2024 ರಲ್ಲಿ ದೊಡ್ಡ ಅವಘಡಗಳು ಸಂಭವ ಅಕಾಲಿಕ ಮಳೆ, ಒಂದೆರಡು ಪ್ರಧಾನಿಗಳ ಸಾವಾಗುವ ಲಕ್ಷಣವಿದೆ. ದೊಡ್ಡ ನಾಯಕರಿಗೆ ತೊಂದರೆ ಇದೆ ಎಂದು ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಭವಿಷ್ಯ ನುಡಿದಿದ್ದರು ಅದು ಇಗ ನಿಜವಾಗಿದೆ.
ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಭವಿಷ್ಯ ನುಡಿದಂತೆ ನಾವು ಕ್ರೋಧಿನಾಮ ಸಂವತ್ಸರದಲ್ಲಿ ಪಂಚ ಭೂತಗಳಾದ ಭೂಮಿ, ಆಕಾಶ, ನೀರು, ವಾಯು, ಬೆಂಕಿಯಿಂದ ಭಾರೀ ತೊಂದರೆ ಉಂಟಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಕರ್ನಾಟಕ ಮುಂಬೈ ಸೇರಿದಂತೆ ದೇಶದೆಲ್ಲಡೆ ಭಾರಿ ಮಳೆ ಯಾಗುತ್ತಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ. ಇನ್ನೊಂದೆಡೆ ಪೆನ್ಸಿಲ್ವೇನಿಯಾದಲ್ಲಿ ಚುನಾವಣಾ ಭಾಷಣ ಮಾಡುತ್ತಿದ್ದಾಗ ಡೊನಾಲ್ಡ್ ಟ್ರಂಪ್ ಮೇಲೆ ಗುಂಡು ಹಾರಿಸಿ ಹತ್ಯೆಗೆ ಯತ್ನಿಸಲಾಗಿದೆ.
ಒಂದೆರಡು ಪ್ರಧಾನಿಗಳ ಸಾವು
undefined
ಕೋಡಿಮಠಶ್ರೀಗಳು 2024ರ ವರ್ಷ ಭವಿಷ್ಯವನ್ನು ಹೇಳುವಾಗ ಈ ವರ್ಷ ಭಯಾನಕ ಅನುಭವನ್ನು ನೀಡಲಿದೆ ಎಂದಿದ್ದರು. ಈ ವರ್ಷ ಒಂದೆರಡು ಪ್ರಧಾನಿಗಳ ಸಾವಾಗುವ ಲಕ್ಷಣವಿದೆ ಹಾಗೆ ನೋವುಗಳು ಸಂಭವಿಸಬಹುದು ಎಂದಿದ್ದರು. ಇದರ ಜತೆಯಲ್ಲಿ ಮತೀಯ ಸಮಸ್ಯೆಯಿಂದ ಜನರು ದುಃಖ ಅನುಭವಿಸುತ್ತಾರೆ. ಜಗತ್ತಿನ ದೊಡ್ಡ ಸಂತರು ಕೊಲೆಯಾಗುತ್ತಾರೆ. ದೇಶದಲ್ಲಿ ಅಸ್ಥಿರತೆ, ಯುದ್ಧ ಭೀತಿ, ಅಣುಬಾಂಬ್ ಸ್ಫೋಟಗೊಳ್ಳು ಬಹುದು. ಇದರೊಂದಿಗೆ ಜಗತ್ತಿಗೆ ಮತ್ತೊಮ್ಮೆ ರೋಗ ಹರಡುವ ಸಾಧ್ಯತೆ ಜೊತೆಗೆ ದೊಡ್ಡ ಸುನಾಮಿಯೊಂದು ಎದ್ದು ಜಗತ್ತಿಗೆ ಅಪಾಯವಾಗಲಿದೆ ಎಂದು ಹೇಳಿದ್ದರು.
ಹಾಗೆ ಕಳೆದ ವರ್ಷಕ್ಕೆ ಹೊಲಿಸಿದರೆ ಈ ವರ್ಷ ಹೆಚ್ಚು ಸಂಕಷ್ಟ ಎದುರಾಗಲಿದೆ ಅಕಾಲಿಕ ಮಳೆಯಾಗಿ ಲಕ್ಷಾಂತರು ಜನರು ತೊಂದರೆಗೊಳಗಾಗುತ್ತಾರೆ ಎಂದು ಹೇಳಿದ್ದರು ಅದರಂತೆ ಈಗ ದೇಶದಲ್ಲಿ ವಿಪರೀತ ಮಳೆಯಾಗುತ್ತಿದ್ದು ಸಾವುಗಳು ಸಂಭವಿಸಿದೆ. ಶ್ರೀಗಳು ಹೇಳಿದಂತೆ ಪ್ರಕೃತಿ ಮುನಿದು ಭೂಕಂಪ, ಜಲಕಂಟಕ ಎದುರಾಗುತ್ತಿದೆ.
ಶ್ರಾವಣದಲ್ಲಿ ರಾಜಕೀಯದ ಬಗ್ಗೆ ಭವಿಷ್ಯ
ರಾಜಕಾರಣದಲ್ಲಿ ಹೇಳಿದಂತೆ ಅತಂತ್ರದಿಂದಲೇ ಕೂಡಿದೆ. ಶ್ರಾವಣದಲ್ಲಿ ನಾನು ಈ ಬಗ್ಗೆ ರಾಜಕೀಯದ ಬಗ್ಗೆ ನುಡಿಯುತ್ತೇನೆ ಎಂದು ಶ್ರೀಗಳು ಹೇಳಿದ್ದರು . ಅಶುಭವನ್ನು ಈಗಲೇ ನುಡಿಯಬಾರದು. ಮಹಾಭಾರದಲ್ಲಿ ಅಭಿಮನ್ಯುವಿನ ಬಿಲ್ಲಿನ ದಾರವನ್ನು ಕರ್ಣನ ಕೈಯಿಂದ ಕತ್ತರಿಸುತ್ತಾನೆ. ಆದರೆ, ಈಗ ಅಭಿಮನ್ಯುವಿನ ಹೆಂಡತಿ ಪಾರ್ಲಿಮೆಂಟಿಗೆ ಪ್ರವೇಶ ಮಾಡುತ್ತಾಳೆ. ಆದರೆ, ಈಗ ಪಾರ್ಲಿಮೆಂಟಿನಲ್ಲಿ ಧುರ್ಯೋಧನನ ತೊಡೆ ಮುರಿಸಿದ ಕೃಷ್ಣ ಇಲ್ಲಿಲ್ಲ. ಆದ್ದರಿಂದ ಧುರ್ಯೋಧನನೇ ಗೆಲ್ಲುತ್ತಾನೆ ಎಂದು ಹೇಳಿದ್ದರು.
60 ವರ್ಷಗಳ ನಂತರ ಅಮೆರಿಕದಲ್ಲಿ ಮಾಜಿ ಅಧ್ಯಕ್ಷರ ಮೇಲೆ ಹತ್ಯೆ ಯತ್ನ
60 ವರ್ಷಗಳ ನಂತರ ಅಮೆರಿಕದಲ್ಲಿ ಅಧ್ಯಕ್ಷರಾಗಿದ್ದ ವ್ಯಕ್ತಿಯೊಬ್ಬರ ಹತ್ಯಾ ಯತ್ನ ನಡೆದಿದೆ. ಜಾನ್ ಎಫ್ ಕೆನಡಿ ಅಧ್ಯಕ್ಷರಾಗಿದ್ದಾಗಲೇ ಅವರನ್ನ ಹತ್ಯೆ ಮಾಡಲಾಗಿತ್ತು. ಇದಾದ ನಂತರ ಅಧ್ಯಕ್ಷ ಅಥವಾ ಮಾಜಿ ಅಧ್ಯಕ್ಷರ ಹತ್ಯಾ ಪ್ರಯತ್ನಗಳು ಅಮೆರಿಕದಲ್ಲಿ ನಡೆದಿರಲಿಲ್ಲ. ಪೆನ್ಸಿಲ್ವೇನಿಯಾದಲ್ಲಿ ಚುನಾವಣಾ ಭಾಷಣ ಮಾಡುತ್ತಿದ್ದಾಗ ಡೊನಾಲ್ಡ್ ಟ್ರಂಪ್ ಮೇಲೆ ಗುಂಡು ಹಾರಿಸಿ ಹತ್ಯೆಗೆ ಯತ್ನಿಸಲಾಗಿದೆ. ಇದೇ ವರ್ಷದ ನವೆಂಬರ್ ನಲ್ಲಿ ಅಮೆರಿಕದಲ್ಲಿಮ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ.