ಮಲಯಾಳಂ ನಟಿ ಚೈತ್ರಾ ಪ್ರವೀಣ್ ಇತ್ತೀಚೆಗೆ ಸಿನಿಮಾ ಕಾರ್ಯಕ್ರಮವೊಂದರಲ್ಲಿ ಕಪ್ಪು ಸೀರೆ ಧರಿಸಿ ಕಾಣಿಸಿಕೊಂಡಿದ್ದರು. ಆದರೆ, ಅವರು ಧರಿಸಿದ್ದ ಸೀರೆಯ ಶೈಲಿಯೇ ಈಗ ವಿವಾದಕ್ಕೆ ಕಾರಣವಾಗಿದೆ.
ತಿರುವನಂತಪುರಂ (ಫೆ.7): ನಟಿ ಚೈತ್ರಾ ಪ್ರವೀಣ್ ಸೋಶಿಯಲ್ ಮೀಡಿಯಾ ಟ್ರೋಲ್‌ಗೆ ಗುರಿಯಾಗಿದ್ದಾರೆ. ಮಲಯಾಳಂ ಚಿತ್ರಗಳಲ್ಲಿ ನಟಿಸಿರುವ ಚೈತ್ರಾ ಪ್ರವೀಣ್ ತಮ್ಮ ಬೋಲ್ಡ್ ಪಾತ್ರಗಳಿಂದ ಕೇರಳದ ಪಡ್ಡೆ ಹುಡುಗರ ಪಾಲಿಗೆ ಹಾಟ್ ಫೇವರಿಟ್ ಆಗಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ಬೋಲ್ಡ್ ಫೋಟೋಗಳನ್ನು ಹಂಚಿಕೊಳ್ಳುವ ಚೈತ್ರಾ ಪ್ರವೀಣ್ ತಮ್ಮ ಹೊಸ ಸಿನಿಮಾ ಎಲ್‌ಎಲ್‌ಬಿ: ಲೈಫ್ ಲೈನ್ ಆಫ್ ಬ್ಯಾಚುಲರ್ಸ್ ಬಿಡುಗಡೆಯ ಖುಷಿಯಲ್ಲಿದ್ದಾರೆ. ಆದರೆ, ಇತ್ತೀಚೆಗೆ ಅವರು ಇದೇ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಧರಿಸಿದ್ದ ಸೀರೆಯ ಕುರಿತೇ ಈಗ ವಿವಾದ ಶುರುವಾಗಿದೆ. ಹಾಗಂತ ಅವರೇನೂ ಬೋಲ್ಡ್ ಬಟ್ಟೆ ಧರಿಸಿರಲಿಲ್ಲ. ಕಪ್ಪು ಬಣ್ಣದ ಸೀರೆಗೆ ಚರ್ಮದ ಬಣ್ಣದ ರವಿಕೆ ತೊಟ್ಟಿದ್ದರು. ದೂರದಿಂದ ನೋಡಿದಾಗ ಅವರು ರವಿಕೆಯೇ ಧರಿಸಿಲ್ಲವೇನೋ ಎನ್ನುವಂತೆ ಕಾಣುತ್ತಿತ್ತು. ಕೆಲವರು ಚೈತ್ರಾ ಪ್ರವೀಣ್ ಅವರ ಲುಕ್ ಅನ್ನು ಹೊಗಳಿದ್ದು ಮಾತ್ರವಲ್ಲದೆ ಸಖತ್ ಹಾಟ್ ಆಗಿ ಕಾಣುತ್ತಿದ್ದೀರಿ ಎಂದಿದ್ದರೆ, ಇನ್ನೂ ಕೆಲವರು ಅವರ ಬಟ್ಟೆಯನ್ನು ಟೀಕೆ ಮಾಡಿದ್ದಾರೆ. ಆಕೆ ಧರಿಸಿರುವ ಸೀರೆ ಪ್ರಚೋದನಕಾರಿಯಾಗಿದೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಹೀಗೆ ಬರುವುದು ಸರಿಯಲ್ಲ. ಎಂದು ಹೇಳಿದ್ದಾರೆ.
ತಮ್ಮ ವಿರುದ್ಧ ಸಾಕಷ್ಟು ಟ್ರೋಲ್‌ಗಳು ಬಂದ ಬೆನ್ನಲ್ಲಿಯೇ ಚೈತ್ರಾ ಪ್ರವೀಣ್ ಈ ಬಗ್ಗೆ ಮಾತನಾಡಿದ್ದಾರೆ. ನಾನು ಎಲ್ಲರಿಗೂ ಒಂದು ಸ್ಪಷ್ಟನೆ ನೀಡಲು ಬಯಸುತ್ತೇನೆ. ಎಂದಿಗೂ ವೈರಲ್ ಆಗುವ ಉದ್ದೇಶ ನನಗಿಲ್ಲ. ಇದು ನನ್ನ ತಾಯಿ ಕೊಟ್ಟ ಸೀರೆ. ಕಪ್ಪು ಬಣ್ಣದ ಈ ಸೀರೆಯಲ್ಲಿ ನಾನು ಚೆನ್ನಾಗಿಯೇ ಕಾಣುತ್ತೇನೆ ಎಂದು ನನ್ನ ತಾಯಿ ಹೊಗಳಿದ್ದಲ್ಲದೆ, ಈ ರೀತಿಯ ಸೀರೆಗಳು ನನಗೆ ಸರಿಹೊಂದುತ್ತದೆ ಎಂದಿದ್ದರು. ಆದರೆ, ಕಾರ್ಯಕ್ರಮದಲ್ಲಿ ಡಾನ್ಸ್ ಮಾಡುವ ಸಮಯ ಬಂದಾಗ ಸೀರೆ ಜಾರಿಹೋಗಬಹುದು, ಇದರಿಂದ ನನ್ನ ಹೊಕ್ಕಳು, ಸೊಂಟ ಕಾಣಬಹುದು ಎನ್ನುವ ಅಪಾಯವೂ ನನಗೆ ಗೊತ್ತಿತ್ತು. ಇದಕ್ಕೆ ನಾನೇನೂ ಮಾಡಲು ಸಾಧ್ಯವಿರಲಿಲ್ಲ. ಹೊಕ್ಕಳನ್ನು ಸಾಧ್ಯವಾದಷ್ಟು ಮುಚ್ಚಿಕೊಳ್ಳಲು ನನ್ನ ಗರಿಷ್ಠ ಮಟ್ಟದ ಪ್ರಯತ್ನ ಮಾಡಿದ್ದೇನೆ. ನಾನು ಸೀರೆಯನ್ನು ಬಹಳ ಇಷ್ಟಪಡುತ್ತೇನೆ. ಸೀರೆಯೇ ಹೆಣ್ಣಿನ ಸೌಂದರ್ಯವನ್ನು ಅತ್ಯುತ್ತಮವಾಗಿ ಹೊರತರುತ್ತದೆ ಎನ್ನುವುದನ್ನು ನಾನು ನಂಬುತ್ತೇನೆ. ನಾನು ಜೀವನದಲ್ಲಿ ಅತಿಹೆಚ್ಚು ಪ್ರೀತಿ ಮಾಡುವ ಕೋಯಿಕ್ಕೋಡ್‌ಗೆ ನನ್ನಿಂದಾಗಿ ಅವಮಾನವಾಗಿದೆ ಎನ್ನುವುದನ್ನು ಕೇಳಿಯೇ ನನಗೆ ಬೇಸರವಾಗಿದೆ' ಎಂದು ಚೈತ್ರಾ ಪ್ರವೀಣ್ ಹೇಳಿದ್ದಾರೆ.
‘ಕಪ್ಪು ಬಣ್ಣದಲ್ಲಿ ಸುಂದರವಾಗಿ ಕಾಣುತ್ತೀಯ’ ಎಂದು ಅಮ್ಮ ಹೇಳಿದ ಆತ್ಮವಿಶ್ವಾಸದಿಂದಲೇ ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಅದರ ನಂತರ, ಕಾರ್ಯಕ್ರಮದ ವೀಡಿಯೊ ವೈರಲ್ ಆದಾಗ, ಅದರಲ್ಲಿ ನನ್ನ ನಗು ಚೆನ್ನಾಗಿತ್ತು ಮತ್ತು ನಾನು ಸುಂದರವಾಗಿದ್ದೇನೆ ಎನ್ನುವುದು ಗಮನಿಸಿದೆ. ಡ್ರೆಸ್ಸಿಂಗ್‌ನಲ್ಲಿ ಯಾವುದೇ ತಪ್ಪಿಲ್ಲ ಎಂದು ನಾನು ಭಾವಿಸಿದೆ. ಆದರೆ, ವಿಡಿಯೋ ಈಗ ಬೇರೆಯೇ ಕಾರಣಕ್ಕೆ ವೈರಲ್ ಆಗಿದೆ ಎಂದಿದ್ದಾರೆ.
ಹುಡುಗ್ರು ಸೊಂಟದ ಮೇಲೆ ಕೈಯಿಟ್ಟರೆ ಕಂಪ್ಲೇಟ್ ಕೊಡಬೇಡಿ, ಎಂಜಾಯ್ ಮಾಡಿ: ನಟಿ ರೇಖಾ ನಾಯರ್ ಮಾತು!
ನಾನು ದಂತವೈದ್ಯೆ. ಮಾಡೆಲಿಂಗ್ ಮೂಲಕ ನಟನೆಗೆ ಕಾಲಿಟ್ಟಿದ್ದೇನೆ. ನಟನಾ ಕ್ಷೇತ್ರಕ್ಕೆ ಬರಲು ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಅವರಿಗೆ ಅರ್ಥ ಮಾಡಿಸಿ ತುಂಬಾ ಪ್ರಯತ್ನಪಟ್ಟು ಚಿತ್ರರಂಗಕ್ಕೆ ಬಂದೆ. ಸಿನಿಮಾದ ಸೆಟ್‌ಗಳಿಗೆ ಅವರನ್ನು ಕರೆದುಕೊಂಡು ಹೋದಾಗ ಅವರ ಅನುಮಾನ ನಿವಾರಣೆಯಾದವು. ಆ ಧೈರ್ಯದಿಂದ ಮುಂದೆ ಹೋದಾಗ ಈ ವಿಡಿಯೋ ವೈರಲ್ ಆಗಿದೆ ಎಂದು ತಿಳಿಸಿದ್ದಾರೆ. ಸೀರೆಯ ಸೆರಗು ಜಾರಿ, ದೇಹದ ಭಾಗಗಳು ಕಾಣಬೇಕು ಎನ್ನುವುದನ್ನೇ ಕೆಲವರು ಕಾಯುತ್ತಿರುತ್ತಾರೆ. ಇದರಲ್ಲಿಯೇ ಅವರು ಸಂತೋಷ ಕಾಣುತ್ತಾರೆ. ಈ ವಿಚಾರದಲ್ಲಿ ಯಾರೂ ಕೂಡ ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ಚೈತ್ರಾ ಪ್ರವೀಣ್ ತಮ್ಮ ಮೇಲಿನ ಟ್ರೋಲ್‌ಗೆ ಉತ್ತರ ನೀಡಿದ್ದಾರೆ.
'ಸೊಂಟದ ವಿಷ್ಯ' ಮಾತಿಗೆ ಫುಲ್ ಟ್ರೋಲ್, ಕವಿತೆ ಬರೆದು ಸೈಲೆಂಟ್ ಮಾಡಿದ ಬಿಗ್ ಬಾಸ್ ಸ್ಪರ್ಧಿ!
ಇದನ್ನು ನೋಡಿ ನನ್ನ ಕುಟುಂಬ ಯಾವ ರೀತಿ ಪ್ರತಿಕ್ರಿಯೆ ನೀಡುತ್ತದೆ ಎನ್ನುವುದೇ ನನಗೆ ಆತಂಕ ಉಂಟು ಮಾಡಿದೆ. ನನ್ನ ತಂದೆ ಶಿಕ್ಷಕರು. ನನ್ನ ತಾಯಿ ಸ್ಲೀವ್‌ಲೆಸ್ ಡ್ರೆಸ್‌ಅನ್ನೇ ಇಷ್ಟ ಪಡೋದಿಲ್ಲ. ಹಾಗೇನಾದರೂ ಈ ವಿಡಿಯೋ ವೈರಲ್ ಆದಲ್ಲಿ ಏನಂದುಕೊಳ್ಳುತ್ತಾರೋ ಎನ್ನುವ ಭಯವಿದೆ. ಆದರೆ, ಈವರೆಗೂ ಅವರು ಯಾರೂ ಏನೂ ಹೇಳಿಲ್ಲ. ನಾನು ಡೀಸೆಂಟ್ ಆದ ಡ್ರೆಸ್ ಧರಿಸಿದರೂ ನನ್ನನ್ನು ದುರುಗುಟ್ಟುಕೊಂಡು ನೋಡುವ ಜನರಿಗೆ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಚೈತ್ರಾ ಪ್ರವೀಣ್ ತಿಳಿಸಿದ್ದಾರೆ. ಶ್ರೀನಾಥ್ ಭಾಸಿ, ಅಶ್ವತ್ ಲಾಲ್ ಮತ್ತು ವಿಸಾಕ್ ನಾಯರ್ ನಟಿಸಿದ್ದು, ಎಂಎಂ ಸಿದ್ಧಿಕ್ ಅವರ ಚೊಚ್ಚಲ ನಿರ್ದೇಶನದಲ್ಲಿ ಎಲ್‌ಎಲ್‌ಬಿ ಚಿತ್ರ ಮೂಡಿಬಂದಿದೆ.
ವೈರಲ್ ಆಗಿರುವ ಚೈತ್ರಾ ಪ್ರವೀಣ್ ವಿಡಿಯೋ