ದಿನವಿಡೀ ನಡೆದ ಉತ್ಸವದಲ್ಲಿ ಸ್ಥಳೀಯರು ಉತ್ಸಾಹದಿಂದ ಭಾಗವಹಿಸಿ ಸಾಂಸ್ಕೃತಿಕ ಪ್ರದರ್ಶನ ಮತ್ತು ಸಂಕ್ರಾಂತಿ ಜಾತ್ರೆ ನಡೆಸಿಕೊಟ್ಟರು. ಮಾದೇಶ್ವರನ ಭಕ್ತರಿಂದ ಪ್ರದರ್ಶಿಸಲ್ಪಟ್ಟ ಕಂಸಾಳೆ ನೃತ್ಯ ಸಾಂಸ್ಕೃತಿಕ ಸಂಜೆ ವೈಭವಕ್ಕೆ ಕಳೆ ತಂದಿತು.
ಚಿಕ್ಕಬಳ್ಳಾಪುರ(ಜ.15): ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ, ಸದ್ಗುರು ಅವರು ತಾಲೂಕಿನ ಆವಲಗುರ್ಕಿಯ ಈಶ ಫೌಂಡೇಶನ್‌ನಲ್ಲಿ 112 ಅಡಿ ಎತ್ತರದ ಆದಿಯೋಗಿ ವಿಗ್ರಹದ ಸದ್ಗುರು ಸನ್ನಿಧಿಯಲ್ಲಿ 54 ಅಡಿ ಎತ್ತರದ ಮಹಾಶೂಲವನ್ನು ಮಂಗಳವಾರ ಪ್ರತಿಷ್ಠಾಪಿಸಲಾಯಿತು. ಐತಿಹಾಸಿಕ ಕಾರ್ಯಕ್ರಮ ವೀಕ್ಷಿಸಲು ಸಾವಿರಾರು ಭಕ್ತರ ಸೇರಿದ್ದರು. ಈ 54 ಅಡಿ ಎತ್ತರದ ವಿಶ್ವದ ಏಕಮಾತ್ರ ಮಹಾಶೂಲವು ಆದಿಯೋಗಿ ಭವ್ಯತೆ ಮತ್ತು ಅನುಗ್ರಹ ಇಮ್ಮಡಿಗೊಳಿಸಲಿದೆ.
ದಿನವಿಡೀ ನಡೆದ ಉತ್ಸವದಲ್ಲಿ ಸ್ಥಳೀಯರು ಉತ್ಸಾಹದಿಂದ ಭಾಗವಹಿಸಿ ಸಾಂಸ್ಕೃತಿಕ ಪ್ರದರ್ಶನ ಮತ್ತು ಸಂಕ್ರಾಂತಿ ಜಾತ್ರೆ ನಡೆಸಿಕೊಟ್ಟರು. ಮಾದೇಶ್ವರನ ಭಕ್ತರಿಂದ ಪ್ರದರ್ಶಿಸಲ್ಪಟ್ಟ ಕಂಸಾಳೆ ನೃತ್ಯ ಸಾಂಸ್ಕೃತಿಕ ಸಂಜೆ ವೈಭವಕ್ಕೆ ಕಳೆ ತಂದಿತು.
ಸದ್ಗುರು ಸ್ಥಾಪಿತ ಈಶ ಫೌಂಡೇಶನ್‌ನ 5 ಕೃಷಿ ಸಂಸ್ಥೆಗಳಿಗೆ ರಾಜ್ಯ, ರಾಷ್ಟ್ರೀಯ ಪ್ರಶಸ್ತಿ
ಭಕ್ತರನ್ನುದ್ದೇಶಿಸಿ ಸದ್ಗುರು ಮಾತನಾಡಿ, ಪ್ರತಿ ಶಿವ ದೇವಾಲಯದ ಹೊರಗೆ ನಂದಿ ಕಾಣಬಹುದು. ನಂದಿ ಅವಿರತ ಕಾಯುವಿಕೆ ಸಂಕೇತ, ಏಕೆಂದರೆ ಕಾಯುವುದು ಭಾರತೀಯ ಸಂಸ್ಕೃತಿಯಲ್ಲಿ ಶ್ರೇಷ್ಠವಾದುದೆಂದು ಪರಿಗಣಿಸಲಾಗಿದೆ. ಜನರು ಧ್ಯಾನವನ್ನು ಒಂದು ರೀತಿ ಚಟುವಟಿಕೆ ಎಂದು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಇದು ಒಂದು ಗುಣಧರ್ಮ. ಪ್ರಾರ್ಥನೆ. ಎಂದರೆ ನೀವು ದೇವರೊಂದಿಗೆ ಮಾತನಾಡಲು ಪ್ರಯತ್ನಿಸುತ್ತಿದ್ದೀರಿ ಎಂದರ್ಥ. ಧ್ಯಾನ ಎಂದರೆ ನೀವು ಅಸ್ತಿತ್ವವನ್ನು, ಸೃಷ್ಟಿಯ ಅಂತಿಮ ಸ್ವರೂಪವನ್ನು ಆಲಿಸಲು ಸಿದ್ಧರಿದ್ದೀರಿ ಎಂದರ್ಥ ಎಂದು ನಂದಿ ಮಹತ್ವ ವಿವರಿಸಿದರು.
ಮಹಾಶೂಲ (ಶಿವನ ತ್ರಿಶೂಲ)ದ ಕುರಿತು ಮಾತಾಡುತ್ತಾ, ‘ಇಡೀ ಸೃಷ್ಟಿಯು ಮೂರು ಅಂಶಗಳ ದ್ಯೋತಕವಾಗಿದೆ - ಸೃಷ್ಟಿ, ಸ್ಥಿತಿ ಮತ್ತು ಲಯ. ಭಾರತೀಯ ಸಂಸ್ಕೃತಿಯಲ್ಲಿ, ನಾವು ಈ ಮೂರು ಶಕ್ತಿಗಳನ್ನು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಎನ್ನುತ್ತೇವೆ. ಬ್ರಹ್ಮವು ಹುಟ್ಟಿನ ಬಗ್ಗೆಯಾದರೆ, ವಿಷ್ಣುವು ಅಸ್ತಿತ್ವದ ನಿರ್ವಹಣೆ ಮತ್ತು ಶಿವ ವಿನಾಶದ ಬಗ್ಗೆ. ಆದಾಗ್ಯೂ, ಮೂಲ ರೂಪದಲ್ಲಿ ಈ ಮೂರು ಕೇವಲ ಒಂದೇ, ಏಕೆಂದರೆ ಸೃಷ್ಟಿ ಮತ್ತು ನಿರ್ವಹಣೆ ಕೇವಲ ವಿನಾಶತೆಯ ಮಡಿಲಲ್ಲೇ ಅಸ್ತಿತ್ವದಲ್ಲಿದೆ. ಅದೇ ಮಹಾಶೂಲದ ಮಹತ್ವ – ಮೇಲ್ನೋಟಕ್ಕೆ ಈ ಮೂರು ಬೇರೆ ಬೇರೆಯಾಗಿ ತೋರಿದರೂ, ನಿಜ ರೂಪದಲ್ಲಿ ಎಲ್ಲವೂ ಒಂದೇ ಎಂಬುದನ್ನು ನಿರಂತರವಾಗಿ ಸೂಚಿಸುವುದು’ ಎಂದರು.