Fact Check: ಭಾರತ ಸೇನೆಯ 75 ಯೋಧರನ್ನು ಕೊಂದು ಹಾಕಿತಾ ಚೀನಾ?

Published : May 29, 2020, 09:21 AM ISTUpdated : May 29, 2020, 09:29 AM IST
Fact Check: ಭಾರತ ಸೇನೆಯ 75 ಯೋಧರನ್ನು ಕೊಂದು ಹಾಕಿತಾ ಚೀನಾ?

ಸಾರಾಂಶ

ಚೀನಾ-ಭಾರತ ನಡುವಣ ನೈಜ ನಿಯಂತ್ರಣ ರೇಖೆಯ ಉದ್ದಕ್ಕೂ ಗಾಲ್ವಾನ್‌ ಕಣಿವೆಯ ಭಾಗದಲ್ಲಿ ಸುಮಾರು 10,000 ಮಂದಿ ಯೋಧರನ್ನು ಠಿಕಾಣಿ ಹೂಡಿಸಿದೆ. ಈ ನಡುವೆ ಚೀನಾ ನಮ್ಮ ಭಾರತ ಸೇನೆಯ 75 ಯೋಧರನ್ನು ಕೊಂದುಹಾಕಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

ಇಡೀ ವಿಶ್ವವೇ ಕೊರೋನಾ ವೈರಸ್‌ ವಿರುದ್ಧ ಸಮರ ಸಾರಿರುವ ಸಂದರ್ಭದಲ್ಲಿ ಚೀನಾ ಭಾರತದೊಂದಿಗೆ ಗಡಿ ವಿಚಾರಕ್ಕೆ ಜಗಳಕ್ಕೆ ನಿಂತಿದ್ದು, ಉಭಯ ದೇಶಗಳ ನಡುವೆ ಕಳೆದ 10ದಿನಗಳಿಂದ ಗಡಿಯಲ್ಲಿ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಗಿದೆ. ಚೀನಾ-ಭಾರತ ನಡುವಣ ನೈಜ ನಿಯಂತ್ರಣ ರೇಖೆಯ ಉದ್ದಕ್ಕೂ ಗಾಲ್ವಾನ್‌ ಕಣಿವೆಯ ಭಾಗದಲ್ಲಿ ಸುಮಾರು 10,000 ಮಂದಿ ಯೋಧರನ್ನು ಠಿಕಾಣಿ ಹೂಡಿಸಿದೆ.

Fact Check: ‘ಸಮ-ಬೆಸ’ ಸ್ಕೀಮ್‌ನಲ್ಲಿ ಶಾಲೆ ತೆರೆಯಲು ರಾಹುಲ್ ಗಾಂಧಿ ಸಲಹೆ?

ಈ ನಡುವೆ ಚೀನಾ ನಮ್ಮ ಭಾರತ ಸೇನೆಯ 75 ಯೋಧರನ್ನು ಕೊಂದುಹಾಕಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ‘ಸಲ್ಮಾನ್‌ ಹಮೀದ್‌’ ಎಂಬ ಫೇಸ್‌ಬುಕ್‌ ಖಾತೆಯಲ್ಲಿ ಹಲವು ಯೋಧರ ಮೃತದೇಹವನ್ನು ಮುಂದಿಟ್ಟು ಭಾರತೀಯ ಸೇನೆ ನಮನ ಸಲ್ಲಿಸುತ್ತಿರುವ ಫೋಟೋವನ್ನು ಪೋಸ್ಟ್‌ ಮಾಡಿ, ‘75 ಭಾರತೀಯ ಸೈನಿಕರು ನರಕ ಸೇರಿದ್ದಾರೆ. ಇದು ಲಡಾಕ್‌ನಲ್ಲಿ ಚೀನಾ ಸೈನಿಕರು ಭಾರತಕ್ಕೆ ರವಾನಿಸಿರುವ ತಣ್ಣನೆಯ ಸಂದೇಶ. ರಾಮ್‌ ರಾಮ್‌ ಸತ್ಯ ಹೇ’ ಎಂದು ಬರೆದುಕೊಂಡಿದ್ದಾರೆ. ಇದು 1400 ಬಾರಿ ಶೇರ್‌ ಆಗಿ, ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗುತ್ತಿದೆ.

 

ಆದರೆ ಇಂಡಿಯಾ ಟುಡೇ ಈ ಸುದ್ದಿಯ ಸತ್ಯಾಸತ್ಯ ಪರಿಶೀಲಿಸಿದಾಗ ಇದು ಸುಳ್ಳು ಸುದ್ದಿ, ಇಲ್ಲಿ ಪೋಸ್ಟ್‌ ಮಾಡಲಾದ ಫೋಟೋ 2019ರ ಫೆಬ್ರವರಿ 15ರಂದು ಪುಲ್ವಾಮಾ ಆತ್ಮಹತ್ಯಾ ದಾಳಿಯಲ್ಲಿ ಮೃತಪಟ್ಟಸೈನಿಕರಿಗೆ ನಮನ ಸಲ್ಲಿಸುತ್ತಿರುವ ಫೋಟೋ ಎಂದು ತಿಳಿದುಬಂದಿದೆ.

ಚೀನಾ ಭಾರತೀಯ ಸೈನಿಕರನ್ನು ಹತ್ಯೆ ಮಾಡಿಲ್ಲ. ಈ ಬಗ್ಗೆ ಮುಖ್ಯವಾಹಿನಿ ಮಾಧ್ಯಮಗಳಲ್ಲೆಲ್ಲೂ ವರದಿಯೂ ಆಗಿಲ್ಲ. ಹಾಗಾಗಿ ಈ ಸುದ್ದಿ ಸುಳ್ಳು.

- ವೈರಲ್ ಚೆಕ್ 

PREV
click me!

Recommended Stories

ಡೈಪರ್ ಬಳಸಿದರೆ ಮಕ್ಕಳ ಕಿಡ್ನಿ ಹಾಳಾಗುತ್ತಾ, ವೈರಲ್ ಆಗಿರೊ ಸುದ್ದಿಯಲ್ಲಿ ಸತ್ಯವೆಷ್ಟು?
ಯುವ ಜೋಡಿಯ 'ಆ 19 ನಿಮಿಷ'ದ MMS ಲೀಕ್​ ಆಯ್ತು! ಹಲ್​ಚಲ್​ ಸೃಷ್ಟಿಸಿರೋ ವಿಡಿಯೋದ ಅಸಲಿಯತ್ತೇನು?