ನಟ ದರ್ಶನ್ ಬಿಡುಗಡೆ ಭವಿಷ್ಯ ನುಡಿದ ದಸರೀಘಟ್ಟ ಚೌಡೇಶ್ವರಿ, ದೇವಿ ಕಳಸದಲ್ಲಿ ಬರೆದಿದ್ದೇನು?

By Gowthami K  |  First Published Jul 14, 2024, 9:05 PM IST

ಅಭಿಮಾನಿಗಳಿಬ್ಬರು ಪ್ರಸಿದ್ಧ  ದಸರೀಘಟ್ಟ ಚೌಡೇಶ್ವರಿ ದೇವಸ್ಥಾನದಲ್ಲಿ ದರ್ಶನ್ ಬಿಡುಗಡೆ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ದೇವಿ ನೀಡಿರುವ ಉತ್ತರ ಇಲ್ಲಿದೆ.


ತುಮಕೂರು (ಜು.14):  ಚಿತ್ರದುರ್ಗದ ರೇಣುಕಾ ಸ್ವಾಮಿ (RenukaSwamy)ಯನ್ನು ಬೆಂಗಳೂರಿಗೆ ಅಪಹರಣ ಮಾಡಿಕೊಂಡು ಬಂದು ಪಟ್ಟಣಗೆರೆ ಶೆಡ್‌ ನಲ್ಲಿ ವಿಕೃತವಾಗಿ ಕೊಲೆ ಮಾಡಿರುವ ಆರೋಪದ ಮೇಲೆ ನಟ ದರ್ಶನ್ (Actor Darshan), ಆತನ ಆತ್ಮೀಯ ಗೆಳತಿ ಪವಿತ್ರಾ ಗೌಡ  (  Pavithra Gowda) ಸೇರಿ ಒಟ್ಟು 17 ಮಂದಿ ಸದ್ಯ ಜೈಲಿನಲ್ಲಿದ್ದಾರೆ.

ಇದೀಗ ಅವರ ಅಭಿಮಾನಿಗಳು ದರ್ಶನ್ ನಿರಪರಾಧಿಯಾಗಿ ಜೈಲಿನಿಂದ ಹೊರಬರಲಿ ಎಂದು ಪೂಜೆ ಪುನಸ್ಕಾರಗಳನ್ನು ಮಾಡುತ್ತಿದ್ದಾರೆ, ಅದರಂತೆ ಅಭಿಮಾನಿಗಳಿಬ್ಬರು ಪ್ರಸಿದ್ಧ  ದಸರೀಘಟ್ಟ ಚೌಡೇಶ್ವರಿ ದೇವಸ್ಥಾನದಲ್ಲಿ ದರ್ಶನ್ ಬಿಡುಗಡೆ ಬಗ್ಗೆ ಪ್ರಶ್ನೆ ಕೇಳಿದ್ದಾರೆ.

Tap to resize

Latest Videos

ತುಮಕೂರು ಜಿಲ್ಲೆಯ   ತಿಪಟೂರು ತಾಲೂಕಿನ ಆದಿಚುಂಚನಗಿರಿ ಶಾಖ ಮಠದಲ್ಲಿನ ಪ್ರಸಿದ್ಧ ದಸರೀಘಟ್ಟ ಚೌಡೇಶ್ವರಿ ದೇವಸ್ಥಾನದಲ್ಲಿ ದರ್ಶನ್ ಬಿಡುಗಡೆ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಏಕೈಕ ಕಳಶದಲ್ಲಿ ಬರೆಯುವ ಮೂಲ ಕ್ಷೇತ್ರವಾದ ಇಲ್ಲಿ ದೇವಿ ಬರೆಯುವ ಬಗ್ಗೆ ಜನ ಅಪಾರ ನಂಬಿಕೆ ಇಟ್ಟುಕೊಂಡಿದ್ದಾರೆ. ಈ ದೇವಾಲಯಕ್ಕೆ 800 ವರ್ಷಗಳ ಇತಿಹಾಸವಿದೆ.

ಇದೀಗ ಇಬ್ಬರು ಅಭಿಮಾನಿಗಳು ಬಂದು ದೇವಿಯ ಕಳಸದ ಮುಂದೆ ದರ್ಶನ್ ಬಿಡುಗಡೆ ಆಕ್ತಾರ ಎಂದು ಪ್ರಶ್ನೆ ಕೇಳಿದ್ದಾರೆ. ಕೊಲೆ ಪ್ರಕರಣದಲ್ಲಿ ದರ್ಶನ್ ಪಾತ್ರವಿದೆಯೋ ಇಲ್ಲೋ ಗೊತ್ತಿಲ್ಲ. ನಮಗೆ ಅವರು ಹೊರಗಡೆ ಬರಬೇಕು ಅನ್ನುವ ಆಸೆ ಇದೆ. ಯಾವಾಗ ಅವರು ಹೊರಬರುತ್ತಾರೆ ಎಂದು ಕೇಳಿದ್ದೆವು. ಅದಕ್ಕೆ ದೇವಿ ಏನೂ ಕೂಡ ಉತ್ತರ ನೀಡುತ್ತಿಲ್ಲ. ಎಷ್ಟು ದಿವಸ ಆಗುತ್ತದೆ ಎಂದು ನಾವು ಕೇಳಿದೆವು ಅದಕ್ಕೆ ದೇವಿ ಇನ್ನೂ ಸಮಯಬೇಕು. ಈಗಲೇ ಹೇಳಲು ಆಗಲ್ಲ ಎಂದು ಹೇಳುತ್ತಿದ್ದಾಳೆ. ಕೊನೆಯದಾಗಿ ಕೇಳಿದಾಗ ಇನ್ನೂ ಕಾಲಾವಕಾಶ ಇದೆ ಎಂದು ಹೇಳಿದ್ದಾಳೆ. ನೋಡಬೇಕು ಮುಂದೆ ಎಂದು ಅಭಿಮಾನಿ ಉತ್ತರಿಸಿದ್ದಾರೆ. ಅಭಿಮಾನಗಳ ಪ್ರಶ್ನೆಗೆ ದೇವಿ ಕಳಸದಲ್ಲಿ ಬರೆದಿದ್ದು, ಕಷ್ಟ ಇದೆ ಎಂದು ಉತ್ತರಿಸಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಈ ಸಂಬಂಧ ವಿಡಿಯೋ ಕೂಡ ವೈರಲ್ ಆಗ್ತಿದೆ. 

ಉಡುಪಿ: ಅಣ್ಣಪ್ಪ ಪಂಜುರ್ಲಿ ದೈವಾರಾಧನೆಯಲ್ಲಿ ಭಾಗವಹಿಸಿದ ಪಾಕ್‌ ಮೂಲದ ಕುಟುಂಬ

ಕಳಸದಲ್ಲಿ ಬರೆದು ಭಕ್ತರ ಕಷ್ಟ ನೀಗಿಸುವ ದೇವಿ:
 ದಸರೀಘಟ್ಟ ಚೌಡೇಶ್ವರಿ ದೇವಿಯು ವಲ್ಮಿಕ(ಹುತ್ತ)ದ ರೂಪದಲ್ಲಿದೆ.  ಆರು ಅಡಿ ಎತ್ತರದಲ್ಲಿಅಮ್ಮನವರ ಆಕೃತಿಯನ್ನು ಶುದ್ಧ ಆವೆಮಣ್ಣು, ನಾರಿಕೇಳ, ಶಂಖ ಇತ್ಯಾದಿ ಪ್ರಾಕೃತಿಕ ದ್ರವ್ಯಗಳಿಂದ ನಿರ್ಮಾಣ ಮಾಡಲಾಗಿದೆ. ತಾಯಿಯ ಧ್ಯಾನ ಶ್ಲೋಕದಲ್ಲಿ ಆಕೆಯ  ವರ್ಣನೆ ಮಾಡಲಾಗಿದೆ.

ಹಿಂದೆ ನಡೆದಿದ್ದು, ಇಂದು, ಮುಂದೆ ನಡೆಯುವ ಆಗುಹೋಗುಗಳನ್ನು ಬರೆದು ಹೇಳುವ ಮಹಾಶಕ್ತಿ ಈ ತಾಯಿಗಿದೆ. ಚೌಡೇಶ್ವರಿಯ ಉತ್ಸವದ ಮೂರ್ತಿಯ ಪೀಠವನ್ನು ಇಬ್ಬರು ವ್ಯಕ್ತಿಗಳು ಹಿಡಿದು ಕೊಳ್ಳುತ್ತಾರೆ.  ಮುಂಭಾಗದ ಮಣೆಯ ಮೇಲೆ ಅಕ್ಕಿ ಅಥವಾ ರಾಗಿ ಹಿಟ್ಟನ್ನು ಹಾಕಿದರೆ ಅದರ ಮೇಲೆ ದೇವಿ ಕಳಸದಲ್ಲಿ ಬರೆಯುತ್ತಾಳೆ. ದೇಶದ ನಾನಾ ಭಾಗಗಳಿಂದ ಭಕ್ತರು ತಮ್ಮ ಕಷ್ಟಗಳನ್ನು ಕೇಳಿಕೊಂಡು ಇಲ್ಲಿ ಬರುತ್ತಾರೆ.

 

click me!