ದಾವಣಗೆರೆ ಜಿಲ್ಲೆಯ ಗ್ರಾಮವೊಂದರಲ್ಲಿ ಎತ್ತರದ ಬೆಟ್ಟದಿಂದ ಸುಮಾರು 1 ಕೀ ಲೋ ಮೀಟರ್ ದೂರ ಕೆಳಮುಖವಾಗಿ ರಥೋತ್ಸವ ನಡೆಯುತ್ತದೆ. ಭಾರತ ದೇಶದಲ್ಲಿಯೇ ಬೆಟ್ಟದ ಮೇಲಿಂದ ಕೆಳ ಮುಖವಾಗಿ ನಡೆಯುವ ರಥೋತ್ಸವ ಅಪರೂಪಗಳಲ್ಲಿ ಅಪರೂಪ.
ವರದಿ: ವರದರಾಜ್, ದಾವಣಗೆರೆ
ದಾವಣಗೆರೆ (ಏ.17): ಜಿಲ್ಲೆಯಲ್ಲಿ ಜಾತ್ರೆಗಳ ಸುಗ್ಗಿ ಆರಂಭವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಎಲ್ಲೇ ಹೋದ್ರು ರಥೋತ್ಸವ (Rathotsava) ಜಾತ್ರೆ (Jatre) ಸಂಭ್ರಮ ವಾತವರಣ ಇದೆ. ದಾವಣಗೆರೆ (Davanagere) ಜಿಲ್ಲೆಯ ಗ್ರಾಮವೊಂದರಲ್ಲಿ ಎತ್ತರದ ಬೆಟ್ಟದಿಂದ ಸುಮಾರು 1 ಕೀಲೋ ಮೀಟರ್ ದೂರ ಕೆಳಮುಖವಾಗಿ ರಥೋತ್ಸವ ನಡೆಯುತ್ತದೆ. ಭಾರತ (India) ದೇಶದಲ್ಲಿಯೇ ಬೆಟ್ಟದ ಮೇಲಿಂದ ಕೆಳ ಮುಖವಾಗಿ ನಡೆಯುವ ರಥೋತ್ಸವ ಅಪರೂಪಗಳಲ್ಲಿ ಅಪರೂಪ. ಹೀಗೆ ಸಾವಿರಾರು ಜನರು ರಥೋತ್ಸವದಲ್ಲಿ ಭಾಗಿಯಾಗಿರುವುದು ಬೆಟ್ಟದ ಮೇಲಿಂದ ಭಕ್ತರು ಕೆಳಗಡೆ ರಥ ಎಳೆಯುತ್ತಿರುವುದು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕು ದೇವರಹಳ್ಳಿ ಗ್ರಾಮದಲ್ಲಿ.
ಈ ಗ್ರಾಮದ ಬೆಟ್ಟದಲ್ಲಿ ಶ್ರೀ ಲಕ್ಷ್ಮಿ ರಂಗನಾಥ ದೇಗುಲವಿದೆ (Sri Laksmiranganatha Temple). ಪ್ರತಿವರ್ಷ ಯುಗಾದಿ (Ugadi) ಬಳಿಕ ಸಾಂಪ್ರದಾಯಿಕವಾಗಿ ರಥೋತ್ಸವ ನಡೆಯುತ್ತದೆ. ಕಳೆದ 2 ವರ್ಷ ಕೋವಿಡ್ ಹಿನ್ನೆಲೆ ರಥೋತ್ಸವ ಸರಳವಾಗಿ ಆಚರಣೆ ಮಾಡಲಾಗಿತ್ತು. ಈ ಬಾರಿ ಅತ್ಯಂತ ಅದ್ದೂರಿಯಾಗಿ ಆಚರಣೆ ಮಾಡಲಾಗಿದ್ದು ಸಹಸ್ರಾರು ಭಕ್ತರು (Devotees) ಸಾಕ್ಷಿಯಾಗಿದ್ದಾರೆ. ಮುಂಜಾನೆಯಿಂದಲೇ ರಥಕ್ಕೆ ವಿಶೇಷ ಅಲಂಕಾರ ಮಾಡಿ ಶುಭ ಮೂಹೂರ್ತದಲ್ಲಿ ಭಕ್ತರು ರಥವನ್ನ ಎಳೆದರು. ಸುಮಾರು ಸಾವಿರ ಅಡಿಗೂ ಎತ್ತರವಿರುವ ಬೆಟ್ಟದ ಮೇಲಿಂದ ರಥವನ್ನ ಗ್ರಾಮದ ಪ್ರಮುಖ ಬೀದಿಗೆ ಎಳೆಯುತ್ತಾರೆ.
Ambedkar Jayanti 2022: ನಾಲಿಗೆಯ ಕುಂಚದಲ್ಲಿ ಅರಳಿತು ಸಮಾನತೆ ಸಾರಿದ ಬಾಬಾ ಸಾಹೇಬರ ಚಿತ್ರ
ಈ ರೀತಿಯಾಗಿ ಎಲ್ಲೂ ಬೆಟ್ಟದ ಮೇಲಿಂದ ರಥ ಎಳೆಯುವುದಿಲ್ಲ. ಇದೊಂದು ಅಪರೂಪದ ರಥೋತ್ಸವ ಎನ್ನುತ್ತಾರೆ ಭಕ್ತರು. ಇನ್ನೂ ಈ ರಥೋತ್ಸವಕ್ಕೆ ರಾಜ್ಯದ ನಾನಾ ಭಾಗ ಗಳಿಂದಲೂ ಭಕ್ತರು ಆಗಮಿಸುತ್ತಾರೆ. ಈ ರಥೋತ್ಸವದಲ್ಲಿ ಪಾಲ್ಗೊಂಡು ಪುನಿತರಾಗುತ್ತಾರೆ. ಪವಾಡವುಳ್ಳ ಈ ದೇವರ ರಥೋತ್ಸವ ಎನ್ನುವ ನಂಬಿಕೆ ಭಕ್ತರಲ್ಲಿದೆ. ಎರಡು ದಿನಗಳ ಕಾಲ ರಥೋತ್ಸವ ಜರುಗುತ್ತದೆ. ಮುಜುರಾಯಿ ಇಲಾಖೆಗೆ ಒಳಪಟ್ಟಿರುವ ಈ ದೇವಸ್ಥಾನ ಇನ್ನು ಅಭಿವೃದ್ಧಿಯಾಗಬೇಕು. ಜಾತ್ರೆ ಬಂದ ಭಕ್ತಾದಿಗಳಿಗೆ ಸೂಕ್ತ ಮೂಲಭೂತ ಸೌಕರ್ಯ ಕಲ್ಪಿಸಬೇಕೆಂಬುದು ಭಕ್ತ ಸಮೂಹದ ವ್ಯಕ್ತವಾಗಿದೆ.
ವಿಶಿಷ್ಟ ರಥೋತ್ಸವ ಅಡ್ಡಪಲ್ಲಕ್ಕಿಗೆ ನೋಟಿನ ಸಿಂಗಾರ: ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕು ಕೊಕ್ಕನೂರು ಗ್ರಾಮದಲ್ಲಿ ವಿಶಿಷ್ಟ ಅಡ್ಡಪಲ್ಲಕ್ಕಿ ಯೊಂದು ನಾಡಿನ ಗಮನ ಸೆಳೆದಿದೆ. ಆಂಜನೇಯ ಸ್ವಾಮಿ ಮೂರ್ತಿ ಹೊತ್ತ ಅಡ್ಡಪಲ್ಲಕ್ಕಿಗೆ ಗರಿ ಗರಿ ನೋಟಿನ ಕರೆನ್ಸಿ ಹೂವಿನ ರೀತಿ ಸಿಂಗಾರಗೊಂಡು ಕಂಗೊಳಿಸಿದೆ. ಹರಿಹರ ತಾಲ್ಲೂಕಿನ ಕೊಕ್ಕನೂರಿನಲ್ಲಿ ಪ್ರತಿವರ್ಷ ರಾಮನವಮಿ ನಂತರ ಸಾಂಪ್ರಾದಾಯಿಕವಾಗಿ ಗ್ರಾಮ ದೇವರು ಹನುಮಪ್ಪನ ಬ್ರಹ್ಮ ರಥೋತ್ಸವ ನಡೆಯುತ್ತದೆ. ಎರಡು ದಿನಗಳ ಕಾಲ ರಥೋತ್ಸವ ನಡೆದ ನಂತರ ಆಂಜನೇಯ ಸ್ವಾಮಿ ಮನೆ ಮನೆಗು ಭೇಟಿ ನೀಡುವ ಧಾರ್ಮಿಕ ಪದ್ಧತಿ ಇದೆ.
Davanagere: ರಥೋತ್ಸವದ ವೇಳೆ ವಿದ್ಯುತ್ ಶಾಕ್: ಓರ್ವ ಯುವಕ ಸಾವು
ಆಂಜನೇಯ ಸ್ವಾಮಿ ಉತ್ಸವ ಮೂರ್ತಿ ಅಡ್ಡಪಲ್ಲಕ್ಕಿ ಹೊತ್ತ ನೂರಾರು ಭಕ್ತರು ಮನೆ ಮನೆ ಬಳಿ ತೆರಳುತ್ತಾರೆ. ಈ ವೇಳೆ ಭಕ್ತರು ತಮ್ಮ ಶಕ್ತಾನುಸಾರ ನೋಟಿನ ಹರಕೆ ತೀರಿಸುವುದು ವಾಡಿಕೆ. ಐದು ರೂಪಾಯಿ ನೋಟಿನಿಂದ ಹಿಡಿದು 10 ,20, 50, 100, 500 ,2000 ರೂ ವರೆಗಿನ ಕರೆನ್ಸಿ ಹಾರಗಳನ್ನು ಅಡ್ಡಪಲ್ಲಕ್ಕಿಗೆ ಹರಕೆ ರೂಪದಲ್ಲಿ ಸಲ್ಲಿಸುತ್ತಾರೆ. ಪ್ರತಿ ಮನೆ ಬಳಿಯು ಭಕ್ತರು ನೋಟಿನ ಹಾರ ಹಾಕುತ್ತಾರೆ. ಹೀಗೆ ಗ್ರಾಮದ ಮೊದಲ ಬೀದಿಯಿಂದ ಹೊರಟ ಪಲ್ಲಕ್ಕಿ ಉತ್ಸವ ಇಡೀ ಗ್ರಾಮದ ಮನೆ ಮನೆಗು ಹೋಗುವ ವೇಳೆಗೆ ಆಂಜನೇಯ ಸ್ವಾಮಿ ಅಡ್ಡಪಲ್ಲಕ್ಕಿ ಉತ್ಸವ ಮುಗಿಯುವ ವೇಳೆಗೆ ಅಡ್ಡಪಲ್ಲಕ್ಕಿ ನೋಟಿನ ತೇರು ಆಗಿರುತ್ತದೆ.. ಗ್ರಾಮದಲ್ಲಿ ಆಂಜನೇಯ ಸ್ವಾಮಿ ಅಡ್ಡಪಲ್ಲಕ್ಕಿಯನ್ನು ನೋಡಿದವರಿಗೆ ನೋಟಿನ ಮೆರವಣಿಗೆ ಸಾಗುತ್ತದೆ ಎಂದು ಭಾಸವಾಗುತ್ತದೆ. ಹೂ ಹಣ್ಣು ಕಾಯಿ ಕರ್ಪೂರಕ್ಕಿಂತ ನೋಟಿನ ಅಲಂಕಾರ ದೇವರ ರಥೋತ್ಸವದ ವಿಶೇಷಗಳಲ್ಲಿ ಒಂದು.