ವಿಚ್ಛೇದಿತ, ನಿಂದನೆ ಎದುರಿಸುತ್ತಿರುವ ಮಹಿಳೆಯರಿಗೆ ಆಶ್ರಯ ನೀಡುತ್ತೆ ಈ ಪುರಾತನ ದೇಗುಲ!

By Chethan Kumar  |  First Published Oct 26, 2024, 8:04 PM IST

ಮನೆಯಿಂದ ಹೊರದಬ್ಬಿದ, ಪತಿಯಿಂದ ನಿಂದನೆ ಎದುರಿಸುತ್ತಿರುವ, ಪತಿ ಜೊತೆ ಇನ್ನು ಬದುಕು ಸಾಧ್ಯವಿಲ್ಲ ಅನ್ನೋ ಮಹಿಳೆಯರು, ವಿಚ್ಛೇದಿತ ಸೇರಿದಂತೆ ಪತಿ ಹಾಗೂ ಪತಿ ಕುಟುಂಬದಿಂದ ನೊಂದಿರುವ ಮಹಿಳೆಯರಿಗೆ ಈ ಪುರಾತನ ದೇವಸ್ಥಾನ  ಆಶ್ರಯ ನೀಡುತ್ತದೆ. ಅವರನ್ನು ಸಾಕಿ ಸಲಹುತ್ತದೆ. 


ಕಷ್ಟ ಬಂದಾಗ ದೇವಸ್ಥಾನಕ್ಕೆ ತೆರಳಿ ಪ್ರಾರ್ಥಿಸುವುದು ಸಾಮಾನ್ಯ. ಆದರೆ ಇಲ್ಲೊಂದು ದೇವಸ್ಥಾನ ಅಕ್ಷರಶಃ ಕಣ್ಣೀರು ಒರೆಸುವ ಕೆಲಸವನ್ನು ಶತ ಶತಮಾನಗಳಿಂದ ಮಾಡುತ್ತಿದೆ. ಹೌದು, ಪತಿಯಿಂದ ನೊಂದಿರುವ, ವಿಚ್ಚೇದಿತ, ಮನೆಯಿಂದ ಹೊರಬಿದ್ದಿರುವ ಮಹಿಳೆಯರಿಗೆ ಈ ಹಳೇ ದೇವಸ್ಥಾನ ಸದಾ ಆಶ್ರಯ ನೀಡುತ್ತಲೇ ಬಂದಿದೆ. ಹೀಗಾಗಿ ಈ ದೇವಸ್ಥಾನಕ್ಕೆ ಡಿವೋರ್ಸ್ ಟೆಂಪಲ್ ಎಂಬ ಮತ್ತೊಂದು ಹೆಸರು ಕೂಡ ಇದೆ.  ಇದು ಬರೋಬ್ಬರಿ 600 ವರ್ಷ ಹಳೇಯ ದೇವಸ್ಥಾನ. ಈ ದೇವಸ್ಥಾನದಲ್ಲಿ ಪುರುಷರಿಗೆ ಪ್ರವೇಶವಿಲ್ಲ. ಈ ದೇವಸ್ಥಾನದಲ್ಲಿ ಮದುವೆ ಬಳಿಕ ನೊಂದು, ಬೀದಿ ಬಿದ್ದಿರುವ ಮಹಿಳೆಯರಿಗೆ ಆಶ್ರಯ ನೀಡುತ್ತದೆ.

ಈ ದೇವಸ್ಥಾನ ಜಪಾನ್‌ನಲ್ಲಿದೆ. ಈ ದೇವಸ್ಥಾನದ ಹೆಸರು ಮತ್ಸುಗಾವೋಕಾ ಟೋಕಿಜಿ. ಆದರೆ ಡಿವೋರ್ಸ್ ದೇವಸ್ಥಾನ ಎಂದೇ ಜನಪ್ರಿಯವಾಗಿದೆ. 600 ವರ್ಷಗಳ ಹಿಂದೆ ಕಾಕುಸನ್ ಅನ್ನೋ ಸನ್ಯಾಸಿನಿ ನಿರ್ಮಾಣ ಮಾಡಿದ್ದಾರೆ. ಕಕುಸನ್ ಹಾಗೂ ಆಕೆಯ ಪತಿ ಹೊಜೋ ತೋಕಿಮುನ್ ಈ ದೇಗುಲ ನಿರ್ಮಾಣ ಮಾಡಿದ್ದಾರೆ ಎಂದು ಇತಿಹಾಸ ಹೇಳುತ್ತದೆ.

Tap to resize

Latest Videos

undefined

ಈ ಕುಬೇರ ಮಂದಿರಗಳಿಗೆ ಭೇಟಿ ನೀಡಿ ಒಂದೇ ಒಂದು ಸಲ ದರ್ಶನ ಪಡೆದ್ರೆ ಸಾಕು ಜೀವನಪರ್ಯಂತ ಹಣವೋ ಹಣ!

ಕಕುಸನ್ ಮದುವೆ ಬಳಿ ದಾಂಪತ್ಯ ಜೀವನದಲ್ಲಿ ಸಂಕಷ್ಟಕ್ಕೆ ಬಿದ್ದಿದ್ದಳು. ಪತಿಯಿಂದ ಬೇಸತ್ತಿದ್ದ ಕಾಕುಸನ್ ಈ ದೇವಸ್ಥಾನ ನಿರ್ಮಾಣದ ಬಳಿ ಇಲ್ಲೇ ಉಳಿದುಕೊಂಡಿದ್ದರು ಅನ್ನೋದು ಇತಿಹಾಸ. ಬಳಿಕ ಈ ದೇವಸ್ಥಾನ ಇದೇ ರೀತಿ ಪತಿಯಿಂದ ದೂರವಾದ ಸಂಕಷ್ಟದಲ್ಲಿರುವ ಮಹಿಳೆಯರಿಗೆ ಆಶ್ರಯ ನೀಡುತ್ತಾ ಬಂದಿದೆ. ಈ ದೇವಸ್ಥಾನದಲ್ಲಿ ಮಹಿಳೆಯರಿಗೆ ಮುಕ್ತ ಪ್ರವೇಶ. ಹೀಗೆ ಪೂಜೆ ಸಲ್ಲಿಸಲು ಆಗಮಿಸುವ ಮಹಿಳಾ ಭಕ್ತರು ನೀಡುವ ದೇಣಿಗೆಯಿಂದ ದೇವಸ್ಥಾನ ಟ್ರಸ್ಟ್ ಮುನ್ನಡೆಯುತ್ತಿದೆ. 

1902ರಲ್ಲಿ ಜಪಾನ್‌ನಲ್ಲಿ ಹಲವು ಬದಲಾವಣೆಯಾಗಿತ್ತು. ಸರ್ಕಾರಗಳು ದೇಗುಲ ಸೇರಿದಂತೆ ಇತರ ಟ್ರಸ್ಟ್ ಮೇಲೆ ಹಿಡಿತ ಸಾಧಿಸಿತ್ತು. ಶತ ಶತಮಾನಗಳಿಂದ ಮಹಿಳೆಯರೇ ಈ ದೇವಸ್ಥಾನದ ಆಡಳಿತ, ಖರ್ಚು ವೆಚ್ಚಗಳನ್ನು ನೋಡಿಕೊಳ್ಳುತ್ತಿದ್ದರು. ಆಡಳಿತ ಮಂಡಳಿಯಲ್ಲಿ ಕೇವಲ ಮಹಿಳೆಯರಿಗೆ ಮಾತ್ರ ಅವಕಾಶ ನೀಡಿತ್ತು. ಆದರೆ 1902ರಲ್ಲಿ ಎಂಗಾಕುಜಿ ದೇವಸ್ಥಾನದ ಆಡಳಿತ ಮಂಡಳಿಯಲ್ಲಿ ಅಧಿಕಾರ ಸ್ವೀಕರಿಸಿದರು. ಬಳಿಕ ಪುರುಷರಿಗೂ ಪ್ರವೇಶ ನೀಡಲಾಗಿತ್ತು. ಇದು ಅಂದು ಭಾರಿ ವಿವಾದಕ್ಕೂ ಕಾರಣವಾಗಿತ್ತು.

1902ರಿಂದ ವಿಚ್ಚೇದಿತ, ಪತಿಯಿಂದ ನೋದು ಬೀದಿ ಬಿದ್ದ ಮಹಿಳೆಯರ ಸಂಖ್ಯೆ ಕಡಿಮೆಯಾಗುತ್ತಾ ಬಂದಿತ್ತು. ಇದೀಗ ಕಾನೂನು,ಪೊಲೀಸ್ ಸೇರಿದಂತೆ ವಿವಿಧ ವ್ಯವಸ್ಥೆಗಳ ಕಾರಣ ಇಲ್ಲಿ ಯಾವುದೇ ನೊಂದ ಮಹಿಳೆಯರು ಇಲ್ಲ. ಇದೀಗ ಈ ದೇವಸ್ತಾನ ಹಾಗೇ ಇದೆ. ಆದರೆ ಭಕ್ತರ ಸಂಖ್ಯೆ ಕಡಿಮೆಯಾಗಿದೆ. ಪುರುಷರು ಹಾಗೂ ಮಹಿಳೆಯರಿಗೂ ಇಲ್ಲಿ ಪ್ರವೇಶವಿದೆ. ಇದೇ ದೇವಸ್ಥಾನದ ಕೆಲ ದೂರಗಳಲ್ಲೇ ಹಲವು ಅನಾಥಶ್ರಮಗಳು ನಿರ್ಮಾಣವಾಗಿದೆ. 

ಮಹಿಳಾ ಸಬಲೀಕರಣ ಹಾಗೂ ಮಹಿಳಾ ಸ್ವಾತಂತ್ರ್ಯಕ್ಕೆ ಒತ್ತು ನೀಡಿದ್ದ ಈ ದೇಗುಲ ಜಪಾನ್ ದೇವಸ್ಥಾನಗಳ ಪೈಕಿ ಅತ್ಯಂತ ಸುಂದರ ದೇವಸ್ಥಾನ ಎಂದೇ ಗುರುತಿಸಿಕೊಂಡಿದೆ. ಒಂದು ಕಾಲದಲ್ಲಿ ನೊಂದ, ದಿಕ್ಕು ದೆಸೆಯಿಲ್ಲದ ಮಹಿಳರಿಗೆ ಹೊಸ ಬದುಕು ಕಟ್ಟಿಕೊಳ್ಳಲು ಅವಕಾಶ ನೀಡಿದ್ದ ಈ ದೇವಸ್ಥಾನ ಜಪಾನ್ ಪ್ರಮುಖ ಆಕರ್ಷಣೆ ಹಾಗೂ ಪ್ರವಾಸಿ ತಾಣವಾಗಿ ಹೊರಹೊಮ್ಮಿದೆ. ಈ ದೇವಸ್ಥಾನದ ಬಗ್ಗೆ ತಿಳಿದು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಡಿವೋರ್ಸ್ ದೇವಸ್ಥಾನದ ಇತಿಹಾಸ ಹೇಳುವ  ಹಳೇ ಕಾಲದಲ್ಲಿನ ಫೋಟೋಗಳು ಈ ದೇವಸ್ತಾನದಲ್ಲಿ ಲಭ್ಯವಿದೆ. ಕೆಲ ಕಲಾಕೃತಿಗಳು, ಬಿಡಿಸಿರುವ ಚಿತ್ರಗಳು ಇಲ್ಲಿ ಲಭ್ಯವಿದೆ. ಇನ್ನು ದಾಖಲೆಗಳು, ಪತ್ರಗಳು, ದೇಗುಲದ ಇತಿಹಾಸಗಳನ್ನು ಸಂರಕ್ಷಿಸಿ ಇಡಲಾಗಿದೆ. ಇದು ಪ್ರಮುಖ ಆಕರ್ಷಣೆಯ ಕೇಂದ್ರವಾಗಿ ಮಾರ್ಪಟ್ಟಿದೆ. 

365 ದಿನಗಳಲ್ಲಿ ದೀಪಾವಳಿಗೆ ಮಾತ್ರ ತೆರೆಯುವ ಹಾಸನಾಂಬ ದೇವರ ಬಗ್ಗೆ ನಿಮಗೆಷ್ಟು ಗೊತ್ತು?
 

click me!