ಹಿಂದೂ ಮದುವೆ ಭಿನ್ನತೆಯಿಂದ ಕೂಡಿದೆ. ಪ್ರತಿ ಪದ್ಧತಿಗೂ ಒಂದೊಂದು ಅರ್ಥವಿದೆ. ವಧು ತವರು ತೊರೆಯುವ ಮುನ್ನ ಅಕ್ಕಿಯನ್ನು ಹಿಂದೆ ಸೋಕಿ ಹೋಗ್ತಾಳೆ. ಇದಕ್ಕೂ ಶಾಸ್ತ್ರದಲ್ಲಿ ಕಾರಣ ಹೇಳಲಾಗಿದೆ.
ಮದುವೆ ಎಂದರೆ ಬರೀ ಹಾಡು, ಕುಣಿತವಲ್ಲ. ಅಲ್ಲಿ ಸಂಪ್ರದಾಯವೂ ಮಹತ್ವವನ್ನು ಪಡೆಯುತ್ತದೆ. ಮದುವೆ ಸಮಯದಲ್ಲಿ ಸಂಭ್ರಮ, ಸಡಗರ, ಶೃಂಗಾರ ತುಂಬಿ ತುಳುಕುತ್ತಿರುತ್ತದೆ. ಮದುವೆ ಒಂದು ಗಂಡು ಹಾಗೂ ಒಂದು ಹೆಣ್ಣನ್ನು ಒಂದುಗೂಡಿಸುವ ಕೆಲಸವನ್ನು ಮಾತ್ರ ಮಾಡೋದಿಲ್ಲ. ಎರಡು ಮನೆಯವರನ್ನು, ಹಲವು ಕುಟುಂಬದವರ ಮಧ್ಯೆ ಸಂಬಂಧ ಬೆಸೆಯುತ್ತದೆ.
ಭಾರತ (India) ದಲ್ಲಿಯೇ ಆಯಾ ಪ್ರದೇಶ, ಜಾತಿ, ಧರ್ಮಗಳಲ್ಲಿ ಬೇರೆ ಬೇರೆ ವಿಧಾನಗಳಲ್ಲಿ ಮದುವೆ ನಡೆಯುತ್ತದೆ. ಮದುವೆಯಲ್ಲಿ ಪ್ರತಿಯೊಂದು ಸಂಪ್ರದಾಯ (Tradition) ಕ್ಕೂ ಪ್ರಾಮುಖ್ಯತೆಯಿದೆ. ಮದುವೆ (Marriage) ಯಲ್ಲಿ ಅರಿಶಿನ ಶಾಸ್ತ್ರ, ಮೆಹಂದಿ ಶಾಸ್ತ್ರದಿಂದ ಹಿಡಿದು ಮನೆಯ ಮುಂದೆ ಕಟ್ಟುವ ಮಾವಿನ ತೋರಣದವರೆಗೆ ಎಲ್ಲವೂ ಮಹತ್ವ ಪಡೆಯುತ್ತದೆ. ಹಾಗೆಯೇ ಈ ಪ್ರತಿಯೊಂದು ಪದ್ಧತಿಗೂ ಅದರದೇ ಆದ ಅರ್ಥವಿದೆ. ಮದುವೆಯಲ್ಲಿ ನಡೆಯುವ ಶಾಸ್ತ್ರ, ಪದ್ಧತಿಗಳು ಶಾಂತಿ, ಅಭಿವೃದ್ಧಿ, ಸಮೃದ್ಧಿ, ಆರೋಗ್ಯದ ಸಂಕೇತವಾಗಿದೆ.
ಈ ದೇವಾಲಯ ಆವರಣದಲ್ಲಿ ಮಲಗಿದರೆ ಸಾಕು, ಮಕ್ಕಳಿಲ್ಲದ ಮಹಿಳೆ ಗರ್ಭವತಿಯಾಗುತ್ತಾಳೆ!
ವಧು (Bride) -ವರರನ್ನು ಮಂಟಪಕ್ಕೆ ಕರೆದುಕೊಂಡು ಬರುವುದರಿಂದ ಹಿಡಿದು ಸಪ್ತಪದಿ, ಹೋಮ, ಹೆಣ್ಣನ್ನು ಗಂಡಿನ ಮನೆಗೆ ಕಳುಹಿಸುವವರೆಗಿನ ಅನೇಕ ಪದ್ಧತಿಗಳನ್ನು ಪಾಲನೆ ಮಾಡಲಾಗುತ್ತದೆ.
ಮದುವೆಯನ್ನು ಎಷ್ಟು ಖುಷಿಯಿಂದ ಮಾಡ್ತೇವೆಯೋ ಅದೇ ಖುಷಿ ಮದುಮಗಳನ್ನು ಬಿಳ್ಕೊಡುವಾಗ ಇರಲು ಸಾಧ್ಯವೇ ಇಲ್ಲ. ಪ್ರೀತಿಯಿಂದ ಬೆಳೆದ ಮಗಳನ್ನು ಅಳಿಯನ ಕೈಗೆ ಒಪ್ಪಿಸಿದ ಸಮಾಧಾನ ತಂದೆ ತಾಯಿಗಿದ್ದರೂ ಮಗಳಿಗೆ ಹೊಸ ಮನೆ ಹೊಸ ಜವಾಬ್ದಾರಿಗಳು ಹೆಗಲೇರುತ್ತವೆ. ಮಗಳು ನಮ್ಮ ಜೊತೆ ಇನ್ನು ಇರಲು ಸಾಧ್ಯವಿಲ್ಲ ಎನ್ನುವ ನೋವು ಅವರನ್ನು ಕಾಡುತ್ತದೆ.
ಪ್ರತಿಯೊಂದು ಸಂಪ್ರದಾಯದವರೂ ಮದುಮಗಳನ್ನು ಅವರದೇ ಆದ ಪದ್ಧತಿಯಲ್ಲಿ ಬಿಳ್ಕೊಡುತ್ತಾರೆ. ಅನೇಕ ಕಡೆ ಮದುಮಗಳು ಅಕ್ಕಿಯನ್ನು ಹಿಂದೆ ಹಾಕ್ತಾ ಮುಂದೆ ಹೋಗುವ ಮೂಲಕ ತವರನ್ನು ತೊರೆಯುತ್ತಾಳೆ. ಮದುವೆಯಾದ ಮಧುಮಗಳು ಗಂಡ ಮನೆಗೆ ಹೋಗುವ ಮೊದಲು ಐದು ಬಾರಿ ಅಕ್ಕಿಯನ್ನು ತನ್ನ ಹಿಂದೆ ಚೆಲ್ಲುತ್ತಾಳೆ. ಮಧುಮಗಳು ಅಕ್ಕಿಯನ್ನು ಹಿಂದೆ ಹಾಕುವುದಕ್ಕೂ ಕೆಲ ಕಾರಣವಿದೆ.
ಈ ಪದ್ಧತಿಯ ಹಿಂದಿರುವ ಕಾರಣ ಗೊತ್ತಾ? :
ಇದನ್ನು ಒಂದು ರೀತಿಯಲ್ಲಿ ಆಶೀರ್ವಾದದ ಸಂಕೇತ ಎನ್ನಲಾಗುತ್ತದೆ. ಮದುಮಗಳು ಅಕ್ಕಿಯನ್ನು ತನ್ನ ತವರು ಮನೆ ಕಡೆ ಸೋಕಿ ತವರು ಮನೆಯ ಸುಖ, ಸಮೃದ್ಧಿ ಹೆಚ್ಚಲೆಂದು ಕೇಳಿಕೊಳ್ಳುತ್ತಾಳೆ. ಮಗಳು ತವರು ಮನೆಯನ್ನು ತೊರೆದು ಗಂಡನ ಮನೆಗೆ ಹೋದರೂ ಕೂಡ ತವರಿನ ಹಿತ ಮತ್ತು ಏಳ್ಗೆಯನ್ನು ಬಯಸುತ್ತಾಳೆ ಎಂಬುದು ಈ ಶಾಸ್ತ್ರದ ಹಿಂದಿರುವ ಸೂಚನೆಯಾಗಿದೆ.
ಸಾಮಾನ್ಯವಾಗಿ ಎಲ್ಲ ಶುಭ ಕಾರ್ಯಗಳಲ್ಲಿಯೂ ಅಕ್ಕಿಯನ್ನು ಬಳಸುತ್ತಾರೆ. ಹಿಂದೂ ಧರ್ಮದಲ್ಲಿ ಅಕ್ಕಿಗೆ ಪೂಜನೀಯ ಸ್ಥಾನವಿದೆ. ಸಣ್ಣ ಪೂಜೆಯಿಂದ ಹಿಡಿದು ದೊಡ್ಡ ಹೋಮ ಹವನಗಳು ಕೂಡ ಅಕ್ಕಿಯಿಲ್ಲದೆ ನಡೆಯುವುದಿಲ್ಲ. ಅಂತಹ ಶ್ರೇಷ್ಠ ಸ್ಥಾನ ಹೊಂದಿರುವ ಅಕ್ಕಿಯನ್ನು ಮದುಮಗಳು ತನ್ನ ತವರಿನ ಕಡೆ ಸೋಕುವುದರಿಂದ ಆ ಮನೆಗೆ ಯಾರ ಕೆಟ್ಟ ದೃಷ್ಟಿಯೂ ಬೀಳುವುದಿಲ್ಲ ಎಂಬ ನಂಬಿಕೆಯಿದೆ.
ಮದುವೆಯಾಗಿ ಗಂಡನ ಮನೆಗೆ ಹೋಗುವ ಪ್ರತಿಯೊಂದು ಹೆಣ್ಣು ಕೂಡ ತನ್ನ ತವರು ಮನೆಗೆ ಒಳ್ಳೆಯದನ್ನೇ ಬಯಸುತ್ತಾಳೆ. ಹಾಗೆಯೇ ಗಂಡನ ಮನೆಗೆ ಹೋಗುವಾಗ ಕೂಡ ಅಕ್ಕಿಯನ್ನು ಸೋಕಿ ತವರಿನಲ್ಲಿ ಧನ ಸಂಪತ್ತು ಹೆಚ್ಚಾಗಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತಾಳೆ ಮಗಳು.
Zodiac Signs: ದೀರ್ಘ ಕಾಲದ ಬಾಂಧವ್ಯದಿಂದ ದೂರ ಓಡುವ ರಾಶಿಗಳು ಯಾವುವು?
ನವಮಾಸ ತನ್ನನ್ನು ಹೊಟ್ಟೆಯಲ್ಲಿ ಇಟ್ಟುಕೊಂಡು ನಂತರ ಸಾಕಿ ಸಲಹಿದ ತಾಯಿ - ತಂದೆಯರಿಗೆ ಕೃತಜ್ಞತೆ ಹೇಳುವುದು ಕೂಡ ಈ ಪದ್ಧತಿಯ ಹಿಂದಿರುವ ಇನ್ನೊಂದು ಅರ್ಥವಾಗಿದೆ.
ಅಕ್ಕಿಯನ್ನು ಚೆಲ್ಲುವುದು ಅಂದ್ರೆ ಆಹಾರದಿಂದ ತುಂಬಿಸಿದಂತೆ. ತನ್ನ ತವರಿನಲ್ಲಿ ಎಂದಿಗೂ ಆಹಾರದ ಕೊರತೆಯಾಗಬಾರದೆಂದು ಮಗಳು ಈ ರೀತಿ ಮಾಡುತ್ತಾಳೆ.