Navratri: ನವರಾತ್ರಿ ಸಂದರ್ಭದಲ್ಲಿ ಈ ವಾಸ್ತು ಟಿಪ್ಸ್ ಫಾಲೋ ಮಾಡಿ

By Suvarna News  |  First Published Sep 20, 2022, 2:21 PM IST

ತಾಯಿ ದುರ್ಗೆ ಒಲಿಸಿಕೊಳ್ಳಲು ಭಕ್ತರು ನಾನಾ ಕೆಲಸಗಳನ್ನು ಮಾಡ್ತಾರೆ. ಪೂಜೆ, ಹೋಮಗಳು ನಡೆಯುತ್ತವೆ. ಆದ್ರೆ ದುರ್ಗೆ ಮಾತ್ರ ಭಕ್ತರಿಗೆ ಕರುಣೆ ತೋರುವುದಿಲ್ಲ. ಇದಕ್ಕೆ ವಾಸ್ತು ದೋಷವೂ ಕಾರಣ. ಹಾಗಾಗಿ ನವರಾತ್ರಿಯಲ್ಲಿ ಕೆಲ ವಾಸ್ತು ವಿಷ್ಯಗಳನ್ನು ನೆನಪಿಟ್ಟುಕೊಳ್ಳಬೇಕು. 
 


ನವರಾತ್ರಿ ಹಬ್ಬಕ್ಕೆ ಸಂಭ್ರಮದ ತಯಾರಿ ಜೋರಾಗಿದೆ. ಇದೇ ಸೆಪ್ಟೆಂಬರ್ 26ರಿಂದ ನವರಾತ್ರಿ ಶುರುವಾಗ್ತಿದೆ. ನವರಾತ್ರಿಯ 9 ದಿನ ತಾಯಿ ದುರ್ಗೆಯ ಆರಾಧನೆ ನಡೆಯುತ್ತದೆ. ಮನೆಯಲ್ಲಿ ನೆಲೆಸುವ ದೇವಿಯನ್ನು ಸಂತೃಪ್ತಿಗೊಳಿಸುವುದು ಭಕ್ತರ ಕೆಲಸ. ತಾಯಿ ಖುಷಿಯಾದ್ರೆ ಸಂತೋಷ, ಸಂಪತ್ತು ಮನೆಯಲ್ಲಿ ನೆಲೆಸುತ್ತದೆ. ಹಾಗಾಗಿ ನವರಾತ್ರಿಯಲ್ಲಿ ವಾಸ್ತು ಬಗ್ಗೆ ಹೆಚ್ಚು ಗಮನ ಹರಿಸಬೇಕು. ಇಂದು ನಾವು ನವರಾತ್ರಿಯಲ್ಲಿ ಯಾವೆಲ್ಲ ವಾಸ್ತುಗಳ ಬಗ್ಗೆ ಭಕ್ತರು ಗಮನ ನೀಡ್ಬೇಕು ಎಂಬುದನ್ನು ಹೇಳ್ತೇವೆ.

ನವರಾತ್ರಿ (Navratri) ಹಬ್ಬದ ವಾಸ್ತು (Vastu) ಸಲಹೆಗಳು : 
1. ಸ್ವಸ್ತಿಕ (Swastik) ಚಿಹ್ನೆ :
ಹಿಂದೂ ಧರ್ಮದಲ್ಲಿ  ಸ್ವಸ್ತಿಕ ಚಿಹ್ನೆಯನ್ನು ಕಲ್ಯಾಣ ಮತ್ತು ಮಂಗಳವೆಂದು ಹೇಳಲಾಗುತ್ತದೆ. ನವರಾತ್ರಿ ಮೊದಲ ದಿನ ಸ್ವಸ್ತಿಕ ಚಿಹ್ನೆಯನ್ನು ಬಿಡಿಸಬೇಕು. ಮನೆಯ ಮುಖ್ಯ ದ್ವಾರದ ಬಲ ಮತ್ತು ಎಡ ಬದಿಗಳಲ್ಲಿ ಅರಿಶಿನ ಮತ್ತು ಸುಣ್ಣದಿಂದ ಸ್ವಸ್ತಿಕ ಚಿಹ್ನೆಯನ್ನು ಬಿಡಿಸಬೇಕು. ಇದು ನಿಮ್ಮ ಮನೆಯ ಅಭಿವೃದ್ಧಿಗೆ ಕಾರಣವಾಗುತ್ತದೆ. 

Tap to resize

Latest Videos

undefined

2. ಈ ದಿಕ್ಕಿನಲ್ಲಿರಲಿ ದೇವಿ ಸ್ಥಾಪನೆ : ನವರಾತ್ರಿಯಲ್ಲಿ ದುರ್ಗಿಯ ಸ್ಥಾಪನೆ ಮಾಡಿ ಪೂಜೆ ಮಾಡುವವರು ನೀವಾಗಿದ್ದರೆ ಈಶಾನ್ಯ ಭಾಗದಲ್ಲಿ ದೇವಿ ವಿಗ್ರಹವನ್ನಿಡಬೇಕು. ಒಂದ್ವೇಳೆ ವಿಗ್ರಹ ಸ್ಥಾಪನೆ ಮಾಡುವುದಿಲ್ಲ ಎನ್ನುವವರು ಕಲಶವನ್ನು ಈಶಾನ್ಯ ದಿಕ್ಕಿನಲ್ಲಿಟ್ಟು ಪೂಜೆ ಮಾಡಿ. ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಸುಖ, ಸಮೃದ್ಧಿ ನೆಲೆಸುತ್ತದೆ.  

3. ಈ ಸ್ಥಳದಲ್ಲಿ ಮಾಡಿ ಹೋಮ : ನವರಾತ್ರಿಯಲ್ಲಿ ನೀವು ಹವನ ಮಾಡುವವರಿದ್ದರೆ ಅಗ್ನಿಯ ಸ್ಥಳವಾಗಿರುವ ಆಗ್ನೇಯ ದಿಕ್ಕಿನಲ್ಲಿ ಹವನ ಮಾಡ್ಬೇಕು. ನವರಾತ್ರಿಯಂದು ನಂದಾದೀಪ  ಬೆಳಗಿಸುವದಿದ್ದರೆ ಆಗ್ನೇಯ ದಿಕ್ಕಿನಲ್ಲಿಯೇ ಹಚ್ಚಬೇಕು. ಹೀಗೆ ಮಾಡಿದ್ರೆ ಶತ್ರುಗಳ ನಾಶ ಸುಲಭವಾಗುತ್ತದೆ.

4. ದೇವಿ ಆರತಿ ಹೀಗಿರಲಿ : ನವರಾತ್ರಿಯಲ್ಲಿ ತಾಯಿ ದುರ್ಗೆ ಪೂಜೆಯನ್ನು ಸೂರ್ಯಾಸ್ತದ ನಂತ್ರ ಮಾಡ್ಬೇಕು. 7 ಕರ್ಪೂರಗಳನ್ನು ಹಚ್ಚುವ ಮೂಲಕ ದೇವಿಗೆ ಆರತಿ ಬೆಳಗಬೇಕು. ಇದು ಮನೆಯಲ್ಲಿನ ಎಲ್ಲಾ ನಕಾರಾತ್ಮಕ ಶಕ್ತಿಯನ್ನು ನಾಶಪಡಿಸುತ್ತದೆ. ಸಂತೋಷಗೊಂಡ ಲಕ್ಷ್ಮಿ ಮನೆ ಪ್ರವೇಶ ಮಾಡ್ತಾಳೆ ಎಂದು ನಂಬಲಾಗಿದೆ. 

5.ನೈವೇದ್ಯ ಅರ್ಪಿಸುವ ವೇಳೆ ಚಪ್ಪಾಳೆ : ನವರಾತ್ರಿಯ ಸಮಯದಲ್ಲಿ ದುರ್ಗೆಗೆ ನೈವೇದ್ಯ ಅರ್ಪಿಸುವ ವೇಳೆ ಗಂಟೆ ಬಾರಿಸಬೇಕು. ಇಲ್ಲವೆ ಚಪ್ಪಾಳೆ ತಟ್ಟಬೇಕು. ದೇವಿಯ ಆವಾಹನೆಯಾಗುವವರೆಗೂ ಆಹಾರ ಸೇವನೆ ಮಾಡಬಾರದು.

6. ತುಳಸಿಗೆ ದೀಪ  ಬೆಳಗಿ : ನವರಾತ್ರಿಯ 9 ದಿನ ತುಳಸಿ ಗಿಡದ ಬಳಿ ತುಪ್ಪದ ದೀಪವನ್ನು ಹಚ್ಚಬೇಕು. ಮನೆಯಲ್ಲಿರುವ ಸಮಸ್ಯೆ ಇದ್ರಿಂದ ಕಡಿಮೆಯಾಗುವ ಜೊತೆಗೆ ದಾಂಪತ್ಯ ಜೀವನ ಸುಖಕರವಾಗಿರುತ್ತದೆ.   

7.ಹಣೆಗೆ ಕೆಂಪು ಚಂದನದ ತಿಲಕ : ನವರಾತ್ರಿಯ 9 ದಿನ ನೀವು ನಿಯಮಿತವಾಗಿ ಹಣೆಗೆ ಕುಂಕುಮದ ತಿಲಕ ಹಚ್ಚಿಕೊಳ್ಳಬೇಕು. ಇದ್ರಿಂದ ವ್ಯಕ್ತಿಯ ಮನಸ್ಸು ಶಾಂತಗೊಳ್ಳುತ್ತದೆ. ಎಲ್ಲ ಕೆಲಸದಲ್ಲಿ ಉತ್ಸಾಹ ಹೆಚ್ಚಾಗುತ್ತದೆ. 

Chanakya niti : ಸಂತೋಷವನ್ನೇ ನಾಶ ಮಾಡುವ ಜೀವನದ 3 ದುಃಖಗಳು

8. ದೇವರ ಮನೆಯಲ್ಲಿರಲಿ ಕೆಂಪು ದೀಪ :  ಪೂಜೆಯ ಕೋಣೆ ಅಥವಾ ದೇವಿ ಸ್ಥಾಪನೆ ಮಾಡುವ ಸ್ಥಳದಲ್ಲಿ ಕೆಂಪು ದೀಪವನ್ನು ಹಾಕಬೇಕು. ಕೆಂಪು ಬಣ್ಣವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಕೆಂಪು ಸಕಾರಾತ್ಮಕತೆಯ ಸಂಕೇತವಾಗಿದೆ. 

9. ದೇವಿಗೆ ಅರ್ಪಿಸಿ ಈ ಹೂ : ನವರಾತ್ರಿಯಲ್ಲಿ ದುರ್ಗೆ ಪೂಜೆ ವೇಳೆ  ಗುಲಾಬಿ, ದಾಸವಾಳ ಮತ್ತು ಕಮಲದ ಹೂವನ್ನು ಅರ್ಪಿಸಬೇಕು. ಇದು ದುರ್ಗೆಯ ಪ್ರಿಯ ಹೂಗಳಾಗಿದ್ದು, ಅದ್ರಿಂದ ದುರ್ಗೆ ಸಂತೋಷಗೊಳ್ಳುತ್ತಾಳೆ. ಭಕ್ತರು ಬೇಡಿದ್ದನ್ನು ನೀಡ್ತಾಳೆ. 

10.ಹುಳಿ ವಸ್ತು ಬಳಸಬೇಡಿ : ನವರಾತ್ರಿ ಸಂದರ್ಭದಲ್ಲಿ ಮನೆಯಲ್ಲಿ ನಿಂಬೆ ಹಣ್ಣನ್ನು ಕತ್ತರಿಸಬೇಡಿ. ಹುಳಿ ವಸ್ತುಗಳ ಬಳಕೆ ಮನಸ್ಸನ್ನು ಗೊಂದಲಗೊಳಿಸುತ್ತದೆ. ನಕಾರಾತ್ಮಕ ಶಕ್ತಿಗಳು ಮನೆ ಪ್ರವೇಶ ಮಾಡುತ್ತವೆ. 

11. ಪೊರಕೆ ಬಳಕೆ ಹೀಗಿರಲಿ : ನವರಾತ್ರಿಯಲ್ಲಿ ಪೊರಕೆಯನ್ನು ಬದಲಿಸಬಾರದು. ನವರಾತ್ರಿ ಮುಗಿದ ಮೇಲೆ ಹಳೆ ಪೊರಕೆ ಎಸೆದು ಹೊಸ ಪೊರಕೆ ಬಳಸಬೇಕು.

NAVRATRI 2022: ಪೂಜೆಯಲ್ಲಿ ಕಳಸದ ಮೇಲೆ ತೆಂಗಿನಕಾಯಿ ಇಡುವುದೇಕೆ?

12.ಹೆಣ್ಣು ಮಗುವಿನ ಪೂಜೆ : ನವರಾತ್ರಿಯಲ್ಲಿ ಪ್ರತಿದಿನ ಕನ್ಯೆಯ ಪೂಜೆ ಮಾಡ್ಬೇಕು. ನವರಾತ್ರಿಯಲ್ಲಿ ಮನೆಯ ಮಹಿಳೆಯರು ಮತ್ತು ಕನ್ಯೆಯರನ್ನು ಗೌರವದಿಂದ ಕಾಣಬೇಕು. ಅವರಿಗೆ ಉಡುಗೊರೆ ನೀಡ್ಬೇಕು.  

 

 

click me!