Fact Check: ಗಾಳಿಪಟಕ್ಕೆ ಸಿಲುಕಿ ಬಾಲಕಿ ಗಾಳಿಯಲ್ಲಿ ಹಾರಿದ ವೈರಲ್ ವೀಡಿಯೊ ಅಹಮದಾಬಾದ್‌ನದ್ದಲ್ಲ, ತೈವಾನದ್ದು

By Manjunath Nayak  |  First Published Jan 21, 2023, 5:00 PM IST

ಈ ವೈರಲ್‌ ವಿಡಿಯೋ ಬಗ್ಗೆ ಏಷ್ಯಾನೆಟ್‌ ಸುವರ್ಣ ನ್ಯೂಸ್ ತನಿಖೆ ನಡೆಸಿದಾಗ‌ ವೈರಲ್‌ ವೀಡಿಯೋ ಜನವರಿ 2023 ಅಥವಾ ಅಹಮದಾಬಾದ್‌ಗೆ ಸಂಬಂಧಿಸಿಲ್ಲ ಎಂದು ಸಾಬೀತಾಗಿದೆ


Fact Check: ಗಾಳಿಪಟದೊಂದಿಗೆ ಚಿಕ್ಕ ಮಗುವೊಂದು ಕೂಡ ಗಾಳಿಯಲ್ಲಿ ಹಾರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್‌ ಆಗಿದೆ. ವಿವಿಧ ಕ್ಲೈಮ್‌ಗಳೊಂದಿಗೆ ಸಾಮಾಜಿಕ ಜಾಲತಾಣ ಬಳಕೆದಾರರು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದು ಗುಜರಾತಿನ ಅಹಮದಾಬಾದಿನಲ್ಲಿ (Ahmedabad) ನಡೆದಿರುವ ಘಟನೆ ಎಂದು ಕೆಲವರು ಬರೆದುಕೊಂಡಿದ್ದಾರೆ. ವೈರಲ್‌ ವಿಡಿಯೋದಲ್ಲಿ (Viral Video) ಗಾಳಿಪಟದೊಂದಿಗೆ ಬಾಲಕಿಯೊಬ್ಬಳು ಕೆಲವು ಸೆಕೆಂಡುಗಳ ಕಾಲ ಗಾಳಿಯಲ್ಲಿ ಹಾರಿದ್ದು, ಕೆಳಗೆ ನಿಂತಿರುವ ಜನರು ಕೂಗುತ್ತಿದ್ದಾರೆ. ಕೆಲವು ಸೆಕೆಂಡುಗಳ ನಂತರ  ಬಾಲಕಿ ಗಾಳಿಪಟದೊಂದಿಗೆ ಕೆಳಗೆ ಬಂದಿದ್ದಾಳೆ, ಬಳಿಕ ಬಾಲಕಿ ಕಡೆಗೆ ಜನರು ಓಡುತ್ತಿರುವುದನ್ನು ದ್ಶಶ್ಯದಲ್ಲಿ ಕಾಣಬಹುದು. ಈ ವೈರಲ್‌ ವಿಡಿಯೋ ಬಗ್ಗೆ ಏಷ್ಯಾನೆಟ್‌ ಸುವರ್ಣ ನ್ಯೂಸ್ ತನಿಖೆ ನಡೆಸಿದಾಗ‌ ವೈರಲ್‌ ವೀಡಿಯೋ ಜನವರಿ 2023 ಅಥವಾ ಅಹಮದಾಬಾದ್‌ಗೆ ಸಂಬಂಧಿಸಿಲ್ಲ ಎಂದು ಸಾಬೀತಾಗಿದೆ. ವೈರಲ್  ವೀಡಿಯೊ ಆಗಸ್ಟ್ 2020ರ ತೈವಾನ್‌ ವಿಡಿಯೋ ಎಂದು ಫ್ಯಾಕ್ಟ್‌ ಚೆಕ್‌ನಲ್ಲಿ (Fact Check) ತಿಳಿದುಬಂದಿದೆ. 

Claim: ಅಹಮದಾಬಾದ್‌ನಲ್ಲಿ ಗಾಳಿಪಟ ಹಾರಿಸುವಾಗ 3 ವರ್ಷದ ಮಗು ಕೂಡ ಗಾಳಿಪಟದೊಂದಿಗೆ ಹಾರಿದೆ | Viral Video Of A Girl Hanging Onto Kite

Tap to resize

Latest Videos

ವೈರಲ್‌ ಪೋಸ್ಟ್‌ ಇಲ್ಲಿ ಮತ್ತು ನೋಡಬಹುದು 

Fact Check: ವೈರಲ್‌ ವಿಡಿಯೋ ಸತ್ಯಾಸತ್ಯತೆ ತಿಳಿಯಲು ನಾವು ಕೀವರ್ಡ್‌ನ ಬಳಸಿ ಗೂಗಲ್‌ ಸರ್ಚ್‌ (Google Search) ಮಾಡಿದಾಗ ಹಲವು ಲಿಂಕ್‌ ಪತ್ತೆಯಾಗಿವೆ. ದಿ ಗಾರ್ಡಿಯನ್‌ (The Guardian) ಈ ಬಗ್ಗೆ ವರದಿ ಮಾಡಿದ್ದು ಶೀರ್ಷಿಕೆಯಲ್ಲಿ Child, 3, catches in kite strings and is lifted high into air in Taiwan ಎಂದು ಬರೆಯಲಾಗಿದೆ. ಈ ಸುದ್ದಿಯನ್ನು ಮೊದಲು 30 ಆಗಸ್ಟ್ 2020 ರಂದು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ, ಅದನ್ನು ನಂತರ ನವೀಕರಿಸಲಾಗಿದೆ. 

ತೈವಾನ್‌ನಲ್ಲಿ 3 ವರ್ಷದ ಬಾಲಕಿಯೊಬ್ಬಳು ಗಾಳಿಪಟದ ಉದ್ದನೆಯ ದಾರದಲ್ಲಿ ಸಿಲುಕಿ ಗಾಳಿಯಲ್ಲಿ ಹಾರಿದಳು, ಬಾಲಕಿಯನ್ನು  ರಕ್ಷಿಸಲಾಗಿದ್ದು ಯಾವುದೇ ಗಾಯಗಳಾಗಿಲ್ಲ. ಬಾಲಕಿ ಹ್ಸಿಂಚು ನಗರದ ನಾನ್ಲಿಯಾವೊ ಪ್ರದೇಶದ ನಿವಾಸಿ ಎಂದು ವರದಿಯಲ್ಲಿ ತಿಳಿಸಲಾಗಿದೆ. 

ಗಾಳಿಪಟ ಉತ್ಸವದ ಸಂದರ್ಭದಲ್ಲಿ, ಉದ್ದನೆಯ ದಾರವನ್ನು ಹಿಡಿಯಲು ಜನಸಮೂಹ ಅಲ್ಲಿ ನೆರೆದಿತ್ತು. ಇದ್ದಕ್ಕಿದ್ದಂತೆ ಬಲವಾದ ಗಾಳಿ ಬೀಸಿದ್ದರಿಂದ ಗಾಳಿಪಟದ ಜತೆ ಬಾಲಕಿ ಹಾರಿ ಹೋಗಿದ್ದಾಳೆ. ಕಾರ್ಯಕ್ರಮ ಆಯೋಜಕರು ಬಲವಾದ ಗಾಳಿಯ ನಿರೀಕ್ಷಿಸಿರಲಿಲ್ಲ ಎಂದು ತೈವಾನ್‌ನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇದ್ದಕ್ಕಿದ್ದಂತೆ 50ರಿಂದ 60 ಕಿ.ಮೀ ವೇಗದಲ್ಲಿ ಗಾಳಿ ಬೀಸಿದ್ದರರಿಂದ ಈ ಘಟನೆ ನಡೆದಿದೆ. ಘಟನೆಯ ನಂತರ ಮೇಯರ್ ಹೇಳಿಕೆ ನೀಡಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಹೀಗಾಗಿ ಈ ವಿಡಿಯೋ ಅಹಮದಾಬಾದ್‌ನದ್ದಲ್ಲ ಎಂಬುದು ಇದರಿಂದ ಸ್ಪಷ್ಟವಾಗಿದೆ.

ಇದೇ ಕೀವರ್ಡ್‌ಗಳೊಂದಿಗೆ ನಾವು ಗೂಗಲ್‌ನ ವೀಡಿಯೊ ವಿಭಾಗಕ್ಕೆ ಹೋದಾಗಲೂ ಈ ವಿಡಿಯೋ ಲಭ್ಯವಾಗಿದೆ. ಆಗಸ್ಟ್ 2020ರ ವೀಡಿಯೊವು ಗೂಗಲ್‌ ವೀಡಿಯೊ ಪುಟದಲ್ಲಿ ಲಭ್ಯವಾಗಿದೆ. ಗಾರ್ಡಿಯನ್ ನ್ಯೂಸ್ ಮತ್ತು ಟುಡೇ ಲಿಂಕ್‌ನಲ್ಲಿಯೂ ಸಹ, ತೈವಾನಿನ  ಈ ಘಟನೆ ಬಗ್ಗೆ ವರದಿ ಮಾಡಲಾಗಿದೆ. 


Conclusion: ವೈರಲ್ ಆಗುತ್ತಿರುವ ವಿಡಿಯೋ ಅಹಮದಾಬಾದ್‌ನದ್ದಲ್ಲ ಬದಲಾಗಿ  ಆಗಸ್ಟ್ 2020ರ ತೈವಾನಿನ ವಿಡಿಯೋ ಎಂದು ಫ್ಯಾಕ್ಟ್‌ ಚೆಕ್‌ನಲ್ಲಿ ಸಾಬೀತಾಗಿದೆ. ಆದರೆ ಈ ವಿಡಿಯೋವನ್ನು ಅಹಮದಾಬಾದ್ ಹೆಸರಿನಲ್ಲಿ ಶೇರ್ ಮಾಡಲಾಗುತ್ತಿದೆ.

ಇದನ್ನೂ ಓದಿ: 27 ವರ್ಷ ಹಿಂದೆ ಕೇಶುಭಾಯ್ ಪಟೇಲ್ ಪ್ರಮಾಣ ವಚನ ಸಮಾರಂಭದಲ್ಲಿ ಪ್ರಧಾನಿ ಮೋದಿ

click me!