ಕೈಗೆ ಕಟ್ಟುವ ರಕ್ಷಾ ದಾರ ತೆಗೆಯೋಕೂ ಇದೆ ನಿಯಮ!

By Suvarna News  |  First Published Aug 11, 2022, 3:55 PM IST

ಶುಭ ಕಾರ್ಯಗಳಲ್ಲಿ ಕೈಗೆ ಕಲವ ದಾರ ಕಟ್ಟುವ ಸಂಪ್ರದಾಯ ಅನೇಕ ಕಡೆ ಇದೆ. ಕೆಲವರು ದೇವಸ್ಥಾನಗಳಿಗೆ ಹೋದಾಗ ಅದನ್ನು ಕಟ್ಟಿಕೊಳ್ತಾರೆ. ಕಲವ ದಾರ ಮಂಗಳಕರ ದಾರ. ಆದ್ರೆ ಅದನ್ನು ಮನಸ್ಸಿಗೆ ಬಂದಂತೆ ಕಟ್ಟಿಕೊಳ್ಳುವುದು ಅಥವಾ ಬಿಚ್ಚುವುದು ಸೂಕ್ತವಲ್ಲ.
 


ಹಿಂದೂ ಧರ್ಮದಲ್ಲಿ ಯಾವುದೇ ಶುಭ ಕಾರ್ಯ, ಪೂಜೆ ಇತ್ಯಾದಿ ಮಾಡುವಾಗ ಕೈಗೆ ಕಲವ ದಾರ ಕಟ್ಟಿಕೊಳ್ಳುತ್ತಾರೆ. ಮನೆಯಲ್ಲಿ ನಡೆಯುವ ಪ್ರತಿಯೊಂದು ಸಣ್ಣ ಪೂಜೆಯಲ್ಲಿಯೂ ಕಲವ ದಾರಕ್ಕೆ ವಿಶೇಷ ಮಹತ್ವವಿದೆ. ಹಿಂದೂ ಧರ್ಮದಲ್ಲಿ ಕಲವ ದಾರವನ್ನು ರಕ್ಷಾ ಸೂತ್ರ ಎಂದೂ ಕರೆಯುತ್ತಾರೆ. ಪೂಜೆಯ ಸಮಯದಲ್ಲಿ ಕೈಗೆ ಕಲವ ದಾರವನ್ನು ಕಟ್ಟಿಕೊಳ್ಳುವುದರಿಂದ ಜೀವನದಲ್ಲಿ ತೊಂದರೆ ಬರುವುದಿಲ್ಲವೆಂದು ನಂಬಲಾಗಿದೆ. ಧಾರ್ಮಿಕ ಗ್ರಂಥಗಳ ಪ್ರಕಾರ, ಕೈಯಲ್ಲಿ ಕಲವ ದಾರವನ್ನು ಕಟ್ಟಿದ್ರೆ ಬ್ರಹ್ಮ, ವಿಷ್ಣು, ಮಹೇಶ್ವರ ಮತ್ತು ಮೂರು ಮಹಾದೇವಿಗಳ ಆಶೀರ್ವಾದ ಸಿಗುತ್ತದೆಯಂತೆ.  ಸಂಪತ್ತು, ಬುದ್ಧಿವಂತಿಕೆ ಮತ್ತು ಶಕ್ತಿಯ ಮೂರು ದೇವತೆಗಳಾದ ತಾಯಿ ಲಕ್ಷ್ಮಿ, ತಾಯಿ ಸರಸ್ವತಿ ಮತ್ತು ಮಹಾಕಾಳಿಯ ಆಶೀರ್ವಾದ ಸಿಗಲಿದೆ ಎಂದು ನಂಬಲಾಗಿದೆ. 

ಮೂರು ಬಣ್ಣ (Color) ದ ದಾರ (Thread) ಗಳನ್ನು ಸೇರಿಸಿ ಕಲವ (Kalaw) ದಾರ ಮಾಡಲಾಗುತ್ತದೆ. ಕೆಲವು ಬಾರಿ ಐದು ಬಣ್ಣದ ದಾರ ಸೇರಿಸಿ ಕಲವ ದಾರ ಸಿದ್ಧಪಡಿಸಲಾಗುತ್ತದೆ. ನೀಲಿ ಮತ್ತು ಬಿಳಿ ಬಣ್ಣದ ದಾರವನ್ನು ಬಳಸ್ತಾರೆ. ಮೂರು ದಾರ ತ್ರಿಮೂರ್ತಿಗಳ ಸಂಕೇತವಾದ್ರೆ ಐದು ದಾರ ಐದು ದೇವರ ಸಂಕೇತವಾಗಿದೆ ಎಂದು ನಂಬಲಾಗಿದೆ.  ಕಲವ ದಾರವನ್ನು ಹತ್ತಿಯ ದಾರದಿಂದ ಮಾಡಲಾಗುತ್ತದೆ ಹಾಗಾಗಿಯೇ ಕೆಲವು ದಿನಗಳ ನಂತರ ಅದು ಸ್ವಲ್ಪ ಕರಗುತ್ತದೆ ಮತ್ತು ಸಡಿಲವಾಗುತ್ತದೆ. ಕಲವ ದಾರ ಬಣ್ಣ ಕಳೆದುಕೊಂಡಿದೆ ಇಲ್ಲವೆ ಹಳೆಯದಾಗಿದೆ, ಸಡಿಲವಾಗಿದೆ ಎನ್ನುವ ಕಾರಣಕ್ಕೆ ಅನೇಕ ಜನರು ಅದನ್ನು ಕೈನಿಂದ ತೆಗೆಯುತ್ತಾರೆ. ಅದನ್ನು ಕಸಕ್ಕೆ ಎಸೆಯುತ್ತಾರೆ. ಇಲ್ಲವೆ ಅಪವಿತ್ರ ಜಾಗದಲ್ಲಿ ಹಾಕ್ತಾರೆ. ಹಿಂದೂ ಧರ್ಮದಲ್ಲಿ ಕಲವ ದಾರ ಕಟ್ಟಿಕೊಳ್ಳಲು ಹಾಗೂ ಅದನ್ನು ತೆಗೆದು ಹಾಕಲು ಕೆಲವು ನಿಯಮಗಳಿವೆ. ಅದನ್ನು ಪಾಲಿಸಬೇಕಾಗುತ್ತದೆ. ಹಿಂದೂ ಧರ್ಮದಲ್ಲಿ, ಶುಭ ಕಾರ್ಯ, ಪೂಜೆ, ಹವನ, ಯಾಗ ಇತ್ಯಾದಿಗಳ ಸಮಯದಲ್ಲಿ ಕಲವನ್ನು ಕಟ್ಟಲಾಗುತ್ತದೆ. ಕಲವ ದಾರವನ್ನು ಧಾರ್ಮಿಕ ಪುರಾಣಗಳ ಪ್ರಕಾರ, ಮಂಗಳವಾರ ಮತ್ತು ಶನಿವಾರದಂದು ಮಾತ್ರ ಕೈಗೆ ಕಟ್ಟಬೇಕು. ಇದನ್ನು ಕಟ್ಟಿಕೊಳ್ಳುವುದರಿಂದ ಜೀವನದಲ್ಲಿ ಧನಾತ್ಮಕ ಶಕ್ತಿ ಬರುತ್ತದೆ ಎಂದು ನಂಬಲಾಗಿದೆ. 

Tap to resize

Latest Videos

ಕಲವ ದಾರವನ್ನು ಯಾವ ಕೈಗೆ ಕಟ್ಟಬೇಕು? : ಕಲವ ದಾರವನ್ನು ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಕೈಗಳಿಗೆ ಕಟ್ಟಲಾಗುತ್ತದೆ. ಪುರುಷರು ಮತ್ತು ಅವಿವಾಹಿತ ಹುಡುಗಿಯರನ್ನು ಬಲಗೈಗೆ ಕಲವ ದಾರವನ್ನು ಕಟ್ಟಿಕೊಳ್ಳಬೇಕು. ವಿವಾಹಿತ ಮಹಿಳೆಯ ಎಡಗೈಗೆ ಕಲವ ದಾರವನ್ನು ಕಟ್ಟಬೇಕು.

Vastu tips: ಈ ಐದು ವಸ್ತುಗಳನ್ನು ಮುಖ್ಯ ದ್ವಾರದ ಬಳಿ ಇಟ್ಟರೆ ಮನೆಗೆ ಸಂಪತ್ತು ಖಚಿತ!

ಕಲವ ದಾರ ಕಟ್ಟಿಕೊಳ್ಳುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ : ಕಲವ ದಾರವನ್ನು ಕಟ್ಟುವಾಗ ಕಟ್ಟುವ ಕೈಯನ್ನು ಮುಷ್ಠಿ ಕಟ್ಟಬೇಕು. ಹಾಗೆಯೇ ಇನ್ನೊಂದು ಕೈಯನ್ನು ತಲೆಯ ಮೇಲೆ ಇಡಬೇಕು ಎಂದು ನಂಬಲಾಗಿದೆ. ಅಲ್ಲದೆ ಕಲವ ದಾರವನ್ನು ಕೇವಲ ಮೂರು ಬಾರಿ ಸುತ್ತಿ ಕಟ್ಟಬೇಕು ಎಂಬುದನ್ನು ಕೂಡ ನೆನಪಿನಲ್ಲಿಡಬೇಕು. ಸಾಧ್ಯವಿಲ್ಲವೆಂದಾದ್ರೆ ಐದು ಬಾರಿ ಸುತ್ತಿ ಕಟ್ಟಬೇಕು.

ಕಲವ ತೆಗೆಯುವ ಮುನ್ನ ಇದನ್ನು ನೆನಪಿನಲ್ಲಿಡಿ : ಕೈಯಲ್ಲಿ ಕಲವ ದಾರನ್ನು ಕಟ್ಟಿಕೊಳ್ಳುವಾಗ ನಿಯಮಗಳನ್ನು ಪಾಲಿಸುವಂತೆ ಅದನ್ನು ಕೈನಿಂದ ತೆಗೆಯುವಾಗ್ಲೂ ನಿಯಮವನ್ನು ಪಾಲನೆ ಮಾಡ್ಬೇಕು. ಬೇಕೆನ್ನಿಸಿದಾಗ ಕಲವ ತೆಗೆಯುವುದು ಸೂಕ್ತವಲ್ಲ.  

ಶನಿ ಚಂದ್ರ ಯುತಿಯಿಂದ ವಿಷಯೋಗ! ಇಲ್ಲಿದೆ ಪರಿಹಾರ..

ಶಾಸ್ತ್ರಗಳ ಪ್ರಕಾರ, ಮಂಗಳವಾರ ಮತ್ತು ಶನಿವಾರವನ್ನು ಕಲವ ದಾರವನ್ನು ತೆಗೆಯಲು ಅತ್ಯಂತ ಮಂಗಳಕರ ದಿನಗಳು ಎಂದು ಪರಿಗಣಿಸಲಾಗಿದೆ. ಈ ದಿನ ಅದನ್ನು ತೆಗೆದು ಕೈಗೆ ಹೊಸ ಕಲವ ದಾರ ಕಟ್ಟಿಕೊಳ್ಳಬಹುದು. ನೀವು ಅದನ್ನು ಬೆಸ ಸಂಖ್ಯೆಯ ದಿನಗಳಲ್ಲಿಯೂ ಮಾಡಬಹುದು. ಮಂಗಳವಾರ, ಶನಿವಾರಗಳು ಬೆಸ ಸಂಖ್ಯೆಯ ದಿನಗಳಲ್ಲಿ ಬರುವುದಿಲ್ಲ ಎಂಬುದನ್ನು ನೆನಪಿಡಿ. ಹಳೆಯ ಕಲವ ದಾರವನ್ನು ಎಂದಿಗೂ ಎಸೆಯಬಾರದು. ಬದಲಿಗೆ ಅದನ್ನು ಅಶ್ವತ್ಥ ಮರದ ಕೆಳಗೆ ಇಡಬೇಕು ಎಂಬುದನ್ನು ನೆನಪಿನಲ್ಲಿಡಿ.
 

click me!