ಯಾವುದೇ ಹಬ್ಬದಲ್ಲೂ ಮನೆ ಹಾಗೂ ಪೂಜಾ ಕೋಣೆಯನ್ನು ಅಲಂಕಾರ ಮಾಡುವುದಕ್ಕೆ ಪ್ರಾಶಸ್ತ್ಯವಿದೆ. ನವರಾತ್ರಿಯಲ್ಲೂ ದೇವಿ ಸಂಪ್ರೀತಿಗೊಳ್ಳುವಂತೆ ದಿನವೂ ವಿಧ ವಿಧ ಅಲಂಕಾರ ಮಾಡಬಹುದು. ಮನೆಯಲ್ಲಿ ಧನಾತ್ಮಕ ವಾತಾವರಣ ಮೂಡಲು ಪೂಜೆ ಕೋಣೆಯನ್ನು ಸಿಂಗಾರ ಮಾಡಬಹುದು.
ನವರಾತ್ರಿಯ ಸಂಭ್ರಮ ಎಲ್ಲೆಡೆ ತುಂಬಿಕೊಂಡಿದೆ. ಮಹಿಳೆಯರು ಮನೆಯ ಕ್ಲೀನಿಂಗ್ ಸೇರಿದಂತೆ ವಿಧವಿಧವಾದ ತಯಾರಿಯಲ್ಲಿದ್ದಾರೆ. ಒಂದೆಡೆ ಹಬ್ಬಕ್ಕೆ ಬೇಕಾದ ವಿವಿಧ ಸಾಮಗ್ರಿ, ಅಡುಗೆಗೆ ಬೇಕಾದ ಪದಾರ್ಥ, ಬಾಗಿನದ ಸಾಮಾನುಗಳನ್ನು ಸಂಗ್ರಹಿಸುತ್ತಿದ್ದಾರೆ. ಮನೆಯಲ್ಲಿ ಹಬ್ಬದ ಸಂಭ್ರಮ ಮೂಡಬೇಕಾದರೆ ಪೂಜೆ ಕೋಣೆಯನ್ನೂ ಚೆನ್ನಾಗಿ ಅಲಂಕಾರ ಮಾಡಬೇಕು. ಆಗಲೇ ಅದಕ್ಕೊಂದು ಕಳೆ ಮೂಡುವುದು ಸಹಜ. ಎಲ್ಲರೂ ಒಂಬತ್ತು ದಿನಗಳ ಕಾಲ ಪೂಜೆ ಮಾಡದಿದ್ದರೂ ವಿಜಯದಶಮಿ ಹಾಗೂ ಕೊನೆಯ ಮೂರು ದಿನಗಳ ಹಬ್ಬವನ್ನು ಆಚರಿಸುವುದು ಸಾಮಾನ್ಯ. ಹಬ್ಬದ ಸಮಯದಲ್ಲಿ ಧನಾತ್ಮಕ ಶಕ್ತಿ ಎಲ್ಲೆಡೆ ತುಂಬಿಕೊಳ್ಳಲು ಪೂಜೆ ಕೋಣೆಯ ಸ್ವಚ್ಛತೆ ಮಾಡಿದ ಬಳಿಕ ಅಲ್ಲಿ ಮೂಡಿಸುವ ವಾತಾವರಣವೂ ಕಾರಣವಾಗುತ್ತದೆ. ಲೈಟ್, ಲ್ಯಾಂಪ್, ಹೂವುಗಳು, ತೋರಣ, ಪುಟ್ಟ ದೀವಿಗೆಗಳು, ಹಣತೆ, ತೂಗು ಹಾಕುವ ಗಿಡಗಳು ಎಲ್ಲವನ್ನೂ ಬಳಕೆ ಮಾಡಿಕೊಂಡು ಪೂಜೆಯ ಕೋಣೆಗೆ ವಿಶಿಷ್ಟ ಮೆರುಗನ್ನು ನೀಡಬಹುದು. ಗೊಂಬೆಗಳನ್ನೂ ಕೂರಿಸುತ್ತೀರಿ ಎಂದಾದರೆ ಆ ಕೋಣೆಯಲ್ಲಿ ಅದ್ಭುತ ಪ್ರಭಾವಳಿ ಮೂಡುವಂತೆ ಮಾಡಬೇಕು. ಆಗ ಇನ್ನಷ್ಟು ವಿಶಿಷ್ಟತೆ ಬರುತ್ತದೆ. ಬೊಂಬೆಗಳನ್ನು ಕೂರಿಸುವಾಗಲೂ ಅವು ಸಾಂಪ್ರದಾಯಿಕ ವೈಭವವನ್ನು ಎತ್ತಿ ತೋರುವಂತೆ ಇರಬೇಕು. ಅದಕ್ಕಾಗಿಯೇ ಪ್ರತಿವರ್ಷ ಬೊಂಬೆಗಳ ಸಂಗ್ರಹ ಮಾಡುವವರೂ ಇದ್ದಾರೆ. ಅವುಗಳೊಂದಿಗೆ ಇನ್ನೂ ಕೆಲವು ರೀತಿಯಲ್ಲಿ ಪೂಜೆ ಕೋಣೆಯನ್ನು ಸಿಂಗಾರ ಮಾಡಿ ಸಂಭ್ರಮಿಸಬಹುದು.
• ಚೆಂಡು ಹೂವಿನ ಬಳಕೆ (Use Marigold Flower)
ಯಾವುದೇ ಸಂಭ್ರಮದ (Celebration) ಸಮಯದಲ್ಲಿ ಚೆಂಡು ಹೂವಿನ ಬಳಕೆ ಮಾಡುವುದು ಉತ್ತಮ. ಚೆಂಡು ಹೂವಿನ ಹಾರಗಳನ್ನು ಹಾಕಬಹುದು. ಅಥವಾ ಬಿಡಿ ಹೂವುಗಳಿಂದಲೇ ಅಲಂಕಾರ ಮಾಡಬಹುದು. ಅವುಗಳ ಬಣ್ಣ (Color) ಕೂಡ ಹಬ್ಬದ ಖುಷಿಗೆ ಇನ್ನಷ್ಟು ಸಡಗರ ಕೂಡಿಸುವಂತೆ ಮಾಡುವುದರಲ್ಲಿ ಅನುಮಾನವಿಲ್ಲ. ಯಾವುದೇ ಪವಿತ್ರ ಸಮಯದಲ್ಲಿ ಚೆಂಡು ಹೂವಿನ ಬಳಕೆ ಅದ್ಭುತ ಪರಿಣಾಮ ನೀಡುತ್ತದೆ. ಅದರ ಮಂದವಾದ ಪರಿಮಳ (Fragrance) ಎಲ್ಲೆಡೆ ಹರಡಿ ಮಧುರವಾದ ಭಾವನೆ ಮೂಡಿಸುತ್ತದೆ.
undefined
• ದೀಪಗಳ ಬೆಳಕು (Lighten room with diyas) ಮೂಡಲಿ
ದೀಪಾವಳಿಯಲ್ಲಿ ಮಾತ್ರವೇ ದೀಪಗಳ ಬೆಳಕನ್ನು ಮೂಡಿಸಬೇಕೆಂದಿಲ್ಲ. ದೀಪಗಳನ್ನು ಎಲ್ಲ ಹಬ್ಬದಲ್ಲೂ ಹಚ್ಚಬೇಕು. ದೇವಿಯ ಮೂರ್ತಿ ಬಳಿ, ಅಕ್ಕಪಕ್ಕ, ಸಾಲುಸಾಲುಗಳಲ್ಲಿ ಸಂಜೆಯ ಹೊತ್ತಿಗೆ (Evening Time), ಬೆಳಗ್ಗೆ ಪೂಜೆಯ (Morning Pooja) ಹೊತ್ತಿಗೆ ದೀಪ ಹಚ್ಚಿದರೆ ಅತ್ಯಂತ ಧನಾತ್ಮಕ (Possitive) ಪ್ರಭಾವ ಉಂಟಾಗುತ್ತದೆ. ಸಂಜೆಯ ಸಮಯದಲ್ಲೂ ದೀಪ ಬೆಳಗಬೇಕು. ಪರಿಮಳಭರಿತ ಕ್ಯಾಂಡಲ್ ಗಳನ್ನೂ ಸಹ ಬಳಕೆ ಮಾಡಬಹುದು. ಹಬ್ಬದ ವಾತಾವರಣ ಮೂಡಲು ಇದರಿಂದ ಸಹಕಾರಿಯಾಗುತ್ತದೆ. ಬ್ಯಾಟರಿ ಚಾಲಿತ ಅಥವಾ ಸಣ್ಣ ವಿದ್ಯುದ್ದೀಪಗಳಿಂದ ಅಲಂಕಾರ ಮಾಡಬಹುದು.
ಇದನ್ನೂ ಓದಿ: Navratri 2022 Bhog: ತಾಯಿ ದುರ್ಗೆಯ 9 ರೂಪಗಳಿಗೆ 9 ವಿಧದ ನೈವೇಧ್ಯ ಅರ್ಪಿಸಿ
• ಹಿಂಭಾಗದ ಅಲಂಕಾರಕ್ಕೂ (Backdrop) ಆದ್ಯತೆ
ದೇವರ ಪೀಠ, ಪಕ್ಕದಲ್ಲಿಡುವ ದೇವಿ ಮೂರ್ತಿ ಅಷ್ಟೇ ಅಲ್ಲ, ಅವುಗಳ ಹಿಂಭಾಗದಲ್ಲೂ ಹೊಳೆಯುವ (Glittering) ಅಥವಾ ಮರದ ಹಲಗೆಗಳನ್ನಿಡಬೇಕು. ಅವುಗಳಿಗೆ ಹೊಳೆಯುವ ಕಾಗದ ಅಥವಾ ಬಣ್ಣದ ಕಾಗದಗಳಿಂದ ಮಾಡಿದ ವಿಧ ವಿಧ ಹೂವಿನ (Flowers) ಆಕಾರಗಳನ್ನು ಅಂಟಿಸಬಹುದು. ಮೇಲ್ಭಾಗದಿಂದ ನೇತು ಹಾಕುವಂತಹ ಹಿತ್ತಾಳೆಯ (Bronze) ವಸ್ತುಗಳನ್ನು ಬಳಸಬಹುದು. ಕರಕುಶಲ ವಸ್ತುಗಳನ್ನು ಇಡಬಹುದು. ಅಲ್ಲಲ್ಲಿ ಬಿದಿರಿನ ವಸ್ತುಗಳನ್ನು ಇಡಬಹುದು. ಹಿತ್ತಾಳೆಯ ಬತ್ತಿಗಳು, ಲ್ಯಾಂಪ್ (Lamp) ಗಳನ್ನು ಅಲ್ಲಲ್ಲಿ ಇಡುವುದರಿಂದ ಇನ್ನಷ್ಟು ಉಲ್ಲಾಸದ ವಾತಾವರಣ ಮೂಡುತ್ತದೆ. ಇದರಿಂದ ಪೂಜೆ ಕೋಣೆಯಲ್ಲಿ ವಿಶಿಷ್ಟ ವಾತಾವರಣ ಮೂಡುತ್ತದೆ.
ಇದನ್ನೂ ಓದಿ: Navratri 2022: ಹಬ್ಬದಲ್ಲಿ ಈ ವಸ್ತುಗಳನ್ನು ಮನೆಯಲ್ಲಿಟ್ಟುಕೊಳ್ಳೋದು ತುಂಬಾ ಅಶುಭ
• ತಾಜಾ (Fresh) ಹೂವುಗಳ ಬಳಕೆ
ಪೂಜೆಯ ಕೋಣೆಯಲ್ಲಿ ಪ್ರತಿದಿನವೂ ತಾಜಾ ಹೂವುಗಳನ್ನು ಬಳಕೆ ಮಾಡಬೇಕು. ಸಾಮಾನ್ಯವಾಗಿ ದೇವಿಯ ಮೂರ್ತಿಗೆ ಸುಂದರವಾದ ಸೀರೆ, ಆಭರಣ ತೊಡಿಸುವುದು ಎಲ್ಲೆಡೆ ಕಂಡುಬರುವ ಪದ್ಧತಿ. ಇವುಗಳೊಂದಿಗೆ ದಿನವೂ ವಿಭಿನ್ನ ರೀತಿಯ ಹೂವುಗಳನ್ನು ದಿನವೂ ಇಡುವುದರಿಂದ, ಪರಿಮಳಭರಿತ ಹೂವಿನ ಮಾಲೆ ಮಾಡಿ ಅಲಂಕಾರ ಮಾಡುವುದರಿಂದ ಪ್ರತಿದಿನವೂ ಉಲ್ಲಾಸವೆನಿಸುತ್ತದೆ.