ವರದಿ: ಪರಶುರಾಮ್ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್
ಯಾದಗಿರಿ (ಜೂ.14): ರೈತನ ಜೀವನಾಡಿ, ರೈತನ ಮಿತ್ರ ಎತ್ತು. ಆ ಎತ್ತಿಗೆ ಇವತ್ತು ಸಂಭ್ರಮದ ದಿನ ಯಾಕಂದ್ರೆ ವರ್ಷವಿಡೀ ಶ್ರಮವಹಿಸಿ ರೈತನಿಗೆ ಬೆನ್ನಿಗೆ ಬೆನ್ನು ಕೊಟ್ಟು ಸಹಕಾರ ನೀಡಿ ಅನ್ನದಾತನ ಪಾಲಿಗ ನಿಜವಾದ ಆಪ್ತಮಿತ್ರ ಅನಿಸಿಕೊಂಡಿದೆ, ಹಾಗಾಗಿ ಕಾರ ಹುಣ್ಣಿಮೆಗೊಮ್ಮೆ ಎತ್ತುಗಳಿಗೆ ವಿಶೇಷವಾಗಿ ಕರಿ ಹರಿಯುವ ಮೂಲಕ ಎತ್ತುಗಳಿಗೆ ರೈತರು ಕೃತಜ್ಞತೆ ಸಲ್ಲಿಸುತ್ತಾರೆ.
undefined
ರೈತನ ಜೀವನಾಡಿ ಎತ್ತುಗಳಿಗೆ ಕರಿ ಹರಿದು ಸಂಭ್ರಮಿಸಿದ ಯಾದಗಿರಿ ಜನ: ಬೇಸಿಗೆ ಕಾಲ ಮುಗಿದು, ಮುಂಗಾರು ಹಂಗಾಮು ಪ್ರಾರಂಭವಾಗುವ ಹೊತ್ತಿಗೆ ಬರುವ ಕಾರ ಹುಣ್ಣಿಮೆ ರೈತರ ಮೊದಲ ಹಬ್ಬ. ಉಳುಮೆ ಮಾಡಿದ ಎತ್ತುಗಳಿಗೆ ವಿಶ್ರಾಂತಿ ನೀಡಿ ಮುಂಗಾರಿನ ಕೃಷಿ ಕೆಲಸಕ್ಕೆ ತಯಾರು ಮಾಡುವ ಹಬ್ಬವಾಗಿದೆ. ಹೀಗಾಗಿ ಕಾರ ಹುಣ್ಣಿಮೆ ಎಂದರೆ ರೈತರಿಗೆ ಎಲ್ಲಿಲ್ಲದ ಸಂಭ್ರಮ.
ವಧು-ವರರಿಬ್ಬರಿಗೂ ತಾಳಿ ಮಾದರಿಯ ವಿವಾಹ ಮುದ್ರೆ: ವಿಶಿಷ್ಟ ಮದುವೆಗೆ ಸಾಕ್ಷಿಯಾದ ಗದಗ..!
ಈ ಹಬ್ಬವನ್ನು ಯಾದಗಿರಿ ಜಿಲ್ಲೆಯ ವಿವಿಧ ಕಡೆ ಸಂಭ್ರಮದಿಂದ ಆವರಿಸಿದರು. ಎತ್ತುಗಳಿಗೆ ಸ್ನಾನ ಮೂಡಿಸುವ, ಬಣ್ಣ-ಬಣ್ಣದ ರೀತಿಯಲ್ಲಿ ಅಲಂಕರಿಸಿ, ಸಿಂಗರಿಸಿ ಇವತ್ತಿನ ದಿನ ಈಡೀ ಊರುಗಳಲ್ಲಿ ಮೆರೆಸುವ ಮೂಲಕ ಎತ್ತುಗಳನ್ನು ಪೂಜಿಸಲಾಗುತ್ತದೆ. ಇದರಿಂದಾಗಿ ಎತ್ತುಗಳಿಗೆ ಇವತ್ತು ಎಲ್ಲಿಲ್ಲದ ಅಚ್ಚರಿ-ಬೆರಗು ಮೂಡಸಿವ ಸಂದರ್ಭವಾಗಿದೆ.
ಉತ್ತರ ಕರ್ನಾಟಕದ ಜನಪ್ರೀಯ ಹಬ್ಬ ಕಾರ ಹುಣ್ಣಿಮೆ ಕರಿ..!
ಉತ್ತರ ಕರ್ನಾಟಕದ ರೈತರು ಅತ್ಯಂತ ಸಂಭ್ರಮದಿಂದ ಆಚರಿಸುವ ಹಬ್ಬಗಳ ಪೈಕಿ ಕಾರ ಹುಣ್ಣಿಮೆ ಕರಿ ಕೂಡ ಒಂದು. ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ವಿಜಯಪುರ, ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಭಾಗದಲ್ಲಿ ರೈತರು ಕಾರ ಹುಣ್ಣಿಮೆಯನ್ನು ಸಂಭ್ರಮದಿಂದ ಆಚರಿಸುತ್ತಾರೆ.
ವರ್ಷವಿಡೀ ಶ್ರಮವಹಿಸುವ ಎತ್ತುಗಳಿಗೆ ರೈತರು ಸ್ನಾನ ಮಾಡಿಸಿ ಬಣ್ಣ ಬಣ್ಣಗಳಿಂದ ಅಲಂಕಾರಿಕ ವಸ್ತುಗಳಿಂದ ಶೃಂಗಾರ ಮಾಡಿ ಪೂಜೆ ಸಲ್ಲಿಸಿ ನೈವೇದ್ಯ ಅರ್ಪಿಸಲಾಯಿತು. ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಬಬಲಾದ ಗ್ರಾಮದಲ್ಲಿ ಕೂಡ ಅದ್ದೂರಿಯಾಗಿ ಕಾರ ಹುಣ್ಣಿಮೆ ಸಂಭ್ರಮ ಪಡಲಾಯಿತು.
Chikkamagaluru ಸೋಲಾರ್ ವಿದ್ಯುತ್ ಘಟಕ ಆರಂಭಕ್ಕೆ ವಿಘ್ನ
ಗ್ರಾಮದ ಅಗಸಿಗಳಲ್ಲಿ ಬೃಹತ್ ಎತ್ತುಗಳ ಮೆರವಣಿಗೆ: ಯಾದಗಿರಿ ಜಿಲ್ಲೆಯಲ್ಲಿ ಸಂಜೆ ಹೊತ್ತಿಗೆ ಗ್ರಾಮದ ಅಗಸಿಯಲ್ಲಿ ಗ್ರಾಮಸ್ಥರು ಸೇರಿ ಎತ್ತುಗಳ ಮೂಲಕ ಕರಿ ಹರಿಯುವ ಕಾರ್ಯಕ್ರಮ ನಡೆಸಿದರು. ಪ್ರತಿ ವರ್ಷ ಬಬಲಾದ ಗ್ರಾಮದಲ್ಲಿ ವಿಜಂಭೃಣೆಯಿಂದ ಕಾರ ಹುಣ್ಣಿಮೆ ಆಚರಣೆ ಮಾಡುತ್ತಾರೆ. ವಿಶೇಷವಾಗಿ ಗ್ರಾಮೀಣ ಸೊಗಡಿನ ಕಾರ ಹುಣ್ಣಿಮೆ ಇದಾಗಿದೆ.
ಅಗಸಿಯಲ್ಲಿ ಮಾವಿನ ತೊರಣ ಕಟ್ಟಿ, ನಂತರ ಶೃಂಗರಿಸಿ ಕರೆತಂದಿದ ತಮ್ಮ ಎತ್ತುಗಳನ್ನು ಸಾಲು ಸಾಲಾಗಿ ಓಡಿಸಲಾಯಿತು. ಕರಿ ಹರಿಯುವ ದೃಶ್ಯ ರೋಮಾಂಚನಗೊಳಿಸಿತು. ಬಬಲಾದ ಸೇರಿದಂತೆ ಜಿಲ್ಲೆಯಾದ್ಯಂತ ರೈತರು ಖುಷಿಯಿಂದ ಕಾರ ಹುಣ್ಣಿಮೆ ಆಚರಣೆ ಮಾಡಿದರು.ಕಾರ ಹುಣ್ಣಿಮೆ ನಂತರ ರೈತರು ಬಿತ್ತನೆ ಕಾರ್ಯಕ್ಕೆ ಮುಂದಾಗುತ್ತಾರೆ.
ರೈತನ ಬೆನ್ನೆಲುಬಿಗೆ ಅದ್ದೂರಿ ಮೆರವಣಿಗೆ: ರೈತನ ಜೊತೆ ಹಗಲಿರುಳು ಎನ್ನದೇ ದುಡಿಯುವ ಇನ್ನೊಂದು ಜೀವ ಅಂದ್ರೆ ಅದು ಎತ್ತು. ಆ ಎತ್ತನ್ನು ಸ್ಮರಿಸುವ ದಿನವೇ ಈ ಕಾರ ಹುಣ್ಣಿಮೆ ಕರಿಯಾಗಿದೆ. ಎತ್ತುಗಳು ರೈತರ ಬೆನ್ನೆಲುಬಾಗಿ ಕೃಷಿ ಭೂಮಿಯಲ್ಲಿ ದುಡಿಯುತ್ತವೆ.
ಯಂತ್ರಗಳು ಇರಲಿ. ಇರದಿರಲಿ ರೈತರ ಜಮೀನಿನಲ್ಲಿ ಅತಿಈ ಹೆಚ್ಚು ದುಡಿಯುವುದು ಎತ್ತುಗಳು. ಇತ್ತೀಚೆಗೆ ಕೃಷಿಯಲ್ಲಿ ಯಂತ್ರಗಳ ಬಳಕೆ ಹೆಚ್ಚಾಗುತ್ತಿದೆ. ಆದರೂ ಕೂಡಾ ಗ್ರಾಮೀಣ ಭಾಗದಲ್ಲಿ ಇಂದಿಗೂ ಕೃಷಿಗೆ ಎತ್ತುಗಳೇ ಆಧಾರ. ಹೀಗಾಗಿ ರೈತರು ಎತ್ತುಗಳನ್ನು ಪೂಜನೀಯ ಭಾವದಿಂದ ಕಾಣುತ್ತಾರೆ. ಪ್ರತಿ ವರ್ಷ ರೈತರು ಉಳುಮೆಗೆ ಎತ್ತುಗಳನ್ನು ಬಳಸುತ್ತಾರೆ. ಬೇಸಿಗೆಯ ಸುಡು ಬಿಸಿಲಿನಲ್ಲಿ ಎತ್ತುಗಳಿಂದ ಉಳುಮೆ ಮಾಡುವ ರೈತರು, ಕಾರ ಹುಣ್ಣಿಮೆಯ ದಿನದಂದು ಎತ್ತುಗಳಿಗೆ ತಮ್ಮ ಕೃತಜ್ಞತೆಯನ್ನು ಸಮರ್ಪಿಸುತ್ತಾರೆ.