
ಯಾರು ಸಂಸಾರವನ್ನು ಸುಖವಾಗಿಟ್ಟುಕೊಂಡಿರುತ್ತಾರೋ, ಅವರು ಜೀವನದಲ್ಲಿ ಯಶಸ್ಸು ಕಾಣುತ್ತಾರೆ. ಹಾಗಂಥ ಯಾರ ದಾಂಪತ್ಯವೂ ಜಗಳವಿಲ್ಲದೇ ಇರೋದಿಲ್ಲ. ಆದರೆ, ಗಂಡ ಹೆಂಡತಿಯ ಪ್ರಬುದ್ಧತೆ ಹಾಗೂ ಕಷ್ಟಕ್ಕೆ ಸ್ಪಂದಿಸುವ ರೀತಿಯಿಂದ ಅವರ ಸಂಸಾರದಲ್ಲಿ ಸುಖ ನೆಲೆಸಿರುತ್ತದೆ ಅಷ್ಟೇ. ಸಮಸ್ಯೆ ಯಾರಿಗಿರೋಲ್ಲ ಹೇಳಿ? ಆದರೆ, ಅದಕ್ಕೆ ಹೇಗೆ ರಿಯಾಕ್ಟ್ ಮಾಡುತ್ತೀರಿ ಅನ್ನುವುದರ ಮೇಲೆ ನೆಮ್ಮದಿ, ಶಾಂತಿ ನೆಲೆಸುತ್ತದೆ. ಭೂಮಿಯಲ್ಲಿ ಬಹಳ ಗಟ್ಟಿಯಾದ ಬಂಧಗಳಲ್ಲಿ ಒಂದಾದ ಗಂಡ-ಹೆಂಡತಿ ಸಂಬಂಧ ಕಾಪಾಡಿಕೊಳ್ಳುವುದೊಂದು ಕಲೆ. ಇದೆಷ್ಟು ಬಲವಾಗಿರುತ್ತದೋ, ಬದುಕು ರಸಮಯ. ಇಲ್ಲಿ ಕೇವಲ ದೈಹಿಕ ಸಂಬಂಧ ಮಾತ್ರ ಮುಖ್ಯವಾಗೋಲ್ಲ. ಬದಲಾಗಿ, ಗಂಡ-ಹೆಂಡಿರ ನಡುವಿನ ಬಂಧ ಎಷ್ಟು ಗಟ್ಟಿಯಾಗಿದೆ ಎನ್ನುವುದರ ಮೇಲೆ ದಾಂಪತ್ಯದ ಸುಖ ಅಲಂಬಿತವಾಗಿರುತ್ತದೆ. ಯಾರ ಜೀವನದಲ್ಲಿ ದಾಂಪತ್ಯ ಸುಖವಿರುತ್ತದೋ, ಅವರ ಬಾಂಧವ್ಯವೂ ಗಟ್ಟಿಯಾಗಿರುತ್ತದೆ. ಅದನ್ನು ಸುಧಾರಿಸಲು ಏನು ಮಾಡಬೇಕು?
ಪ್ರೀತಿ(Love)- ಮದುವೆಗೂ ಮುಂಚೆ ಇದ್ದ ಪ್ರೀತಿ, ಮದುವೆಯಾದ ನಂತರ ಅದೆಲ್ಲಿ ಹೋಗುತ್ತದೋ ಎನ್ನೋದು ಮಿಲಿಯನ್ ಡಾಲರ್ ಪ್ರಶ್ನೆ. ಚಾಣಕ್ಯನ ನೀತಿ ಪ್ರಕಾರ, ಪ್ರೀತಿ ಎಲ್ಲ ಸಂಬಂಧಗಳ ಅತೀ ಮುಖ್ಯ ಕೊಂಡಿ. ಪ್ರೀತಿಯ ಕೊರತೆ ಇದ್ದಾಗ, ಸಂಬಂಧ ಹೇಗೇ ಇದ್ದರೂ ದುರ್ಬಲವಾಗುತ್ತದೆ. ಜೀವನದಲ್ಲಿ ಪ್ರೀತಿಯ ಕೊರತೆ ಇಲ್ಲವೆಂದರೆ, ಏನೂ ಬೇಕಾದರೂ ಸಾಧಿಸಬಲ್ಲವನಾಗಿರುತ್ತಾನೆ. ಅದರಲ್ಲಿಯೂ ದಾಂಪತ್ಯದಲ್ಲಿ ಪ್ರೀತಿಯೇ ಹೆಚ್ಚು ರೂಲ್ ಮಾಡೋದು. ಎಲ್ಲಿ ಪ್ರೀತಿ ಇರುತ್ತೋ, ಅಲ್ಲಿ ಲಕ್ಷ್ಮಿಯ ಅನುಗ್ರಹವೂ ಇರುತ್ತೆ. ಹಿಡಿದ ಕೆಲಸಗಳಲ್ಲಿ ಯಶಸ್ಸು ಸಿಗೋದು ಗ್ಯಾರಂಟಿ. ಅದಕ್ಕೆ ಇಬ್ಬರಲ್ಲಿಯೂ ಪ್ರೀತಿಯ ಒರತೆ ಬತ್ತದಂತೆ ನೋಡಿಕೊಳ್ಳಬೇಕು.
ಕಾಂಪ್ರೋಮೈಸ್ ಆಗಬೇಕು ನಿಜ, ಆದರೆ ಅದಕ್ಕೂ ಒಂದು ಇತಿ ಮಿತಿ ಬೇಡ್ವಾ?
ಸಮರ್ಪಣೆ(Dedication)- ಅರ್ಪಣಾ ಭಾವವಿಲ್ಲದ ದಾಂಪತ್ಯಕ್ಕೆಲ್ಲಿಯ ಬೆಲೆ ಹೇಳಿ? ಸಮರ್ಪಣೆ ಅಂದ್ರೆ ಒಬ್ಬರಿಗೊಬ್ಬರು ಅರ್ಪಿಸಿಕೊಳ್ಳಬೇಕು. ಕಷ್ಟದಲ್ಲಿ ಜೊತೆಯಾಗಬೇಕು. ಸೋತಾಗ ಹೀಯಾಳಿಸಬಾರದು. ಈ ಮನೋಭಾವವಿರೋ ದಂಪತಿಗಳು ತುಂಬಾ ಸ್ಟ್ರಾಂಗ್ ಎನಿಸಿಕೊಳ್ಳುತ್ತಾರೆ. ಇದಿದ್ದರೆ ಸಂಬಂಧದಲ್ಲಿ ಮಾಧುರ್ಯ ಹಾಗೂ ಶಕ್ತಿ ಹೆಚ್ಚುತ್ತೆ. ಪತಿ -ಪತ್ನಿ ನಡುವೆ ಸಮರ್ಪಣೆ ಇದ್ದಾಗ, ಪರಸ್ಪರರ ನ್ಯೂನತೆಯನ್ನು ಮರೆ ಮಾಚಬಹುದು. ಆದ್ದರಿಂದ ಈ ಸಂಬಂಧದಲ್ಲಿ (Relationship) ಪರಸ್ಪರರ ಬಗ್ಗೆ ಸಮರ್ಪಣಾ ಭಾವ ಮುಖ್ಯ. ಒಬ್ಬರಿಗೊಬ್ಬರು ಎಲ್ಲ ವಿಷಯದಲ್ಲೂ ಹೊಂದಿಕೊಂಡು ಸಮರ್ಪಣಾ ಭಾವ ತೋರುವುದು ಬಹಳ ಮುಖ್ಯ.
ಗೌರವ (Respect) - ಒಬ್ಬರಿಗೊಬ್ಬರನ್ನು ಪ್ರೀತಿಸುವ ಜೊತೆ ಗೌರವಿಸುವುದು ಅಷ್ಟೇ ಮುಖ್ಯ. ಯಾವತ್ತೂ ಇದರ ಕೊರತೆಯಾಗಬಾರದು. ಅಕಸ್ಮಾತ್ ಒಬ್ಬರು, ಇನ್ನೊಬ್ಬರಿಗೆ ಕೊಡುವ ಗೌರವ ಕಡಿಮೆಯಾದರೆ ಸಂಬಂಧ ಗಟ್ಟಿಯಾಗಿ ಉಳಿಯೋದು ಕಷ್ಟ. ಯಾವಾಗ ಒಬ್ಬರು ಮತ್ತೊಬ್ಬರನ್ನು Taken for Granted ಮಾಡಿಕೊಳ್ಳುತ್ತಾರೆ, ಆಗ ಸಹಜವಾಗಿಯ ಸಂಬಂಧ ಹಳಸುತ್ತೆ. ಯಾವಾಗ ಒಬ್ಬರಿಗೊಬ್ಬರು ಗೌರವಿಸಿಕೊಂಡು ಬದುಕುತ್ತಾರೋ, ಆ ದಂಪತಿಯನ್ನು ಮಕ್ಕಳು, ಸಂಬಂಧಿಗಳು ಹಾಗೂ ಸಮಾಜವೂ ಗೌರವಿಸುತ್ತದೆ. ಅದು ಬಿಟ್ಟು ಒಬ್ಬರಿಗೊಬ್ಬರು ನಾಲ್ಕು ಜನರ ಎದುರು ಹೀಯಾಳಿಸಿಕೊಳ್ಳುತ್ತಿದ್ದರೆ ಬದುಕು ಕಷ್ಟವಾಗುತ್ತದೆ. ನೆಮ್ಮದಿ ದೂರವಾಗುತ್ತದೆ. ಮಕ್ಕಳಿಂದಲೂ ಸಸಾರವಾಗುತ್ತಾರೆ. ಮೊದಲು ನಿಮ್ಮನ್ನು ನೀವು ಗೌರವಿಸಿಕೊಳ್ಳೋದ ಕಲಿತರೆ, ಎಲ್ಲರೂ ನಿಮ್ಮನ್ನು ಗೌರವಿಸುತ್ತಾರೆ.
ಒಟ್ಟಿನಲ್ಲಿ ದಾಂಪತ್ಯದಲ್ಲಿ ಎಲ್ಲವೂ ಸರಿಯೂ ಇರೋಲ್ಲ, ತಪ್ಪಾಗಿಯೂ ಇರೋಲ್ಲ. ಪ್ರತಿ ಬಾರಿಯೂ ತಪ್ಪಾದಾಗ ಮತ್ತೊಬ್ಬರ ಮೇಲೆ ಹಾಕುವುದು, ಸರಿ ಇದ್ದಾಗ ಕ್ರೆಡಿಟ್ ಅನ್ನು ತಾನೇ ತೆಗೆದುಕೊಳ್ಳುವುದನ್ನು ಮಾಡಿದ ಸ್ವಾರಸ್ಯವೇ ಇಲ್ಲವಾಗುತ್ತದೆ. ನಾನು ಎನ್ನುವುದರ ಬದಲಾಗಿ ನಾವು ಎನ್ನುವುದು ಬಂದರೆ ಮಾತ್ರ ಒಬ್ಬರಿಗೊಬ್ಬರು ಪ್ರೀತಿಸಲು, ಗೌರವಿಸಲು ಸುಲಭವಾಗುತ್ತದೆ. ಅದ್ಯಾವಾಗ ಒಬ್ಬರಿಗೊಬ್ಬರ ಮೇಲೆ ಪ್ರೀತಿ, ಗೌರವ ಹುಟ್ಟುತ್ತೋ ಆಗ ಎಲ್ಲ ಸಂಬಂಧವೂ ಚೆಂದ ಎನಿಸಿಕೊಳ್ಳುವುದರಲ್ಲಿ ಅನುಮಾನವೇ ಇಲ್ಲ.
ಹೆಂಡ್ತಿಯನ್ನ ಗೌರವಿಸಿ, ಸ್ಪೇಸ್ ಕೊಡಿ: ವಿವಾಹಿತರಿಗೆ ವಿಚ್ಛೇದಿತರ ಕಿವಿಮಾತು