ನಾಗರ ಪಂಚಮಿ ಪೂಜೆಗೆ ಮೂಲ ನಾಗನ ಪೂಜೆಯೇ ಶ್ರೇಷ್ಠ: ಮೂಲ ನಾಗ ಎಲ್ಲಿದೆ ಗೊತ್ತಾ?

By Sathish Kumar KH  |  First Published Aug 21, 2023, 3:38 PM IST

ನಾಗರ ಪಂಚಮಿ ಹಬ್ಬವನ್ನು ರಾಜ್ಯಾದ್ಯಂತ ಭಾರಿ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ. ಆದರೆ, ಪಂಚಮಿ ಪೂಜೆಯ ವೇಳೆ ಮೂಲ ನಾಗನ ಪೂಜೆಯೇ  ಶ್ರೇಷ್ಠ ಎಂದು ಹೇಳಲಾಗುತ್ತದೆ.


ಉಡುಪಿ (ಆ.21): ಕರಾವಳಿಯ ಭೂಮಿಯನ್ನು ನಾಗನ ಮೂಲ ಕ್ಷೇತ್ರ ಎಂದು ಕರೆಯುತ್ತಾರೆ. ಇಲ್ಲಿ ವಾಸಿಸುವ ಜನ, ಭೂಮಿಯ ವಾರಿಸುದಾರನಾದ ನಾಗನಿಗೆ ವಿಶೇಷ ನಿಷ್ಠೆಯಿಂದ ನಡೆದುಕೊಳ್ಳುತ್ತಾರೆ. ಹಾಗಾಗಿ ನಾಗರ ಪಂಚಮಿ ಹಬ್ಬವೆಂದರೆ, ಕರಾವಳಿಯ ಜನರಿಗೆ ಅಪರಿಮಿತ ಶೃದ್ಧೆಯಾಗಿದೆ. ಈ ದಿನ ಪೇಟೆಯಲ್ಲಿ ವಾಸಿಸುವ ಜನರು ಹಳ್ಳಿಗಳಿಗೆ ತೆರಳಿ ತಮ್ಮ ಮೂಲ ನಾಗನಿಗೆ ಪೂಜೆ ಸಲ್ಲಿಸಿ ಬರುತ್ತಾರೆ. 

ನಾಗರ ಪಂಚಮಿಯ ದಿನ ಪ್ರತಿಯೊಬ್ಬ ಕರಾವಳಿಗರು ತನ್ನ ಮೂಲ ನಾಗನ ಆರಾಧನೆಗೆ ತವರಿಗೆ ಹೋಗುವ ಪದ್ಧತಿ ಇದೆ. ಮೂಲ ನಾಗನಿಗೆ ತನು ಅರ್ಪಿಸುವ, ಆ ಮೂಲಕ ವಾರ್ಷಿಕ ಗೌರವ ಸಲ್ಲಿಸುವ ಸಂಪ್ರದಾಯ ನಡೆದುಕೊಂಡು ಬಂದಿದೆ. ಈ ದಿನ ಪೇಟೆಯಲ್ಲಿ ವಾಸಿಸುವ ಜನರು ಹಳ್ಳಿಗಳಿಗೆ ತೆರಳಿ ತಮ್ಮ ಮೂಲ ನಾಗನಿಗೆ ಪೂಜೆ ಸಲ್ಲಿಸಿ ಬರುತ್ತಾರೆ. ನಾಗದೇವರ ಸನ್ನಿಧಿಯಲ್ಲಿ ತನು ಅರ್ಪಿಸುವುದೆಂದರೆ ಅದೊಂದು ಅತ್ಯಂತ ಸರಳವಾದ ಮತ್ತು ಶ್ರೇಷ್ಠವಾದ ಆಚರಣೆ ಎಂಬ ನಂಬಿಕೆ ಇದೆ.

Tap to resize

Latest Videos

undefined

ರಾಜ್ಯಾದ್ಯಂತ ನಾಗರಪಂಚಮಿ ಸಗಡರ: ಈ ಹಬ್ಬದ ಮಹತ್ವ ಏನು ಗೊತ್ತಾ?

ಪರಿಸರ ರಕ್ಷಣೆ ಮಾಡುವ ನಾಗಬನಗಳು : ಕರಾವಳಿಯ ನಾಗಬನಗಳೆಂದರೆ ಪರಿಸರ ರಕ್ಷಣೆಯ ಮೂಲ ಕೇಂದ್ರಗಳು. ನಾಗದೇವರ ಹೆಸರಲ್ಲಿ ಕಾಡು ಬೆಳೆಸಿ, ನಾಗನ ಕಲ್ಲುಗಳನ್ನು ಇರಿಸಿ, ಬನದಲ್ಲಿ ಪ್ರತಿ ಪಂಚಮಿಗೂ ಪೂಜೆ ಮಾಡುವ ಪದ್ಧತಿ ಇದೆ. ನಾಗರ ಪಂಚಮಿ ಬಂದರೆ ಈ ಕಾಡುಗಳಿಗೆ ತೆರಳಿ ಹರಕೆ ಸಲ್ಲಿಸುವ ಪರಿಪಾಠವಿದೆ. ಕ್ರಮೇಣ ಪರಿಸರ ರಕ್ಷಿಸುವ ಕಾಡುಗಳೆಲ್ಲಾ ನಾಶವಾಗಿ ಕಾಂಕ್ರೀಟ್ ಕಾಡುಗಳಾಗುತ್ತಿದ್ದರೂ, ನಾಗಬನಗಳಿಗೆ ಪಂಚಮಿಯ ದಿನ ತೆರಳುವ ಪದ್ಧತಿ ಮಾತ್ರ ಇವತ್ತಿಗೂ ಜೀವಂತವಿದೆ. ಉಡುಪಿ ಜಿಲ್ಲೆಯ ನಾಗ ಕ್ಷೇತ್ರಗಳಲ್ಲಿ ಇಂದು ಲಕ್ಷಾಂತರ ಜನರು ತನು ಅರ್ಪಿಸಿದರು. ಸೂರ್ಯ ಉದಯಕ್ಕೂ ಮುನ್ನವೇ ಜನರು ಬನಗಳಿಗೆ ತೆರಳಿ ಶ್ರದ್ಧೆ ಸಮರ್ಪಿಸಿದರು.

ನಾಗರ ಪಂಚಮಿ ಬಲು ದುಬಾರಿ : ನಾಗದೇವರಿಗೆ ಇಷ್ಟವಾದ ಎಳನೀರು, ಅರಸಿನ, ಪಿಂಗಾರದ ಹೂವು, ಪುಟ್ಟುಬಾಳೆ, ಜೇನುತುಪ್ಪ, ಹಾಲು, ಅರಳು , ಅಕ್ಕಿ, ಊದುಬತ್ತಿ, ಕೇದಗೆ ಹೂವುಗಳನ್ನು ಕೊಟ್ಟು ಅರ್ಚಕರ ಮೂಲಕ ಪೂಜೆ ಮಾಡಿಸಲಾಗುತ್ತದೆ. ನಾಗನ ಕಲ್ಲುಗಳಿಗೆ ಅರಸಿನ ,ಹಾಲು, ಜೇನುತುಪ್ಪ ಅರ್ಪಿಸಿ ಕೈ ಮುಗಿಯಲಾಗುತ್ತದೆ. ಅರಸಿನ ಎಲೆಯಿಂದ ವಿಶೇಷ ತಿನಿಸನ್ನು ಮಾಡಿ, ತಿನ್ನುವ ಪರಿಪಾಠವೂ ಇದೆ. ಕೆಲ ದಿನಗಳ ಹಿಂದೆ 70ರಿಂದ 80 ರೂಪಾಯಿ ಕೆಜಿಗೆ ಮಾರಾಟವಾಗುತ್ತಿದ್ದ ಪುಟ್ಟು ಬಾಳೆಹಣ್ಣು ಈಗ ದುಬಾರಿಯಾಗಿದೆ ನೂರರಿಂದ ನೂರ ಮೂವತ್ತು ರೂಪಾಯಿ ದರ ಇದೆ. ಹಿಂಗಾರದ ಹೂವಿಗೆ 200 ರಿಂದ 250, ಅರಸಿನ ಎಲೆ, ಪ್ರತಿ ಕಟ್ಟಿಗೆ 40 ರೂಪಾಯಿ ಇದೆ. ಹೂವು ಮತ್ತು ಎಳನೀರು ಸಾಮಾನ್ಯ ದರದಲ್ಲಿ ಮಾರಾಟವಾಗುತ್ತಿದೆ. 

ಕೆಆರ್‌ಎಸ್‌ ಜಲಾಶಯದ ನೀರು 105 ಅಡಿಗೆ ಕಸಿತ: ಮಂಡ್ಯ ರೈತರು, ಬಿಜೆಪಿಯಿಂದ ಕಾವೇರಿ ಹೋರಾಟ ಆರಂಭ

ಕಾಳಸರ್ಪ ದೋಷಗಳಿಗೆ ಮುಕ್ತಿ: ನಾಗರ ಪಂಚಮಿಯ ದಿನದಂದು ನಾಗ ದೇವರನ್ನು ಪೂಜಿಸುವುದರಿಂದ ಕಾಳಸರ್ಪ ದೋಷಗಳಿಂದ ಮುಕ್ತಿ ದೊರೆಯುತ್ತದೆ. ಸರ್ಪ ದೇವರನ್ನು ಮನೆಯ ರಕ್ಷಕ ಎಂದೂ ಪರಿಗಣಿಸಲಾಗುತ್ತದೆ. ಈ ದಿನ ನಾಗ ದೇವರನ್ನು ಪೂಜಿಸುವುದರಿಂದ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸುತ್ತದೆ ಎಂದು ಹೇಳಲಾಗುತ್ತದೆ. ಇದಲ್ಲದೇ ನಾಗರ ಪಂಚಮಿಯಂದು(Nagara Panchami) ಪೂಜೆ ಮಾಡುವುದರಿಂದ ಜಾತಕದಲ್ಲಿ ಕಾಳ ಸರ್ಪದೋಷದ ಪ್ರಭಾವವೂ ಕಡಿಮೆಯಾಗುತ್ತದೆ. ನಾಗರ ಪಂಚಮಿ ಮಾಂಗಲ್ಯಪ್ರದ ಹಾಗೂ ಸಂತಾನಪ್ರದ ಎಂಬ ನಂಬಿಕೆ.

ಉತ್ತರ ಕರ್ನಾಟಕದಲ್ಲಿ ವಿಶೇಷ ಆಚರಣೆ: ಉತ್ತರ ಕರ್ನಾಟಕದಲ್ಲಿ ನಾಗರಪಂಚಮಿ ವಿಶೇಷತೆಗಳಿಂದ ಕೂಡಿರುತ್ತದೆ. ತವರಿಗೆ ಹೆಣ್ಣುಮಕ್ಕಳನ್ನು ಆಹ್ವಾನಿಸಿ, ಉಡುಗೊರೆ ನೀಡಿ ಗೌರವಿಸಲಾಗುತ್ತದೆ. ಪೂಜೆಯ ಅಂಗವಾಗಿ ದೇವಸ್ಥಾನ(Temple) ಹಾಗೂ ಹುತ್ತಗಳಿರುವ ಜಾಗಕ್ಕೆ ಹೋಗಿ ತಮ್ಮನ್ನು ರಕ್ಷಿಸಲೆಂದು ಬೇಡಿಕೊಂಡು ಜನರು ಹಾಲು ಮತ್ತು ಬೆಳ್ಳಿ ಆಭರಣಗಳನ್ನು ಅರ್ಪಿಸುತ್ತಾರೆ. ಈ ಹಬ್ಬವು ಅಣ್ಣ -ತಂಗಿ ಇಬ್ಬರೂ ಸೇರಿ ಪೂಜಿಸಲ್ಪಡುವ ಹಬ್ಬವೆಂದು ಪ್ರತೀತಿ ಸಹ ಇದೆ. ನಾಗರಪಂಚಮಿಯಂದು ಮಾಡಿದ ಉಪವಾಸದ ಮಹತ್ವವೆಂದರೆ ಈ ಹಿಂದೆ ಸತ್ಯೇಶ್ವರೀ ಎಂಬ ಹೆಸರಿನ ದೇವಿಯಿದ್ದಳು. ಸತ್ಯೇಶ್ವರನು ಅವಳ ಸಹೋದರನಾಗಿದ್ದನು. ಸತ್ಯೇಶ್ವರನು ನಾಗರಪಂಚಮಿಯ ಹಿಂದಿನ ದಿನ ಮೃತ ಹೊಂದಿದನು. ಆಗ ಸಹೋದರನ ಸಾವಿನಿಂದ ಶೋಕದಲ್ಲಿ ಸತ್ಯೇಶ್ವರಿಯು ಆಹಾರವನ್ನು ಸ್ವೀಕರಿಸಲಿಲ್ಲ. ಅದಕ್ಕೆ ಸತ್ಯೇಶ್ವರಿಗೆ ಅವಳ ಸಹೋದರನು ನಾಗರೂಪದಲ್ಲಿ ಕಂಡನು. ಅದಕ್ಕೆ ಆ ದಿನ ಮಹಿಳೆಯರು ಸಹೋದರನ ಹೆಸರಿನಲ್ಲಿ ಉಪವಾಸ ಮಾಡುತ್ತಾರೆ.

click me!