Navratri: ದುರ್ಗೆ ಪೂಜೆ ವೇಳೆ ಈ ತಪ್ಪು ಮಾಡಿದ್ರೆ ಕೋಪಗೊಳ್ತಾಳೆ ತಾಯಿ

By Suvarna NewsFirst Published Sep 26, 2022, 12:36 PM IST
Highlights

ತಾಯಿ ದುರ್ಗೆಯ ಆರಾಧನೆ 9 ದಿನಗಳ ಕಾಲ ನಡೆಯಲಿದೆ. ಭಕ್ತರು ದೇವಿ ಕೃಪೆಗೆ ಪಾತ್ರರಾಗಲು ಆಕೆ ಪೂಜೆ, ಆರಾಧನೆಯಲ್ಲಿ ತೊಡಗಿದ್ದಾರೆ. ನವರಾತ್ರಿಯಲ್ಲಿ ಘಟಸ್ಥಾಪನೆ ಮಾಡುವವರು ಬಹಳಷ್ಟು ಎಚ್ಚರಿಕೆ ವಹಿಸಬೇಕು. ಇಲ್ಲವೆಂದ್ರೆ ಪೂಜೆಗೆ ತಕ್ಕ ಫಲ ಸಿಗುವುದಿಲ್ಲ.
 

ಆಶ್ವಯುಜ ಶುಕ್ಲ ಪಕ್ಷದ ಪಾಡ್ಯದಿಂದ ನವರಾತ್ರಿ ಶುರುವಾಗುತ್ತದೆ. ದಶಮಿಯಂದು ನವರಾತ್ರಿ ಮುಕ್ತಾಯಗೊಳ್ಳುತ್ತದೆ. ಸೆಪ್ಟೆಂಬರ್ 26ರಿಂದ ನವರಾತ್ರಿ ಶುರವಾಗಿದೆ. ದುರ್ಗೆಯ 9 ಅವತಾರಗಳನ್ನು ಈ ಸಂದರ್ಭದಲ್ಲಿ ಪೂಜೆ ಮಾಡಲಾಗುತ್ತದೆ. ನವರಾತ್ರಿ ಮೊದಲ ದಿನ ಶೈಲಪುತ್ರಿ ಅವತಾರವನ್ನು ಪೂಜಿಸಿದ್ರೆ ಎರಡನೇ ದಿನ ಬ್ರಹ್ಮಚಾರಿಣಿ ಅವತಾರ, ಮೂರನೇ ದಿನ ಚಂದ್ರ ಘಂಟ ದೇವಿ ಪೂಜೆ ಮಾಡಲಾಗುತ್ತದೆ. ನಾಲ್ಕನೇ ದಿನ ಕೂಷ್ಮಾಂಡ ದೇವಿ ಹಾಗೂ ಐದನೇ ದಿನ ಸ್ಕಂದ ಮಾತೆ ಪೂಜೆ ನಡೆಯುತ್ತದೆ. ಆರನೇ ದಿನ ಕಾತ್ಯಾಯನಿ ಆರಾಧನೆ ನಡೆದ್ರೆ ಏಳನೇ ದಿನ ಕಾಳ ರಾತ್ರಿ ಪೂಜೆ ನಡೆಯುತ್ತದೆ.  ನವರಾತ್ರಿಯ ಎಂಟನೇ ದಿನ ಮಹಾ ಗೌರಿಗೆ ಮೀಸಲಿದ್ದರೆ ಹತ್ತನೇ ದಿನ ಸಿದ್ಧಿ ಧಾತ್ರಿ ಪೂಜೆ ನಡೆಯುತ್ತದೆ. ನವರಾತ್ರಿ ಸಂದರ್ಭದಲ್ಲಿ ಭಕ್ತರು ಉಪವಾಸ ಮಾಡ್ತಾರೆ. ಘಟಸ್ಥಾಪನೆ ಮಾಡಿ, ತಾಯಿ ದುರ್ಗೆಯನ್ನು ಮನೆಗೆ ಆಹ್ವಾನಿಸುವ ಭಕ್ತರು, ಭಯ, ಭಕ್ತಿಯಿಂದ ದುರ್ಗೆ ಪೂಜೆ ಮಾಡುತ್ತಾರೆ. ಅನೇಕ ಬಾರಿ ನವರಾತ್ರಿ ಸಂದರ್ಭದಲ್ಲಿ ಭಕ್ತರು ತಿಳಿದೋ ತಿಳಿಯದೆಯೋ ಕೆಲ ತಪ್ಪುಗಳನ್ನು ಮಾಡ್ತಾರೆ. ಇದ್ರಿಂದ ದುರ್ಗೆ ಆಶೀರ್ವಾದ ಭಕ್ತರಿಗೆ ಸಿಗುವುದಿಲ್ಲ. ಇಂದು ನಾವು ನವರಾತ್ರಿಯಲ್ಲಿ ಏನು ಮಾಡ್ಬಾರದು ಎಂಬುದನ್ನು ನಿಮಗೆ ಹೇಳ್ತೇವೆ.

ನವರಾತ್ರಿ (Navratri) ಯಲ್ಲಿ ಅಪ್ಪಿತಪ್ಪಿಯೂ ಮಾಡ್ಬೇಡಿ ಈ ಕೆಲಸ :
ನವರಾತ್ರಿಯ ಈ ಶುಭ ಸಂದರ್ಭದಲ್ಲಿ ನೀವು ಘಟಸ್ಥಾಪನೆ (Ghatasthapana) ಮಾಡಿ ವ್ರತವನ್ನು ಮಾಡುತ್ತಿದ್ದರೆ, ಅಖಂಡ ಜ್ಯೋತಿಯನ್ನು ಬೆಳಗಿಸುತ್ತಿದ್ದರೆ ಮಹತ್ವದ ವಿಷ್ಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಯಾವುದೇ ಕಾರಣಕ್ಕೂ ಮನೆಯನ್ನು ಖಾಲಿ ಬಿಡಬಾರದು. ದೇವಿಯನ್ನು ಮಾತ್ರ ಮನೆಯಲ್ಲಿ ಬಿಟ್ಟು ಎಲ್ಲಿಗೂ ಹೋಗಬಾರದು. ಮನೆಯಲ್ಲಿ ಒಬ್ಬರಾದ್ರೂ ನವರಾತ್ರಿ ಮುಗಿಯುವವರೆಗೆ ಇರಬೇಕು. 

Samudrik Shastra: ಹುಬ್ಬುಗಳ ಆಕಾರದಿಂದ ಗುಣ ಅರಿಯಬಹುದು, ಹೇಗೆ ಗೊತ್ತಾ?

Latest Videos

ನವರಾತ್ರಿಯಲ್ಲಿ ಘಟಸ್ಥಾಪನೆ ಮಾಡುವ ಮೂಲಕ ಮಾತೆ ದುರ್ಗೆ (Durga)ಯನ್ನು ಆಹ್ವಾನಿಸಿದ್ದರೆ, ಬೆಳಗ್ಗೆ ಮತ್ತು ಸಂಜೆ ಆರತಿ ಮತ್ತು ಪೂಜೆ ಮಾಡುವುದನ್ನು ನೀವು ಮರೆಯಬಾರದು.

ನವರಾತ್ರಿಯಲ್ಲಿ ಘಟಸ್ಥಾಪನೆ ಮಾಡಿ ತಾಯಿ ಪೂಜೆ ಮಾಡುವವರು ಪ್ರತಿ ದಿನ ಯಾವ ದೇವಿಯ ಆರಾಧನೆ ಮಾಡಬೇಕು ಎಂಬುದನ್ನು ಅರಿತಿರಬೇಕು. ಹಾಗೆಯೇ ಆಯಾ ದಿನಕ್ಕೆ ತಕ್ಕ ಸಿಹಿಯನ್ನು ತಯಾರಿಸಿ, ತಾಯಿಗೆ ಅರ್ಪಿಸಬೇಕು.  ತಾಯಿಗೆ ಇಷ್ಟದ ಆಹಾರ ನೈವೇದ್ಯ ಮಾಡಿದ್ರೆ ಇಷ್ಟಾರ್ಥ ಈಡೇರುತ್ತದೆ. ಇಲ್ಲವೆಂದ್ರೆ ತಾಯಿ ಮುನಿಸಿಕೊಳ್ಳುತ್ತಾಳೆ. 

ನವರಾತ್ರಿ ಸಮಯದಲ್ಲಿ ಸ್ವಚ್ಛತೆ ಬಹಳ ಮುಖ್ಯ. ಮನೆ, ದೇವರ ಮನೆ ಶುದ್ಧವಾಗಿರುವಂತೆ ನೋಡಿಕೊಳ್ಳಬೇಕು. ಸೂರ್ಯೋದಯಕ್ಕಿಂತ ಮೊದಲೇ ಎದ್ದು, ನಿತ್ಯ ಕರ್ಮ ಮುಗಿಸಿ, ಶುದ್ಧ ಬಟ್ಟೆಯನ್ನು ಧರಿಸಬೇಕು. ಶುಭ್ರ ಬಟ್ಟೆಯನ್ನು ಧರಿಸಿ, ಶುದ್ಧ ಮನಸ್ಸಿನಿಂದ ತಾಯಿ ಪೂಜೆ ಮಾಡಬೇಕು. ಕೊಳಕಿದ್ದಲ್ಲಿ ತಾಯಿ ನೆಲೆಸುವುದಿಲ್ಲ. ಆಕೆಯ ಕೋಪಕ್ಕೆ ಇದು ಕಾರಣವಾಗುತ್ತದೆ. 

ನವರಾತ್ರಿ 9 ದಿನಗಳ ಕಾಲ ನೀವು ವ್ರತ ಮಾಡುತ್ತೀರಿ ಎಂದಾದ್ರೆ ಕಪ್ಪು ಬಟ್ಟೆಯನ್ನು ಧರಿಸಬೇಡಿ. ಹಾಗೆಯೇ ನವರಾತ್ರಿಯಲ್ಲಿ ಚರ್ಮದ ಬೆಲ್ಟ್ ಹಾಗೂ ಶೂಗಳನ್ನು ಕೂಡ ಧರಿಸಬೇಡಿ.  

ನವರಾತ್ರಿಯ ಸಮಯದಲ್ಲಿ ಕೂದಲು, ಗಡ್ಡ ಮತ್ತು ಉಗುರುಗಳನ್ನು ಕತ್ತರಿಸುವುದು ಅಶುಭವಾಗಿದೆ. ಇದ್ರಿಂದ ಮಂಗಳಕರ ಫಲ ನಿಮಗೆ ಪ್ರಾಪ್ತಿಯಾಗುವುದಿಲ್ಲ. 

ನವರಾತ್ರಿಯ 9 ದಿನಗಳ ಕಾಲ ಮನಸ್ಸು ಕಲುಶಿತಗೊಳ್ಳಬಾರದು. ಶುದ್ಧ ಮನಸ್ಸು, ಶಾಂತ ಮನಸ್ಸಿನಿಂದ ತಾಯಿ ಪೂಜೆ ಮಾಡ್ಬೇಕು. ಯಾರ ಜೊತೆಯೂ ಜಗಳ ಮಾಡಬಾರದು. ಕೋಪ ಮಾಡಿಕೊಳ್ಳಬಾರದು. 

ನವರಾತ್ರಿಯಲ್ಲಿ ಸಾತ್ವಿಕ ಆಹಾರ ಸೇವನೆ ಮಾಡಬೇಕು. ಈರುಳ್ಳಿ, ಬೆಳ್ಳುಳ್ಳಿ ಮತ್ತು ಮಾಂಸ,ಮದ್ಯದಂತಹ ತಾಮಸಿಕ ಆಹಾರವನ್ನು ಸೇವಿಸಬಾರದು. ನವರಾತ್ರಿಯಲ್ಲಿ ಧಾನ್ಯಗಳು ಮತ್ತು ಉಪ್ಪನ್ನು (Salt) ಸೇವಿಸದಿರುವುದು ಉತ್ತಮ ಎನ್ನಲಾಗುತ್ತದೆ. ಹಣ್ಣಿ (Fruits) ನ ಸೇವನೆ ಮಾಡುವುದು ಒಳ್ಳೆಯದು. 

ನವರಾತ್ರಿಯಲ್ಲಿ ವ್ರತ, ಉಪವಾಸ ಮಾಡುವವರು ಹಾಸಿಗೆ ಮೇಲೆ ಮಲಗಬಾರದು. ನೆಲದ ಮೇಲೆ ಮಲಗಬೇಕು. ಹಾಗೆಯೇ ಬ್ರಹ್ಮಚರ್ಯ ಪಾಲನೆ ಮಾಡಬೇಕು.  

ಇಂತಹ ಚಿಹ್ನೆಗಳು ಕೈಯಲ್ಲಿದ್ದರೆ, ಆ ವ್ಯಕ್ತಿ ಶ್ರೀಮಂತನಾಗೋದು ಖಚಿತ

ನೀವು ದುರ್ಗಾ ಚಾಲೀಸಾ ಅಥವಾ ದುರ್ಗಾ ಸಪ್ತಶತಿ ಓದುತ್ತಿದ್ದರೆ ಮಧ್ಯದಲ್ಲಿ ಯಾರ ಜೊತೆಯೂ ಮಾತನಾಡಬೇಡಿ. ಇದ್ರಿಂದ ನಿಮ್ಮ ಆರಾಧನೆ ಅಪೂರ್ಣವೆನ್ನಿಸಿಕೊಳ್ಳುತ್ತದೆ.  

click me!