Sexy zodiac Signs: ನಿಮ್ಮ ರಾಶಿಚಕ್ರಕ್ಕೆ ಯಾವುದು ಸೂಕ್ತ?

By Suvarna News  |  First Published Nov 27, 2021, 4:50 PM IST

ಪ್ರತಿಯೊಬ್ಬ ವ್ಯಕ್ತಿಗೂ ಸೆಕ್ಸಿ' ಎಂಬುದರ ವಿವರಣೆ ಬೇರೆ ಬೇರೆ. ಒಬ್ಬೊಬ್ಬರಿಗೆ ಸೆಕ್ಸಿಯಾಗಿ ಕಂಡದ್ದು ಇನ್ನೊಬ್ಬರಿಗೆ ಆ ಥರಾ ಕಾಣಿಸಲಾರದು. ಬನ್ನಿ ನಿಮಗೇನು ಸೆಕ್ಸಿ, ನೋಡಿ.
 


ಮನುಷ್ಯನ ಗುಣ ಸ್ವಭಾವಗಳು ಅವನು ಜನಿಸಿದ ರಾಶಿ ಚಕ್ರಗಳ ಮೇಲೆ ಅವಲಂಬಿತವಾಗಿರುತ್ತದೆ, ಎಂಬುವುದು ಎಲ್ಲರಿಗೂ ಗೊತ್ತು. ಪ್ರತಿಯೊಬ್ಬರ ಗುಣ, ಇಷ್ಟ-ಕಷ್ಟಗಳು ಜನ್ಮ ನಕ್ಷತ್ರ ಹಾಗೂ ಜಾತಕದ ಮೇಲೆ ಬೀರುವ ಅನ್ಯ ಗ್ರಹಗಳ ಪ್ರಭಾವದಿಂದ ಬದಲಾಗುತ್ತಲೇ ಇರುತ್ತೆ. ಅಷ್ಟಕ್ಕೂ ಯಾವ ರಾಶಿಯವರು ಎಂಥ ವ್ಯಕ್ತಿಯನ್ನು ಇಷ್ಟಪಡುತ್ತಾರೆ. ಅವರ ದೃಷ್ಟಿಯಿಂದ ಆಕರ್ಷಿತರಾಗೋದು ಅಂದ್ರೇನು? ಯಾವುದಕ್ಕೆ ಹೆಚ್ಚು ಆಕರ್ಷಿತರಾಗಿರುತ್ತಾರೆಂಬುದನ್ನು ತಿಳಿಯಲು ಓದಿ...

ಮೇಷ ರಾಶಿ (Aries)
ಹೊಸದನ್ನು ಪ್ರಯತ್ನಿಸಲು ಬಯಸುವ ವರ್ತನೆ ಇವರಿಗೆ ಸದಾ ಮಾದಕವಾಗಿ ಕಾಣುತ್ತದೆ. ತಮ್ಮ ಸಂಗಾತಿಯಲ್ಲಿ ಇಂಥ ಸದಾ ಅಡ್ವೆಂಚರಸ್ ಆಗಿರುವ ಗುಣವನ್ನು ಇವರು ಪ್ರೀತಿಸುತ್ತಾರೆ, ಬಯಸುತ್ತಾರೆ.

ವೃಷಭ ರಾಶಿ (Taurus)
ನಿರ್ಬಂಧಗಳಿಲ್ಲದೆ ತಮ್ಮನ್ನು ಕಾಣುವುದು ಇವರನ್ನು ಆಕರ್ಷಿಸುತ್ತದೆ. ಸಂಗಾತಿ ಬೆತ್ತಲಾಗಿರುವುದು ಕೂಡ ಇವರ ಸೆಕ್ಸಿತನಕ್ಕೆ ಇನ್ನಷ್ಟು ಸೇರಿಸುತ್ತದೆ. ಸೆಕ್ಸ್ ಎಂಬುದು ಇವರಿಗೆ ಸದಾ ಆಕರ್ಷಣೆಯ ವಿಷಯ.

ಮಿಥುನ ರಾಶಿ (Gemini)
ಇವರಿಗೆ, ಮಾದಕತೆ ಎಂದರೆ ಅಪಾಯಗಳನ್ನು ಮೈಮೇಲೆ ತೆಗೆದುಕೊಳ್ಳಲು ಇಷ್ಟಪಡುವುದು. ಅಂಥ ಸಂಗಾತಿಯಲ್ಲಿ ಇವರು ಮೈಥುನವನ್ನು ಅಪೇಕ್ಷೆಪಡುತ್ತಾರೆ.

Tap to resize

Latest Videos

Happiness: ಈ ರಾಶಿಯವರಿಗೆ ಇದೇ ದಾರಿ!

ಕಟಕ ರಾಶಿ (Cancer)
ಕರ್ಕಾಟಕ ರಾಶಿಯವರು ಆಳವಾಗಿ ನಂಬಬಹುದಾದ ವ್ಯಕ್ತಿಯನ್ನು ಆಕರ್ಷನ ಎಂದು ಕಂಡುಕೊಳ್ಳುತ್ತಾರೆ. ಯಾವುದೇ ವ್ಯಕ್ತಿ ನಂಬಲರ್ಹ ಎಂದು ಕಂಡುಬಂದರೆ ಸಾಕು, ಅಂಥವರು ಇವರ ಸಂಗಾತಿ ಆಗಬಲ್ಲರು. 

ಸಿಂಹ ರಾಶಿ (Leo)
ಇವರಿಗೆ, ಬೇರೆ ವ್ಯಕ್ತಿಯು ಇವರನ್ನು ಮಾದಕವಾಗಿ ಕಂಡುಕೊಂಡಾಗ ಮತ್ತು ಅದನ್ನು ಆಗಾಗ್ಗೆ ವ್ಯಕ್ತಪಡಿಸಿದಾಗ ಇವರಿಗೆ ಸೆಕ್ಸಿ ಅನಿಸುತ್ತದೆ. ಆಗ ಇವರು ಅವರತ್ತ ಬಹಳಷ್ಟು ಆಕರ್ಷಿತರಾಗುತ್ತಾರೆ. 

ಕನ್ಯಾ ರಾಶಿ (Virgo)
ಕನ್ಯಾ ರಾಶಿಯವರು ಬೇರೊಬ್ಬರಿಂದ ನಿಯಂತ್ರಣಕ್ಕೊಳಗಾಗುವುದನ್ನು ಪ್ರೀತಿಸುತ್ತಾರೆ. ಅವರ ಸಂಗಾತಿ ಅವರನ್ನು ಮೆಚ್ಚಿದಾಗ ಮತ್ತು ಅವರ ನಿಯಂತ್ರಣದ ಪ್ರಜ್ಞೆಯನ್ನು ಶ್ಲಾಘಿಸಿದಾಗ ಅದು ಆಕರ್ಷಕವೆನಿಸುತ್ತದೆ. 

ತುಲಾ ರಾಶಿ (Libra)
ನೀವು ಇವರೊಂದಿಗೆ ಇರುವ ವೇಳೆಯಲ್ಲಿ ಸಂತೋಷಪಟ್ಟರೆ, ಅದು ತುಲಾ ರಾಶಿಯವರಿಗೆ ಸಾಕಷ್ಟು ಮಾದಕವಾಗಿರುತ್ತದೆ. ನೀವು ಅವರಿಗೆ ನೀಡುವ ಅಹಂಕಾರದ ಬೂಸ್ಟ್ ಚೆನ್ನಾಗಿ ಕೆಲಸ ಮಾಡುತ್ತದೆ.

ವೃಶ್ಚಿಕ ರಾಶಿ (Scorpio)
ಈ ರಾಶಿಯ ಜನರು ತಮ್ಮ ಮಾದಕತೆಯ ಗುಟ್ಟನ್ನು ವ್ಯಕ್ತಪಡಿಸುವುದಿಲ್ಲ. ಇವರು ಆ ವಿಷಯದಲ್ಲಿ ಪ್ರಬಲ. ನೀವು ಅವರಿಗೆ ಅವಕಾಶ ನೀಡಿದಾಗ ಮಾತ್ರ ಅವರು ಆ ವ್ಯಕ್ತಿತ್ವವನ್ನು ತೋರಿಸುತ್ತಾರೆ. ಹಾಗೆ ಇರಲು ಬಿಡುವುದೇ ಇವರಿಗೆ ಮಾದಕ.

ಧನು ರಾಶಿ (Sagittarius)
ತುಂಬಾ ಚಂದದ, ಮುಕ್ತ ಮನಸ್ಸಿನ ನಗು, ಬಾಗಿಲಿನ ಹಿಂದೆ ಕೊಡುವ ಮುತ್ತು, ಬೆಡ್‌ಶೀಟ್‌ ಕೆಳಗಿನ ತುಂಟಾಟಗಳು ಇವರಲ್ಲಿ ತುಂಬಾ ಸ್ಫೂರ್ತಿಯನ್ನು ತುಂಬಿಸುವ ಮಾದಕ ವಿಷಯಗಳಾಗಿವೆ. 

ಮಕರ ರಾಶಿ (Capricorn)  
ತಮ್ಮ ಸಾಂಗತ್ಯವೇ ಈ ರಾಶಿಚಕ್ರದವರಿಗೆ ಮಾದಕವಾಗಿ ಕಾಣುತ್ತದೆ. ಜನರು ತಮ್ಮ ಒಡನಾಟದ ಬಗ್ಗೆ ಅಸೂಯೆ ಹೊಂದಬೇಕೆಂದು ಅವರು ಬಯಸುತ್ತಾರೆ ಮತ್ತು ಅದು ಅವರನ್ನು ಪ್ರಚೋದಿಸುತ್ತದೆ.

ಕುಂಭ ರಾಶಿ (Aquarius)
ಕುಂಭ ರಾಶಿಯವರು ತಮ್ಮ ಮನಸ್ಸನ್ನು ಉತ್ತೇಜಿಸುವವರೊಂದಿಗೆ ಮತ್ತು ತಾವು ಯಾರ ಜೊತೆಗಿದ್ದಾಗ ಆಕರ್ಷಕವಾಗಿ ಕಾಣಸುತ್ತೇವೋ ಅಂಥವರನ್ನು ಮಾದಕ ಎಂದು ಪರಿಗಣಿಸುತ್ತಾರೆ. 

ಮೀನ ರಾಶಿ (Pisces)
ಇವರು ಆದರ್ಶ ಪ್ರೀತಿ ಹಾಗೂ ಕಾಮದ ಹುಡುಕಾಟದಲ್ಲಿರುತ್ತಾರೆ. ತಮ್ಮ ಸಾಂಗತ್ಯದ ವ್ಯಕ್ತಿಯಲ್ಲಿ ಸೂಪರ್‌ಮ್ಯಾನ್‌ ಥರದ ಮೈಕಟ್ಟು ಮತ್ತು ವರ್ಚಸ್ಸು ಇದ್ದರೆ ಇವರಿಗೆ ಸೆಕ್ಸಿಯಾಗಿ ಫೀಲ್ ಆಗುತ್ತದೆ. 

Hindu Wedding Ritual: ಪತಿ-ಪತ್ನಿ ಜೊತೆಯಾಗಿಡುವ ಏಳು ಹೆಜ್ಜೆಗಳ ಅರ್ಥವೇನು?

 

click me!