತಿ ಹರಡುತ್ತದೆ. ಶುಭ ಕಾರ್ಯಗಳಲ್ಲಿ ರಕ್ಷಾ ದಾರ ಕಟ್ಟುವ ಸಂಪ್ರದಾಯವಿದೆ. ಇದರಿಂದ ದೇವರ ಶ್ರೀ ರಕ್ಷೆ ಸದಾ ಜೊತೆಗಿದ್ದು ಹಿಂಬಾಲಿಸುತ್ತದೆ.
ಜ್ಯೋತಿರ್ಲಿಂಗ ಸರಣಿ: ಪರ್ವತದ ಕೋರಿಕೆ ಈಡೇರಿಸಲು ಉದ್ಭವವಾದ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ..
ರಕ್ಷಾ ದಾರಕ್ಕೆ ಸಂಬಂಧಿಸಿದ ನಿಯಮಗಳು
ಯಾವ ಕೈಯಲ್ಲಿ ದಾರ ಕಟ್ಟಬೇಕು?
ಪುರುಷರು ತಮ್ಮ ಬಲಗೈಯಲ್ಲಿ ರಕ್ಷೆಯನ್ನು ಕಟ್ಟಿಕೊಳ್ಳಬೇಕು. ಅವಿವಾಹಿತ ಹೆಣ್ಣುಮಕ್ಕಳು ಬಲಗೈಯಲ್ಲಿ ರಕ್ಷಾ ದಾರವನ್ನೂ, ವಿವಾಹಿತ ಸ್ತ್ರೀಯರು ಎಡಗೈಯಲ್ಲಿ ರಕ್ಷೆಯನ್ನು ಕಟ್ಟಿಕೊಳ್ಳಬೇಕು. ರಕ್ಷಾ ದಾರ ಕಟ್ಟುವಾಗ ಮುಷ್ಠಿಯನ್ನು ಯಾವಾಗಲೂ ಮುಚ್ಚಿಕೊಂಡು ಇನ್ನೊಂದು ಕೈ ತಲೆಯ ಮೇಲಿರಬೇಕು ಎಂಬುದನ್ನು ನೆನಪಿನಲ್ಲಿಡಿ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.