Fact Check: CRPF 2011 vs 2021: ಸೋಷಿಯಲ್‌ ಮೀಡಿಯಾ ಪೋಸ್ಟ್ ಸತ್ಯಾಸತ್ಯತೆ ಏನು?

By Manjunath Nayak  |  First Published Jan 2, 2022, 8:05 PM IST

ಭಾರತದ ಅತಿದೊಡ್ಡ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ ಸಿಆರ್‌ಪಿಎಫ್ ಕಳೆದ ದಶಕದಲ್ಲಿ ಸಾಕಷ್ಟು ಬದಲಾಗಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಲಾಗಿದೆ. ಎರಡು ಜವಾನರು ನಿಂತಿರುವ ಫೋಟೋಗಳನ್ನು ಶೆರ್‌ ಮಾಡಿರುವ ನೆಟ್ಟಿಗರು, ಇದು 2011ಕ್ಕೂ 2021ಕ್ಕೂ ಇರುವ ವ್ಯತ್ಯಾಸ ಎಂಬ ಕ್ಯಾಪ್ಶನ್‌ನೊಂದಿಗೆ ಫೋಸ್ಟ್‌ ಶೇರ್‌ ಮಾಡಿದ್ದಾರೆ.


Fact Chek: 2022ಹೊಸ ವರ್ಷದ ಸಂಭ್ರಮದ ಮಧ್ಯೆಯೇ ನೆಟ್ಟಿಗರು ತಪ್ಪು ಮಾಹಿತಿ ನೀಡುವ ಸಾಕಷ್ಟು ಪೋಸ್ಟ್‌ಗಳನ್ನು ಸೋಷಿಯಲ್‌ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಹೊಸ ವರ್ಷದ ಮೊದಲ ದಿನವೇ ತಪ್ಪು ಮಾಹಿತಿ ನೀಡುವ ಪೋಸ್ಟ್‌ಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಭಾರತದ ಅತಿದೊಡ್ಡ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ ಸಿಆರ್‌ಪಿಎಫ್ ಕಳೆದ ದಶಕದಲ್ಲಿ ಸಾಕಷ್ಟು ಬದಲಾಗಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಲಾಗಿದೆ. ಎರಡು ಜವಾನರು ನಿಂತಿರುವ ಫೋಟೋಗಳನ್ನು ಶೆರ್‌ ಮಾಡಿರುವ ನೆಟ್ಟಿಗರು, ಇದು 2011ಕ್ಕೂ 2021ಕ್ಕೂ ಇರುವ ವ್ಯತ್ಯಾಸ ಎಂಬ ಕ್ಯಾಪ್ಶನ್‌ನೊಂದಿಗೆ ಫೋಸ್ಟ್‌ ಶೇರ್‌ ಮಾಡಿದ್ದಾರೆ.

ಆದರೆ ಈ ಮಾಹಿತಿ  ಸತ್ಯಾಸತ್ಯತೆ ಫ್ಯಾಕ್ಟ್‌ ಚೆಕ್‌ನಲ್ಲಿ ತಿಳಿದುಬಂದಿದೆ. ಸೋಷಿಯಲ್‌ ಮೀಡಿಯಾಗಳಲ್ಲಿ ಹರಿದಾಡಿರುವಂತೆ ಮೊದಲ ಚಿತ್ರವು  2011ರದ್ದಲ್ಲ ಬದಲಾಗಿ ಅದು  2017 ರಲ್ಲಿನ ಛಾಯಾಚಿತ್ರ ಹಾಗೂ ಎರಡನೇ ಚಿತ್ರವು ಸಿಆರ್‌ಪಿಎಫ್‌ನ ಎಲೈಟ್ ಕಮಾಂಡೋ ವಿಭಾಗದ ಜವಾನನ ಫೋಟೋ ಎಂದು ತಿಳಿದು ಬಂದಿದೆ. 

Tap to resize

Latest Videos

Claim: 

"CRPF jawan 2011 Vs CRPF Jawan 2022. Choose wisely India. Jai Hind," ಬರಹದ ಜತೆಗೆ ಸಿಆರ್‌ಪಿಎಫ್ ಸಿಬ್ಬಂದಿ ಎಂದು ಹೇಳಲಾದ ಎರಡು ಚಿತ್ರಗಳನ್ನು ಹಂಚಿಕೊಳ್ಳಲಾಗಿದೆ. 

ಇದೇ ರೀತಿ ಸಾಕಷ್ಟು ಪೋಸ್ಟ್‌ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. ಈ ಫೋಸ್ಟ್‌ಗಳನ್ನು ನೀವು ಮತ್ತು ನೋಡಬಹುದು.

Fact Check 

2011ರಲ್ಲಿ ತೆಗೆದದ್ದು ಎಂದು ಹೇಳಲಾದ ಮೊದಲ ಫೋಟೋ, ಖಾಕಿ ಪ್ಯಾಂಟ್‌ಗಳನ್ನು ಧರಿಸಿರುವ ಜವಾನ, ಸೇನೆಯ-ಹಸಿರು ಬಟ್ಟೆ ಮತ್ತು INSAS ರೈಫಲ್‌ನೊಂದಿಗೆ ನಿಂತಿರುವುದನ್ನು ನೋಡಬಹುದು. 2017 ರಲ್ಲಿ ಶ್ರೀನಗರದಲ್ಲಿ ಅಲಾಮಿ ನ್ಯೂಸ್ ಲೈವ್‌ಗಾಗಿ ( Alamy News Live) ಛಾಯಾಗ್ರಾಹಕ ಅರ್ಬಾಜ್ ಮುಘಲ್ ಅವರು ಈ ಫೋಟೋವನ್ನು ಕ್ಲಿಕ್ ಮಾಡಿದ್ದಾರೆ ಎಂದು ರಿವರ್ಸ್ ಸರ್ಚ್ ತೋರಿಸಿದೆ. ಅಲಾಮಿ ನ್ಯೂಸ್ ಲೈವ್‌ ವೆಬ್‌ಸೈಟ್‌ನಲ್ಲಿ ತಿಳಿಸಿರುವಂತೆ ಈ ಫೋಟೊವನ್ನು 20 ಡಿಸೆಂಬರ್‌ 2017ರಲ್ಲಿ ತೆಗೆಯಲಾಗಿದೆ. ಫೋಟೋವನ್ನು ನೀವು ನೋಡಬಹುದು.


ಇನ್ನು ಎರಡನೇ ಚಿತ್ರವು  ಸುಧಾರಿತ ಮಿಲಿಟರಿ (Advanced Military Gear) ಉಡುಪಿನಲ್ಲಿರುವ ಇನ್ನೊಬ್ಬ ಸಿಬ್ಬಂದಿಯನ್ನು ತೋರಿಸುತ್ತದೆ. ಇದರಲ್ಲಿ ನೈಟ್‌ ವಿಷನ್‌ ಗಾಗಿ  ಮಿಲಿಟರಿ ಹೆಲ್ಮೆಟ್ ಮತ್ತು ಸಂವಹನ ಸಾಧನವೂ ಸೇರಿದೆ. ಅವರ ಬೂದು ಬಣ್ಣದ ಸಮವಸ್ತ್ರದ ಎರಡೂ ಬದಿಗಳಲ್ಲಿ 'ಕಮಾಂಡೋ' ಎಂಬ ಪದವನ್ನು ಕಾಣಬಹುದು.ಈ ಸುಳಿವನ್ನು ಬಳಸಿಕೊಂಡು ಸರ್ಚ್‌ ಮಾಡಿದಾಗ ಜಮ್ಮು ಮತ್ತು ಕಾಶ್ಮೀರದಲ್ಲಿ ಸಿಆರ್‌ಪಿಎಫ್  ಎಲೈಟ್‌ ಆ್ಯಂಟಿ ಟೆರರಿಸಮ್ ಕಮಾಂಡೋ ಘಟಕವನ್ನು ವ್ಯಾಲಿ ಕ್ವಿಕ್ ಆಕ್ಷನ್ ಟೀಮ್ ಅಥವಾ 'ವ್ಯಾಲಿ ಕ್ವಾಟ್' ಎಂದು ಕರೆಯಲಾಗುತ್ತದೆ ಎಂದು ತಿಳಿದು ಬಂದಿದೆ.  ಹತ್ತಿರದಿಂದ ನೋಡಿದಾಗ ಯೋಧನ್ ತೋಳುಗಳಲ್ಲಿ "ವ್ಯಾಲಿ ಕ್ವಾಟ್ (Valley QAT)" ಎಂದು ಬರೆದ ಚಿಹ್ನೆಯನ್ನು ನೋಡಬಹುದು. 

ವ್ಯಾಲಿ ಕ್ವ್ಯಾಟ್ ಹೆಚ್ಚು ತರಬೇತಿ ಪಡೆದವರಾಗಿದ್ದು  ಭಾರತೀಯ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರೊಂದಿಗೆ  ಕಾರ್ಯಾಚರಣೆಗಳಲ್ಲಿ ಸಮಯದಲ್ಲಿ ನಿಕಟವಾಗಿ ಕೆಲಸ ಮಾಡುತ್ತಾರೆ. ಕಮಾಂಡೋನ ಚಿತ್ರದ ರಿವರ್ಸ್ ಇಮೇಜ್ ಸರ್ಚ್  'Valley QAT'ಫೋಟೋ ಬಗ್ಗೆ ಇನ್ನಷ್ಟು ಸ್ಪಷ್ಟನೆ ನೀಡುತ್ತದೆ. ಇದು ಸ್ಟಾಕ್ ಫೋಟೋ ಸಂಸ್ಥೆಯ ಗೆಟ್ಟಿ ಇಮೇಜಸ್‌ನ (Getty Images) ವೆಬ್‌ಸೈಟ್‌ನಲ್ಲಿ ಅದೇ ಫೋಟೋಗಳೊಂದಿಗೆ ಬೆರಳೆಣಿಕೆಯಷ್ಟು ಇದೇ ರೀತಿಯ ಇತರ ಚಿತ್ರಗಳಿರುವುದು ತಿಳಿದುಬಂದಿದೆ. ಹೀಗಾಗಿ ಎರಡನೇ ಚಿತ್ರದಲ್ಲಿನ ಅಧಿಕಾರಿಯ ಉಡುಪು ಮತ್ತು ಉಪಕರಣಗಳು ಮೊದಲನೆಯ ಜವಾನಕ್ಕಿಂತ ಏಕೆ ಬಹಳ ಮುಂದುವರಿದಿದೆ ಎಂಬ ಪ್ರಶ್ನೆಗೆ ಇದು ಉತ್ತರವಾಗಿದೆ.

ಆದರೆ CRPF 2017 ರ ನಂತರದ ಅವರ ಸಮವಸ್ತ್ರವನ್ನು ಬೂದು ಬಣ್ಣಕ್ಕೆ ಬದಲಾಯಿಸಿದೆಯೇ? ಡಿಸೆಂಬರ್ 23, 2021 ರಿಂದ CRPF ನ ಇತ್ತೀಚಿನ ಪರೇಡ್ ಅನ್ನು ದೂರದರ್ಶನ ನ್ಯಾಷನಲ್‌ನ YouTube ಚಾನಲ್‌ನಲ್ಲಿ ಪರಿಶೀಲಿಸಿದಾಗ ಸಿಆರ್‌ಪಿಎಫ್ ಸಿಬ್ಬಂದಿಗೆ ಈಗಲೂ ಖಾಕಿ ಸಮವಸ್ತ್ರ ಜಾರಿಯಲ್ಲಿದೆ ಎಂಬುದು ಇದರಿಂದ ದೃಢಪಟ್ಟಿದೆ.

ಹೀಗಾಗಿ, ವೈರಲ್ ಕ್ಲೈಮ್‌ನಲ್ಲಿರುವ ಸಿಆರ್‌ಪಿಎಫ್ ಜವಾನರ ಎರಡು ಫೋಟೋಗಳನ್ನು ಒಂದು ದಶಕದ ಅಂತರದಲ್ಲಿ ತೆಗೆದುಕೊಳ್ಳಲಾಗಿಲ್ಲ ಅಥವಾ ಈ ವರ್ಷಗಳಲ್ಲಿ ಸೇನಾ ಪಡೆಗಳ ಉಡುಪು ಮತ್ತು ಉಪಕರಣಗಳಲ್ಲಿ ಆದ ಬದಲಾವಣೆ ಪ್ರತಿನಿಧಿಸುವುದಿಲ್ಲ ಎಂದು ಫ್ಯಾಕ್‌ಚೆಕ್‌ ನಲ್ಲಿ ತಿಳಿದುಬಂದಿದೆ.  

click me!